ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕಿನ ಮೇಲೆ ರೂ.1.15 ಲಕ್ಷದವರೆಗೆ ಭರ್ಜರಿ ಆಫರ್

ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ತನ್ನ ವಿ-ಸ್ಟ್ರೋಮ್ 650 ಎಕ್ಸ್‌ಟಿ ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳಿಸಿತ್ತು. ಇದೀಗ ಸುಜುಕಿ ತನ್ನ ವಿ-ಸ್ಟ್ರೋಮ್ 650 ಎಕ್ಸ್‌ಟಿ ಅಡ್ವೆಂಚರ್-ಟೂರಿಂಗ್ ಬೈಕಿನ ಮೇಲೆ ಭರ್ಜರಿ ಆಫರ್ ಅನ್ನು ಘೋಷಿಸಿದೆ.

ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕಿನ ಮೇಲೆ ರೂ.1.15 ಲಕ್ಷದವರೆಗೆ ಭರ್ಜರಿ ಆಫರ್

ಭಾರತೀಯ ಮಾರುಕಟ್ತೆಯಲ್ಲಿ ಸುಜುಕಿ ಕಂಪನಿಯು ಈ ಹೊಸ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕಿನ ಮೇಲೆ ರೂ,ರೂ.1.15 ಲಕ್ಷದವರೆಗೆ ಭರ್ಜರಿ ಆಫರ್ ಅನ್ನು ನೀಡಿದೆ. ಇದರಲ್ಲಿ ರೂ. 65,000 ಮೌಲ್ಯದ ಅಕ್ಸೆಸರೀಸ್ ಅನ್ನು ಪಡೆಯಬಹುದು. ಇದರೊಂದಿಗೆ ಗ್ರಾಹರರು ರೂ.50,000 ವರೆಗಿನ ಎಕ್ಸ್‌ಚೇಂಚ್‌ ಆಫರ್ ಅಥವಾ ರೂ.40,000 ಗಳ ವಿಮಾ ಲಾಭವನ್ನು ಪಡೆಯಬಹುದು.

ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕಿನ ಮೇಲೆ ರೂ.1.15 ಲಕ್ಷದವರೆಗೆ ಭರ್ಜರಿ ಆಫರ್

ಇನ್ನು ಪ್ರಸ್ತುತ ಈ ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.8.84 ಲಕ್ಷಗಳಾಗಿದೆ. ಹೊಸ ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕಿನ ಪೀಚರ್ ಗಳನ್ನು ನವೀಕರಿಸಲಾಗಿಲ್ಲ, ಎಂಜಿನ್ ಅನ್ನು ಮಾತ್ರ ನವೀಕರಿಸಲಾಗಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕಿನ ಮೇಲೆ ರೂ.1.15 ಲಕ್ಷದವರೆಗೆ ಭರ್ಜರಿ ಆಫರ್

ಬಿಎಸ್-6 ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕ್ ಚಾಂಪಿಯನ್ ಯೆಲ್ಲೋ ಮತ್ತು ಪರ್ಲ್ ಗ್ಲೇಸಿಯರ್ ವೈಟ್ ಬಣ್ಣಗಳಲ್ಲಿ ಲಭ್ಯವಿರ. ಫೆಬ್ರವರಿ ತಿಂಗಳಲ್ಲಿ ನಡೆದ 2020ರ ಆಟೋ ಎಕ್ಸ್‌ಪೋದಲ್ಲಿ ಈ ಬಿಎಸ್ 6 ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕನ್ನು ಸುಜುಕಿ ಪ್ರದರ್ಶಿಸಿದ್ದರು.

ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕಿನ ಮೇಲೆ ರೂ.1.15 ಲಕ್ಷದವರೆಗೆ ಭರ್ಜರಿ ಆಫರ್

ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬಿಎಸ್-4 ಮಾದರಿಯ ಅದೇ 645 ಸಿಸಿ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 8,800 ಆರ್‌ಪಿಎಂನಲ್ಲಿ 69.7 ಬಿಎಚ್‌ಪಿ ಪವರ್ ಮತ್ತು 6,500 ಆರ್‌ಪಿಎಂನಲ್ಲಿ 62 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕಿನ ಮೇಲೆ ರೂ.1.15 ಲಕ್ಷದವರೆಗೆ ಭರ್ಜರಿ ಆಫರ್

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇನ್ನು ಹೊಸ ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕಿನ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 43 ಎಂಎಂ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆಂಷನ್ ಸೆಟಪ್ ಅನ್ನು ಹೊಂದಿದೆ.

ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕಿನ ಮೇಲೆ ರೂ.1.15 ಲಕ್ಷದವರೆಗೆ ಭರ್ಜರಿ ಆಫರ್

ಈ ಅಡ್ವೆಂಚರ್-ಟೂರಿಂಗ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗ 310 ಎಂಎಂ ಡ್ಯುಯಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ ಒಂದೇ 260 ಎಂಎಂ ಡಿಸ್ಕ್ ಅನ್ನು ಹೊಂದಿದೆ. ಇದರೊಂದಿಗೆ ಡ್ಯುಯಲ್ ಚಾನೆಲ್ ಎಬಿಎಸ್ ಸ್ಟ್ಯಾಂಡರ್ಡ್ ಅಗಿ ನೀಡಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕಿನ ಮೇಲೆ ರೂ.1.15 ಲಕ್ಷದವರೆಗೆ ಭರ್ಜರಿ ಆಫರ್

ಹೊಸ ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕಿನಲ್ಲಿ ಯಾವುದೇ ಹೊಸ ವಿನ್ಯಾಸ ಬದಲಾವಣೆಗಳನ್ನು ಹೊಂದಿಲ್ಲ. ಈ ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕಿನಲ್ಲಿ ಎಲ್ಇಡಿ ಹೆಡ್ ಲ್ಯಾಂಪ್ ಗಳನ್ನು ಅಳವಡಿಸಲಾಗಿದೆ.

ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕಿನ ಮೇಲೆ ರೂ.1.15 ಲಕ್ಷದವರೆಗೆ ಭರ್ಜರಿ ಆಫರ್

ಇದರೊಂದಿಗೆ ಈ ಹೊಂದಾಣಿಕೆ ಮಾಡಬಹುದಾದ ವಿಂಡ್‌ಸ್ಕ್ರೀನ್, ನಕಲ್ ಗಾರ್ಡ್‌ಗಳು, ಎಂಜಿನ್ ಪ್ರೊಟೆಕ್ಟರ್ ಸ್ಪೋಕ್ ವ್ಹೀಲ್ಸ್ ಮತ್ತು ಮೆತ್ತನೆಯ ಸಿಂಗಲ್-ಪೀಸ್ ಸೀಟ್ ಅನ್ನು ಕೂಡ ಒಳಗೊಂಡಿದೆ.

ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕಿನ ಮೇಲೆ ರೂ.1.15 ಲಕ್ಷದವರೆಗೆ ಭರ್ಜರಿ ಆಫರ್

ಇನ್ನು ಈ ಹೊಸ ಅಡ್ವೆಂಚರ್-ಟೂರಿಂಗ್ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕಿನಲ್ಲಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದ್ದು, ಇದರಲ್ಲಿ ಗೇರ್ ಪೋಷಿಸನ್,ಟ್ಯಾಕೋಮೀಟರ್ ಮಾಹಿತಿಗಳು ಪ್ರದರ್ಶೀಸುತ್ತದೆ.

ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕಿನ ಮೇಲೆ ರೂ.1.15 ಲಕ್ಷದವರೆಗೆ ಭರ್ಜರಿ ಆಫರ್

ಕೆಳಗಿನ ಡಿಜಿಟಲ್ ವಿಭಾಗವು ಓಡೋಮೀಟರ್, ಟ್ವಿನ್-ಟ್ರಿಪ್ ಮೀಟರ್, ಕಾಲ್, ಫ್ಯೂಯಲ್ ಲೆವೆಲ್ ಮತ್ತು ಟ್ರ್ಯಾಕ್ಷನ್ ಕಂಟ್ರೋಲ್ ಮೋಡ್ ಗಳನ್ನು ಪ್ರದರ್ಶಿಸುತ್ತದೆ. ಈ ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಮಾದರಿಯು ಸುಜುಕಿ ಮೋಟಾರ್‌ಸೈಕಲ್ ಸರಣಿಯಲ್ಲಿ ಅತ್ಯುತ್ತಮ ಅಡ್ವೆಂಚರ್ ಬೈಕುಗಳಲ್ಲಿ ಒಂದಾಗಿದೆ.

ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕಿನ ಮೇಲೆ ರೂ.1.15 ಲಕ್ಷದವರೆಗೆ ಭರ್ಜರಿ ಆಫರ್

ಸುಜುಕಿ ಕಂಪನಿಯು ವಿ-ಸ್ಟ್ರೋಮ್ 650 ಎಕ್ಸ್‌ಟಿ ಅಡ್ವೆಂಚರ್-ಟೂರಿಂಗ್ ಬೈಕನ್ನು ಸಿಕಿಡಿ ಮೂಲಕ ಭಾರತಕ್ಕೆ ತರಲಾಗಿದೆ. ಈ ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಕವಾಸಕಿ ವರ್ಸಿಸ್ 650 ಬೈಕಿಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Thursday, March 18, 2021, 19:28 [IST]
English summary
Suzuki V-Strom 650XT Discounts. Read In Kanada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+