Just In
- 1 hr ago
ಅನಾವರಣವಾಯ್ತು ಫೋಕ್ಸ್ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್ಸ್ಪೋರ್ಟ್ 45 ಕಾರು
- 3 hrs ago
35 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಉಚಿತ ಲಸಿಕೆ ನೀಡಲು ಮುಂದಾದ ಟಿವಿಎಸ್ ಕಂಪನಿ
- 5 hrs ago
ವಾರದ ಪ್ರಮುಖ ಸುದ್ದಿ: ಏರ್ಬ್ಯಾಗ್ ಕಡ್ಡಾಯ, ಬಿಡುಗಡೆಗೆ ಸಜ್ಜಾದ ಸಿಟ್ರನ್, ಟೊಯೊಟಾ ನೌಕರರ ಮುಷ್ಕರ ಅಂತ್ಯ!
- 15 hrs ago
ವೆಂಟೊ ಟ್ರೆಂಡ್ಲೈನ್ ವೆರಿಯೆಂಟ್ ಬುಕ್ಕಿಂಗ್ ಪ್ರಕ್ರಿಯೆಗೆ ಸ್ಥಗಿತಗೊಳಿಸಿದ ಫೋಕ್ಸ್ವ್ಯಾಗನ್
Don't Miss!
- Movies
ಅಮೆರಿಕಾದಲ್ಲಿ ಇಂಡಿಯನ್ ರೆಸ್ಟೋರೆಂಟ್ ಪ್ರಾರಂಭಿಸಿದ ಪ್ರಿಯಾಂಕಾ ಚೋಪ್ರಾ: ಪೂಜೆಯ ಫೋಟೋ ವೈರಲ್
- News
ಚಿನ್ನ ಕಳ್ಳ ಸಾಗಾಣಿಕೆ ಅನುಮಾನ; 48 ಲಕ್ಷ ವಾಚ್ ಒಡೆದ ಅಧಿಕಾರಿಗಳು!
- Sports
ಐಪಿಎಲ್ 2021: ಅಧಿಕೃತ ವೇಳಾಪಟ್ಟಿ ಬಿಡುಗಡೆ, ಮೊದಲ ಪಂದ್ಯದಲ್ಲಿ ಆರ್ಸಿಬಿಗೆ ಮುಂಬೈ ಎದುರಾಳಿ
- Finance
ಕ್ರಿಪ್ಟೋಕರೆನ್ಸಿ ಬಗ್ಗೆ ಕುತೂಹಲದ ಹೇಳಿಕೆ ಕೊಟ್ಟ ಸಚಿವ ಠಾಕೂರ್
- Lifestyle
"ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?"
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸ್ಟೀಯರಿಂಗ್ ವ್ಹೀಲ್ ಹೊಂದಿರುವ ಎಲೆಕ್ಟ್ರಿಕ್ ಸೆಗ್ವೆ ದ್ವಿಚಕ್ರ ವಾಹನ ಅನಾವರಣಗೊಳಿಸಿದ ಸಿಕ್ಟೊಯಾ
ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ಸಿಕ್ವೊಯಾ ತನ್ನ ಹೊಸ ಎಲೆಕ್ಟ್ರಿಕ್ ವಾಹನವನ್ನು ಅನಾವರಣಗೊಳಿಸಿದೆ. ಈ ದ್ವಿಚಕ್ರ ವಾಹನವು ಆಟೋಮ್ಯಾಟಿಕ್ ಆಗಿ ಬ್ಯಾಲೆನ್ಸ್ ಆಗುತ್ತದೆ. ಈ ಮೂಲಕ ಈ ಎಲೆಕ್ಟ್ರಿಕ್ ವಾಹನವು ಆಟೋಮ್ಯಾಟಿಕ್ ಆಗಿ ಬ್ಯಾಲೆನ್ಸ್ ಆಗುವುದು ಖಚಿತವಾಗಿದೆ.

ಈ ಎಲೆಕ್ಟ್ರಿಕ್ ವಾಹನದಲ್ಲಿ ಹ್ಯಾಂಡ್ ಬಾರ್ ಬದಲಿಗೆ ಸ್ಟೀಯರಿಂಗ್ ವ್ಹೀಲ್ ಸಿಸ್ಟಂನ ವಿಶೇಷ ಫೀಚರ್ ನೀಡಲಾಗಿದೆ. ಯುವಕರ ಗಮನವನ್ನು ಬೇರೆಡೆಗೆ ತಿರುಗಿಸುವ ಉದ್ದೇಶದಿಂದ ಈ ಎಲೆಕ್ಟ್ರಿಕ್ ವಾಹನದಲ್ಲಿ ಈ ವಿಶೇಷದಲ್ಲಿ ಫೀಚರ್ ನೀಡಲಾಗಿದೆ. ಈ ಹೊಸ ಎಲೆಕ್ಟ್ರಿಕ್ ವಾಹನಕ್ಕೆ ನೈನ್‌ಪಾಟ್ ಎಸ್ ಮ್ಯಾಕ್ಸ್ ಎಂಬ ಹೆಸರಿಡಲಾಗಿದೆ. ಈ ಎಲೆಕ್ಟ್ರಿಕ್ ವಾಹನದಲ್ಲಿ ಸ್ಟೀಯರಿಂಗ್ ವ್ಹೀಲ್ ಮಾತ್ರವಲ್ಲದೆ ಸ್ಕ್ರೀನ್ ಸೌಲಭ್ಯವನ್ನೂ ನೀಡಲಾಗಿದೆ.

ಇದರಿಂದ ಬೆರಳ ತುದಿಯಲ್ಲಿ ವಾಹನದ ಬಗೆಗಿನ ಮಾಹಿತಿಯನ್ನು ಪಡೆಯಬಹುದು. ಈ ಸ್ಕ್ರೀನ್'ನಲ್ಲಿ ಉಳಿದಿರುವ ಚಾರ್ಜ್, ಸಮಯ, ಸ್ಥಳ ಹಾಗೂ ವೇಗದ ಬಗೆಗಿನ ಮಾಹಿತಿಯನ್ನು ಪಡೆಯಬಹುದು. ಆಧುನಿಕ ತಂತ್ರಜ್ಞಾನವನ್ನು ಇಷ್ಟಪಡುವ ಕಾರು ಉತ್ಸಾಹಿಗಳನ್ನು ಗುರಿಯಾಗಿರಿಸಿಕೊಂಡು ಈ ಫೀಚರ್ ನೀಡಲಾಗಿದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಈ ಹಿಂದೆ ಸಿಕ್ವೊಯಾ ಕಂಪನಿ ಬಿಡುಗಡೆಗೊಳಿಸಿದ ಆಟೋ ಬ್ಯಾಲೆನ್ಸ್ ಎಲೆಕ್ಟ್ರಿಕ್ ವಾಹನಗಳಿಗೆ ಹೋಲಿಸಿದರೆ ಈ ವಾಹನವು ಕೆಲವು ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ. ಈ ವಾಹನದಲ್ಲಿ ಹ್ಯಾಂಡ್ಸ್-ಫ್ರೀ ಫೀಚರ್ ನೀಡಲಾಗಿದೆ.

ಇದರಿಂದಾಗಿ ಈ ವಾಹನವನ್ನು ಚಾಲನೆ ಮಾಡುವಾಗ ಸವಾರನು ತನ್ನ ಬಾಡಿಯನ್ನು ಬ್ಯಾಲೆನ್ಸ್ ಮಾಡಬಹುದು. ಈ ವಾಹನವು ಇದನ್ನು ಆಟೋಮ್ಯಾಟಿಕ್ ಆಗಿ ನಿರ್ವಹಿಸುತ್ತದೆ. ನಿಂತಿರುವಾಗ ಈ ವಾಹನವು ಹ್ಯಾಂಡ್-ಫ್ರೀ ಮೋಡ್ ಅನ್ನು ನಿರ್ವಹಿಸುತ್ತದೆ. ಬಾಡಿಯು ತಿರುಗಿದಾಗ ಸ್ಕೂಟರ್ ಆಟೋಮ್ಯಾಟಿಕ್ ಆಗಿ ದಿಕ್ಕನ್ನು ಕಂಡುಹಿಡಿಯುತ್ತದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಸಿಕ್ವೊಯಾ ಕಂಪನಿಯು ಈ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ವಿಶೇಷ ವೈಶಿಷ್ಟ್ಯಗಳೊಂದಿಗೆ ಅಭಿವೃದ್ಧಿಪಡಿಸಿದೆ. ಕಂಪನಿಯು ಹೆಚ್ಚಿನ ಗ್ರಿಪ್ ಹೊಂದಿರುವ ಫುಟ್‌ರೆಸ್ಟ್, ವಿಶೇಷ ಡಿಪಿಇ ಟಯರ್, ಮೆಟಲ್ ಸ್ಟ್ಯಾಂಡ್, ಸಿಂಗಲ್-ಬಟನ್ ಆನ್-ಸೆಲ್ ಸಂಪರ್ಕದಂತಹ ತಾಂತ್ರಿಕ ಫೀಚರ್'ಗಳನ್ನು ನೀಡಲಾಗಿದೆ.

ಈ ಎಲ್ಲಾ ವೈಶಿಷ್ಟ್ಯಗಳನ್ನು ಹೊಂದಿರುವ ಈ ವಾಹನವು ಕೇವಲ 22.7 ಕೆ.ಜಿಗಳಷ್ಟು ತೂಕವನ್ನು ಹೊಂದಿದೆ. ಈ ಕಾರಣಕ್ಕೆ ಈ ವಾಹನವನ್ನು ನಿರ್ವಹಿಸುವುದು ತುಂಬಾ ಸುಲಭ. ಈ ವಾಹನದಲ್ಲಿ 4,800 ವ್ಯಾಟ್ ಹಾಗೂ 96 ಎನ್ಎಂ ಟಾರ್ಕ್ ಉತ್ಪಾದಿಸುವ ಎಲೆಕ್ಟ್ರಿಕ್ ಮೋಟರ್ ಅಳವಡಿಸಲಾಗಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಈ ವಾಹನದಲ್ಲಿರುವ 432ವ್ಯಾಟ್ ಏರ್-ಕೂಲ್ಡ್ ಬ್ಯಾಟರಿ ವಾಹನಕ್ಕೆ ಅಗತ್ಯವಿರುವ ವಿದ್ಯುತ್ ಅನ್ನು ಒದಗಿಸುತ್ತದೆ. ಈ ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಆದ ನಂತರ ಸುಮಾರು 38 ಕಿ.ಮೀಗಳವರೆಗೆ ಸಂಚರಿಸಬಹುದು.

ಈ ಬ್ಯಾಟರಿಯು ನಾಲ್ಕು ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗುತ್ತದೆ. ಈ ವಾಹನದ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 20 ಕಿ.ಮೀಗಳಾಗಿದೆ. ಈ ವಾಹನವನ್ನು ಮೇಲ್ವಿಚಾರಣೆ ಮಾಡಲು ವಿಶೇಷ ಸೆಲ್ ಫೋನ್ ಪ್ರೊಸೆಸರ್ ಒದಗಿಸಲಾಗಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು
ನೈನ್‌ಪಾಟ್ ಎಸ್ ಮ್ಯಾಕ್ಸ್ ಎಲೆಕ್ಟ್ರಿಕ್ ವಾಹನವನ್ನು ಸೆಲ್ ಫೋನ್ ಮೂಲಕ ವಿವಿಧ ಮಾಹಿತಿಯನ್ನು ಪಡೆಯಬಹುದು ಎಂಬುದು ಗಮನಾರ್ಹ. ವಾಹನವನ್ನು ಲಾಕ್ ಮಾಡುವುದರ ಬಗ್ಗೆ, ಅದನ್ನು ಪತ್ತೆ ಮಾಡುವುದರ ಬಗ್ಗೆ ಹಾಗೂ ಬ್ಯಾಟರಿ ಮಟ್ಟವನ್ನು ತಿಳಿದುಕೊಳ್ಳುವುದರ ಬಗ್ಗೆ ಮಾಹಿತಿಯನ್ನು ಪಡೆಯಬಹುದು.

ಶಾಲೆ, ಕಾಲೇಜು ಹಾಗೂ ಕಚೇರಿ ಪ್ರಯಾಣಿಕರನ್ನು ಗಮನದಲ್ಲಿಸಿಕೊಂಡು ಈ ವಾಹನವನ್ನು ಬಿಡುಗಡೆಗೊಳಿಸಲಾಗಿದೆ. ಈ ವಾಹನದ ಮೌಲ್ಯ 899 ಅಮೆರಿಕನ್ಡಾಲರ್'ಗಳಾಗಿದೆ. ಅಂದರೆ ಭಾರತೀಯ ಮೌಲ್ಯದಲ್ಲಿ ರೂ.65,521ಗಳಾಗಿದೆ.