2021ರ ಮೇ ತಿಂಗಳ ಮಾರಾಟ ವರದಿಯನ್ನು ಬಹಿರಂಗಪಡಿಸಿದ ರಾಯಲ್ ಎನ್‌ಫೀಲ್ಡ್

ಚೆನ್ನೈ ಮೂಲದ ದ್ವಿಚಕ್ರ ತಯಾರಕ ಕಂಪನಿಯಾದ ರಾಯಲ್ ಎನ್‌ಫೀಲ್ಡ್ ತನ್ನ 2021ರ ಮೇ ತಿಂಗಳ ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ಈ ವರದಿಯ ಪ್ರಕಾರ, ಕಳೆದ ತಿಂಗಳು ರಾಯಲ್ ಎನ್‌ಫೀಲ್ಡ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ 20,073 ಯುನಿಟ್‌ಗಳನ್ನು ಮಾರಾಟಗೊಳಿಸಿವೆ.

2021ರ ಮೇ ತಿಂಗಳ ಮಾರಾಟ ವರದಿಯನ್ನು ಬಹಿರಂಗಪಡಿಸಿದ ರಾಯಲ್ ಎನ್‌ಫೀಲ್ಡ್

ಕಳೆದ ತಿಂಗಳು ದೇಶದ ಹೆಚ್ಚಿನ ಭಾಗಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿತ್ತು. ಅಲ್ಲದೇ ಕೊರೋನಾ ಪಾಸಿಟಿವ್ ಪ್ರಕರಣಗಳು ಕೂಡ ಹೆಚ್ಚಾಗಿತ್ತು. ಇದರ ನಡುವೆ ರಾಯಲ್ ಎನ್‌ಫೀಲ್ಡ್ ಕಂಪನಿಯು 20,073 ಯುನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. ಇನ್ನು ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು ಒಟ್ಟು 48,789 ಯುನಿಟ್‌ಗಳನ್ನು ಮಾರಾಟಗೊಳಿಸಿತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.58.8 ರಷ್ಟು ಕುಸಿದಿದೆ.

2021ರ ಮೇ ತಿಂಗಳ ಮಾರಾಟ ವರದಿಯನ್ನು ಬಹಿರಂಗಪಡಿಸಿದ ರಾಯಲ್ ಎನ್‌ಫೀಲ್ಡ್

2020ರ ಮೇ ತಿಂಗಳಿನಲ್ಲಿ ಕರೋನಾ ಆರ್ಭಟದ ನಡುವೆಯು ರಾಯಲ್ ಎನ್‌ಫೀಲ್ಡ್ 18,429 ಯುನಿಟ್‌ಗಳನ್ನು ಮಾರಾಟ ಮಾಡಿದ್ದಾರೆ. ಇದನ್ನು ಈ ವರ್ಷದ ಮೇ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಉತ್ತಮ ಬೆಳವಣಿಗೆಯನ್ನು ಸಾಧಿಸಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

2021ರ ಮೇ ತಿಂಗಳ ಮಾರಾಟ ವರದಿಯನ್ನು ಬಹಿರಂಗಪಡಿಸಿದ ರಾಯಲ್ ಎನ್‌ಫೀಲ್ಡ್

ಕಳೆದ ತಿಂಗಳು ರಾಯಲ್ ಎನ್‌ಫೀಲ್ಡ್ 4,509 ಯುನಿಟ್‌ಗಳನ್ನು ರಫ್ತು ಮಾಡಿದ್ದಾರೆ. ಇನ್ನು ದೇಶಿಯ ಮಾರುಕಟ್ಟೆಯ ಮಾರಾಟ ಮತ್ತು ರಫ್ತನ್ನು ಸೇರಿಸಿ ಕಳೆದ ತಿಂಗಳು ಒಟ್ಟು 27,294 ಯುನಿಟ್‌ಗಳ ಮಾರಾಟವನ್ನು ನೋಂದಾಯಿಸಿದ್ದು, ಇದು ಕಳೆದ ವರ್ಷದ ಮೇ ತಿಂಗಳ ಮಾರಾಟಕ್ಕಿಂತ ಶೇ.43 ಪ್ರತಿಶತದಷ್ಟು ಬೆಳವಣಿಗೆಯನ್ನು ದಾಖಲಿಸಿದೆ,

2021ರ ಮೇ ತಿಂಗಳ ಮಾರಾಟ ವರದಿಯನ್ನು ಬಹಿರಂಗಪಡಿಸಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಕಂಪನಿಯು ಇತ್ತೀಚೆಗೆ ಸ್ಕ್ರ್ಯಾಮ್ ಎಂಬ ಹೊಸ ಹೆಸರಿಗಾಗಿ ಟ್ರೇಡ್‌ಮಾರ್ಕ್ ಅನ್ನು ಸಲ್ಲಿಸಿದೆ. ಇದು ಹೊಸ ಸ್ಕ್ರಾಂಬ್ಲರ್ ಇದನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಪರಿಗಣಿಸಲಾಗುತ್ತಿದೆ. ಈ ಹೊಸ ಬೈಕನ್ನು 650 ಸಿಸಿ ವಿಭಾಗದ ಅಡಿಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

2021ರ ಮೇ ತಿಂಗಳ ಮಾರಾಟ ವರದಿಯನ್ನು ಬಹಿರಂಗಪಡಿಸಿದ ರಾಯಲ್ ಎನ್‌ಫೀಲ್ಡ್

ಹೆಸರಿನ ಹೊರತಾಗಿ ರಾಯಲ್ ಎನ್‌ಫೀಲ್ಡ್ ಸ್ಕ್ರ್ಯಾಮ್‌ನ ಇತರ ವಿವರಗಳು ಬಹಿರಂಗಗೊಂಡಿಲ್ಲ. 650 ಸಿಸಿ ವಿಭಾಗದಿಂದ ಅಸ್ತಿತ್ವದಲ್ಲಿರುವ ನೇಕೆಡ್ ಬೈಕ್ ಇಂಟರ್‌ಸೆಪ್ಟರ್ 650 ಅನ್ನು ವಿಶ್ವದಾದ್ಯಂತ ಅನೇಕ ಬೈಕ್ ಕಸ್ಟಮ್ಸ್ ಅವರು ಸ್ಕ್ರಾಂಬ್ಲರ್ ಮಾದರಿಯಾಗಿ ಮಾಡಿಫೈಗೊಳಿಸಲು ಆಯ್ಕೆ ಮಾಡುತ್ತಾರೆ.

2021ರ ಮೇ ತಿಂಗಳ ಮಾರಾಟ ವರದಿಯನ್ನು ಬಹಿರಂಗಪಡಿಸಿದ ರಾಯಲ್ ಎನ್‌ಫೀಲ್ಡ್

ಆಫ್-ರೋಡ್ ಮತ್ತು ಸ್ಕ್ರ್ಯಾಂಬ್ಲರ್ ಬೈಕ್ ಗಳ ಜನಪ್ರಿಯತೆ ಹೆಚ್ಚಾಗುತ್ತಿದೆ. ಇದೇ ಕಾರಣದಿಂದ ರಾಯಲ್ ಎನ್‌ಫೀಲ್ಡ್ ಮಾರುಕಟ್ಟೆಯಲ್ಲಿ ಕಾರ್ಯಕ್ಷಮತೆ ಸ್ಕ್ರ್ಯಾಂಬ್ಲರ್ ಮಾದರಿಯನ್ನು ಬಿಡುಗಡೆಗೊಳಿಸಲು ಮುಂದಾಗಿರಬಹುದು ಎಂದು ನಿರೀಕ್ಷಿಸುತ್ತೇವೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

2021ರ ಮೇ ತಿಂಗಳ ಮಾರಾಟ ವರದಿಯನ್ನು ಬಹಿರಂಗಪಡಿಸಿದ ರಾಯಲ್ ಎನ್‌ಫೀಲ್ಡ್

ಸ್ಕ್ರ್ಯಾಮ್, 650 ಸಿಸಿ ವಿಭಾಗದಲ್ಲಿ ಬಿಡುಗಡೆಯಾದರೆ,ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ನಿಂದ ಅದೇ ಎಂಜಿನ್ ಮತ್ತು ಪ್ಲಾಟ್‌ಫಾರ್ಮ್ ಅನ್ನು ಬಳಸಬಹುದು. ಇದರೊಂದಿಗೆ ರಾಯಲ್ ಎನ್‌ಫೀಲ್ಡ್ ಕಂಪನಿಯು ಇತ್ತೀಚೆಗೆ ಶಾಟ್‌ಗನ್ ಎಂಬ ಹೊಸ ಹೆಸರಿಗಾಗಿ ಟ್ರೇಡ್‌ಮಾರ್ಕ್ ಅನ್ನು ಸಲ್ಲಿಸಿದೆ ಎಂದು ವರದಿಗಳಾಗಿದೆ .ರಾಯಲ್ ಎನ್‌ಫೀಲ್ಡ್ ಎರಡು 650ಸಿಸಿ ಬೈಕ್‍ಗಳನ್ನು ಪರೀಕ್ಷಿಸುತ್ತಿದೆ.

2021ರ ಮೇ ತಿಂಗಳ ಮಾರಾಟ ವರದಿಯನ್ನು ಬಹಿರಂಗಪಡಿಸಿದ ರಾಯಲ್ ಎನ್‌ಫೀಲ್ಡ್

ಅವುಗಳಲ್ಲಿ ಒಂದು ಕಡಿಮೆ ಸ್ಲಂಗ್ ಕ್ರೂಸರ್ ಮತ್ತು ಇನ್ನೊಂದು ಹೆಚ್ಚು ಸಾಂಪ್ರದಾಯಿಕ ಶೈಲಿಯ ಬೈಕ್ ಆಗಿರುತ್ತದೆ. ಒಟ್ಟಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಲು ಹಲವಾರು ಹೊಸ ಮಾದರಿಗಳನ್ನು ಪರಿಚಯಿಸಲು ಸಜ್ಜಾಗುತ್ತಿದೆ.

Most Read Articles

Kannada
English summary
Two-Wheeler Sales May 2021: Royal Enfield Despatches Just Over 20,000 Motorcycles. Read In Kannada.
Story first published: Wednesday, June 2, 2021, 10:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X