ಹೊಸ ಟ್ರೈಡೆಂಟ್ 660 ಬೈಕ್ ವಿತರಣೆಯನ್ನು ಆರಂಭಿಸಿದ ಟ್ರಯಂಫ್ ಮೋಟಾರ್‌ಸೈಕಲ್

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಟ್ರಯಂಫ್ ಮೋಟರ್‌ಸೈಕಲ್ ತನ್ನ ಟ್ರೈಡೆಂಟ್ 660 ರೋಡ್‌ಸ್ಟರ್ ಬೈಕನ್ನು ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಇದೀಗ ಈ ಟ್ರಯಂಫ್ ತನ್ನ ಈ ಹೊಸ ಟ್ರೈಡೆಂಟ್ 660 ರೋಡ್‌ಸ್ಟರ್ ಬೈಕಿನ ವಿತರಣೆಯನ್ನು ಪ್ರಾರಂಭಿಸಿದ್ದಾರೆ.

ಹೊಸ ಟ್ರೈಡೆಂಟ್ 660 ಬೈಕ್ ವಿತರಣೆಯನ್ನು ಆರಂಭಿಸಿದ ಟ್ರಯಂಫ್ ಮೋಟಾರ್‌ಸೈಕಲ್

1968 ರಿಂದ 1975 ರವರೆಗೆ ಟ್ರೈಡೆಂಟ್ ಎಂಬ ಹಳೆಯ ಐಕಾನಿಕ್ ಬೈಕಿನ ಉತ್ಪಾದನೆಯಲ್ಲಿತ್ತು. ಅದೇ ಐಕಾನಿಕ್ ಬೈಕಿನ ಹೆಸರಿನಲ್ಲಿ ಟ್ರಯಂಫ್ ಕಂಪನಿಯು ಹೊಸ ಮಾದರಿಯನ್ನು ಬಿಡುಗಡೆಗೊಳಿಸಿದೆ. ಈ ಹೊಸ ಟ್ರಯಂಫ್ ಟ್ರೈಡೆಂಟ್ 660 ರೋಡ್‌ಸ್ಟರ್ ಬೈಕ್ ಹಲವಾರು ಅತ್ಯಾಧುನಿಕ ಫೀಚರ್ಸ್ ಮತ್ತು ತಂತ್ರಜ್ಙಾನಗಳನ್ನು ಹೊಂದಿವೆ. ಇನ್ನು ಟ್ರಯಂಫ್ ಮೋಟಾರ್‌ಸೈಕಲ್ ಇತ್ತೀಚೆಗೆ ಈ ಬೈಕನ್ನು ಚೀನಾ ಮಾರುಕಟ್ಟೆಯಲ್ಲಿಯು ಬಿಡುಗಡೆಗೊಳಿಸಿದೆ.

ಹೊಸ ಟ್ರೈಡೆಂಟ್ 660 ಬೈಕ್ ವಿತರಣೆಯನ್ನು ಆರಂಭಿಸಿದ ಟ್ರಯಂಫ್ ಮೋಟಾರ್‌ಸೈಕಲ್

ಟ್ರಯಂಫ್ ಟ್ರೈಡೆಂಟ್ 660 ಬೈಕ್ ಅತ್ಯಂತ ಸೊಗಸಾದ ವಿನ್ಯಾಸ ಮತ್ತು ನವೀಕರಿಸಿದ ಎಂಜಿನ್ ಅನ್ನು ಹೊಂದಿದೆ. ಇದು ಹೊಸ ವಿನ್ಯಾಸ ಶೈಲಿಯನ್ನು ಹೊಂದಿದೆ. ಅಲ್ಲದೇ ಪವರ್ ಫುಲ್ ಎಂಜಿನ್ ಅನ್ನು ಒಳಗೊಂಡಿದೆ.

ಹೊಸ ಟ್ರೈಡೆಂಟ್ 660 ಬೈಕ್ ವಿತರಣೆಯನ್ನು ಆರಂಭಿಸಿದ ಟ್ರಯಂಫ್ ಮೋಟಾರ್‌ಸೈಕಲ್

ಈ ಹೊಸ ಬೈಕ್ ಸ್ಕಪಲ್ಟಡ್ ಫ್ಯೂಯಲ್ ಟ್ಯಾಂಕ್ ನೊಂದಿಗೆ ಮಸ್ಕಲರ್ ಲುಕ್ ಅನ್ನು ಹೊಂದಿದೆ. ಇನ್ನು ಇದು ಸಿಂಗಲ್-ಪೀಸ್ ಸೀಟ್, ಎಕ್ಸ್‌ಪೋಸ್ಡ್ ಫ್ರೇಮ್ ಮತ್ತು ಎಂಜಿನ್ ಜೊತೆ ವೃತ್ತಾಕಾರದ ಅಂಶಗಳೊಂದಿಗೆ ಸಣ್ಣದಾಗಿ ರೆಟ್ರೋ ಶೈಲಿಯಯಲ್ಲಿ ಕಾಣುತ್ತದೆ.

ಹೊಸ ಟ್ರೈಡೆಂಟ್ 660 ಬೈಕ್ ವಿತರಣೆಯನ್ನು ಆರಂಭಿಸಿದ ಟ್ರಯಂಫ್ ಮೋಟಾರ್‌ಸೈಕಲ್

ಈ ಹೊಸ ಬೈಕಿನಲ್ಲಿ ರೈಡರ್ ಏಡ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಅನ್ನು ಸಹ ನೀಡುತ್ತದೆ, ಉದಾಹರಣೆಗೆ ರೈಡ್-ಬೈ-ವೈರ್, ಟ್ರ್ಯಾಕ್ಷನ್ ಕಂಟ್ರೋಲ್, ರೈನ್ ಮತ್ತು ರೋಡ್ ರೈಡರ್ ಮೋಡ್ ಗಳು ಸೇರಿದಂತೆ ಇತರ ಹಲವಾರು ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿವೆ.

ಹೊಸ ಟ್ರೈಡೆಂಟ್ 660 ಬೈಕ್ ವಿತರಣೆಯನ್ನು ಆರಂಭಿಸಿದ ಟ್ರಯಂಫ್ ಮೋಟಾರ್‌ಸೈಕಲ್

ಹೊಸ ಟ್ರಯಂಫ್ ಟ್ರೈಡೆಂಟ್ 660 ಬೈಕಿನಲ್ಲಿ ಇನ್-ಲೈನ್ ಮೂರು-ಸಿಲಿಂಡರ್ 660 ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 10,250 ಆರ್‌ಪಿಎಂನಲ್ಲಿ 80 ಬಿಹೆಚ್‌ಪಿ ಪವರ್ ಮತ್ತು 6,250 ಆರ್‌ಪಿಎಂನಲ್ಲಿ 64 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಎಂಜಿನ್ ನೊಂದಿಗೆ ಸ್ಲಿಪ್/ಅಸಿಸ್ಟ್ ಕ್ಲಚ್‌ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್‌ ಜೋಡಿಸಲಾಗಿದೆ.

ಹೊಸ ಟ್ರೈಡೆಂಟ್ 660 ಬೈಕ್ ವಿತರಣೆಯನ್ನು ಆರಂಭಿಸಿದ ಟ್ರಯಂಫ್ ಮೋಟಾರ್‌ಸೈಕಲ್

ಈ ಟ್ರೈಡೆಂಟ್ 660 ಬೈಕ್ ಎಲ್ಇಡಿ ಲೈಟಿಂಗ್ ಮತ್ತು ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಗಾಗಿ ಟಿಎಫ್ಟಿ ಡಿಸ್ ಪ್ಲೇಯನ್ನು ಸಹ ಹೊಂದಿದೆ. 'ಮೈ ಟ್ರಯಂಫ್' ಆ್ಯಪ್ ಬಳಸಿ ಈ ಬೈಕಿನಲ್ಲಿರುವ ಡಿಜಿಟಲ್ ಡಿಸ್ಪ್ಲೇಯನ್ನು ರೈಡರ್ ಸ್ಮಾರ್ಟ್‌ಫೋನ್‌ಗೆ ಕನೆಕ್ಟ್ ಮಾಡಬಹುದಾಗಿದೆ.

ಹೊಸ ಟ್ರೈಡೆಂಟ್ 660 ಬೈಕ್ ವಿತರಣೆಯನ್ನು ಆರಂಭಿಸಿದ ಟ್ರಯಂಫ್ ಮೋಟಾರ್‌ಸೈಕಲ್

ಈ ಬೈಕ್ ಟೂಬುಲರ್ ಸ್ಟೀಲ್ ಚಾಸಿಸ್ ಅನ್ನು ಹೊಂದಿದೆ. ಟ್ರೈಡೆಂಟ್ 660 ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 41 ಎಂಎಂ ಶೋವಾ ಯುಎಸ್‌ಡಿ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಶೋವಾ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿದೆ.

ಹೊಸ ಟ್ರೈಡೆಂಟ್ 660 ಬೈಕ್ ವಿತರಣೆಯನ್ನು ಆರಂಭಿಸಿದ ಟ್ರಯಂಫ್ ಮೋಟಾರ್‌ಸೈಕಲ್

ಇನ್ನು ಇದರ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 310 ಎಂಎಂ ಟ್ವಿನ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ, ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ನೀಡಲಾಗಿದೆ.

ಹೊಸ ಟ್ರೈಡೆಂಟ್ 660 ಬೈಕ್ ವಿತರಣೆಯನ್ನು ಆರಂಭಿಸಿದ ಟ್ರಯಂಫ್ ಮೋಟಾರ್‌ಸೈಕಲ್

ಹೊಸ ಟ್ರಯಂಫ್ ಟ್ರೈಡೆಂಟ್ 660 ರೋಡ್‌ಸ್ಟರ್ ಬೈಕ್ ಮ್ಯಾಟ್ ಜೆಟ್ ಬ್ಲಾಕ್/ಮ್ಯಾಟ್ ಸಿಲ್ವರ್ ಐಸ್, ಸಿಲ್ವರ್ ಐಸ್ ಮತ್ತು ಡಯಾಬ್ಲೊ ರೆಡ್, ಕ್ರಿಸ್ಟಲ್ ವೈಟ್ ಮತ್ತು ಸಾಫೈರ್ ಬ್ಲ್ಯಾಕ್ ಎಂಬ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಈ ಟ್ರಯಂಫ್ ಟ್ರೈಡೆಂಟ್ 660 ಮಾದರಿಯು ದೇಶಿಯ ಮಾರುಕಟ್ಟೆಯಲ್ಲಿ ಕವಾಸಕಿ ಝಡ್650 ಬೈಕಿಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Saturday, June 12, 2021, 20:17 [IST]
English summary
Triumph Trident 660 Deliveries Commence. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+