ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಸುಜುಕಿ ಇನ್‌ಟ್ರುಡರ್ ಬೈಕ್
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಸುಜುಕಿ ಮೋಟಾರ್‌ಸೈಕಲ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಇನ್‌ಟ್ರುಡರ್ ಬೈಕಿನ ಬೆಲೆಯನ್ನು ಹೆಚ್ಚಿಸಿದೆ. ಸುಜುಕಿ ಈ ಇನ್‌ಟ್ರುಡರ್ ಬೈಕಿನ ಬೆಲೆಯನ್ನು ರೂ.2,100 ಗಳವರೆಗೆ ಹೆಚ್ಚಿಸಿದೆ.

ಇದರಿಂದಾಗಿ ಈ ಸುಜುಕಿ ಇನ್‌ಟ್ರುಡರ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ತುಸು ದುಬಾರಿಯಾಗಿದೆ. ಇದೀಗ ಈ ಸುಜುಕಿ ಇನ್‌ಟ್ರುಡರ್ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.126,500 ಗಳಾಗಿದೆ. ಬೆಲೆ ಏರಿಕೆಯನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಗಳಿರುವುದಿಲ್ಲ. ಇನ್ನು ಸುಜುಕಿ ಇನ್‌ಟ್ರುಡರ್ ಬೈಕಿನ ಬಗ್ಗೆ ಹೇಳುವುದಾದರೆ, ಇದರಲ್ಲಿ ಕಡಿಮೆ-ಸ್ಲಂಗ್ ವಿನ್ಯಾಸ, ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಹೆಡ್‌ಲ್ಯಾಂಪ್‌ಗಳು, ಸ್ಪ್ಲಿಟ್ ಸೀಟುಗಳು ಮತ್ತು ಡ್ಯುಯಲ್ ಮಫ್ಲರ್ ಎಕ್ಸಾಸ್ಟ್ ಅನ್ನು ಒಳಗೊಂಡಿವೆ.

ಸುಜುಕಿ ಇನ್‌ಟ್ರುಡರ್ ಬೈಕಿನ ಬೈಕಿನ ಹೃದಯ ಭಾಗ ಎಂದೇ ಹೇಳುವ ಎಂಜಿನ್ ಬಗ್ಗೆ ಹೇಳುವುದಾದರೆ, ಈ ಹೊಸ ಸುಜುಕಿ ಇನ್‌ಟ್ರುಡರ್ ಬೈಕಿನಲ್ಲಿ 154.9 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಈ ಎಂಜಿನ್ 8000 ಆರ್‌ಪಿಎಂನಲ್ಲಿ 13 ಬಿಹೆಚ್‌ಪಿ ಪವರ್ ಮತ್ತು 6000 ಆರ್‌ಪಿಎಂನಲ್ಲಿ 13.8 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಇನ್ನು ಈ ಬೈಕ್ ಕಂಪನಿಯ ಎಸ್‌ಇಪಿ (ಸುಜುಕಿ ಇಕೋ ಪರ್ಫಾರ್ಮೆನ್ಸ್) ತಂತ್ರಜ್ಞಾನ ಮತ್ತು ಫ್ಯೂಯಲ್ ಇಂಜೆಕ್ಷನ್ ಅನ್ನು ಎಲ್ಲಾ ರೂಪಾಂತರಗಳಲ್ಲಿ ಸ್ಟ್ಯಾಂಡರ್ಡ್ ಆಗಿ ಒಳಗೊಂಡಿದೆ. ಇದು ಪರ್ಫಾಮೆನ್ಸ್ ಸುಧಾರಣೆಯೊಂದಿಗೆ ಇಂಧನ ದಕ್ಷತೆ ಹೆಚ್ಚಿಸುವಲ್ಲಿ ಸಹಕರಿಸುತ್ತದೆ.

ಇನ್ನು ಉಳಿದಂತೆ ಹೊಸ ಬೈಕ್ ಮಾದರಿಯ ತಾಂತ್ರಿಕ ಸೌಲಭ್ಯಗಳಲ್ಲಿ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ, ಈ ಎಂಟ್ರಿ ಲೆವಲ್ ಕ್ರೂಸರ್ ಬೈಕ್ ಮಾದರಿಗಳಲ್ಲಿ ಇದು ಅತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿದೆ.

ಈ ಇನ್‌ಟ್ರುಡರ್ ಬೈಕಿನಲ್ಲಿ ಡಿಜಿಟಲ್ ಇನ್ಸ್ ಟ್ರೂಮೆಂಟರ್ ಕ್ಲಸ್ಟರ್ ಮತ್ತು ಹಿಬ್ಬಂದಿ ಸವಾರನಿಗಾಗಿ ಸಣ್ಣ ಬ್ಯಾಕ್‌ರೆಸ್ಟ್ ಸಹ ನೀಡಲಾಗಿದೆ. ಈ ಸುಜುಕಿ ಇನ್‌ಟ್ರುಡರ್ ಬೈಕ್ ಆಕರ್ಷಕ ವಿನ್ಯಾಸದಿಂದ ಕೂಡಿದೆ.

ಈ ಬೈಕ್ ಮೆಟಾಲಿಕ್ ಮ್ಯಾಟ್ ಬ್ಲ್ಯಾಕ್/ಕ್ಯಾಂಡಿ ಸೋನೊಮಾ ರೆಡ್, ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್/ಮೆಟಾಲಿಕ್ ಮ್ಯಾಟ್ ಸಿಲ್ವರ್ ಮತ್ತು ಮೆಟಾಲಿಕ್ ಮ್ಯಾಟ್ ಟೈಟಾನಿಯಂ ಸಿಲ್ವರ್ ಎಂಬ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

ಸುಜುಕಿ ಇನ್‌ಟ್ರುಡರ್ ಭಾರತೀಯ ಮಾರುಕಟ್ಟೆಯ ಎಂಟ್ರಿ ಲೆವೆಲ್ ಕ್ರೂಸರ್ ಬೈಕುಗಳ ವಿಭಾಗದಲ್ಲಿ ಜನಪ್ರಿಯ ಮಾದರಿಗಳಲ್ಲಿ ಒಂದಾಗಿದೆ. ಈ ಬೈಕಿನಬೆಲೆ ಏರಿಕೆಯು ಈ ಬೈಕಿನ ಮಾರಾಟದ ಮೇಲೆ ಪರಿಣಾಮ ಬೀರುವುದಿಲ್ಲವೆಂದು ನಿರೀಕ್ಷಿಸುತ್ತೇವೆ.


Click it and Unblock the Notifications








