ಟಿವಿಎಸ್ ಎನ್‌ಟಾರ್ಕ್, ಯಮಹಾ ರೇ ಜೆಡ್ಆರ್ ಪ್ರತಿಸ್ಪರ್ಧಿ ಸುಜುಕಿ ಅವೆನಿಸ್ ವಿಶೇಷತೆ ಏನು?

ದೇಶಿಯ ಮಾರುಕಟ್ಟೆಯಲ್ಲಿ ಪ್ರೀಮಿಯಂ ಸ್ಕೂಟರ್ ಮಾರಾಟವು ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇತ್ತೀಚೆಗೆ ಪ್ರಮುಖ ದ್ವಿಚಕ್ರ ವಾಹನ ಕಂಪನಿಗಳು 125ಸಿಸಿ ಮಾದರಿಗಳ ಮೇಲೆ ಹೆಚ್ಚಿನ ಗಮನಹರಿಸುತ್ತಿವೆ. ಹೀಗಾಗಿ ಗ್ರಾಹಕರ ಬೇಡಿಕೆಯೆಂತೆ ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ಕೂಡಾ ಹೊಸ ಅವೆನಿಸ್ ಸ್ಕೂಟರ್ ಬಿಡುಗಡೆ ಮಾಡಿದ್ದು, ಇದು ಮಾರುಕಟ್ಟೆಯಲ್ಲಿರುವ ಪ್ರಮುಖ 125 ಸಿಸಿ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುವ ನೀರಿಕ್ಷೆಯಿದೆ.

ಟಿವಿಎಸ್ ಎನ್‌ಟಾರ್ಕ್, ಯಮಹಾ ರೇ ಜೆಡ್ಆರ್ ಪ್ರತಿಸ್ಪರ್ಧಿ ಸುಜುಕಿ ಅವೆನಿಸ್ ವಿಶೇಷತೆ ಏನು?

ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ಈಗಾಗಲೇ 125 ಸಿಸಿ ವಿಭಾಗದಲ್ಲಿ ಬರ್ಗಮನ್ ಸ್ಟ್ರೀಟ್ ಮತ್ತು ಆಕ್ಸೆಸ್ 125 ಸ್ಕೂಟರ್ ಮಾರಾಟ ಹೊಂದಿದ್ದರೂ ಇದೀಗ ಹೊಸದಾಗಿ ಅವೆನಿಸ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ಮಾದರಿಯು ಸ್ಪೋರ್ಟಿ ಲುಕ್‌ನೊಂದಿಗೆ ಟಿವಿಎಸ್ ಎನ್‌ಟಾರ್ಕ್ ಮತ್ತು ಯಮಹಾ ರೇ ಜೆಡ್ಆರ್ ಮಾದರಿಗಳಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳಲಿದೆ.

ಟಿವಿಎಸ್ ಎನ್‌ಟಾರ್ಕ್, ಯಮಹಾ ರೇ ಜೆಡ್ಆರ್ ಪ್ರತಿಸ್ಪರ್ಧಿ ಸುಜುಕಿ ಅವೆನಿಸ್ ವಿಶೇಷತೆ ಏನು?

ಬರ್ಗಮನ್ ಸ್ಟ್ರೀಟ್ ಮಾದರಿಗಿಂತಲೂ ಕೆಳಸ್ಥಾನದಲ್ಲಿ ಮತ್ತು ಆಕ್ಸೆಸ್ ಸ್ಕೂಟರ್ ಮಾದರಿಗಿಂತಲೂ ಉನ್ನತ ಸ್ಕೂಟರ್ ಮಾದರಿಯಾಗಿರುವ ಅವೆನಿಸ್ ಸ್ಕೂಟರ್ ಯುವ ಗ್ರಾಹಕರ ನೆಚ್ಚಿನ ಆಯ್ಕೆಯಾಗಲಿದೆ.

ಟಿವಿಎಸ್ ಎನ್‌ಟಾರ್ಕ್, ಯಮಹಾ ರೇ ಜೆಡ್ಆರ್ ಪ್ರತಿಸ್ಪರ್ಧಿ ಸುಜುಕಿ ಅವೆನಿಸ್ ವಿಶೇಷತೆ ಏನು?

ಟಿವಿಎಸ್ ಎನ್‌ಟಾರ್ಕ್ ಮತ್ತು ಯಮಹಾ ಜೆಡ್ಆರ್ ಮಾದರಿಗಳಿಗೆ ನೇರ ಪೈಪೋಟಿ ನೀಡಲಿರುವ ಹೊಸ ಸುಜುಕಿ ಅವೆನಿಸ್ ಸ್ಕೂಟರ್ ಮಾದರಿಯು ಪ್ರತಿಸ್ಪರ್ಧಿ ಮಾದರಿಗಳಂತೆ ಸ್ಪೋರ್ಟಿ ಪ್ರೊಫೈಲ್, ಶಾರ್ಪ್ ಡಿಸೈನ್, ಸ್ಟೈಲಿಶ್ ಬಿಟ್‌ಗಳು ಮತ್ತು ಸ್ಕೈಲಿಶ್ ಬಾಡಿ ಪ್ಯಾನಲ್‌ಗಳನ್ನು ಹೊಂದಿದೆ.

ಟಿವಿಎಸ್ ಎನ್‌ಟಾರ್ಕ್, ಯಮಹಾ ರೇ ಜೆಡ್ಆರ್ ಪ್ರತಿಸ್ಪರ್ಧಿ ಸುಜುಕಿ ಅವೆನಿಸ್ ವಿಶೇಷತೆ ಏನು?

ಹಾಗೆಯೇ ಸ್ಪೋರ್ಟಿ ಗ್ರಾಫಿಕ್ಸ್ ಮತ್ತು ಆಕರ್ಷಕ ಡ್ಯುಯಲ್-ಟೋನ್ ಬಣ್ಣದ ಆಯ್ಕೆಗಳೊಂದಿಗೆ ಸಂಯೋಜಿಸಿ, ಅವೆನಿಸ್ ಗ್ರಾಹಕರ ಗಮನವನ್ನು ಸೆಳೆಯಬಹುದಾಗಿದ್ದು, ಪ್ರಮಾಣಿತ ಬಣ್ಣ ಆಯ್ಕೆಗಳ ಜೊತೆಗೆ ಅವೆನಿಸ್ ಮಾದರಿಯಲ್ಲಿ ಸುಜುಕಿ ಕಂಪನಿಯು ಮೊಟೊಜಿಪಿ(MotoGP) ಪ್ರೇರಿತ ರೇಸ್ ಆವೃತ್ತಿಯನ್ನು ಸಹ ಪರಿಚಯಿಸಿದೆ.

ಟಿವಿಎಸ್ ಎನ್‌ಟಾರ್ಕ್, ಯಮಹಾ ರೇ ಜೆಡ್ಆರ್ ಪ್ರತಿಸ್ಪರ್ಧಿ ಸುಜುಕಿ ಅವೆನಿಸ್ ವಿಶೇಷತೆ ಏನು?

ಹಾಗೆಯೇ ಪ್ರತಿಸ್ಪರ್ಧಿ ಮಾದರಿಗಳಾದ ಟಿವಿಎಸ್ ಎನ್‌ಟಾರ್ಕ್ ಮತ್ತು ಯಮಹಾ ಜೆಡ್ಆರ್ ಮಾದರಿಗಳು ಹಲವು ವಿಶೇಷತೆಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದ್ದು, ಅವೆನಿಸ್ ಜೊತೆಗಿನ ಪ್ರತಿಸ್ಪರ್ಧಿಗಳ ವಿಭಿನ್ನತೆ ಕುರಿತು ನಾವಿಲ್ಲಿ ಕೆಲವು ತಾಂತ್ರಿಕ ಅಂಶಗಳ ಹೋಲಿಕೆ ಮಾಡಬಹುದಾಗಿದೆ.

ಟಿವಿಎಸ್ ಎನ್‌ಟಾರ್ಕ್, ಯಮಹಾ ರೇ ಜೆಡ್ಆರ್ ಪ್ರತಿಸ್ಪರ್ಧಿ ಸುಜುಕಿ ಅವೆನಿಸ್ ವಿಶೇಷತೆ ಏನು?

ವೈಶಿಷ್ಟ್ಯತೆಗಳ ವಿಷಯದಲ್ಲಿ ಮೂರು ಸ್ಕೂಟರ್‌ಗಳ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ. ಮೂರು ಸ್ಕೂಟರ್‌ಗಳಲ್ಲಿ ಬ್ಲೂಟೂತ್ ಮೊಬೈಲ್ ಸಂಪರ್ಕ, ಅಪ್ಲಿಕೇಶನ್ ಆಧಾರಿತ ಸಂಪರ್ಕ ವೈಶಿಷ್ಟ್ಯಗಳು, ಚಾರ್ಜಿಂಗ್ ಪಾಯಿಂಟ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕನ್ಸೋಲ್, ಎಲ್‌ಇಡಿ ಹೆಡ್‌ಲೈಟ್ ಮತ್ತು ಡಿಆರ್‌ಎಲ್ ಸೌಲಭ್ಯಗಳಿವೆ.

Dimensions Suzuki Avenis TVS Ntorq Yamaha RayZR
Length 1895 mm 1861 mm 1880 mm
Width 710 mm 710 mm 750 mm
Height 1175 mm 1164 mm 1190 mm
Fuel Capacity 5.2 L 5.8 L 5.2 L
Saddle Height 780 mm - 785 mm
Ground Clearance 160 mm 155 mm 145 mm
Wheelbase 1265 mm 1285 mm 1280 mm
Kerb Weight 106 kg 116 kg 99 kg
Underseat Storage 12.8 L 22 L 21 L

ಟಿವಿಎಸ್ ಎನ್‌ಟಾರ್ಕ್, ಯಮಹಾ ರೇ ಜೆಡ್ಆರ್ ಪ್ರತಿಸ್ಪರ್ಧಿ ಸುಜುಕಿ ಅವೆನಿಸ್ ವಿಶೇಷತೆ ಏನು?

ಹೆಚ್ಚುವರಿಯಾಗಿ ಅವೆನಿಸ್ ಮಾದರಿಯಲ್ಲಿ ಟರ್ನ್-ಬೈ-ಟನ್ ನ್ಯಾವಿಗೇಷನ್, ಮೋಟಾರ್‌ಸೈಕಲ್-ಪ್ರೇರಿತ ಸೈಡ್ ಇಂಡಿಕೇಟರ್‌ಗಳು, ಹೊರ ಭಾಗದಲ್ಲಿರುವ ಇಂಧನ ತುಂಬುವ ಸಾಕೆಟ್‌, ಮುಂಭಾಗದಲ್ಲಿ ಗ್ಲೋವ್ ಬಾಕ್ಸ್, ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್-ಆಫ್ ಮತ್ತು ಎಂಜಿನ್ ಸ್ಟಾರ್ಟ್ ಮತ್ತು ಕಿಲ್ ಸ್ವಿಚ್ ಅನ್ನು ಒಳಗೊಂಡಿದೆ.

ಟಿವಿಎಸ್ ಎನ್‌ಟಾರ್ಕ್, ಯಮಹಾ ರೇ ಜೆಡ್ಆರ್ ಪ್ರತಿಸ್ಪರ್ಧಿ ಸುಜುಕಿ ಅವೆನಿಸ್ ವಿಶೇಷತೆ ಏನು?

ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್-ಆಫ್‌ನಂತಹ ಕೆಲವು ವೈಶಿಷ್ಟ್ಯಗಳು ಎಂಟಾರ್ಕ್‌ನಲ್ಲಿವೆ. ಹೆಚ್ಚುವರಿಯಾಗಿ ಎಂಟಾರ್ಕ್ ನಲ್ಲಿ ಧ್ವನಿ ಸಹಾಯಕ ಆಜ್ಞೆಗಳಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಆದರೆ ರೇ ಜೆಡ್ಆರ್ ನಲ್ಲಿ ನ್ಯಾವಿಗೇಶನ್, ಎಂಜಿನ್ ಕಿಲ್ ಸ್ವಿಚ್, ಬಾಹ್ಯ ಇಂಧನ ಫಿಲ್ಲರ್ ಕ್ಯಾಪ್ ಮತ್ತು ಎಲ್ಇಡಿ ಟೈಲ್‌ಲೈಟ್‌ನಂತಹ ವೈಶಿಷ್ಟ್ಯತೆಗಳನ್ನು ಹೊಂದಿಲ್ಲ.

Features Suzuki Avenis TVS Ntorq Yamaha RayZR
Instrument Console Digital Digital Digital
Mobile Connectivity Bluetooth Bluetooth Bluetooth
Navigation Yes Yes No
Charging Point Yes Yes Yes
Engine Kill Switch Yes Yes No
External Fuel Filler Cap Yes Yes No
Side Stand Engine Cut-off Switch Yes No Yes
Headlight LED LED LED
Tail Light LED LED Bulb
Turn Signal Lamp Bulb LED Bulb
DRLs LED LED LED
ಟಿವಿಎಸ್ ಎನ್‌ಟಾರ್ಕ್, ಯಮಹಾ ರೇ ಜೆಡ್ಆರ್ ಪ್ರತಿಸ್ಪರ್ಧಿ ಸುಜುಕಿ ಅವೆನಿಸ್ ವಿಶೇಷತೆ ಏನು?

ಎಂಜಿನ್ ಮತ್ತು ಪರ್ಫಾಮೆನ್ಸ್‌ಗೆ ಸಂಬಂಧಿಸಿದಂತೆ ಹೊಸ ಅವೆನಿಸ್ ಸ್ಕೂಟರ್‌ನಲ್ಲಿ 124.3 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ನೀಡಲಾಗಿದ್ದು, 8.58 ಬಿಎಚ್‌ಪಿ ಮತ್ತು 10 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಟಿವಿಎಸ್ ಎನ್‌ಟಾರ್ಕ್, ಯಮಹಾ ರೇ ಜೆಡ್ಆರ್ ಪ್ರತಿಸ್ಪರ್ಧಿ ಸುಜುಕಿ ಅವೆನಿಸ್ ವಿಶೇಷತೆ ಏನು?

ಹಾಗೆಯೇ ಪ್ರತಿಸ್ಪರ್ಧಿ ಮಾದರಿಗಳಾದ ಎನ್‌ಟಾರ್ಕ್ ಮಾದರಿಯು 124.8ಸಿಸಿ ಎಂಜಿನ್ ಪ್ರೇರಣೆಯೊಂದಿಗೆ 10.2 ಬಿಎಚ್‌ಪಿ ಮತ್ತು 10.8 ಎನ್ಎಂ ಟಾರ್ಕ್ ಉತ್ಪಾದನೆ ಹೊಂದಿದ್ದರೆ ಯಮಹಾ ಸ್ಕೂಟರ್ ಮಾದರಿಯು 125 ಸಿಸಿ ಎಂಜಿನ್‌ನೊಂದಿಗೆ 8.2 ಬಿಎಚ್‌ಪಿ ಮತ್ತು 10.3 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಟಿವಿಎಸ್ ಎನ್‌ಟಾರ್ಕ್, ಯಮಹಾ ರೇ ಜೆಡ್ಆರ್ ಪ್ರತಿಸ್ಪರ್ಧಿ ಸುಜುಕಿ ಅವೆನಿಸ್ ವಿಶೇಷತೆ ಏನು?

ಹೊಸ ಸುಜುಕಿ ಅವೆನಿಸ್ ಸ್ಕೂಟರ್ ಮಾದರಿಯು ಗ್ರಾಹಕರ ಬೇಡಿಕೆ ಅನುಸಾರವಾಗಿ ಸ್ಟ್ಯಾಂಡರ್ಡ್ ಮತ್ತು ರೇಸ್ ಎಡಿಷನ್‌ ಎನ್ನುವ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಸ್ಕೂಟರ್ ಎಕ್ಸ್‌ಶೋರೂಂ ಪ್ರಕಾರ ರೂ. 86,700 (ಸ್ಟ್ಯಾಂಡರ್ಡ್) ಮತ್ತು ರೂ.87,000 (ರೇಸ್ ಎಡಿಷನ್) ಬೆಲೆ ಹೊಂದಿವೆ.

Specs Suzuki Avenis TVS Ntorq Yamaha RayZR
Engine Displacement 124.3 cc 124.8 cc 125 cc
Max Power 8.7 PS 6750 rpm 10.2 PS 7000 rpm 8.2 PS 6500 rpm
Max Torque 10 Nm 5500 rpm 10.8 Nm 5500 rpm 10.3 Nm 5000 rpm
Valve Per Cylinder 2 3 2
Gear Box CVT CVT V-Belt Automatic
Front Suspention Telescopic Telescopic with Hydraulic Dampers Telescopic Fork
Rear Suspention Swing Arm Coil spring with Hydraulic Dampers Unit Swing
Brake

Front: Disc

Rear: Drum

Front: Disc

Rear: Drum

Front: Disc

Rear: Drum

Ex Showroom Price Rs 86,700 - 87,000 Rs 78,090 - 87,270 Rs 75,372 - 85,896
ಟಿವಿಎಸ್ ಎನ್‌ಟಾರ್ಕ್, ಯಮಹಾ ರೇ ಜೆಡ್ಆರ್ ಪ್ರತಿಸ್ಪರ್ಧಿ ಸುಜುಕಿ ಅವೆನಿಸ್ ವಿಶೇಷತೆ ಏನು?

ಪ್ರತಿಸ್ಪರ್ಧಿ ಮಾದರಿಗಳಾದ ಟಿವಿಎಸ್ ಎನ್‌ಟಾರ್ಕ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.78 ಸಾವಿರದಿಂದ ಟಾಪ್ ಎಂಡ್ ಮಾದರಿಯು ರೂ.87 ಸಾವಿರ ಬೆಲೆ ಹೊಂದಿದ್ದರೆ ಯಮಹಾ ರೇ ಜೆಡ್ಆರ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 75 ಸಾವಿರದಿಂದ ಟಾಪ್ ಎಂಡ್ ಮಾದರಿಯು ರೂ. 85 ಸಾವಿರ ಬೆಲೆ ಹೊಂದಿದೆ.

ಟಿವಿಎಸ್ ಎನ್‌ಟಾರ್ಕ್, ಯಮಹಾ ರೇ ಜೆಡ್ಆರ್ ಪ್ರತಿಸ್ಪರ್ಧಿ ಸುಜುಕಿ ಅವೆನಿಸ್ ವಿಶೇಷತೆ ಏನು?

ಈ ಮೂಲಕ ಮೂರು ಸ್ಕೂಟರ್ ಮಾದರಿಗಳು ಬೆಲೆ, ಎಂಜಿನ್ ಮತ್ತು ವೈಶಿಷ್ಟ್ಯತೆಗಳ ಆಧಾರದ ಮೇಲೆ ವಿಭಿನ್ನ ಗ್ರಾಹಕ ವರ್ಗವನ್ನು ಸೆಳೆಯಲಿದ್ದು, ಹೊಸ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಅವೆನಿಸ್ ಮಾದರಿಯು ಟಿವಿಎಸ್ ಎನ್‌ಟಾರ್ಕ್ ಮಾದರಿಗಿಂತ ಯಮಹಾ ಜೆಡ್ಆರ್ ಮಾದರಿಗೆ ಹೆಚ್ಚಿನ ಪೈಪೋಟಿ ನೀಡಬಹುದಾಗಿದೆ.

Most Read Articles

Kannada
English summary
Suzuki avenis tvs ntorq and yamaha rayzr scooters comparison
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X