Just In
Don't Miss!
- News
ಪೊಲೀಸ್ ಠಾಣೆಯಲ್ಲಿ ಬಗೆಹರಿದ ಒಂದು ಕೋಣದ ವಿವಾದ!
- Movies
'ದೀಪ್ ಸಿಧು ಜೊತೆ ನನಗೆ ಯಾವುದೇ ಸಂಬಂಧವಿಲ್ಲ': ಸಂಸದ, ನಟ ಸನ್ನಿ ಡಿಯೋಲ್ ಸ್ಪಷ್ಟನೆ
- Finance
ಬಜೆಟ್ 2021: ಸ್ಟ್ಯಾಂಡರ್ಡ್ ಡಿಡಕ್ಷನ್ ರು. 1 ಲಕ್ಷಕ್ಕೆ ಹೆಚ್ಚಳ ನಿರೀಕ್ಷೆ
- Sports
ಬೈರ್ಸ್ಟೋವ್ಗೆ 2 ಪಂದ್ಯಗಳ ವಿಶ್ರಾಂತಿ ನೀಡಿರುವುದನ್ನು ಸಮರ್ಥಿಸಿದ ಇಂಗ್ಲೆಂಡ್ ಕೋಚ್
- Education
WCD Chitradurga Recruitment 2021: ಅಂಗನವಾಡಿಯಲ್ಲಿ 129 ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ: ಇದರ ಅಪಾಯಗಳೇನು, ತಡೆಗಟ್ಟುವುದು ಹೇಗೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪೊಂಗಲ್ ಹಬ್ಬದ ಪ್ರಯುಕ್ತ ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್ 'ಮುಧಲ್ ಕಾದಲ್' ಎಡಿಷನ್ ಬಿಡುಗಡೆ
ಟಿವಿಎಸ್ ಮೋಟಾರ್ ಕಂಪನಿಯು ತಮಿಳುನಾಡಿನಲ್ಲಿ ಪ್ರತ್ಯೇಕವಾಗಿ ಸ್ಕೂಟಿ ಪೆಪ್ ಪ್ಲಸ್ ಸ್ಕೂಟರಿನ ಸ್ಪೆಷಲ್ ಎಢಿಷನ್ ಅನ್ನು ಬಿಡುಗಡೆಗೊಳಿಸಿದೆ. ಪೊಂಗಲ್ ಹಬ್ಬದ ಪ್ರಯುಕ್ತ ಸ್ಕೂಟಿ ಪೆಪ್ ಪ್ಲಸ್ ಸ್ಕೂಟರಿನ ಮುಧಲ್ ಕಾದಲ್ ಎಂಬ ಸೆಷ್ಪಲ್ ಎಡಿಷನ್ ಅನ್ನು ಬಿಡುಗಡೆಗೊಳಿಸಲಾಗಿದೆ.

ಮುಧಲ್ ಕಾದಲ್ ಎಂದರೆ ಫಸ್ಟ್ ಲವ್ ಎಂದರ್ಥ. ಈ ತಿಂಗಳ 14 ಮತ್ತು 17ರ ನಡುವಿನ ನಾಲ್ಕು ದಿನಗಳ ಕಾಲ ತಮಿಳುನಾಡಿನಲ್ಲಿ ಪೊಂಗಲ್ ಹಬ್ಬ ನಡೆಯುತ್ತದೆ. ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್ ಸ್ಕೂಟರ್ ಬಗ್ಗೆ ಹೇಳುವುದಾದರೆ, ಸ್ಕೂಟಿ ದೇಶಾದ್ಯಂತ 25 ವರ್ಷಗಳಿಂದ ಜನಪ್ರಿಯ ಸ್ಕೂಟರ್ ಆಗಿದ್ದು, ಅಗತ್ಯತೆಗಳಿಗೆ ಸಂಬಂಧಿಸಿದಂತೆ ದೈನಂದಿನ ಪ್ರಯಾಣಕ್ಕೆ ಉತ್ತಮ ಆಯ್ಕೆಯಾಗಿದೆ.

ಈ ಹೊಸ ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್ ಮುಧಲ್ ಕಾದಲ್ ಎಡಿಷನ್ ಬೆಲೆಯು ಚೆನ್ನೈ ಎಕ್ಸ್ ಶೋರೂಂ ಪ್ರಕಾರ ರೂ.56,085 ಗಳಾಗಿದೆ. ಪೊಂಗಲ್ ಹಬ್ಬದ ಪ್ರಯುಕ್ತ ತಮಿಳುನಾಡಿನಲ್ಲಿ ಹೊಸ ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್ ಮುಧಲ್ ಕಾದಲ್ ಎಡಿಷನ್ ಬಿಡುಗಡೆಗೊಳಿಸಿರುವುದರಿಂದ ಟಿವಿಎಸ್ ಹೆಚ್ಚಿನ ಗ್ರಾಹಕರ ಗಮನ ಸೆಳೆಯಬಹುದು.
MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಹೊಸ ಸ್ಕೂಟಿ ಪೆಪ್ ಪ್ಲಸ್ ಸ್ಪೆಷಲ್ ಎಡಿಷನ್ ಬ್ರೂನ್ ಮತ್ತು ಗ್ರೇ ಬಣ್ಣಗಳನ್ನು ಹೊಂದಿದೆ. ಈ ಸ್ಕೂಟರ್ ಸೀಟ್ ಡ್ಯುಯಲ್-ಟೋನ್ ಬಣ್ಣಗಳಿಂದ ಕೂಡಿದೆ. ಸ ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್ ಮುಧಲ್ ಕಾದಲ್ ಎಡಿಷನ್ ಹೊಸ ಬಣ್ಣದ ಆಯ್ಕೆ ಮತ್ತು ಗ್ರಾಫಿಕ್ಸ್ ಬದಲಾವಣೆಗಳನ್ನು ಹೊರತುಪಡಿಸಿ ಉಳಿದೆಲ್ಲವೂ ಸ್ಟ್ಯಾಂಡರ್ಡ್ ಮಾದರಿಯಂತಿದೆ.

ಈ ಸ್ಕೂಟರ್ ನಲ್ಲಿರುವ ಎಂಜಿನ್ ಸಿಸ್ಟಂನಲ್ಲಿ ಕಾರ್ಬ್ಯುರೇಟರ್‌ಗೆ ಫ್ಯೂಯಲ್ -ಇಂಜೆಕ್ಷನ್ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 6,500 ಆರ್‌ಪಿಎಂನಲ್ಲಿ 5 ಬಿಹೆಚ್‌ಪಿ ಪವರ್ ಹಾಗೂ 4,000 ಆರ್‌ಪಿಎಂನಲ್ಲಿ 5.8 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್ ಸ್ಕೂಟರ್ ದೇಶಿಯ ಮಾರುಕಟ್ಟೆಯಲ್ಲಿ 90 ಸಿಸಿ ಎಂಜಿನ್ ಹೊಂದಿರುವ ಏಕೈಕ ಸ್ಕೂಟರ್ ಆಗಿದೆ. ಟಿವಿಎಸ್ ಕಂಪನಿಯು ಇನ್ನೂ ಹಲವು ವರ್ಷಗಳವರೆಗೆ ಇದೇ ಎಂಜಿನ್ ಅನ್ನು ಈ ಸ್ಕೂಟರಿನಲ್ಲಿ ಮುಂದುವರೆಸುವ ಸಾಧ್ಯತೆಗಳಿವೆ.

ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಬಹುತೇಕ ಸ್ಕೂಟರ್‌ಗಳು 110 ಸಿಸಿ ಹಾಗೂ 125 ಸಿಸಿಯ ಎಂಜಿನ್ ಗಳನ್ನು ಹೊಂದಿವೆ. ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್ ಸ್ಕೂಟರ್ ಅನ್ನು ಬಿಎಸ್ 6 ಎಂಜಿನ್‌ನೊಂದಿಗೆ ಅಪ್ ಗ್ರೇಡ್ ಗೊಳಿಸಿರುವ ಕಾರಣಕ್ಕೆ ಹೆಚ್ಚು ಗ್ರಾಹಕರನ್ನು ಆಕರ್ಷಿಸಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್ ಸ್ಕೂಟರ್ ನಲ್ಲಿ ಹಲವಾರು ಫೀಚರ್ ಗಳನ್ನು ಹೊಂದಿದೆ. ಈ ಸ್ಕೂಟರ್ ನಲ್ಲಿ ಮೊಬೈಲ್ ಚಾರ್ಜರ್ ಮತ್ತು ಸೈಡ್ ಸ್ಟ್ಯಾಂಡ್ ಅಲಾರಂ ಹೊಂದಿದೆ. ಈ ಸ್ಕೂಟರ್ ಸೀಟ್ 768 ಎಂಎಂ ಕಡಿಮೆ ಎತ್ತರವನ್ನು ಹೊಂದಿದೆ.

ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್ ಸ್ಕೂಟರ್ ಎರಡು ಟಯರುಗಳಲ್ಲಿ 110 ಎಂಎಂ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ. ಇನ್ನು ಈ ಸ್ಕೂಟರ್ 135 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ಇನ್ನು ಈ ಸ್ಕೂಟರ್ 4.2 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ.

ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್ ಸ್ಕೂಟರ್, ಯಾವುದೇ ಸ್ಕೂಟರ್ ಗಳಿಗೆ ನೇರವಾದ ಪೈಪೋಟಿಯನ್ನು ನೀಡುವುದಿಲ್ಲ. ವಿಭಿನ್ನ ವಿನ್ಯಾದ ಮೂಲಕ ಈ ಸ್ಕೂಟರ್ ಹೆಚ್ಚಿನ ಗ್ರಾಹಕರನ್ನು ಸೆಳೆದಿದೆ. ಟಿವಿಎಸ್ ತಮಿಳುನಾಡಿನಲ್ಲಿ ಪ್ರತ್ಯೇಕವಾಗಿ ಪೊಂಗಲ್ ಹಬ್ಬದ ಪ್ರಯುಕ್ತ ಮುಧಲ್ ಕಾದಲ್ ಎಂಬ ಸ್ಪೆಷಲ್ ಎಡಿಷನ್ ಅನ್ನು ಬಿಡುಗಡೆಗೊಳಿಸಿದೆ.