ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ Royal Enfield Scram 411 ಬೈಕ್ ವಿಶೇಷತೆಗಳು

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ರಾಯಲ್ ಎನ್‍ಫೀಲ್ಡ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಬೈಕ್‌ಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಹೊಸ ಬೈಕ್‌ಗಳೊಂದಿಗೆ ವಿವಿಧ ವಿಭಾಗಗಳಲ್ಲಿ ಬ್ರ್ಯಾಂಡ್‌ನ ಉಪಸ್ಥಿತಿಯನ್ನು ಬಲಪಡಿಸಲು ಸಹಾಯವಾಗುತ್ತದೆ.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ Royal Enfield Scram 411 ಬೈಕ್ ವಿಶೇಷತೆಗಳು

ರಾಯಲ್ ಎನ್‍ಫೀಲ್ಡ್ ಕಂಪನಿಯು ಮುಂದೆ ಬಿಡುಗಡೆಗೊಳಿಸುವ ಮಾದರಿಗಳಲ್ಲಿ ಹಿಮಾಲಯನ್ ಬೈಕಿನ ಹೊಸ ಸ್ಕ್ರ್ಯಾಂಬ್ಲರ್ ವೆರಿಯೆಂಟ್ ಕೂಡ ಒಳಗೊಂಡಿದೆ. ಈ ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಅನ್ನು ಪರೀಕ್ಷಿಸುವಾಗ ಭಾರತೀಯ ರಸ್ತೆಗಳಲ್ಲಿ ಹಲವಾರು ಬಾರಿ ಗುರುತಿಸಲಾಗಿದೆ. ರಸ್ತೆ-ಆಧಾರಿತ ಮತ್ತು ಹೆಚ್ಚು ಕೈಗೆಟುಕುವ ಮಾದರಿಯು ವಿನ್ಯಾಸದಂತಹ ಹೆಚ್ಚು ಸ್ಕ್ರ್ಯಾಂಬ್ಲರ್ ಮಾದರಿಯನ್ನು ಹೊಂದಿರುತ್ತದೆ. ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡುತ್ತದೆ. ಇನ್ನು ಈ ಹೊಸ ಬೈಕಿನ ಹೆಚ್ಚಿನ ವಿಶೇಷತೆಗಳು ಇಲ್ಲಿವೆ.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ Royal Enfield Scram 411 ಬೈಕ್ ವಿಶೇಷತೆಗಳು

ವಿನ್ಯಾಸ

ಇತ್ತೀಚೆಗೆ, ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಬೈಕ್ ಮಾರುಕಟ್ಟೆಯ ಬಿಡುಗಡೆಯು ಸನಿಹದಲ್ಲಿ ಎಂದು ಸೂಚಿಸುವ ಜಾಹೀರಾತು ಚಿತ್ರೀಕರಣದ ಸಮಯದಲ್ಲಿ ಕಂಡುಬಂದಿದೆ. ಇದು ಹಿಮಾಲಯನ್ ಬೈಕ್ ಸ್ಟೈಲಿಂಗ್ ಮತ್ತು ಬಾಡಿ ಪ್ಯಾನೆಲ್‌ಗಳನ್ನು ಎರವಲು ಪಡೆಯುತ್ತದೆ.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ Royal Enfield Scram 411 ಬೈಕ್ ವಿಶೇಷತೆಗಳು

ಸ್ಕ್ರಾಮ್ 411 ಮೂಲಭೂತವಾಗಿ ಹಿಮಾಲಯನ್‌ನ ಸ್ಟ್ರಿಪ್ಡ್-ಡೌನ್ ಆವೃತ್ತಿಯಾಗಿದೆ ಏಕೆಂದರೆ ಇದರಲ್ಲಿ ಜೆರ್ರಿ ಕ್ಯಾನ್ ಹೋಲ್ಡರ್‌ಗಳು, ಎತ್ತರದ ವಿಂಡ್‌ಸ್ಕ್ರೀನ್ ಮತ್ತು ಲಗೇಜ್ ರ್ಯಾಕ್ ಇಲ್ಲ.ಇನ್ನು ದೊಡ್ಡದಾದ 21-ಇಂಚಿನ ಮುಂಭಾಗದ ಚಕ್ರದ ಬದಲಿಗೆ, 18-ಇಂಚಿನ ಒಂದು ಜೊತೆ ಬರುತ್ತದೆ. ಬೈಕ್ ಮುಂಭಾಗದ ಫೋರ್ಕ್ ಗೈಟರ್‌ಗಳನ್ನು ಸಹ ಕಳೆದುಕೊಳ್ಳುತ್ತದೆ.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ Royal Enfield Scram 411 ಬೈಕ್ ವಿಶೇಷತೆಗಳು

ಈ ಹೊಸ ಸ್ಕ್ರಾಮ್ 411 ಮಾದರಿ ಹೊಸ ಹೆಡ್‌ಲ್ಯಾಂಪ್ ಕೌಲ್, ಸೈಡ್ ಶ್ರೌಡ್‌ಗಳು ಮತ್ತು ಹೊಸ ಮುಂಭಾಗದ ಮಡ್‌ಗಾರ್ಡ್ ಅನ್ನು ಪಡೆಯುತ್ತದೆ. ಹಿಂದಿನ ಎಲ್ಇಡಿ ಟೈಲ್-ಲೈಟ್ ಸಾಮಾನ್ಯ ಮಾದರಿಗೆ ಹೋಲುತ್ತದೆ. ಮುಂಭಾಗದ ಜೆರ್ರಿ-ಕ್ಯಾನ್ ಹೋಲ್ಡರ್ ಫ್ರೇಮ್ ಕಾಣುವುದಿಲ್ಲ ಮತ್ತು ಮುಂಭಾಗದ ಫ್ರೇಮ್ ಬದಲಿಸಿದೆ.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ Royal Enfield Scram 411 ಬೈಕ್ ವಿಶೇಷತೆಗಳು

ಈ ಬದಲಾವಣೆಗಳ ಹೊರತಾಗಿ, ಹೊಸ ಹಿಮಾಲಯದ ಬೈಕಿನ ಅಡ್ವೆಂಚರ್ ಆವೃತ್ತಿಯಿಂದ ತನ್ನ ಮೆಕ್ಯಾನಿಕಲ್ ಮತ್ತು ಇತರ ಟ್ರಿಮ್‌ಗಳನ್ನು ಎರವಲು ಪಡೆಯುತ್ತದೆ. ಇನ್ನು ಆನ್-ರೋಡ್ ಆಧಾರಿತ ಮಾದರಿಯಲ್ಲಿ ಎಕ್ಸಾಸ್ಟ್ ಮತ್ತು ಎತ್ತರ ಹ್ಯಾಂಡಲ್‌ಬಾರ್‌ನೊಂದಿಗೆ ನೇರವಾಗಿ ಕುಳಿತುಕೊಳ್ಳುವಂತಹ ಸೀಟ್ ಪೋಷಿಸನ್ ಅನ್ನು ಒಳಗೊಂಡಿರುತ್ತದೆ.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ Royal Enfield Scram 411 ಬೈಕ್ ವಿಶೇಷತೆಗಳು

ಎಂಜಿನ್

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕಿನಲ್ಲಿ ಅದೇ 411ಸಿಸಿ ಸಿಂಗಲ್-ಸಿಲಿಂಡರ್ ಎಸ್‌ಒಹೆಚ್‌ಸಿ ಏರ್-ಕೂಲ್ಡ್ ಎಂಜಿನ್ ಅನ್ನು ಸ್ಕ್ರಾಮ್ 411 ವೆರಿಯೆಂಟ್ ನಲ್ಲಿ ಹೊಂದಿರುತ್ತದೆ. ಈ ಎಂಜಿನ್ 24.3 ಬಿಹೆಚ್‍ಪಿ ಪವರ್ ಮತ್ತು 32 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ Royal Enfield Scram 411 ಬೈಕ್ ವಿಶೇಷತೆಗಳು

ಫೀಚರ್ಸ್

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕಿನಲ್ಲಿರುವಂತ ಬ'ಟ್ರಿಪ್ಪರ್ ನ್ಯಾವಿಗೇಷನ್' ಅನ್ನು ಸಹ ಒಳಗೊಂಡಿದೆ. ಹೊಸ ಸರಳ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಪಾಡ್ ಅನ್ನು ಸೆಮಿ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಜೊತೆಗೆ ಅಳವಡಿಸಲಾಗಿದೆ. ಈ ಟ್ರಿಪ್ಪರ್ ನ್ಯಾವಿಗೇಷನ್ ಫೀಚರ್ ಬೈಕ್ ರೈಡಿಂಗ್ ವೇಳೆ ಸವಾರನಿಗೆ ಸಾಕಷ್ಟು ಸಹಕಾರಿಯಾಗಿರುತ್ತದೆ.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ Royal Enfield Scram 411 ಬೈಕ್ ವಿಶೇಷತೆಗಳು

ಇದರೊಂದಿಗೆ ಈ ಹೊಸ ಮಾದರಿಯಲ್ಲಿ ಸೈಡ್-ಮೌಂಟೆಡ್ ಎಕ್ಸಾಸ್ಟ್, ಸಿಂಗಲ್-ಪೀಸ್ ಸೀಟ್, 411 ಗ್ರಾಫಿಕ್ಸ್, ಸ್ಪೋಕ್ಡ್ ವೀಲ್ಸ್, ಡ್ಯುಯಲ್-ಚಾನೆಲ್ ಎಬಿಎಸ್ ಸಿಸ್ಟಮ್, ಸರ್ಕ್ಯುಲರ್ ಮಿರರ್‌ಗಳು, ರೆಗ್ಯುಲರ್ ಫೆಂಡರ್‌ಗಳು ಇತ್ಯಾದಿಗಳನ್ನು ಪಡೆಯುತ್ತದೆ.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ Royal Enfield Scram 411 ಬೈಕ್ ವಿಶೇಷತೆಗಳು

ಸಸ್ಪಂಕ್ಷನ್

ಇನ್ನು 2021ರ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್ ಸಸ್ಪಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 41ಎಂಎಂ ಟೆಲಿಸ್ಕೋಪಿಕ್ ಸೆಟಪ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸೆಟಪ್ ಅನ್ನು ಒಳಗೊಂಡಿದೆ.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ Royal Enfield Scram 411 ಬೈಕ್ ವಿಶೇಷತೆಗಳು

ಬ್ರೇಕಿಂಗ್ ಸಿಸ್ಟಂ

ಇನ್ನು ಇದರ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 300ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 240ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇನ್ನು ಸ್ಟ್ಯಾಂಡರ್ಡ್ ಆಗಿ ಸ್ವಿಚ್ ಮಾಡಬಹುದಾದ ಎಬಿಎಸ್ ಅನ್ನು ಹೊಂದಿದೆ.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ Royal Enfield Scram 411 ಬೈಕ್ ವಿಶೇಷತೆಗಳು

ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ವೆರಿಯೆಂಟ್ ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಯಾಗಲಿದೆ. ವರದಿಗಳ ಪ್ರಕಾರ ಈ ಹೊಸ ಹಿಮಾಲಯನ್ ಸ್ಕ್ರಾಮ್ 411 ವೆರಿಯೆಂಟ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇನ್ನು ರಾಯಲ್ ಎನ್‌ಫೀಲ್ಡ್ ಭಾರತದಲ್ಲಿನ ಅತಿದೊಡ್ಡ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರಾಂಡ್ ಗಳಲ್ಲಿ ಒಂದಾಗಿದೆ. ರಾಯಲ್ ಎನ್‌ಫೀಲ್ಡ್ ಬ್ರ್ಯಾಂಡ್ ರೆಟ್ರೊ-ಶೈಲಿಯ ಸ್ಟ್ರೀಟ್ ಬೈಕ್‌ಗಳಲ್ಲಿ ಪರಿಣತಿ ಹೊಂದಿದ್ದರೂ, ಅದರ ಪೋರ್ಟ್‌ಫೋಲಿಯೊದಲ್ಲಿ ಅಡ್ವೆಂಚರ್ ಹಿಮಾಲಯನ್ ಬೈಕ್ ಅನ್ನು ಹೊಂದಿದೆ. ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್ ಭಾರತೀಯ ಮಾರುಕಟ್ಟೆಯ ಜನಪ್ರಿಯ ಅಡ್ವೆಂಚರ್-ಟೂರರ್ ಬೈಕ್‌ಗಳಲ್ಲಿ ಒಂದಾಗಿದೆ.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ Royal Enfield Scram 411 ಬೈಕ್ ವಿಶೇಷತೆಗಳು

ಅಲ್ಲದೇ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಅತ್ಯಂತ ಅಗ್ಗದ ಅಡ್ವೆಂಚರ್ ಟೂರರ್ ಬೈಕ್‌ಗಳಲ್ಲಿ ಒಂದಾಗಿದೆ. ಅಲ್ಲದೇ ಇದು ಅತ್ಯಂತ ಸಮರ್ಥ ಬೈಕ್ ಆಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಅಡ್ವೆಂಚರ್ ಬೈಕ್‌ಗಳ ಬೇಡಿಕೆ ಹೆಚ್ಚಾಗುತ್ತಿದೆ. ಇದರಿಂದ ಮಾರಾಟವನ್ನು ಇನ್ನಷ್ಟು ಹೆಚ್ಚಿಸಲು ಈ ಹೊಸ ಸ್ಕ್ರಾಮ್ 411 ನೆರವಾಗುತ್ತದೆ. ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಜಿ 310 ಜಿಎಸ್, ಕವಾಸಕಿ ವರ್ಸಿಸ್-ಎಕ್ಸ್ 300 ಮತ್ತು ಕೆಟಿ‍ಎಂ 390 ಅಡ್ವೆಂಚರ್ ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Top things of upcoming royal enfield scram 411 details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X