ಭಾರತದಲ್ಲಿ 125ಸಿಸಿ ಸಾಮರ್ಥ್ಯದ ಹೊಸ ಸುಜುಕಿ ಅವೆನಿಸ್ ಸ್ಪೋರ್ಟಿ ಸ್ಕೂಟರ್ ಬಿಡುಗಡೆ

ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ಭಾರತದಲ್ಲಿ ತನ್ನ ಸ್ಕೂಟರ್ ಸರಣಿಗಳ ಮಾರಾಟವನ್ನು ಹೆಚ್ಚಿಸುತ್ತಿದ್ದು, ಕಂಪನಿಯು ತನ್ನ ಬಹುನೀರಿಕ್ಷಿತ ಅವೆನಿಸ್ ಸ್ಪೋರ್ಟಿ ಸ್ಕೂಟರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.

ಭಾರತದಲ್ಲಿ 125ಸಿಸಿ ಸಾಮರ್ಥ್ಯದ ಹೊಸ ಸುಜುಕಿ ಅವೆನಿಸ್ ಸ್ಪೋರ್ಟಿ ಸ್ಕೂಟರ್ ಬಿಡುಗಡೆ

ಹೊಸ ಸುಜುಕಿ ಅವೆನಿಸ್ ಸ್ಕೂಟರ್ ಮಾದರಿಯು ಗ್ರಾಹಕರ ಬೇಡಿಕೆ ಅನುಸಾರವಾಗಿ ಸ್ಟ್ಯಾಂಡರ್ಡ್ ಮತ್ತು ರೇಸ್ ಎಡಿಷನ್‌ ಎನ್ನುವ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಸ್ಕೂಟರ್ ಎಕ್ಸ್‌ಶೋರೂಂ ಪ್ರಕಾರ ರೂ. 86,700 (ಸ್ಟ್ಯಾಂಡರ್ಡ್) ಮತ್ತು ರೂ.87,000 (ರೇಸ್ ಎಡಿಷನ್) ಬೆಲೆ ಹೊಂದಿವೆ.

ಭಾರತದಲ್ಲಿ 125ಸಿಸಿ ಸಾಮರ್ಥ್ಯದ ಹೊಸ ಸುಜುಕಿ ಅವೆನಿಸ್ ಸ್ಪೋರ್ಟಿ ಸ್ಕೂಟರ್ ಬಿಡುಗಡೆ

ಸುಜುಕಿ ಕಂಪನಿಯು ಹೊಸ ಅವೆನಿಸ್ ಸ್ಕೂಟರ್‌ನಲ್ಲಿ 2020ರ ಮೊಟೊ ಜಿಪಿ ಗೆಲುವಿನ ಸಂಭ್ರಮಕ್ಕಾಗಿ ರೇಸ್ ಎಡಿಷನ್ ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ 124 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ 8.58 ಬಿಎಚ್‌ಪಿ ಮತ್ತು 10 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಭಾರತದಲ್ಲಿ 125ಸಿಸಿ ಸಾಮರ್ಥ್ಯದ ಹೊಸ ಸುಜುಕಿ ಅವೆನಿಸ್ ಸ್ಪೋರ್ಟಿ ಸ್ಕೂಟರ್ ಬಿಡುಗಡೆ

ಹೊಸ ಸ್ಕೂಟರ್ ಮಾದರಿಯು ಸ್ಪೋರ್ಟಿ ಡಿಸೈನ್‌ನೊಂದಿಗೆ ನ್ಯೂ ಜನರೇಷನ್ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಲೊ ಮೌಂಟೆಡ್ ಫುಲ್ ಎಲ್ಇಡಿ ಹೆಡ್‌ಲ್ಯಾಂಪ್, ಸ್ಪೋರ್ಟಿಯಾಗಿರುವ ಫ್ರಂಟ್ ಆಪ್ರಾನ್, ಶಾರ್ಪ್ ಲೈನ್ ಹೊಂದಿರುವ ಟರ್ನ್ ಇಂಡಿಕೇಟರ್ ಸೇರಿದಂತೆ ಸ್ಪೋರ್ಟಿ ಲುಕ್ ಹೊಂದಿರುವ ಫ್ಲೈ ಸ್ಕೀನ್ ಪಡೆದುಕೊಂಡಿದೆ.

ಭಾರತದಲ್ಲಿ 125ಸಿಸಿ ಸಾಮರ್ಥ್ಯದ ಹೊಸ ಸುಜುಕಿ ಅವೆನಿಸ್ ಸ್ಪೋರ್ಟಿ ಸ್ಕೂಟರ್ ಬಿಡುಗಡೆ

ಸುಜುಕಿ ಕಂಪನಿಯು ಹೊಸ ಸ್ಕೂಟರಿನ ವಿನ್ಯಾಸಕ್ಕೆ ಮತ್ತುಷ್ಟು ಸ್ಪೋರ್ಟಿ ಲುಕ್ ನೀಡಲು ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ಫ್ಲಶ್ ಫಿಟ್ ಫುಟ್‌ರೆಸ್ಟ್, ಹೊಸ ಮಾದರಿಯ ಸ್ಪೋರ್ಟಿ ಎಕ್ಸಾಸ್ಟ್, ಸ್ಪ್ಲಿಟ್ ಗ್ರ್ಯಾಬ್ ರೈಲ್, ಬೈಕ್‌ಗಳ ಮಾದರಿಯಲ್ಲಿರುವ ಟರ್ನ್ ಇಂಡಿಕೇಟರ್ ಮತ್ತು ಹೊರಭಾಗದಲ್ಲಿರುವ ಫ್ಯೂಲ್ ಕ್ಯಾಪ್ ಆಯ್ಕೆ ಉತ್ತಮವಾಗಿದೆ.

ಭಾರತದಲ್ಲಿ 125ಸಿಸಿ ಸಾಮರ್ಥ್ಯದ ಹೊಸ ಸುಜುಕಿ ಅವೆನಿಸ್ ಸ್ಪೋರ್ಟಿ ಸ್ಕೂಟರ್ ಬಿಡುಗಡೆ

ಇನ್ನು ಹೊಸ ಅವೆನಿಸ್ ಸ್ಕೂಟರ್ ಅತ್ಯುತ್ತಮ ಫೀಚರ್ಸ್ ನೀಡಲಾಗಿದ್ದು, ಹೊಸ ಸ್ಕೂಟರಿನಲ್ಲಿರುವ ಫುಲ್ ಡಿಜಿಟಲ್ ಡಿಸ್‌ಪ್ಲೇ ಗ್ರಾಹಕರನ್ನು ಆಕರ್ಷಿಸಲಿದೆ. ಸುಜುಕಿ ಕನೆಕ್ಟ್ ಆ್ಯಪ್ ಮೂಲಕ ಡಿಜಿಟಲ್ ಡಿಸ್‌ಪ್ಲೇ ವಿವಿಧ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದ್ದು, ಟರ್ನ್ ಬೈ ಟರ್ನ್ ನ್ಯಾವಿಗೇಷನ್, ವಾಟ್ಸ್‌ಅಪ್ ಮೆಸೇಜ್ ಅಲರ್ಟ್, ಎಸ್ಎಂಎಸ್ ಮತ್ತು ಕಾಲರ್ ಐಡಿ ಸೇವೆಗಳನ್ನು ಬಳಕೆ ಮಾಡಬಹುದಾಗಿದೆ.

ಭಾರತದಲ್ಲಿ 125ಸಿಸಿ ಸಾಮರ್ಥ್ಯದ ಹೊಸ ಸುಜುಕಿ ಅವೆನಿಸ್ ಸ್ಪೋರ್ಟಿ ಸ್ಕೂಟರ್ ಬಿಡುಗಡೆ

ಹಾಗೆಯೇ ಹೊಸ ಸ್ಕೂಟರಿನಲ್ಲಿ ಹೆಚ್ಚಿನ ಗಾತ್ರದ ಸ್ಟೋರೇಜ್ ಸೌಲಭ್ಯದೊಂದಿಗೆ ಯುಎಸ್‌ಬಿ ಚಾರ್ಜಿಂಗ್ ಫೋರ್ಟ್, ಒಂದು ಫುಲ್ ಸೈಜ್ ಗಾತ್ರದ ಅಂಡರ್ ಸೀಟರ್ ಸ್ಟೋರೇಜ್, ಎಂಜಿನ್ ಕಿಲ್ ಸ್ವಿಚ್ ಮತ್ತು ಸೈಡ್ ಸ್ಟ್ಯಾಂಡ್ ಕಟ್ಅಪ್ ತಂತ್ರಜ್ಞಾನ ನೀಡಲಾಗಿದೆ.

ಭಾರತದಲ್ಲಿ 125ಸಿಸಿ ಸಾಮರ್ಥ್ಯದ ಹೊಸ ಸುಜುಕಿ ಅವೆನಿಸ್ ಸ್ಪೋರ್ಟಿ ಸ್ಕೂಟರ್ ಬಿಡುಗಡೆ

ಸೈಡ್ ಸ್ಟ್ಯಾಂಡ್ ತೆಗೆಯದೆ ಸ್ಕೂಟರ್ ಚಾಲನೆ ಮಾಡುವುದರಿಂದ ಆಗುವ ಅನಾಹುತಗಳನ್ನು ತಪ್ಪಿಸಲು ಸೈಡ್ ಸ್ಟ್ಯಾಂಡ್ ಕಟ್ಅಪ್ ತಂತ್ರಜ್ಞಾನ ಉತ್ತಮವಾಗಿದ್ದು, ಸೈಡ್ ಸ್ಟ್ಯಾಂಡ್ ತೆಗೆಯದೆ ಸ್ಕೂಟರ್ ಮುಂದೆ ಓಡುವುದಿಲ್ಲ.

ಭಾರತದಲ್ಲಿ 125ಸಿಸಿ ಸಾಮರ್ಥ್ಯದ ಹೊಸ ಸುಜುಕಿ ಅವೆನಿಸ್ ಸ್ಪೋರ್ಟಿ ಸ್ಕೂಟರ್ ಬಿಡುಗಡೆ

ಸೈಡ್ ಸ್ಟ್ಯಾಂಡ್ ತೆಗೆಯುವುದನ್ನು ಮರೆತು ದ್ವಿಚಕ್ರ ವಾಹನ ಓಡಿಸುವಾಗ ಹಂಪ್‌ಗಳಲ್ಲಿ ಸ್ಟ್ಯಾಂಡ್ ತಾಗುವುದರಿಂದ ಹಲವಾರು ಅನಾಹುತಗಳಿಗೆ ಕಾರಣವಾಗುತ್ತಿದ್ದು, ಹೊಸದಾಗಿ ಬಿಡುಗಡೆಯಾಗುತ್ತಿರುವ ಪ್ರತಿ ದ್ವಿಚಕ್ರ ಮಾದರಿಯಲ್ಲೂ ಈ ಫೀಚರ್ಸ್‌ ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಲಾಗುತ್ತಿದೆ.

ಭಾರತದಲ್ಲಿ 125ಸಿಸಿ ಸಾಮರ್ಥ್ಯದ ಹೊಸ ಸುಜುಕಿ ಅವೆನಿಸ್ ಸ್ಪೋರ್ಟಿ ಸ್ಕೂಟರ್ ಬಿಡುಗಡೆ

ಇದೀಗ ಅವೆನಿಸ್ ಮಾದರಿಯಲ್ಲೂ ಹಲವಾರು ಹೊಸ ಸ್ಟ್ಯಾಂಡರ್ಡ್ ಫೀಚರ್ಸ್‌‌ಗಳನ್ನು ನೀಡಲಾಗಿದ್ದು, ಹೊಸ ಸ್ಕೂಟರ್ ಖರೀದಿದಾಗಿ ಸುಜುಕಿ ಕಂಪನಿಯು ಡಿಸೆಂಬರ್ ಮೊದಲ ವಾರದಲ್ಲಿ ಬುಕ್ಕಿಂಗ್ ಆರಂಭಿಸಲಿದೆ.

ಭಾರತದಲ್ಲಿ 125ಸಿಸಿ ಸಾಮರ್ಥ್ಯದ ಹೊಸ ಸುಜುಕಿ ಅವೆನಿಸ್ ಸ್ಪೋರ್ಟಿ ಸ್ಕೂಟರ್ ಬಿಡುಗಡೆ

ಹೊಸ ಸ್ಕೂಟರ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಬ್ಲ್ಯೂ, ಗ್ರಿನ್, ಆರೇಂಜ್, ವೈಟ್ ಮತ್ತು ಬ್ಲ್ಯಾಕ್ ಬಣ್ಣಗಳಲ್ಲಿ ಹೊಸ ಸ್ಕೂಟರ್ ಖರೀದಿಗೆ ಲಭ್ಯವಿದ್ದು, ಹೊಸ ಸ್ಕೂಟರ್ ಮಾದರಿಯು ಟಿವಿಎಸ್ ಎನ್‌ಟಾರ್ಕ್ 125, ಹೋಂಡಾ ಆಕ್ಟಿವಾ 125, ಹೋಂಡಾ ಗ್ರಾಜಿಯಾ, ಯಹಮ ಫ್ಯಾಸಿನೊ ಮಾದರಿಗಳಿಗೆ ಪೈಪೋಟಿ ನೀಡಲಿದೆ.

More from DriveSpark

Article Published On: Thursday, November 18, 2021, 18:13 [IST]
English summary
Suzuki launched new avenis scooter in india details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+