ಬೆಲೆ ಏರಿಕೆ ಪಡೆದುಕೊಂಡ ಸುಜುಕಿ ಜಿಕ್ಸರ್ ಸೀರಿಸ್ ಬೈಕ್‌ಗಳು
ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ತನ್ನ ದ್ವಿಚಕ್ರ ವಾಹನಗಳ ಬೆಲೆಯನ್ನು ಪರಿಷ್ಕರಿಸಿದೆ, ಇದರಲ್ಲಿ ಅದರ ಹೆಚ್ಚು ಜನಪ್ರಿಯವಾದ ಜಿಕ್ಸರ್ ಸೀರಿಸ್ ಕೂಡ ಸೇರಿದೆ. ಜಿಕ್ಸರ್ ಸೀರಿಸ್ ನಲ್ಲಿ ಹಲವು ಜನಪ್ರಿಯ ಮಾದರಿಗಳು ಕೂಡ ಒಳಗೊಂಡಿದೆ.

ಸುಜುಕಿ ಜಿಕ್ಸರ್ 250 ಮತ್ತು ಎಸ್‌ಎಫ್ 250 ಸುಮಾರು ರೂ.3,500 ಗಳವರೆಗೂ ಹೆಚ್ಚಳವನ್ನು ಪಡೆದಿದ್ದರೆ, ಸಣ್ಣ ಜಿಕ್ಸರ್ 155 ಸಿಸಿ ಮಾದರಿಗಳು ಸುಮಾರು ರೂ.2,000 ಗಳವರೆಗೆ ಬೆಲೆ ಏರಿಕೆಯನ್ನು ಪಡೆದುಕೊಂಡಿದೆ. ಬೆಲೆ ಏರಿಕೆಯ ಬಳಿಕ ಇದೀಗ, ಸುಜುಕಿ ಜಿಕ್ಸರ್ 155 ಬೈಕಿನ ಬೆಲೆಯು ರೂ.1,20,469 ಗಳಾದರೆ, ಸುಜುಕಿ ಜಿಕ್ಸರ್ ಎಸ್‌ಎಫ್ 155 ಬೈಕಿನ ಬೆಲೆಯು ರೂ.1,30,971 ಗಳಾಗಿದೆ.

ಇನ್ನು ಸುಜುಕಿ ಜಿಕ್ಸರ್ 250 ಬೈಕಿನ ಬೆಲೆಯು ರೂ.1,72,872 ಗಳಾಗಿದರೆ, ಸುಜುಕಿ ಜಿಕ್ಸರ್ ಎಸ್‌ಎಫ್ 250 ಬೈಕಿನ ಬೆಲೆಯು ರೂ.1,83,571 ಗಳಾಗಿದೆ. ಇನ್ನು ಸುಜುಕಿ ಜಿಕ್ಸರ್ ಎಸ್‌ಎಫ್ 250 ಮೋಟೋ ಜಿಪಿ ಬೈಕಿನ ಬೆಲೆಯು ರೂ.1,30,971 ಗಳಾಗಿದೆ. ಈ ಎಲ್ಲಾ ಬೆಲೆಗಳು ಥಾಣೆ ಎಕ್ಸ್ ಶೋರೂಂ ಪ್ರಕಾರವಾಗಿದೆ.

ಈ ವರ್ಷ ಸುಜುಕಿ ದ್ವಿಚಕ್ರ ವಾಹನಗಳು ಬೆಲೆ ಪರಿಷ್ಕರಣೆ ಪಡೆಯುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಜಿಕ್ಸರ್ ಸರಣಿಯ ಮಾದರಿಗಳು ಸುಮಾರು ರೂ.2,000 ಗಳವರೆಗೆ ಬೆಲೆ ಏರಿಕೆಯನ್ನು ಪಡೆದುಕೊಂಡಿತ್ತು.

ಇದರಲ್ಲಿ ಸುಜುಕಿ ಜಿಕ್ಸರ್ 250 ಮತ್ತು ಜಿಕ್ಸರ್ ಎಸ್‍ಎಫ್ 250 ಬೈಕ್‌ಗಳಲ್ಲಿ 249 ಸಿಸಿ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 26.1 ಬಿಹೆಚ್ಪಿ ಪವರ್ ಮತ್ತು 22.2 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಸುಜುಕಿ ಜಿಕ್ಸರ್ 250 ಬೈಕ್‌ಗಳಲ್ಲಿ ಒವಲ್ ಆಕಾರಾದ ಎಲ್ಇಡಿ ಹೆಡ್‌ಲ್ಯಾಂಪ್ ಹೆಡ್‍ಲ್ಯಾಂಪ್‍ಗಳು, ಎಲ್‍ಇಡಿ ಟೈಲ್‍ಲೈಟ್‍ಗಳು, ಎಲ್‍ಸಿಡಿ ಡಿಜಿಟಲ್ ಎನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಇತರ ಫೀಚರ್ ಗಳನ್ನು ಕೂಡ ಒಳಗೊಂಡಿವೆ.

ಇದರಲ್ಲಿ ಸುಜುಕಿ ಜಿಕ್ಸರ್ 250 ಬೈಕಿನಲ್ಲಿ ಹೊಸದಾಗಿ ವಿನ್ಯಾಸಗೊಳಿಸಲಾದ ಟ್ಯಾಂಕಿನ ಮೇಲೆ ವಿಶಿಷ್ಟವಾದ ಬಾಡಿ ಗ್ರಾಫಿಕ್ಸ್ ಗಳಿದೆ. ಜಿಕ್ಸರ್ 250 ಬೈಕಿನಲ್ಲಿ ಟಯರ್ ಹಗ್ಗರ್, ಸ್ಪ್ಲಿಟ್ ಸೀಟ್, ಕಪ್ಪು ಬಣ್ಣದ ಅಲಾಯ್ ವ್ಹೀಲ್ ಹಾಗೂ ಕ್ರೋಮ್ ಅಂಶಗಳನ್ನು ಹೊಂದಿರುವ ಡ್ಯುಯಲ್ ಮಫ್ಲರ್ ಗಳನ್ನು ಕೂಡ ಒಳಗೊಂಡಿದೆ.

ಇನ್ನು ಈ ಸುಜುಕಿ ಜಿಕ್ಸರ್ 250 ಮತ್ತು ಜಿಕ್ಸರ್ ಎಸ್‍ಎಫ್ 250 ಬೈಕುಗಳ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಸಸ್ಪೆಂಷನ್ ಸೆಟಪ್ ಅನ್ನು ಹೊಂದಿದೆ.

ಇನ್ನು ಇವುಗಳ ಬ್ರೈಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ ಇದು ಉತ್ತಮವಾಗಿದ್ದು, ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‍ಗಳನ್ನು ಅಳವಡಿಸಿದ್ದಾರೆ. ಇದರೊಂದಿಗೆ ಸ್ಟ್ಯಾಂಡರ್ಡ್ ಡ್ಯುಯಲ್ ಚಾನೆಲ್ ಎಬಿಎಸ್ ಸಿಸ್ಟಂ ಅನ್ನು ಹೊಂದಿದೆ.. ಸುಜುಕಿ ಜಿಕ್ಸರ್ 250 ದೇಶಿಯ ಮಾರುಕಟ್ಟೆಯಲ್ಲಿ ಕೆಟಿಎಂ ಡ್ಯೂಕ್ 250, ಬಜಾಜ್ ಪಲ್ಸರ್ ಆರ್‍ಎಸ್ 200 ಮತ್ತು ಟಿವಿಎಸ್ ಅಪಾಚೆ ಆರ್‍ಆರ್ 310 ಬೈಕ್‍ಗಳಿಗೆ ಪೈಪೋಟಿ ನೀಡುತ್ತದೆ.

ಇನ್ನು ಎಂಟ್ರಿ ಲೆವೆಲ್ ಸುಜುಕಿ ಜಿಕ್ಸರ್ 155 ಮತ್ತು ಜಿಕ್ಸರ್ ಎಸ್‌ಎಫ್ 155 ಬೈಕುಗಳಲ್ಲಿ 155 ಸಿಸಿ, ಏರ್-ಕೂಲ್ಡ್, ಫ್ಯೂಯಲ್-ಇಂಜೆಕ್ಟ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 13.4 ಬಿಹೆಚ್ಪಿ ಪವರ್ ಮತ್ತು 13.8 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗುತ್ತದೆ.


Click it and Unblock the Notifications








