ಮಾರಾಟದಲ್ಲಿ ಕೈಗೆಟುಕುವ ದರದ ಸುಜುಕಿ ಇನ್‌ಟ್ರುಡರ್ ಬೈಕನ್ನು ಹಿಂದಿಕ್ಕಿದ ಐಷಾರಾಮಿ ಹಯಾಬುಸಾ

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ಕಳೆದ ತಿಂಗಳ ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ಸುಜುಕಿ ಕಂಪನಿಯು ಕಳೆದ ತಿಂಗಳಿನಲ್ಲಿ ಐಷಾರಾಮಿ ಹಯಾಬುಸಾ ಸೂಫರ್ ಬೈಕ್ ಮಾದರಿಯ 35 ಯುನಿಟ್‌ಗಳನ್ನು ಮಾರಾಟಗೊಳಿಸಿವೆ.

ಮಾರಾಟದಲ್ಲಿ ಕೈಗೆಟುಕುವ ದರದ ಸುಜುಕಿ ಇನ್‌ಟ್ರುಡರ್ ಬೈಕನ್ನು ಹಿಂದಿಕ್ಕಿದ ಐಷಾರಾಮಿ ಹಯಾಬುಸಾ

ಆದರೆ ಕಳೆದ ತಿಂಗಳು ಎಂಟ್ರಿ ಲೆವೆಲ್ ಕ್ರೂಸರ್ ಆಗಿರುವ ಸುಜುಕಿ ಇನ್‌ಟ್ರುಡರ್ 150 ಮಾದರಿಯ ಕೇವಲ 20 ಯುನಿಟ್‌ಗಳು ಮಾತ್ರ ಮಾರಾಟವಾಗಿವೆ. ಐಷಾರಾಮಿ ಹಯಾಬುಸಾ ಸೂಪರ್ ಬೈಕ್ ಮಾರಾಟದಲ್ಲಿ ಸುಜುಕಿ ಕೈಗೆಟುಕವ ದರ ಇನ್‌ಟ್ರುಡರ್ 150 ಮಾದರಿಯನ್ನು ಹಿಂದಿಕ್ಕಿದೆ. ಐಷಾರಾಮಿ ಸುಜುಕಿ ಹಯಾಬುಸಾ ಸೂಪರ್ ಬೈಕಿಗೆ ಬಾರತೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯನ್ನು ಪಡೆದುಕೊಂಡಿದೆ.

ಮಾರಾಟದಲ್ಲಿ ಕೈಗೆಟುಕುವ ದರದ ಸುಜುಕಿ ಇನ್‌ಟ್ರುಡರ್ ಬೈಕನ್ನು ಹಿಂದಿಕ್ಕಿದ ಐಷಾರಾಮಿ ಹಯಾಬುಸಾ

ನ್ಯೂ ಜನರೇಷನ್ ಸುಜುಕಿ ಹಯಾಬುಸಾ ಬೈಕಿನ ಬೆಲೆಯು ರೂ.16.40 ಲಕ್ಷಗಳಾಗಿದೆ. ಇನ್ನು ಸುಜುಕಿ ಇನ್‌ಟ್ರುಡರ್ 150 ಬೈಕಿನ ಬೆಲೆಯು ರೂ.1.26 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.

ಮಾರಾಟದಲ್ಲಿ ಕೈಗೆಟುಕುವ ದರದ ಸುಜುಕಿ ಇನ್‌ಟ್ರುಡರ್ ಬೈಕನ್ನು ಹಿಂದಿಕ್ಕಿದ ಐಷಾರಾಮಿ ಹಯಾಬುಸಾ

ಸುಜುಕಿ ಮೋಟಾರ್‌ಸೈಕಲ್‌ ತನ್ನ ಹೊಸ ಹಯಾಬುಸಾ ಬೈಕನ್ನು ಭಾರತದಲ್ಲಿ ಈ ವರ್ಷದ ಏಪ್ರಿಲ್ 26ಕ್ಕೆ ಬಿಡುಗಡೆಗೊಳಿಸಿತ್ತು. ಸುಜುಕಿ ಕಂಪನಿಯು ಹೊಸ ಹಯಾಬುಸಾದ ಬೈಕಿನ ಮೊದಲ ಬ್ಯಾಚ್ ಆಗಿ 101 ಯುನಿಟ್ ಗಳನ್ನು ಬಿಡುಗಡೆಗೊಳಿಸಿತ್ತು. ಈ ಎಲ್ಲಾ ಯುನಿಟ್‌ಗಳು ಬುಕ್ಕಿಂಗ್ ಪ್ರಾರಂಭವಾದ ಒಂದೆರಡು ದಿನಗಳಲ್ಲಿ ಮಾರಾಟವಾದವು.

ಮಾರಾಟದಲ್ಲಿ ಕೈಗೆಟುಕುವ ದರದ ಸುಜುಕಿ ಇನ್‌ಟ್ರುಡರ್ ಬೈಕನ್ನು ಹಿಂದಿಕ್ಕಿದ ಐಷಾರಾಮಿ ಹಯಾಬುಸಾ

ನಂತರ ಸುಜುಕಿ ಹಯಾಬುಸಾ ಬೈಕಿನ ಎರಡನೇ ಬ್ಯಾಚ್ ಅನ್ನು ಜುಲೈ 1 ರಿಂದ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದರು. ಎರಡನೇ ಬ್ಯಾಚ್​​ನಲ್ಲಿ ಹಯಾಬುಸಾ ಬೈಕಿನ 100 ಯುನಿಟ್ ಗಳಿತ್ತು. ಈ ಎಲ್ಲಾ ಯುನಿಟ್ ಗಳು ಕೇವಲ ಒಂದು ಗಂಟೆಯಲ್ಲಿ ಮಾರಾಟ ಮಾಡಲಾಯಿತು. ನಿಸ್ಸಂಶಯವಾಗಿ ಹೇಳಬಹುದು, ಭಾರತದ ಅತ್ಯಂತ ಜನಪ್ರಿಯ ಸೂಪರ್‌ಬೈಕ್‌ಗಳಲ್ಲಿ ಒಂದಾಗಿದೆ.

ಮಾರಾಟದಲ್ಲಿ ಕೈಗೆಟುಕುವ ದರದ ಸುಜುಕಿ ಇನ್‌ಟ್ರುಡರ್ ಬೈಕನ್ನು ಹಿಂದಿಕ್ಕಿದ ಐಷಾರಾಮಿ ಹಯಾಬುಸಾ

ಈ 2021ರ ಸುಜುಕಿ ಹಯಾಬುಸಾ ಬೈಕಿನ ಸಾಂಪ್ರದಾಯಿಕ ಶೈಲಿಯನ್ನು ಉಳಿಸಿಕೊಂಡಿದೆ. ಒಟ್ಟಾರೆ ಸಿಲೂಯೆಟ್ ಅನ್ನು ಒಂದೇ ರೀತಿ ಇರಿಸಲಾಗಿದ್ದರೂ, ಸೂಪರ್ ಬೈಕ್ ಹೆಚ್ಚು ಅಗ್ರೇಸಿವ್ ವಿನ್ಯಾಸದೊಂದಿಗೆ ಅಗ್ರೇಸಿವ್ ಲೈನ್ ಗಳು ಮತ್ತು ಹೊಸ ಫಾಸಿಕದೊಂದಿಗೆ ಆಕರ್ಷಕವಾಗಿದೆ.

ಮಾರಾಟದಲ್ಲಿ ಕೈಗೆಟುಕುವ ದರದ ಸುಜುಕಿ ಇನ್‌ಟ್ರುಡರ್ ಬೈಕನ್ನು ಹಿಂದಿಕ್ಕಿದ ಐಷಾರಾಮಿ ಹಯಾಬುಸಾ

ಹಯಾಬುಸಾ ಸೂಪರ್ ಬೈಕ್ ಎಲ್ಇಡಿ ಲೈಟ್ ಗಳನ್ನು ಹೊಂದಿವೆ. ಇದು ಹೆಡ್ ಲ್ಯಾಂಪ್ ಮತ್ತು ಟೈಲ್ ಗಳನ್ನು ಒಳಗೊಂಡಿದೆ. ಮುಂಭಾಗದಲ್ಲಿ ಇಂಡಿಕೇಟರ್ ಸ್ಥಾನ ಲೈಟ್ ಗಳೊಂದಿಗೆ ಸಂಯೋಜಿಸಲಾಗಿದೆ, ಮುಂಭಾಗದ ಏರ್ ಟೆಕ್ ಹೊರಭಾಗದಲ್ಲಿ ಇರಿಸಲಾಗಿದ್ದು, ದೊಡ್ಡ ಡ್ಯುಯಲ್ ಕ್ರೋಮ್-ಲೇಪಿತ ಎಕ್ಸಾಸ್ಟ್ ಪೈಪ್ಸ್ ಅನ್ನು ಹೊಂದಿದೆ.

ಮಾರಾಟದಲ್ಲಿ ಕೈಗೆಟುಕುವ ದರದ ಸುಜುಕಿ ಇನ್‌ಟ್ರುಡರ್ ಬೈಕನ್ನು ಹಿಂದಿಕ್ಕಿದ ಐಷಾರಾಮಿ ಹಯಾಬುಸಾ

ಈ ಬೈಕಿನಲ್ಲಿ ಎಲೆಕ್ಟ್ರಾನಿಕ್ ರೈಡರ್ ಅಸಿಸ್ಟ್ ಅನ್ನು ಹೊಂದಿದ್ದು, ಇದರಲ್ಲಿ ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ನಲ್ಲಿ ಹೊಸ ಟಿಎಫ್‌ಟಿ ಡಿಸ್ ಪ್ಲೇಯನ್ನು ಕೂಡ ನೀಡಲಾಗಿದೆ. ಇದು ಹೊಸ ಸ್ವಿಚ್‌ಗಿಯರ್ ಜೊತೆಗೆ ರೈಡರಿಗೆ ವಿವಿಧ ರೈಡರ್ ಅಸಿಸ್ಟ್ ಆಯ್ಕೆಗಳ ನಡುವೆ ನ್ಯಾವಿಗೇಟ್ ಅನ್ನು ಹೊಂದಿದ್ದು,

ಮಾರಾಟದಲ್ಲಿ ಕೈಗೆಟುಕುವ ದರದ ಸುಜುಕಿ ಇನ್‌ಟ್ರುಡರ್ ಬೈಕನ್ನು ಹಿಂದಿಕ್ಕಿದ ಐಷಾರಾಮಿ ಹಯಾಬುಸಾ

ಇನ್ನು ಹೊಸ ಸುಜುಕಿ ಹಯಾಬುಸಾದಲ್ಲಿ ಕೆಲವು ಸ್ಟ್ಯಾಂಡರ್ಡ್ ಎಲೆಕ್ಟ್ರಾನಿಕ್ ಏಡ್ಸ್, ಮೂರು ಪವರ್ ಮೋಡ್‌ಗಳು, ಲಾಂಚ್ ಕಂಟ್ರೋಲ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಕೂಡ ಹೊಂದಿವೆ. ಇದರೊಂದಿಗೆ ಕಾರ್ನರಿಂಗ್ ಎಬಿಎಸ್, ಹಿಲ್-ಹೋಲ್ಡ್ ಕಂಟ್ರೋಲ್, ಆಕ್ಟಿವ್ ಸ್ಪೀಡ್ ಲಿಮಿಟರ್, ಲೋ ಆರ್ಪಿಎಂ ಅಸಿಸ್ಟ್, ಕಂಬೈನ್ಡ್ ಬ್ರೇಕ್ ಸಿಸ್ಟಂ, ಹೊಸ ಸಿಕ್ಸ್-ಆಕ್ಸಿಸ್ ಐಎಂಯು ಮತ್ತು ಸ್ವಿಚ್ ಮಾಡಬಹುದಾದ ಟ್ರ್ಯಾಕ್ಷನ್ ಕಂಟ್ರೋಲ್ ನಂತ ವಿವಿಧ ಫೀಚರ್ಸ್ ಗಳನ್ನು ಒಳಗೊಂಡಿದೆ.

ಮಾರಾಟದಲ್ಲಿ ಕೈಗೆಟುಕುವ ದರದ ಸುಜುಕಿ ಇನ್‌ಟ್ರುಡರ್ ಬೈಕನ್ನು ಹಿಂದಿಕ್ಕಿದ ಐಷಾರಾಮಿ ಹಯಾಬುಸಾ

ಈ ಹಯಾಬುಸಾ ಸೂಫರ್ ಬೈಕಿನಲ್ಲಿ 1340 ಸಿಸಿ ಇನ್-ಲೈನ್ ನಾಲ್ಕು ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 9,700 ಆರ್‌ಪಿಎಂನಲ್ಲಿ 187.7 ಬಿಹೆಚ್‌ಪಿ ಪವರ್ ಮತ್ತು 7,000 ಆರ್‌ಪಿಎಂನಲ್ಲಿ 150 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್ ಮತ್ತು ಬೈ-ಡೈರಕ್ಷನಲ್ ಕ್ವಿಕ್‌ಶಿಫ್ಟರ್‌ನೊಂದಿಗೆ ಜೋಡಿಸಲಾಗಿದೆ.

More from DriveSpark

Article Published On: Friday, July 23, 2021, 12:40 [IST]
English summary
2021 Suzuki Hayabusa Outsold Intruder 150 In India Last Month. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+