ಭಾರತದಲ್ಲಿ ಹೊಸ ಟ್ರಯಂಫ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಸ್ಯಾಂಡ್‌ಸ್ಟಾರ್ಮ್ ಬೈಕ್ ಬಿಡುಗಡೆ
ಬ್ರಿಟಿಷ್ ದ್ವಿಚಕ್ರ ತಯಾರಕ ಕಂಪನಿಯಾದ ಟ್ರಯಂಫ್ ಮೋಟರ್‌ಸೈಕಲ್ ತನ್ನ ಹೊಸ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಸ್ಯಾಂಡ್‌ಸ್ಟಾರ್ಮ್ ಎಡಿಷನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಟ್ರಯಂಫ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಸ್ಯಾಂಡ್‌ಸ್ಟಾರ್ಮ್ ಎಡಿಷನ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.9.65 ಲಕ್ಷಗಳಾಗಿದೆ.

ಹೊಸ ಟ್ರಯಂಫ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಸ್ಯಾಂಡ್‌ಸ್ಟಾರ್ಮ್ ಬೈಕ್ 1960ರ ಟ್ರಯಂಫ್ ಸ್ಕ್ರ್ಯಾಂಬ್ಲರ್ ಡಸರ್ಟ್ ರೇಸರ್ ನಿಂದ ಸ್ಫೂರ್ತಿ ಪಡೆದಿದೆ. ಸ್ಟ್ಯಾಂಡರ್ಡ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಅನ್ನು ಆಧರಿಸಿದ ಹೊಸ ಟ್ರಯಂಫ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಸ್ಯಾಂಡ್‌ಸ್ಟಾರ್ಮ್ ಎಡಿಷನ್ ಬ್ರಷ್ಡ್ ಅಲಾಯ್ ಸಂಪ್ ಗಾರ್ಡ್, ಹೈ ಫ್ರಂಟ್ ಮಡ್‌ಗಾರ್ಡ್ ಮತ್ತು ಬ್ಲ್ಯಾಕ್ ಗ್ರಿಲ್‌ನೊಂದಿಗೆ ಹೊಸ ಹೆಡ್‌ಲೈಟ್ ಗಳಂತಹ ಸ್ಟೈಲಿಂಗ್ ನವೀಕರಣಗಳನ್ನು ಹೊಂದಿವೆ. ಇದರೊಂದಿಗೆ ಎಲ್ಸಿಡಿ ಮಲ್ಟಿಫಂಕ್ಷನಲ್ ಡಿಸ್ ಪ್ಲೇಯನ್ನು ನೀಡಲಾಗಿದೆ.

ಹೊಸ ಟ್ರಯಂಫ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಸ್ಯಾಂಡ್‌ಸ್ಟಾರ್ಮ್ ಎಡಿಷನ್ ಮ್ಯಾಟ್ ಸ್ಟಾರ್ಮ್ ಗ್ರೇ ಎಂಬ ಒಂದೇ ಬಣ್ಣದ ಆಯ್ಕೆಯಲ್ಲಿ ಲಭ್ಯವಿರುತ್ತದೆ. ಈ ಹೊಸ ಬೈಕಿನಲ್ಲಿ ಟಾಲ್-ಸೆಟ್ ಎಕ್ಸಾಸ್ಟ್ ಸೆಟಪ್ ಮತ್ತು ಸ್ಪ್ಲಿಟ್-ಶೈಲಿಯ ಸೀಟನ್ನು ಒಳಗೊಂಡಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಹೊಸ ಟ್ರಯಂಫ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಸ್ಯಾಂಡ್‌ಸ್ಟಾರ್ಮ್ ಎಡಿಷನ್ ಬೈಕಿನ ಎಂಜಿನ್ ಸ್ಟ್ಯಾಂಡರ್ಡ್ ಮಾದರಿಗೆ ಹೋಲುತ್ತದೆ. ಇದರಲ್ಲಿ ಬಿಎಸ್ 6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದ 900 ಸಿಸಿ, ಪ್ಯಾರೆಲಲ್-ಟ್ವಿನ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಈ ಎಂಜಿನ್ 7,250 ಆರ್‌ಪಿಎಂನಲ್ಲಿ 64.1 ಬಿಹೆಚ್‌ಪಿ ಪವರ್ ಮತ್ತು 3,250 ಆರ್‌ಪಿಎಂನಲ್ಲಿ 80 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಟ್ರಯಂಫ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಸ್ಯಾಂಡ್‌ಸ್ಟಾರ್ಮ್ ಎಡಿಷನ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 41 ಎಂಎಂ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಟ್ವಿನ್ ಸೈಡಡ್ ಸ್ಪಿರ್ಗ್ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದೆ.

ಇನ್ನು ಸುರಕ್ಷತಾ ವಿಭಾಗದಲ್ಲಿ ಪ್ರಮುಖವಾದ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರಲ್ಲಿ ಮುಂಭಾಗದಲ್ಲಿ ಸಿಂಗಲ್ 310 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 255 ಎಂಎಂ ರೋಟರ್ ಅನ್ನು ಒಳಗೊಂಡಿದೆ. ಇನ್ನು ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಕೂಡ ನೀಡಲಾಗಿದೆ.
MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಟ್ರಯಂಫ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಸ್ತ್ಯಾಂಡರ್ಡ್ ಮಾದರಿಯಲ್ಲಿ ರೋಡ್, ರೈನ್ ಹಾಗೂ ಆಫ್-ರೋಡ್ ಎಂಬ ಮೂರು ರೈಡಿಂಗ್ ಮೋಡ್'ಗಳನ್ನು ನೀಡಿದೆ. ಇದರ ಜೊತೆಗೆ ಎಬಿಎಸ್, ಬದಲಿಸಬಹುದಾದ ಟ್ರಾಕ್ಷನ್ ಕಂಟ್ರೋಲ್, ಇಮೊಬೈಲೈಸರ್ ಹಾಗೂ ಯುಎಸ್‌ಬಿ ಪವರ್ ಸಾಕೆಟ್'ಗಳನ್ನು ನೀಡಲಾಗಿದೆ.

ಇನ್ನು ಈ ಹೊಸ ಬೈಕಿನಲ್ಲಿ 19 ಇಂಚಿನ ಸ್ಪೋಕ್ ವ್ಹೀಲ್‌ಗಳಿದ್ದು, ಮೆಟ್‌ಜೆಲ್ಲರ್ ಟೊರೆನ್ಸ್ ಟಯರ್‌ಗಳನ್ನು ಹೊಂದಿವೆ. ಸ್ಯಾಂಡ್‌ಸ್ಟಾರ್ಮ್ ಎಡಿಷನ್ 4.3-ಲೀಟರ್ ಪೆಟ್ರೋಲ್ ನಲ್ಲಿ 100 ಕಿ.ಮೀ ಚಲಿಸುತದೆ. ಇನ್ನು ಈ ಬೈಕಿನಲ್ಲಿ 12 ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ.


Click it and Unblock the Notifications