ಫಿಲಿಪೈನ್ಸ್ ಮಾರುಕಟ್ಟೆಗೆ ಕಾಲಿಟ್ಟ 2021ರ ಸುಜುಕಿ ಹಯಾಬುಸಾ ಸೂಪರ್‍ಬೈಕ್
ಐಕಾನಿಕ್ ಸುಜುಕಿ ಹಯಾಬುಸಾ ಬೈಕ್ ನವೀಕರಿಸಿದ ಮಾದರಿಯು ಈಗಾಗಲೇ ಹಲವಾರು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿದೆ. ಇದೀಗ ಸುಜುಕಿ ಕಂಪನಿಯು ಈ ಹೊಸ ಸುಜುಕಿ ಹಯಾಬುಸಾ ಬೈಕನ್ನು ಫಿಲಿಪೈನ್ಸ್ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

ಇನ್ನು ಈ ಹೊಸ ಸುಜುಕಿ ಹಯಾಬುಸಾ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ತಿಂಗಳು ಬಿಡುಗಡೆಗೊಂಡಿತ್ತು. ಭಾರತದಲ್ಲಿ ಹಯಾಬುಸಾದ 101 ಯುನಿಟ್ ಗಳು ಒಂದೆರಡು ದಿನಗಳಲ್ಲಿ ಮಾರಾಟವಾಗಿದೆ. ಎರಡನೇ ಹಂತದ ಹಯಾಬುಸಾ ಬೈಕ್ ಭಾರತಕ್ಕೆ ಶೀಘ್ರದಲ್ಲೇ ಬರಲಿದೆ. ಈ ಸುಜುಕಿ ಹಯಾಬುಸಾ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಜನಪ್ರಿಯ ಸೂಪರ್ ಬೈಕ್‌ಗಳಲ್ಲಿ ಒಂದಾಗಿದೆ.

ಹೊಸ ಸುಜುಕಿ ಹಯಾಬುಸಾ ಸೂಪರ್ ಬೈಕ್ ತನ್ನ ಸಾಂಪ್ರದಾಯಿಕ ಶೈಲಿಯನ್ನು ಉಳಿಸಿಕೊಂಡಿದೆ. ಹಯಾಬುಸಾ ಸೂಪರ್‍ಬೈಕ್ ಒಟ್ಟಾರೆ ಸಿಲೂಯೆಟ್ ಅನ್ನು ಒಂದೇ ರೀತಿ ಇರಿಸಲಾಗಿದ್ದರೂ, ಸೂಪರ್ ಬೈಕ್ ಹೆಚ್ಚು ಅಗ್ರೇಸಿವ್ ವಿನ್ಯಾಸದೊಂದಿಗೆ ಅಗ್ರೇಸಿವ್ ಲೈನ್ ಗಳು ಮತ್ತು ಹೊಸ ಫಾಸಿಕವನ್ನು ಒಳಗೊಂಡಿದೆ.

ಈ ಹೊಸ ಹಯಾಬುಸಾ ಸೂಪರ್ ಬೈಕ್ ಎಲ್ಇಡಿ ಲೈಟ್ ಗಳನ್ನು ಹೊಂದಿವೆ. ಇದರೊಂದಿಗೆ ಹೆಡ್ ಲ್ಯಾಂಪ್ ಮತ್ತು ಟೈಲ್ ಗಳನ್ನು ಒಳಗೊಂಡಿದೆ. ಮುಂಭಾಗದಲ್ಲಿ ಇಂಡಿಕೇಟರ್ ಸ್ಥಾನ ಲೈಟ್ ಗಳೊಂದಿಗೆ ಸಂಯೋಜಿಸಲಾಗಿದೆ, ಮುಂಭಾಗದ ಏರ್ ಟೆಕ್ ಹೊರಭಾಗದಲ್ಲಿ ಇರಿಸಲಾಗುತ್ತದೆ.

ಈ ಸೂಪರ್ ಬೈಕ್ ಫೀಚರ್ ಗಳ ಬಗ್ಗೆ ಹೇಳುವುದಾದರೆ, ಹಲವು ಎಲೆಕ್ಟ್ರಾನಿಕ್ ರೈಡರ್ ಅಸಿಸ್ಟ್ ಅನ್ನು ಹೊಂದಿದೆ. ಇನ್ನು ಇದರಲ್ಲಿ ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ನಲ್ಲಿ ಹೊಸ ಟಿಎಫ್‌ಟಿ ಡಿಸ್ ಪ್ಲೇಯನ್ನು ಹೊಂದಿದೆ. ಇದು ಹೊಸ ಸ್ವಿಚ್‌ಗಿಯರ್ ಜೊತೆಗೆ ರೈಡರಿಗೆ ವಿವಿಧ ರೈಡರ್ ಅಸಿಸ್ಟ್ ಆಯ್ಕೆಗಳ ನಡುವೆ ನ್ಯಾವಿಗೇಟ್ ಅನ್ನು ಹೊಂದಿದೆ.

ಇನ್ನು ಹೊಸ ಸುಜುಕಿ ಹಯಾಬುಸಾ ಸೂಪರ್ ಬೈಕಿನಲ್ಲಿ ಕೆಲವು ಸ್ಟ್ಯಾಂಡರ್ಡ್ ಎಲೆಕ್ಟ್ರಾನಿಕ್ ಏಡ್ಸ್, ಮೂರು ಪವರ್ ಮೋಡ್‌ಗಳು, ಲಾಂಚ್ ಕಂಟ್ರೋಲ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಕೂಡ ಒಳಗೊಂಡಿದೆ.

ಈ ಬೈಕಿನಲ್ಲಿ ಕಾರ್ನರಿಂಗ್ ಎಬಿಎಸ್, ಹಿಲ್-ಹೋಲ್ಡ್ ಕಂಟ್ರೋಲ್, ಆಕ್ಟಿವ್ ಸ್ಪೀಡ್ ಲಿಮಿಟರ್, ಲೋ ಆರ್‌ಪಿಎಂ ಅಸಿಸ್ಟ್, ಕಂಬೈನ್ಡ್ ಬ್ರೇಕ್ ಸಿಸ್ಟಂ, ಹೊಸ ಸಿಕ್ಸ್-ಆಕ್ಸಿಸ್ ಐಎಂಯು ಮತ್ತು ಮೂರು ಹಂತದ ಎಂಜಿನ್ ಬ್ರೇಕಿಂಗ್, 10 ಹಂತದ ಹೊಂದಾಣಿಕೆ ಹೊಂದಿರುವ ಮತ್ತು ಸ್ವಿಚ್ ಮಾಡಬಹುದಾದ ಟ್ರ್ಯಾಕ್ಷನ್ ಕಂಟ್ರೋಲ್ ಅನ್ನು ಒಳಗೊಂಡಿದೆ.

2021ರ ಸುಜುಕಿ ಹಯಾಬುಸಾ ಬೈಕಿನಲ್ಲಿ 1340 ಸಿಸಿ ಇನ್-ಲೈನ್ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 9,700 ಆರ್‌ಪಿಎಂನಲ್ಲಿ 187.7 ಬಿಹೆಚ್‌ಪಿ ಪವರ್ ಮತ್ತು 7,000 ಆರ್‌ಪಿಎಂನಲ್ಲಿ 150 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್ ಮತ್ತು ಬೈ-ಡೈರಕ್ಷನಲ್ ಕ್ವಿಕ್‌ಶಿಫ್ಟರ್‌ನೊಂದಿಗೆ ಜೋಡಿಸಲಾಗಿದೆ.

ಈ ಸುಜುಕಿ ಹಯಾಬುಸಾ ಬೈಕ್ ಗ್ಲೋಸ್ ಸ್ಪಾರ್ಕ್ಲಿ ಬ್ಲ್ಯಾಕ್/ಕ್ಯಾಂಡಿ ಬರ್ನ್ಟ್ ಗೋಲ್ಡ್, ಮೆಟಾಲಿಕ್ ಮ್ಯಾಟ್ ಸ್ವೋರ್ಡ್ ಸಿಲ್ವರ್/ಕ್ಯಾಂಡಿ ಡೇರಿಂಗ್ ರೆಡ್ ಮತ್ತು ಪರ್ಲ್ ಬ್ರಿಲಿಯಂಟ್ ವೈಟ್/ಮೆಟಾಲಿಕ್ ಮ್ಯಾಟ್ ಸ್ಟೆಲ್ಲಾರ್ ಬ್ಲೂ ಎಂಬ ಮೂರು ಬಣ್ಣಗಳ ಆಯ್ಕೆಗಳನ್ನು ಹೊಂದಿವೆ.

ಕಂಪನಿಯ ಪ್ರಕಾರ, ಈ ಹೊಸ ಸೂಪರ್‌ಬೈಕ್ 3.2 ಸೆಕೆಂಡುಗಳಲ್ಲಿ 0 ರಿಂದ 100 ಕಿ,ವೀ ವೇಗವನ್ನು ಪಡೆದುಕೊಳ್ಳುತ್ತದೆ ಮತ್ತು 299 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇನ್ನು ಈ 2021ರ ಸುಜುಕಿ ಹಯಾಬುಸಾ ಬೈಕ್ 265 ಕೆಜಿ ತೂಕವನ್ನು ಹೊಂದಿದೆ. ಇನ್ನು ಈ ಬೈಕ್ 20-ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ.

ಈ ಹೊಸ ಸೂಪರ್‍ಬೈಕ್ ಬೈಕಿನಲ್ಲಿ ಮುಂಭಾಗದಲ್ಲಿ ಬ್ರೆಂಬೊ ಸ್ಟೈಲ್‌ಮಾ 4-ಪಾಟ್ ಕ್ಯಾಲಿಪರ್ ನೊಂದಿಗೆ ಡ್ಯುಯಲ್ 320 ಎಂಎಂ ಫ್ಲೋಟಿಂಗ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ನಿಸ್ಸಿನ್ ಸಿಂಗಲ್-ಪಾಟ್ ಕ್ಯಾಲಿಪರ್‌ನೊಂದಿಗೆ ಒಂದೇ 260 ಎಂಎಂ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ.


Click it and Unblock the Notifications








