ಭಾರತದಲ್ಲಿ ಹೊಸ Triumph Rocket 3 GT 221 ಸ್ಪೆಷಲ್ ಎಡಿಷನ್ ಬಿಡುಗಡೆ
ಬ್ರಿಟಿಷ್ ದ್ವಿಚಕ್ರ ತಯಾರಕ ಕಂಪನಿಯಾದ ಟ್ರಯಂಫ್ ಮೋಟರ್‌ಸೈಕಲ್ ತನ್ನ ಹೊಸ ರಾಕೆಟ್ 3 221 ಸ್ಪೆಷಲ್ ಎಡಿಷನ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಟ್ರಯಂಫ್ ರಾಕೆಟ್ 3 221 ಸ್ಪೆಷಲ್ ಎಡಿಷನ್ ಬೈಕ್ ಎರಡೂ ರೂಪಾಂತರಗಳಲ್ಲಿ ಲಭ್ಯವಿರುತ್ತದೆ.

ಹೊಸ ಟ್ರಯಂಫ್ ರಾಕೆಟ್ 3 221 ಸ್ಪೆಷಲ್ ಎಡಿಷನ್ ಬೈಕ್ ಆರ್ ಮತ್ತು ಜಿಟಿ ಎಂಬ ಎರಡೂ ರೂಪಾಂತಗಳನ್ನು ಹೊಂದಿದ್ದು, ಇದರಲ್ಲಿ ಆರ್ ರೂಪಾಂತರದ ಬೆಲೆಯು ರೂ.20.80 ಲಕ್ಷವಾದರೆ, ಜಿಟಿ ರೂಪಾಂತರದ ಬೆಲೆಯು ರೂ.21.40 ಲಕ್ಷವಾಗಿದೆ. ಈ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ಪ್ರಕಾರವಾಗಿದೆ. ಈ ಸ್ಪೆಷಲ್ ಎಡಿಷನ್ ರಾಕೆಟ್ 3ರ ಕಾರ್ಯಕ್ಷಮತೆಯ ಸಂಖ್ಯೆಗಳಿಂದ ತನ್ನ ಹೆಸರನ್ನು ಪಡೆದುಕೊಂಡಿದೆ, ಇದು 221 ಎನ್ಎಂ ಟಾರ್ಕ್ ಅನ್ನು ಸೂಚಿಸುವ ಸಂಖ್ಯೆಯಾಗಿದೆ.

ಹೊಸ ಟ್ರಯಂಫ್ ರಾಕೆಟ್ 3 221 ಸ್ಪೆಷಲ್ ಎಡಿಷನ್ ಫ್ಯೂಯಲ್ ಟ್ಯಾಂಕ್ ಮತ್ತು ಮುಂಭಾಗದ ಮಡ್‌ಗಾರ್ಡ್‌ನಲ್ಲಿ ರೆಡ್ ಹಾಪರ್ ಬಣ್ಣವನ್ನು ಪಡೆಯುತ್ತದೆ ಮತ್ತು ಸಫೈರ್ ಬ್ಲ್ಯಾಕ್ ಮಡ್‌ಗಾರ್ಡ್ ಬ್ರಾಕೆಟ್‌ಗಳು, ಹೆಡ್‌ಲೈಟ್ ಬೌಲ್‌ಗಳು, ಫ್ಲೈಸ್ಕ್ರೀನ್, ಸೈಡ್ ಪ್ಯಾನೆಲ್‌ಗಳು, ಹಿಂಭಾಗದ ಬಾಡಿವರ್ಕ್ ಮತ್ತು ರೇಡಿಯೇಟರ್ ಕೌಲ್‌ಗಳೊಂದಿಗೆ ಆಕರ್ಷಕ ಲುಕ್ ಅನ್ನು ನೀಡುತ್ತದೆ.

ಸ್ಪೆಷಲ್ ಎಡಿಷನ್ 221 ಪ್ಯಾಡ್ ಗ್ರಾಫಿಕ್ಸ್ ಮತ್ತು ಸೂಕ್ಷ್ಮವಾದ ಟ್ಯಾಂಕ್-ಟಾಪ್ ಗ್ರಾಫಿಕ್ಸ್ ಅನ್ನು ನೀಡಲಾಗಿದೆ. ಸಿಂಗಲ್-ಸೈಡೆಡ್ ಸ್ವಿಂಗರ್ಮ್ ಮತ್ತು ಹಿಡನ್ ಪಿಲಿಯನ್ ಫುಟ್‌ರೆಸ್ಟ್‌ಗಳನ್ನು ಸ್ಟಾಕ್ ಆವೃತ್ತಿಯಿಂದ ಉಳಿಸಿಕೊಳ್ಳಲಾಗಿದೆ.

ಹೊಸ ಟ್ರಯಂಫ್ ರಾಕೆಟ್ 3 221 ಸ್ಪೆಷಲ್ ಎಡಿಷನ್ ಬೈಕಿನಲ್ಲಿ 2,458 ಸಿಸಿ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 165 ಬಿಹೆಚ್‍ಪಿ ಪವರ್ ಮತ್ತು 221 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಎಂಜಿನ್ ಅನ್ನು ಟಾರ್ಕ್-ಅಸಿಸ್ಟ್ ಹೈಡ್ರಾಲಿಕ್ ಕ್ಲಚ್‌ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

ಈ ಹೊಸ ಸ್ಪೆಷಲ್ ಎಡಿಷನ್ ಬೈಕಿನಲ್ಲಿ ಸಸ್ಪೆಂಷನ್‍ಗಳಿಗಾಗಿ ಮುಂಭಾಗದಲ್ಲಿ 47 ಎಂಎಂ ಶೋವಾ ಯುಎಸ್‍ಡಿ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್‍ಗಳಿವೆ. ಮುಂಭಾಗದ ಸಸ್ಪೆಂಷನ್ 120 ಎಂಎಂ ಶೋವಾ ಟ್ರಾವೆಲ್‍ನೊಂದಿಗೆ ಬಂದರೆ, ಹಿಂಭಾಗವು 107 ಎಂಎಂ ಟ್ರಾವೆಲ್‍ನೊಂದಿಗೆ ಬರುತ್ತದೆ.

ಮುಂಭಾಗದ ಸಸ್ಪೆಂಷನ್ ಕಂಪ್ರೆಷನ್ ಹಾಗೂ ರಿಬೌಂಡ್ ಅಡ್ಜಸ್ಟಬಿಲಿಟಿಯೊಂದಿಗೆ ಬರುತ್ತದೆ. ಹಿಂಭಾಗದ ಸಸ್ಪೆಂಷನ್ ರಿಮೋಟ್ ಅಡ್ಜಸ್ಟರ್ ಹೊಂದಿದೆ. ಇನ್ನು ಈ ಹೊಸ ಬೈಕಿನಲ್ಲಿ ಬ್ರೇಕಿಂಗ್‍ಗಳಿಗಾಗಿ ಮುಂಭಾಗದಲ್ಲಿ 320 ಎಂಎಂ ಫ್ಲೋಟಿಂಗ್ ಡಿಸ್ಕ್ ಹಾಗೂ ಹಿಂಭಾಗದಲ್ಲಿ ಸಿಂಗಲ್ 300 ಎಂಎಂ ಡಿಸ್ಕ್ ಬ್ರೇಕ್ ಗಳಿವೆ.

ಟ್ರಯಂಫ್ ರಾಕೆಟ್ 3 221 ಸ್ಪೆಷಲ್ ಎಡಿಷನ್ ಬೈಕಿನಲ್ಲಿ ರೋಡ್, ರೈನ್, ಸ್ಪೋರ್ಟ್ ಮತ್ತು ಸಂಪೂರ್ಣ ಕಾನ್ಫಿಗರ್ ಮಾಡಬಹುದಾದ ರೈಡರ್ ಮೋಡ್‌ಗಳನ್ನು ಹೊಂದಿದೆ. ಇನ್ನು ಈ ಬೈಕಿನಲ್ಲಿ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್) ಮತ್ತು ಟ್ರ್ಯಾಕ್ಷನ್ ಕಂಟ್ರೋಲ್ ಅನ್ನು ಹೊಂದಿದೆ. ಕೀ ಲೆಸ್ ಇಗ್ನೀಷನ್ ಮತು ಹಿಲ್ ಹೋಲ್ಡ್ ಸಿಸ್ಟಂ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ,

ಇದರೊಂದಿಗೆ ಹೊಸ ಬೈಕಿನಲ್ಲಿ ಕಾರ್ನರ್ ಮಾಡುವ ಎಬಿಎಸ್, ಕಾರ್ನರ್ ಮಾಡುವ ಟ್ರಾಕ್ಷನ್ ಕಂಟ್ರೋಲ್ ಮತ್ತು ನಾಲ್ಕು ರೈಡಿಂಗ್ ಮೋಡ್‌ಗಳನ್ನು ತರುವ ಐಎಂಯು ಫೀಚರ್ ಸೇರಿದಂತೆ ಹಲವಾರು ಎಲೆಕ್ಟ್ರಾನಿಕ್ ಸಾಧನಗಳನ್ನು ಪಡೆಯುತ್ತದೆ. ಇನ್ನು ಈ ಬೈಕಿನಲ್ಲಿ ರೈಡರ್ ಕಾನ್ಫಿಗರ್ ಮಾಡಬಹುದಾದ ಆಯ್ಕೆ. ಬೈಕ್ TFT ಸ್ಕ್ರೀನ್ ಜೊತೆಗೆ ಸೀಟಿನ ಕೆಳಗೆ ಯುಎಸ್ಬಿ ಚಾರ್ಜಿಂಗ್ ಸಾಕೆಟ್ ಅನ್ನು ಸಹ ಪಡೆಯುತ್ತದೆ.

ಟ್ರಯಂಫ್ ಮೋಟಾರ್‌ಸೈಕಲ್ಸ್ ಜಾಗತಿಕವಾಗಿ ತನ್ನ ಹೊಸ ಟೈಗರ್ 1200 ಬೈಕ್ ಅನ್ನು ಇತ್ತೀಚೆಗೆ ಅನಾವರಣಗೊಳಿಸಿತ್ತು. ಈ ಹೊಸ ಟ್ರಯಂಫ್ ಟೈಗರ್ 1200 ಬೈಕ್ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಹೊಸ ಟ್ರಯಂಫ್ ಟೈಗರ್ 1200 ಬೈಕ್ ಕ್ಲಾಸ್ ಲೀಡಿಂಗ್ ಹ್ಯಾಂಡ್ಲಿಂಗ್‌ನೊಂದಿಗೆ ಗಮನಾರ್ಹವಾಗಿ ಹಗುರವಾದ, ಹೆಚ್ಚು ಶಕ್ತಿಶಾಲಿಯಾಗಿದೆ. ಈ ಹೊಸ ಟೈಗರ್ 1200 ಸಂಪೂರ್ಣವಾಗಿ ಹೊಸ ಬೈಕ್ ಆಗಿದ್ದು, ಹೆಚ್ಚು ಪವರ್, ಹೊಸ ಚಾಸಿಸ್ ಮತ್ತು ಕಡಿಮೆ ತೂಕದೊಂದಿಗೆ ಹೊಸ ಟ್ರಿಪಲ್ ಎಂಜಿನ್ ಅನ್ನು ಒಳಗೊಂಡಿದೆ.

ಟೈಗರ್ 900 ನಂತೆ, 2022ರ ಟ್ರಯಂಫ್ ಟೈಗರ್ 1200 ಬೈಕ್ ಅನ್ನು ಎರಡು ಮಾದರಿಗಳಲ್ಲಿ ನೀಡಲಾಗುವುದು, ಟೈಗರ್ 1200 ಜಿಟಿ ಮಾದರಿಯು ಹೆಚ್ಚು ರಸ್ತೆ-ಆಧಾರಿತವಾಗಿದೆ, ಆದರೆ ಟೈಗರ್ 1200 ರ್‍ಯಾಲಿ ಮಾದರಿಯು ಹೆಚ್ಚು ಆಫ್-ರೋಡ್ ಆಧಾರಿತವಾಗಿರುತ್ತದೆ. ಹೊಸ ಟ್ರಯಂಫ್ ಟೈಗರ್ 1200 ಜಿಟಿ 19-ಇಂಚಿನ ಮುಂಭಾಗ ಮತ್ತು 18-ಇಂಚಿನ ಹಿಂಬದಿಯು ಅಲ್ಯೂಮಿನಿಯಂ ವ್ಹೀಲ್ ಗಳನ್ನು ಹೊಂದಿವೆ. ಆದರೆ ರ್‍ಯಾಲಿ ಮಾದರಿಯು ಎಲ್ಲಾ ರೀತಿ ಕಠಿಣ ಭೂಪ್ರದೇಶಗಳಲ್ಲಿಯು ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ.

ಇನ್ನು ಹೊಸ ಟ್ರಯಂಫ್ ರಾಕೆಟ್ 3 221 ಸ್ಪೆಷಲ್ ಎಡಿಷನ್ ಬೈಕಿನಲ್ಲಿ ಸ್ಟೈಲಿಂಗ್ ಪರಿಷ್ಕರಣೆಗಳಿಗೆ ಸೀಮಿತವಾಗಿವೆ. ಇದರ ವಿಶೇಷಣಗಳು, ವಿನ್ಯಾಸ, ಹಾರ್ಡ್‌ವೇರ್, ಎಲೆಕ್ಟ್ರಾನಿಕ್ಸ್ ಮತ್ತು ವೈಶಿಷ್ಟ್ಯಗಳು ಸ್ಟ್ಯಾಂಡರ್ಡ್ ಮಾದರಿಗೆ ಹೋಲುತ್ತವೆ. ಒಟ್ಟಿನಲ್ಲಿ ಇದು ರಗಡ್ ಲುಕ್ ಅನ್ನು ಹೊಂದಿರುವ ಐಷಾರಾಮಿ ಬೈಕ್ ಆಗಿದೆ.


Click it and Unblock the Notifications








