ಸ್ಪೋರ್ಟಿ ಸ್ಟೈಲ್ ಹೊಂದಿರುವ ಅವೆನಿಸ್ 125 ಸ್ಕೂಟರ್ ಜಾಹೀರಾತು ಪ್ರಕಟಿಸಿದ ಸುಜುಕಿ ಮೋಟಾರ್‌ಸೈಕಲ್

ಭಾರತದಲ್ಲಿ ಪ್ರೀಮಿಯಂ ಸ್ಕೂಟರ್ ಸರಣಿಗಳ ಮಾರಾಟವು ವೇಗವಾಗಿ ಬೆಳವಣಿಗೆ ಹೊಂದುತ್ತಿದ್ದು, ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ತನ್ನ ಬಹುನೀರಿಕ್ಷಿತ ಅವೆನಿಸ್ ಸ್ಪೋರ್ಟಿ ಸ್ಕೂಟರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಮೂಲಕ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಸ್ಪೋರ್ಟಿ ಸ್ಟೈಲ್ ಹೊಂದಿರುವ ಅವೆನಿಸ್ 125 ಸ್ಕೂಟರ್ ಜಾಹೀರಾತು ಪ್ರಕಟಿಸಿದ ಸುಜುಕಿ

ಹೊಸ ಅವೆನಿಸ್ ಮಾದರಿಯನ್ನು ಬಿಡುಗಡೆ ಮಾಡುವ ಮೂಲಕ 125ಸಿಸಿ ಸ್ಕೂಟರ್ ವಿಭಾಗದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಸುಜುಕಿ ಕಂಪನಿಯು ಸ್ಕೂಟರ್ ವಿತರಣೆ ಆರಂಭಕ್ಕೂ ಮುನ್ನ ಟಿವಿ ಜಾಹೀರಾತು ಪ್ರಕಟಿಸಿದ್ದು, ಹೊಸ ಜಾಹೀರಾತು ಮೂಲಕ ಅವೆನಿಸ್ ಸ್ಕೂಟರ್ ವಿಶೇಷತೆಗಳ ಕುರಿತಾಗಿ ಮಾಹಿತಿ ಹಂಚಿಕೊಂಡಿದೆ.

ಸುಜುಕಿ ಕಂಪನಿಯು ಹೊಸ ಅವೆನಿಸ್ ಸ್ಕೂಟರ್‌ನಲ್ಲಿ 2020ರ ಮೊಟೊ ಜಿಪಿ ಗೆಲುವಿನ ಸಂಭ್ರಮಕ್ಕಾಗಿ ರೇಸ್ ಎಡಿಷನ್ ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ 124 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ 8.58 ಬಿಎಚ್‌ಪಿ ಮತ್ತು 10 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಸ್ಪೋರ್ಟಿ ಸ್ಟೈಲ್ ಹೊಂದಿರುವ ಅವೆನಿಸ್ 125 ಸ್ಕೂಟರ್ ಜಾಹೀರಾತು ಪ್ರಕಟಿಸಿದ ಸುಜುಕಿ

ಸ್ಪೋರ್ಟಿ ಡಿಸೈನ್‌ನೊಂದಿಗೆ ನ್ಯೂ ಜನರೇಷನ್ ವೈಶಿಷ್ಟ್ಯತೆಗಳನ್ನು ಹೊಂದಿರುವ ಹೊಸ ಸ್ಕೂಟರ್ ಲೊ ಮೌಂಟೆಡ್ ಫುಲ್ ಎಲ್ಇಡಿ ಹೆಡ್‌ಲ್ಯಾಂಪ್, ಸ್ಪೋರ್ಟಿಯಾಗಿರುವ ಫ್ರಂಟ್ ಆಪ್ರಾನ್, ಶಾರ್ಪ್ ಲೈನ್ ಹೊಂದಿರುವ ಟರ್ನ್ ಇಂಡಿಕೇಟರ್ ಸೇರಿದಂತೆ ಸ್ಪೋರ್ಟಿ ಲುಕ್ ಹೊಂದಿರುವ ಫ್ಲೈ ಸ್ಕೀನ್ ಪಡೆದುಕೊಂಡಿದೆ.

ಸ್ಪೋರ್ಟಿ ಸ್ಟೈಲ್ ಹೊಂದಿರುವ ಅವೆನಿಸ್ 125 ಸ್ಕೂಟರ್ ಜಾಹೀರಾತು ಪ್ರಕಟಿಸಿದ ಸುಜುಕಿ

ಹೊಸ ಸ್ಕೂಟರಿನ ವಿನ್ಯಾಸಕ್ಕೆ ಮತ್ತುಷ್ಟು ಸ್ಪೋರ್ಟಿ ಲುಕ್ ನೀಡಲು ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ಫ್ಲಶ್ ಫಿಟ್ ಫುಟ್‌ರೆಸ್ಟ್, ಹೊಸ ಮಾದರಿಯ ಸ್ಪೋರ್ಟಿ ಎಕ್ಸಾಸ್ಟ್, ಸ್ಪ್ಲಿಟ್ ಗ್ರ್ಯಾಬ್ ರೈಲ್, ಬೈಕ್‌ಗಳ ಮಾದರಿಯಲ್ಲಿರುವ ಟರ್ನ್ ಇಂಡಿಕೇಟರ್ ಮತ್ತು ಹೊರಭಾಗದಲ್ಲಿರುವ ಫ್ಯೂಲ್ ಕ್ಯಾಪ್ ಆಯ್ಕೆ ಉತ್ತಮವಾಗಿದೆ.

ಸ್ಪೋರ್ಟಿ ಸ್ಟೈಲ್ ಹೊಂದಿರುವ ಅವೆನಿಸ್ 125 ಸ್ಕೂಟರ್ ಜಾಹೀರಾತು ಪ್ರಕಟಿಸಿದ ಸುಜುಕಿ

ಇನ್ನು ಹೊಸ ಅವೆನಿಸ್ ಸ್ಕೂಟರ್‌ನಲ್ಲಿ ಪ್ರತಿಸ್ಪರ್ಧಿ ಮಾದರಿಗಳಿಂತಲೂ ಅತ್ಯುತ್ತಮ ಫೀಚರ್ಸ್ ನೀಡಲಾಗಿದ್ದು, ಹೊಸ ಸ್ಕೂಟರಿನಲ್ಲಿರುವ ಫುಲ್ ಡಿಜಿಟಲ್ ಡಿಸ್‌ಪ್ಲೇ ಗ್ರಾಹಕರನ್ನು ಆಕರ್ಷಿಸಲಿದೆ. ಸುಜುಕಿ ಕನೆಕ್ಟ್ ಆ್ಯಪ್ ಮೂಲಕ ಡಿಜಿಟಲ್ ಡಿಸ್‌ಪ್ಲೇ ವಿವಿಧ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದ್ದು, ಟರ್ನ್ ಬೈ ಟರ್ನ್ ನ್ಯಾವಿಗೇಷನ್, ವಾಟ್ಸ್‌ಅಪ್ ಮೆಸೇಜ್ ಅಲರ್ಟ್, ಎಸ್ಎಂಎಸ್ ಮತ್ತು ಕಾಲರ್ ಐಡಿ ಸೇವೆಗಳನ್ನು ಬಳಕೆ ಮಾಡಬಹುದಾಗಿದೆ.

ಸ್ಪೋರ್ಟಿ ಸ್ಟೈಲ್ ಹೊಂದಿರುವ ಅವೆನಿಸ್ 125 ಸ್ಕೂಟರ್ ಜಾಹೀರಾತು ಪ್ರಕಟಿಸಿದ ಸುಜುಕಿ

ಹಾಗೆಯೇ ಹೊಸ ಸ್ಕೂಟರಿನಲ್ಲಿ ಹೆಚ್ಚಿನ ಗಾತ್ರದ ಸ್ಟೋರೇಜ್ ಸೌಲಭ್ಯದೊಂದಿಗೆ ಯುಎಸ್‌ಬಿ ಚಾರ್ಜಿಂಗ್ ಫೋರ್ಟ್, ಒಂದು ಫುಲ್ ಸೈಜ್ ಗಾತ್ರದ ಅಂಡರ್ ಸೀಟರ್ ಸ್ಟೋರೇಜ್, ಎಂಜಿನ್ ಕಿಲ್ ಸ್ವಿಚ್ ಮತ್ತು ಸೈಡ್ ಸ್ಟ್ಯಾಂಡ್ ಕಟ್ಅಪ್ ತಂತ್ರಜ್ಞಾನ ನೀಡಲಾಗಿದೆ.

ಸ್ಪೋರ್ಟಿ ಸ್ಟೈಲ್ ಹೊಂದಿರುವ ಅವೆನಿಸ್ 125 ಸ್ಕೂಟರ್ ಜಾಹೀರಾತು ಪ್ರಕಟಿಸಿದ ಸುಜುಕಿ

ಸೈಡ್ ಸ್ಟ್ಯಾಂಡ್ ತೆಗೆಯದೆ ಸ್ಕೂಟರ್ ಚಾಲನೆ ಮಾಡುವುದರಿಂದ ಆಗುವ ಅನಾಹುತಗಳನ್ನು ತಪ್ಪಿಸಲು ಸೈಡ್ ಸ್ಟ್ಯಾಂಡ್ ಕಟ್ಅಪ್ ತಂತ್ರಜ್ಞಾನ ಉತ್ತಮವಾಗಿದ್ದು, ಸೈಡ್ ಸ್ಟ್ಯಾಂಡ್ ತೆಗೆಯದೆ ಸ್ಕೂಟರ್ ಮುಂದೆ ಓಡುವುದಿಲ್ಲ.

ಸ್ಪೋರ್ಟಿ ಸ್ಟೈಲ್ ಹೊಂದಿರುವ ಅವೆನಿಸ್ 125 ಸ್ಕೂಟರ್ ಜಾಹೀರಾತು ಪ್ರಕಟಿಸಿದ ಸುಜುಕಿ

ಸೈಡ್ ಸ್ಟ್ಯಾಂಡ್ ತೆಗೆಯುವುದನ್ನು ಮರೆತು ದ್ವಿಚಕ್ರ ವಾಹನ ಓಡಿಸುವಾಗ ಹಂಪ್‌ಗಳಲ್ಲಿ ಸ್ಟ್ಯಾಂಡ್ ತಾಗುವುದರಿಂದ ಹಲವಾರು ಅನಾಹುತಗಳಿಗೆ ಕಾರಣವಾಗುತ್ತಿದ್ದು, ಹೊಸದಾಗಿ ಬಿಡುಗಡೆಯಾಗುತ್ತಿರುವ ಪ್ರತಿ ದ್ವಿಚಕ್ರ ಮಾದರಿಯಲ್ಲೂ ಈ ಫೀಚರ್ಸ್‌ ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಲಾಗುತ್ತಿದೆ.

ಸ್ಪೋರ್ಟಿ ಸ್ಟೈಲ್ ಹೊಂದಿರುವ ಅವೆನಿಸ್ 125 ಸ್ಕೂಟರ್ ಜಾಹೀರಾತು ಪ್ರಕಟಿಸಿದ ಸುಜುಕಿ

ಇದೀಗ ಅವೆನಿಸ್ ಮಾದರಿಯಲ್ಲೂ ಹಲವಾರು ಹೊಸ ಸ್ಟ್ಯಾಂಡರ್ಡ್ ಫೀಚರ್ಸ್‌‌ಗಳನ್ನು ನೀಡಲಾಗಿದ್ದು, ಹೊಸ ಸ್ಕೂಟರ್ ಖರೀದಿದಾಗಿ ಸುಜುಕಿ ಕಂಪನಿಯು ಡಿಸೆಂಬರ್ ಮೊದಲ ವಾರದಲ್ಲಿ ಬುಕ್ಕಿಂಗ್ ಆರಂಭಿಸಲಿದೆ.

ಸ್ಪೋರ್ಟಿ ಸ್ಟೈಲ್ ಹೊಂದಿರುವ ಅವೆನಿಸ್ 125 ಸ್ಕೂಟರ್ ಜಾಹೀರಾತು ಪ್ರಕಟಿಸಿದ ಸುಜುಕಿ

ಹೊಸ ಸ್ಕೂಟರ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಬ್ಲ್ಯೂ, ಗ್ರಿನ್, ಆರೇಂಜ್, ವೈಟ್ ಮತ್ತು ಬ್ಲ್ಯಾಕ್ ಬಣ್ಣಗಳಲ್ಲಿ ಹೊಸ ಸ್ಕೂಟರ್ ಖರೀದಿಗೆ ಲಭ್ಯವಿದ್ದು, ಹೊಸ ಸ್ಕೂಟರ್ ಮಾದರಿಯು ಟಿವಿಎಸ್ ಎನ್‌ಟಾರ್ಕ್ 125, ಹೋಂಡಾ ಆಕ್ಟಿವಾ 125, ಹೋಂಡಾ ಗ್ರಾಜಿಯಾ, ಯಹಮ ಫ್ಯಾಸಿನೊ ಮಾದರಿಗಳಿಗೆ ಪೈಪೋಟಿ ನೀಡಲಿದೆ.

ಸ್ಪೋರ್ಟಿ ಸ್ಟೈಲ್ ಹೊಂದಿರುವ ಅವೆನಿಸ್ 125 ಸ್ಕೂಟರ್ ಜಾಹೀರಾತು ಪ್ರಕಟಿಸಿದ ಸುಜುಕಿ

ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ಈಗಾಗಲೇ 125 ಸಿಸಿ ವಿಭಾಗದಲ್ಲಿ ಬರ್ಗಮನ್ ಸ್ಟ್ರೀಟ್ ಮತ್ತು ಆಕ್ಸೆಸ್ 125 ಸ್ಕೂಟರ್ ಮಾರಾಟ ಹೊಂದಿದ್ದರೂ ಇದೀಗ ಹೊಸದಾಗಿ ಅವೆನಿಸ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ಮಾದರಿಯು ಸ್ಪೋರ್ಟಿ ಲುಕ್‌ನೊಂದಿಗೆ ಟಿವಿಎಸ್ ಎನ್‌ಟಾರ್ಕ್ ಮತ್ತು ಯಮಹಾ ರೇ ಜೆಡ್ಆರ್ ಮಾದರಿಗಳಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳಲಿದೆ.

ಸ್ಪೋರ್ಟಿ ಸ್ಟೈಲ್ ಹೊಂದಿರುವ ಅವೆನಿಸ್ 125 ಸ್ಕೂಟರ್ ಜಾಹೀರಾತು ಪ್ರಕಟಿಸಿದ ಸುಜುಕಿ

ಟಿವಿಎಸ್ ಎನ್‌ಟಾರ್ಕ್ ಮತ್ತು ಯಮಹಾ ಜೆಡ್ಆರ್ ಮಾದರಿಗಳಿಗೆ ನೇರ ಪೈಪೋಟಿ ನೀಡಲಿರುವ ಹೊಸ ಸುಜುಕಿ ಅವೆನಿಸ್ ಸ್ಕೂಟರ್ ಮಾದರಿಯು ಪ್ರತಿಸ್ಪರ್ಧಿ ಮಾದರಿಗಳಂತೆ ಸ್ಪೋರ್ಟಿ ಪ್ರೊಫೈಲ್, ಶಾರ್ಪ್ ಡಿಸೈನ್, ಸ್ಟೈಲಿಶ್ ಬಿಟ್‌ಗಳು ಮತ್ತು ಸ್ಕೈಲಿಶ್ ಬಾಡಿ ಪ್ಯಾನಲ್‌ಗಳನ್ನು ಹೊಂದಿದೆ.

More from DriveSpark

Article Published On: Monday, November 29, 2021, 14:38 [IST]
English summary
Suzuki avenis 125 new tvc video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+