ಹೊಸ Triumph Tiger Sport 660 ಬೈಕ್ ಟೀಸರ್ ಬಿಡುಗಡೆ

ಬ್ರಿಟಿಷ್ ದ್ವಿಚಕ್ರ ತಯಾರಕ ಕಂಪನಿಯಾದ Triumph Motorcycles ತನ್ನ ಹೊಸ Tiger Sport 660 ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೀಗ Triumph ಕಂಪನಿಯು ತನ್ನ ಬಹುನಿರೀಕ್ಷಿತ Tiger Sport 660 ಬೈಕಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ಹೊಸ Triumph Tiger Sport 660 ಬೈಕ್ ಟೀಸರ್ ಬಿಡುಗಡೆ

ಈ ಹೊಸ Triumph Tiger Sport 660 ಬೈಕ್ ಮುಂಬರುವ ತಿಂಗಳುಗಳಲ್ಲಿ ಜಾಗತಿಕ ಬಿಡುಗಡೆಯಾಗಲಿದೆ. ಈ ಹೊಸ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದರ ಬಗ್ಗೆ ಯಾವುದೇ ಮಾಹಿತಿಗಳು ಬಹಿರಂಗವಾಗಲಿದೆ. ಆದರೆ ಈ ಹೊಸ Triumph Tiger Sport 660 ಬೈಕ್ ಭಾರತದಲ್ಲಿ ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

ಹೊಸ Triumph Tiger Sport 660 ಬೈಕ್ ಟೀಸರ್ ಬಿಡುಗಡೆ

ಹೊಸ Triumph Tiger Sport 660 ಬೈಕಿನ ಮೊದಲ ಚಿತ್ರಗಳು ಇದರ ಮೂಲಮಾದರಿಯ ರೂಪದಲ್ಲಿ ಬಹಿರಂಗಪಡಿಸಿವೆ. ಈ ಬೈಕ್ ಸೆಮಿ-ಫೇರಿಂಗ್ ವಿನ್ಯಾಸವನ್ನು ಒಳಗೊಂಡಿರುತ್ತದೆ ಜೊತೆಗೆ ವಿಂಡ್ ಬ್ಲಾಸ್ಟ್ ರಕ್ಷಣೆ ಮತ್ತು ಉತ್ತಮ ಟೂರಿಂಗ್ ಸಾಮರ್ಥ್ಯವನ್ನು ಒದಗಿಸುತ್ತದೆ.

ಹೊಸ Triumph Tiger Sport 660 ಬೈಕ್ ಟೀಸರ್ ಬಿಡುಗಡೆ

ಉಳಿದ ಟೈಗರ್ ಶ್ರೇಣಿಗಳಿಗಿಂತ ಸ್ಟೈಲಿಂಗ್ ಸೂಚನೆಗಳು ಸ್ಪೋರ್ಟಿಯರ್ ಆಗಿರುತ್ತವೆ, ಮತ್ತು ಅಡ್ವೆಂಚರ್-ಟೂರರ್ ಈ ಹೊಸ ಪುನರಾವರ್ತನೆಯು ಟ್ವಿನ್-ಪಾಡ್ ಹೆಡ್‌ಲೈಟ್‌ಗಾಗಿ ತೀಕ್ಷ್ಣವಾದ ವಿನ್ಯಾಸವನ್ನು ಹೊಂದಿರುತ್ತದೆ. ಇತರ ವಿನ್ಯಾಸದ ಅಂಶಗಳು ಫ್ಯೂಯಲ್ ಟ್ಯಾಂಕ್, ಸ್ಟೆಪ್-ಅಪ್ ಸೀಟ್ ಮತ್ತು ಅಂಡರ್‌ಬೆಲ್ಲಿ ಎಕ್ಸಾಸ್ಟ್ ಅನ್ನು ಒಳಗೊಂಡಿರುತ್ತದೆ.

ಹೊಸ Triumph Tiger Sport 660 ಬೈಕ್ ಟೀಸರ್ ಬಿಡುಗಡೆ

ಈ Triumph Tiger Sport 660 ಬೈಕಿನಲ್ಲಿ ಪೂರ್ಣ-ಎಲ್ಇಡಿ ಲೈಟಿಂಗ್ ಮತ್ತು ಟ್ರೈಡೆಂಟ್ 660 ನಲ್ಲಿರುವ ಯುನಿಟ್'ಗೆ ಹೋಲುವ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ. ಹೀಗಾಗಿ ಟೈಗರ್ ಸ್ಪೋರ್ಟ್ 660 ಸ್ವಿಚ್ ಮಾಡಬಹುದಾದ ಟ್ರಾಕ್ಷನ್ ಕಂಟ್ರೋಲ್, ಸ್ವಿಚ್ ಮಾಡಬಹುದಾದ ಎಬಿಎಸ್ ಮತ್ತು ಎರಡು ರೈಡಿಂಗ್ ಮೋಡ್‌ಗಳನ್ನು (ಮಳೆ ಮತ್ತು ರಸ್ತೆ) ಸ್ಟ್ಯಾಂಡರ್ಡ್ ಆಗಿ ಪ್ಯಾಕ್ ಮಾಡಬಹುದು.

ಹೊಸ Triumph Tiger Sport 660 ಬೈಕ್ ಟೀಸರ್ ಬಿಡುಗಡೆ

ಇನ್ನು ಟ್ರಯಂಫ್ ಶಿಫ್ಟ್ ಅಸಿಸ್ಟ್ ಕ್ವಿಕ್‌ಶಿಫ್ಟರ್ ಮತ್ತು ಟ್ರೈಡೆಂಟ್ 660 ರಂತೆಯೇ ಮೈ ಟ್ರಯಂಫ್ ಕನೆಕ್ಟಿವಿಟಿ ಸಿಸ್ಟಂ ಬ್ಲೂಟೂತ್ ಮಾಡ್ಯೂಲ್ ಆಯ್ಕೆಯಾಗಿ ಹೆಚ್ಚುವರಿ ಆಗಿ ಲಭ್ಯವಿರಬೇಕು. ಇದರೊಂದಿರಗ್ ಇತರ ಹಲವಾರು ಅತ್ಯಾಧುನಿಕ ಫೀಚರ್ಸ್ ಗಳನ್ನು ಒಳಗೊಂಡಿರುತ್ತದೆ,

ಹೊಸ Triumph Tiger Sport 660 ಬೈಕ್ ಟೀಸರ್ ಬಿಡುಗಡೆ

ಈ ಹೊಸ Tiger Sport 660 ಬೈಕಿನಲ್ಲಿ ಅದೇ ರೀತಿಯ ಪವರ್ ಮತ್ತು ಟಾರ್ಕ್ ಔಟ್ ಪುಟ್ ಸಂಖ್ಯೆಗಳನ್ನು ನೋಡಬಹುದು. ಟ್ರೈಡೆಂಟ್ 660 ನಲ್ಲಿ 660cc, ಇನ್ ಲೈನ್-ಮೂರು-ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಹೊಸ Triumph Tiger Sport 660 ಬೈಕ್ ಟೀಸರ್ ಬಿಡುಗಡೆ

ಈ 660 ಸಿಸಿ ಎಂಜಿನ್ 10,250 ಆರ್‌ಪಿಎಂನಲ್ಲಿ 80 ಬಿಹೆಚ್‌ಪಿ ಪವರ್ ಮತ್ತು 6,250 ಆರ್‌ಪಿಎಂನಲ್ಲಿ 64 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಎಂಜಿನ್ ನೊಂದಿಗೆ ಸ್ಲಿಪ್/ಅಸಿಸ್ಟ್ ಕ್ಲಚ್‌ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್‌ ಜೋಡಿಸಲಾಗಿದೆ.ಟ್ರೈಡೆಂಟ್ 660 ನಲ್ಲಿನ ಮೋಟಾರ್ 10,000 ಮೈಲುಗಳು/16,000 ಕಿಮೀ ಅಥವಾ 12-ತಿಂಗಳುಗಳ ಗಣನೀಯವಾದ ದೀರ್ಘಾವಧಿಯ ಸೇವಾ ಮಧ್ಯಂತರದೊಂದಿಗೆ ಬರುತ್ತದೆ

ಹೊಸ Triumph Tiger Sport 660 ಬೈಕ್ ಟೀಸರ್ ಬಿಡುಗಡೆ

Triumph Tiger Sport 660 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಅಪ್ ಸೈಡ್ ಡೌನ್ ಫೋರ್ಕ್ಸ್ ಮತ್ತು ಹಿಂಭಾಗದ ಮೊನೊ-ಶಾಕ್ ಸೆಟಪ್ ಒಳಗೊಂಡಿರುತ್ತದೆ. ಇನ್ನು ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗ್ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟ್ವಿನ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಒಂದೇ ರೋಟರ್ ಅನ್ನು ಹೊಂದಿದೆ. ಇದು ನಿಸ್ಸಿನ್-ಸೋರ್ಸ್ಡ್ ಕ್ಯಾಲಿಪರ್‌ಗಳಾಗಿವೆ.

ಹೊಸ Triumph Tiger Sport 660 ಬೈಕ್ ಟೀಸರ್ ಬಿಡುಗಡೆ

ಟ್ರಯಂಫ್ ಮೋಟರ್‌ಸೈಕಲ್ ತನ್ನ ಟ್ರೈಡೆಂಟ್ 660 ರೋಡ್‌ಸ್ಟರ್ ಬೈಕನ್ನು ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಇದೀಗ ಈ ಟ್ರಯಂಫ್ ತನ್ನ ಈ ಹೊಸ ಟ್ರೈಡೆಂಟ್ 660 ರೋಡ್‌ಸ್ಟರ್ ಬೈಕಿನ ವಿತರಣೆಯನ್ನು ಪ್ರಾರಂಭಿಸಿದ್ದಾರೆ. 1968 ರಿಂದ 1975 ರವರೆಗೆ ಟ್ರೈಡೆಂಟ್ ಎಂಬ ಹಳೆಯ ಐಕಾನಿಕ್ ಬೈಕಿನ ಉತ್ಪಾದನೆಯಲ್ಲಿತ್ತು. ಅದೇ ಐಕಾನಿಕ್ ಬೈಕಿನ ಹೆಸರಿನಲ್ಲಿ ಟ್ರಯಂಫ್ ಕಂಪನಿಯು ಹೊಸ ಮಾದರಿಯನ್ನು ಬಿಡುಗಡೆಗೊಳಿಸಿದೆ.

ಹೊಸ Triumph Tiger Sport 660 ಬೈಕ್ ಟೀಸರ್ ಬಿಡುಗಡೆ

ಈ ಹೊಸ ಟ್ರಯಂಫ್ ಟ್ರೈಡೆಂಟ್ 660 ರೋಡ್‌ಸ್ಟರ್ ಬೈಕ್ ಹಲವಾರು ಅತ್ಯಾಧುನಿಕ ಫೀಚರ್ಸ್ ಮತ್ತು ತಂತ್ರಜ್ಙಾನಗಳನ್ನು ಹೊಂದಿವೆ. ಇನ್ನು ಟ್ರಯಂಫ್ ಮೋಟಾರ್‌ಸೈಕಲ್ ಇತ್ತೀಚೆಗೆ ಈ ಬೈಕನ್ನು ಚೀನಾ ಮಾರುಕಟ್ಟೆಯಲ್ಲಿಯು ಬಿಡುಗಡೆಗೊಳಿಸಿದೆ. ಟ್ರಯಂಫ್ ಟ್ರೈಡೆಂಟ್ 660 ಬೈಕ್ ಅತ್ಯಂತ ಸೊಗಸಾದ ವಿನ್ಯಾಸ ಮತ್ತು ನವೀಕರಿಸಿದ ಎಂಜಿನ್ ಅನ್ನು ಹೊಂದಿದೆ. ಇದು ಹೊಸ ವಿನ್ಯಾಸ ಶೈಲಿಯನ್ನು ಹೊಂದಿದೆ. ಅಲ್ಲದೇ ಪವರ್ ಫುಲ್ ಎಂಜಿನ್ ಅನ್ನು ಒಳಗೊಂಡಿದೆ.

ಹೊಸ Triumph Tiger Sport 660 ಬೈಕ್ ಟೀಸರ್ ಬಿಡುಗಡೆ

ಇನ್ನು ಈ ಬೈಕಿನಲ್ಲಿ 17-ಇಂಚಿನ ಅಲಾಯ್ ವ್ಹೀಲ್‌ಗಳನ್ನು ಹೊಂದಿವೆ. ಯಾಮಗಳ ಬಗ್ಗೆ ವಿವರಗಳು ಇನ್ನೂ ಲಭ್ಯವಿಲ್ಲ, ಆದರೆ ಟೈಗರ್ ಸ್ಪೋರ್ಟ್ 660 ಉಳಿದ ಪೋರ್ಟ್ಫೋಲಿಯೊಕ್ಕಿಂತ ಕಡಿಮೆ ಸೀಟ್ ಎತ್ತರವನ್ನು ಹೊಂದಿರಬೇಕು. Triumph Tiger Sport 660 ಮಾದರಿಯು ಟ್ರೈಡೆಂಟ್ 660 ಮತ್ತು ಟೈಗರ್ 850 ಸ್ಪೋರ್ಟ್ ನಡುವಿನ ಸ್ಥಾನದಲ್ಲಿ ಇರಸಬಹುದು, ಈ Triumph Tiger Sport 660 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ವಾಸಕಿ ವರ್ಸಸ್ 650, ಸುಜುಕಿ ವಿ-ಸ್ಟಾರ್ಮ್ 650 XT ಮತ್ತು CFMoto 650 MT ಗಳಿಗೆ ಪೈಪೋಟಿ ನೀಡಬಹುದು,

More from DriveSpark

Article Published On: Thursday, August 26, 2021, 10:18 [IST]
English summary
Triumph tiger sport 660 new teaser released ahead of debut details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+