ನಾಕ್ಸ್ ಜೊತೆಗೂಡಿ ಹೊಸ ರೈಡಿಂಗ್ ಗೇರ್ ನೀಡಲಿದೆ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ ಗ್ರಾಹಕರಿಗೆ ರೈಡಿಂಗ್ ಗೇರ್ ಹಾಗೂ ಉಡುಪುಗಳನ್ನು ಒದಗಿಸಲು ನಾಕ್ಸ್‌ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ನಾಕ್ಸ್ ರೈಡಿಂಗ್ ಗೇರ್ ಉತ್ಪಾದನೆಯಲ್ಲಿ ಪ್ರಮುಖ ಕಂಪನಿಯಾಗಿದ್ದು, ವ್ಯಾಪಕ ಸರಣಿಯ ಉಡುಪುಗಳನ್ನು ಉತ್ಪಾದಿಸುತ್ತದೆ.

ನಾಕ್ಸ್ ಜೊತೆಗೂಡಿ ಹೊಸ ರೈಡಿಂಗ್ ಗೇರ್ ನೀಡಲಿದೆ ರಾಯಲ್ ಎನ್‌ಫೀಲ್ಡ್

ಈ ಸಹಭಾಗಿತ್ವದಲ್ಲಿ ಎರಡೂ ಕಂಪನಿಗಳು ಸವಾರರ ಅವಶ್ಯಕತೆ ಹಾಗೂ ಸವಾರಿ ಸ್ಥಿತಿಗೆ ಅನುಗುಣವಾಗಿ ಉಡುಪು ಶ್ರೇಣಿಯನ್ನು ಒದಗಿಸಲಿವೆ. ರಾಯಲ್ ಎನ್‌ಫೀಲ್ಡ್ ತನ್ನ ಬೈಕ್‌ನೊಂದಿಗೆ ನಾಕ್ಸ್ ರೈಡಿಂಗ್ ಗೇರ್ ಒದಗಿಸಲಿದೆ. ಈ ಸರಣಿಯಲ್ಲಿ ವಿಶ್ವಮಟ್ಟದ ಪ್ರಮಾಣೀಕೃತ ರೈಡಿಂಗ್ ಗೇರ್ ಲಭ್ಯವಾಗಲಿದೆ. ಇದು ಎಲ್ಲಾ ರೀತಿಯ ಪರಿಸರದಲ್ಲಿಯೂ ಸುರಕ್ಷಿತವಾಗಿರುತ್ತದೆ

ನಾಕ್ಸ್ ಜೊತೆಗೂಡಿ ಹೊಸ ರೈಡಿಂಗ್ ಗೇರ್ ನೀಡಲಿದೆ ರಾಯಲ್ ಎನ್‌ಫೀಲ್ಡ್

ಇವುಗಳಲ್ಲಿ ಹ್ಯಾಂಡ್ ಗ್ಲೌಸ್, ಕ್ನಿ ಪ್ಯಾಡ್‌, ವಿಂಡ್‌ಚಿಟರ್‌, ಜಾಕೆಟ್‌, ಬೆಲ್ಟ್‌, ಬೂಟ್, ಫೇಸ್ ಕವರ್‌ನಂತಹ ಹಲವು ಉಡುಪುಗಳು ಸೇರಿವೆ. ಈ ರೈಡಿಂಗ್ ಗೇರ್ ರಾಯಲ್ ಎನ್‌ಫೀಲ್ಡ್ ಕಂಪನಿಯ ಎಲ್ಲಾ ಬೈಕುಗಳೊಂದಿಗೆ ಲಭ್ಯವಿರಲಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ನಾಕ್ಸ್ ಜೊತೆಗೂಡಿ ಹೊಸ ರೈಡಿಂಗ್ ಗೇರ್ ನೀಡಲಿದೆ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಕಂಪನಿಯು ಕಳೆದ ಸೋಮವಾರ ಇಂಟರ್ ಸೆಪ್ಟರ್ ಹಾಗೂ ಕಾಂಟಿನೆಂಟಲ್ ಜಿಟಿ ಬೈಕುಗಳ ಹೊಸ ಮಾದರಿಗಳನ್ನು ಬಿಡುಗಡೆಗೊಳಿಸಿದೆ. ಈ ಬೈಕುಗಳನ್ನು ಹೊಸ ಬಣ್ಣ ಹಾಗೂ ವಿನ್ಯಾಸಗಳೊಂದಿಗೆ ಬಿಡುಗಡೆಗೊಳಿಸಲಾಗಿದೆ.

ನಾಕ್ಸ್ ಜೊತೆಗೂಡಿ ಹೊಸ ರೈಡಿಂಗ್ ಗೇರ್ ನೀಡಲಿದೆ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.2,75,467ಗಳಾದರೆ, ಕಾಂಟಿನೆಂಟಲ್ ಜಿ 650 ಬೈಕಿನ ಬೆಲೆಎಕ್ಸ್ ಶೋರೂಂ ದರದಂತೆ ರೂ.2,91,701ಗಳಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ನಾಕ್ಸ್ ಜೊತೆಗೂಡಿ ಹೊಸ ರೈಡಿಂಗ್ ಗೇರ್ ನೀಡಲಿದೆ ರಾಯಲ್ ಎನ್‌ಫೀಲ್ಡ್

ಕಂಪನಿಯು ಹೊಸ ಇಂಟರ್‌ಸೆಪ್ಟರ್ ಹಾಗೂ ಕಾಂಟಿನೆಂಟಲ್ ಜಿಟಿ ಬೈಕುಗಳನ್ನು ಕಸ್ಟಮೈಸ್ ಮಾಡುವ ಆಯ್ಕೆಯನ್ನು ನೀಡುತ್ತಿದೆ. ಇದರಿಂದ ಗ್ರಾಹಕರು ತಮ್ಮ ಆಯ್ಕೆಗೆ ಅನುಗುಣವಾಗಿ ಬೈಕ್ ಪಡೆಯಬಹುದು.

ನಾಕ್ಸ್ ಜೊತೆಗೂಡಿ ಹೊಸ ರೈಡಿಂಗ್ ಗೇರ್ ನೀಡಲಿದೆ ರಾಯಲ್ ಎನ್‌ಫೀಲ್ಡ್

ಈ ಆಯ್ಕೆಯ ಬಗ್ಗೆ ರಾಯಲ್ ಎನ್‌ಫೀಲ್ಡ್‌ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗಿದೆ. ಈ ಮೂಲಕ ಗ್ರಾಹಕರು ಲಭ್ಯವಿರುವ ಆಯ್ಕೆಗಳಿಂದ ಬೈಕ್ಸೀಟ್, ಮಿರರ್ ವಿನ್ಯಾಸ, ಮಡ್‌ಗಾರ್ಡ್ ಬಣ್ಣ, ವಿಂಡ್‌ಸ್ಕ್ರೀನ್ ಇತ್ಯಾದಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ನಾಕ್ಸ್ ಜೊತೆಗೂಡಿ ಹೊಸ ರೈಡಿಂಗ್ ಗೇರ್ ನೀಡಲಿದೆ ರಾಯಲ್ ಎನ್‌ಫೀಲ್ಡ್

ಈಗ ಇಂಟರ್ ಸೆಪ್ಟರ್ 650 ಬೈಕ್, ಕ್ಯಾನ್ಯನ್ ರೆಡ್ ಹಾಗೂ ವೆಂಚುರಾ ಬ್ಲೂ ಎಂಬ ಎರಡು ಹೊಸ ಸ್ಟ್ಯಾಂಡರ್ಡ್ ಸಿಂಗಲ್ ಟೋನ್ ಬಣ್ಣಗಳಲ್ಲಿ ಲಭ್ಯವಿದೆ. ಇದರ ಜೊತೆಗೆ ಡೌನ್ಟೌನ್ ಡ್ರ್ಯಾಗ್ ಹಾಗೂ ಸನ್ಸೆಟ್ ಸ್ಟ್ರಿಪ್ ಎಂಬ ಎರಡು ಹೊಸ ಡ್ಯುಯಲ್ ಟೋನ್ ಬಣ್ಣಗಳಲ್ಲಿ ಬಿಡುಗಡೆಗೊಳಿಸಲಾಗಿದೆ.

ನಾಕ್ಸ್ ಜೊತೆಗೂಡಿ ಹೊಸ ರೈಡಿಂಗ್ ಗೇರ್ ನೀಡಲಿದೆ ರಾಯಲ್ ಎನ್‌ಫೀಲ್ಡ್

ಇದೇ ವೇಳೆ ಕಂಪನಿಯು ಮಾರ್ಕ್ 2 ಮಾದರಿಯನ್ನು ಕ್ರೋಮ್'ನೊಂದಿಗೆ ನವೀಕರಿಸಿದೆ. ಇದರ ಜೊತೆಗೆ ಈ ಮಾದರಿಯನ್ನು ಈಗ ಚಾಲ್ತಿಯಲ್ಲಿರುವ ಆರೆಂಜ್ ಕ್ರಷ್ ಹಾಗೂ ಡ್ಯುಯಲ್ ಟೋನ್ ಬೇಕರ್ ಎಕ್ಸ್‌ಪ್ರೆಸ್'ನೊಂದಿಗೆ ಮುಂದುವರೆಸಲಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ನಾಕ್ಸ್ ಜೊತೆಗೂಡಿ ಹೊಸ ರೈಡಿಂಗ್ ಗೇರ್ ನೀಡಲಿದೆ ರಾಯಲ್ ಎನ್‌ಫೀಲ್ಡ್

ಕಾಂಟಿನೆಂಟಲ್ ಜಿಟಿ 650 ಬೈಕ್ ಅನ್ನು ಈಗ ಐದು ಹೊಸ ಬಣ್ಣಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಮಾದರಿಯು ಬ್ರಿಟಿಷ್ ರೇಸಿಂಗ್ ಗ್ರೀನ್ ಸ್ಟ್ಯಾಂಡರ್ಡ್‌ನೊಂದಿಗೆ ರಾಕರ್ ರೆಡ್ ಸ್ಟ್ಯಾಂಡರ್ಡ್ (ಸಿಂಗಲ್ ಟೋನ್) ಬಣ್ಣವನ್ನು ಹೊಂದಿದೆ.

ನಾಕ್ಸ್ ಜೊತೆಗೂಡಿ ಹೊಸ ರೈಡಿಂಗ್ ಗೇರ್ ನೀಡಲಿದೆ ರಾಯಲ್ ಎನ್‌ಫೀಲ್ಡ್

ಇದರ ಜೊತೆಗೆ ಡ್ಯುಯಲ್ ಟೋನ್ ಬಣ್ಣದಲ್ಲಿ ಹೊಸ ಆಯ್ಕೆಯನ್ನು ನೀಡಲಾಗಿದೆ. ಅಸ್ತಿತ್ವದಲ್ಲಿರುವ ಮಿಸ್ಟರ್ ಕ್ಲೀನ್ ಕ್ರೋಮ್ ರೂಪಾಂತರದ ಬದಲಾವಣೆಗಳೊಂದಿಗೆ ಹೊಸ ಡ್ಯುಯಲ್ ಟೋನ್ ಬಣ್ಣವನ್ನು ಡಕ್ಸ್ ಡೀಲಕ್ಸ್ ಹಾಗೂ ವೆಂಚುರಾ ಸ್ಟಾರ್ಮ್‌ನೊಂದಿಗೆ ಪರಿಚಯಿಸಲಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ನಾಕ್ಸ್ ಜೊತೆಗೂಡಿ ಹೊಸ ರೈಡಿಂಗ್ ಗೇರ್ ನೀಡಲಿದೆ ರಾಯಲ್ ಎನ್‌ಫೀಲ್ಡ್

ಇಂಟರ್ ಸೆಪ್ಟರ್ 650 ಬೈಕಿನಲ್ಲಿ ಕಪ್ಪು ಬಣ್ಣದ ರಿಮ್ ಹಾಗೂ ಮಡ್‌ಗಾರ್ಡ್‌ಗಳನ್ನು ಸಹ ನೀಡಲಾಗಿದೆ. ಈ ಬೈಕಿನ ರೆಟ್ರೊ ನೋಟವನ್ನು ಉಳಿಸಿಕೊಳ್ಳಲು ಕಂಪನಿಯು ಹೊಸ ಮಾದರಿಗಳಲ್ಲಿ ಟಿಪ್ಪರ್ ನ್ಯಾವಿಗೇಷನ್ ಹಾಗೂ ಅಲಾಯ್ ವ್ಹೀಲ್‌ಗಳನ್ನು ಒದಗಿಸಿಲ್ಲ. ಈ ಬೈಕ್‌ಗಳ ಆಕ್ಸೆಸರಿಸ್'ಗಳನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಲಾಗುವುದು.

Most Read Articles

Kannada
English summary
Royal Enfield ties up with Knox to provide riding gear. Read in Kannada.
Story first published: Thursday, March 25, 2021, 19:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X