ಭಾರತದಲ್ಲಿ 2021ರ ಟ್ರಯಂಫ್ ಬೊನೊವೆಲ್ಲಿ ಬಾಬರ್ ಬೈಕ್ ಬಿಡುಗಡೆ
ಬ್ರಿಟಿಷ್ ದ್ವಿಚಕ್ರ ತಯಾರಕ ಕಂಪನಿಯಾದ ಟ್ರಯಂಫ್ ಮೋಟರ್‌ಸೈಕಲ್ ತನ್ನ 2021ರ ಬೊನೊವೆಲ್ಲಿ ಬಾಬರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಟ್ರಯಂಫ್ ಬೊನೊವೆಲ್ಲಿ ಬಾಬರ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.11.75 ಲಕ್ಷಗಳಾಗಿದೆ.

2021ರ ಹೊಸ ಟ್ರಯಂಫ್ ಬೊನೊವೆಲ್ಲಿ ಬಾಬರ್ ಬೈಕಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಆರಂಭಿಸಿದ್ದಾರೆ. ಇನ್ನು ಈ ಹೊಸ ಬೈಕ್ ಮ್ಯಾಟ್ ಸ್ಟಾರ್ಮ್ ಗ್ರೇ ಮ್ಯಾಟ್ ಐರನ್‌ಸ್ಟೋನ್, ಕಾರ್ಡೊವನ್ ರೆಡ್ ಮತ್ತು ಜೆಟ್ ಬ್ಲ್ಯಾಕ್ ಎಂಬ ಮೂರು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ. ಹೊಸ ಬಾಬರ್ ಬೈಕ್ ದೇ 1200 ಸಿಸಿ ಎಂಜಿನ್‌ನ ನವೀಕರಿಸಿದ ಎಂಜಿನ್ ಅನ್ನು ಒಳಗೊಂಡಿದೆ.

2021ರ ಹೊಸ ಟ್ರಯಂಫ್ ಬೊನೊವೆಲ್ಲಿ ಬಾಬರ್ ಬೈಕಿನಲ್ಲಿ ಲಿಕ್ವಿಡ್-ಕೂಲ್ಡ್, ಎಸ್‌ಒಹೆಚ್‌ಸಿ, ಪ್ಯಾರೆಲಲ್-ಟ್ವಿನ್, ಫ್ಯೂಯಲ್-ಇಂಜೆಕ್ಟಡ್ 1200 ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 6100 ಆರ್‌ಪಿಎಂನಲ್ಲಿ 76.9 ಬಿಹೆಚ್‌ಪಿ ಮತ್ತು 4000 ಆರ್‌ಪಿಎಂನಲ್ಲಿ 106 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಸ್ಲಿಪ್-ಅಸಿಸ್ಟ್ ಕ್ಲಚ್‌ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಸಂಯೋಜಿಸುತ್ತದೆ. ಟ್ರಯಂಫ್ ಅತ್ಯುತ್ತಮ ಓಲ್ಡ್ ಸ್ಕೂಲ್ ವಿನ್ಯಾಸವನ್ನು ಹೊಂದಿದೆ, ಇದರ ಆಕರ್ಷಕ ವಿನ್ಯಾಸವು ಬಾಬರ್ ಶೈಲಿಯ ಬೈಕನ್ನು ಇಷ್ಟಪಡುವರ ಗಮನಸೆಳೆಯುವಂತಿದೆ.

ಇದರಲ್ಲಿ ಸಿಂಗಲ್ ರೈಡರ್ ಸೀಟ್, ಟಿಯರ್-ಡ್ರಾಪ್ ಆಕಾರದ ಫ್ಯೂಯಲ್ ಟ್ಯಾಂಕ್, ದುಂಡಗಿನ ಆಕಾರದ ಹೆಡ್‌ಲ್ಯಾಂಪ್, ಟೈಲ್-ಲ್ಯಾಂಪ್ ಮತ್ತು ಟರ್ನ್-ಸಿಗ್ನಲ್ ಇಂಡಿಕೇಟರ್ಸ್, ಬಾರ್-ಎಂಡ್ ಮೀರರ್ಸ್, ಸಿಂಗಲ್-ಪಾಡ್ ಸೆಮಿ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಫೋರ್ಕ್ ಗೇಟರ್ಸ್, ಸಿಂಗಲ್-ಪೀಸ್ ವಿಶಾಲ ಹ್ಯಾಂಡಲ್‌ಬಾರ್ ಮತ್ತು ಫಾರ್ವರ್ಡ್-ಸೆಟ್ ಫುಟ್‌ಪೆಗ್‌ಗಳನ್ನು ಒಳಗೊಂಡಿವೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಟ್ರಯಂಫ್ ಬೊನೊವೆಲ್ಲಿ ಬಾಬರ್ ಎರಡೂ ಬದಿಯಲ್ಲಿ ಡ್ಯುಯಲ್ ಕ್ರೋಮ್ ಫಿನಿಷ್ ಎಕ್ಸಾಸ್ಟ್ ಗಳನ್ನು ಮತ್ತು ಸೈಡ್ ಕವರ್‌ಗಳಲ್ಲಿ ಬೊನೊವೆಲ್ಲಿ ಬಾಬರ್ ಬ್ಯಾಡ್ಜ್ ಅನ್ನು ಸಹ ಒಳಗೊಂಡಿದೆ ಈ ಹೊಸ ಬೈಕ್ಬೊನೊವೆಲ್ಲಿ ಟಿ120 ಅನ್ನು ಆಧರಿಸಿದೆ,

ಹೊಸ ಟ್ರಯಂಫ್ ಬೊನೊವೆಲ್ಲಿ ಬಾಬರ್ ಎರಡೂ ಬದಿಯಲ್ಲಿ ಡ್ಯುಯಲ್ ಕ್ರೋಮ್ ಫಿನಿಷ್ ಎಕ್ಸಾಸ್ಟ್ ಗಳನ್ನು ಮತ್ತು ಸೈಡ್ ಕವರ್‌ಗಳಲ್ಲಿ ಬೊನೊವೆಲ್ಲಿ ಬಾಬರ್ ಬ್ಯಾಡ್ಜ್ ಅನ್ನು ಸಹ ಒಳಗೊಂಡಿದೆ ಈ ಹೊಸ ಬೈಕ್ಬೊನೊವೆಲ್ಲಿ ಟಿ120 ಅನ್ನು ಆಧರಿಸಿದೆ.
MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಉತ್ತಮ ನಿರ್ವಹಣಾಗಾಗಿ ಟ್ವಿನ್ ಕ್ರ್ಯಾಡಲ್ ಫ್ರೇಮ್ ಅನ್ನು ಹೊಂದಿದೆ. ಇನ್ನು ಈ ಹೊಸ ಟ್ರಯಂಫ್ ಬೊನೊವೆಲ್ಲಿ ಬಾಬರ್ ಬೈಕಿನಲ್ಲಿ ಸಸ್ಪೆಂಕ್ಷನ್ ಸೆಟಪ್ ಗಾಗಿ ಮುಂಭಾಗದಲ್ಲಿ 47 ಎಂಎಂ ಶೋವಾ ಕಾರ್ಟ್ರಿಡ್ಜ್ ಯುಎಸ್‌ಡಿ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿದೆ.

ಇನ್ನು ಈ ಹೊಸ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಬ್ರೆಂಬೊ 2-ಪಾಟ್ ಕಾಲಿಪರ್‌ಗಳೊಂದಿಗೆ ಡ್ಯುಯಲ್ 310 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ನಿಸ್ಸಿನ್ ಸಿಂಗಲ್ ಪಾಟ್ ಕ್ಯಾಲಿಪರ್‌ನೊಂದಿಗೆ ಸಿಂಗಲ್ 255 ಎಂಎಂ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ.


Click it and Unblock the Notifications