ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಯಮಹಾ ಎಫ್‍ಝಡ್-ಎಕ್ಸ್ ಬೈಕ್ ಮಾಹಿತಿ ಬಹಿರಂಗ
ಯಮಹಾ ಮೋಟಾರ್ ಇಂಡಿಯಾ ಕಂಪನಿಯು ಭಾರತದಲ್ಲಿ ಎಫ್‍ಝಡ್-ಎಕ್ಸ್ ಎಂಬ ಹೊಸ ಹೆಸರಿನ ಟ್ರೇಡ್‌ಮಾರ್ಕ್ ಕಳೆದ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ನೋಂದಾಯಿಸಿಕೊಂಡಿದ್ದರು. ಈ ಹೊಸ ಯಮಹಾ ಎಫ್‍ಝಡ್-ಎಕ್ಸ್ ಬೈಕ್ ಅಡ್ವೆಂಚರ್ ಟೂರರ್ ಮಾದರಿಯಾಗಿರಬಹುದು.

ಈ ಹೊಸ ಯಮಹಾ ಎಫ್‍ಝಡ್-ಎಕ್ಸ್ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಈ ವರ್ಷದ ಅಂತ್ಯದಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಈ ಹೊಸ ಯಮಹಾ ಎಫ್‍ಝಡ್-ಎಕ್ಸ್ ಬೈಕಿನ ಮಾಹಿತಿಗಳನ್ನು ರಶ್ಲೇನ್ ಬಹಿರಂಗಪಡಿಸಿದೆ. ಇದರ ಪ್ರಕಾರ, ಎಫ್‍ಝಡ್-ಎಕ್ಸ್ ಬೈಕ್ 2020 ಎಂಎಂ ಉದ್ದ, 785 ಎಂಎಂ ಅಗಲ ಮತ್ತು 1115 ಎಂಎಂ ಎತ್ತರವನ್ನು ಹೊಂದಿರುತ್ತದೆ.

ಇನ್ನು ಈ ಹೊಸ ಯಮಹಾ ಎಫ್‍ಝಡ್-ಎಕ್ಸ್ ಬೈಕ್ 330 ಎಂಎಂ ವ್ಹೀಲ್‌ಬೇಸ್ ಅನ್ನು ಹೊಂದಿದೆ. ಇದೇ ಸರಣಿಯ ಎಫ್‌ಜೆಡ್ -150 ಬೈಕ್ ಕೂಡ ಒಂದೇ ರೀತಿಯ ವ್ಹೀಲ್‌ಬೇಸ್ ಅನ್ನು ಹೊಂದಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಯಮಹಾ ಎಫ್‍ಝಡ್-ಎಕ್ಸ್ ಬೈಕಿನಲ್ಲಿ 149ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7,250 ಆರ್‌ಪಿಎಂನಲ್ಲಿ 12.2 ಬಿಹೆಚ್‌ಪಿ ಪವರ್ ಮತ್ತು 5,500 ಆರ್‌ಪಿಎಂನಲ್ಲಿ 13.3 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಇನ್ನು ಹೊಸ ಯಮಹಾ ಎಫ್‍ಝಡ್-ಎಕ್ಸ್ ಬೈಕಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಬೈಕ್ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಎಲ್‌ಇಡಿ ಟೈಲ್ ಲೈಟ್‌ಗಳನ್ನು ಅಳವಡಿಸಲಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಇನ್ನು ಇದರಲ್ಲಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಗಾಗಿ ಎಲ್‌ಸಿಡಿ ಡಿಸ್ ಪ್ಲೇಯನ್ನು ಅಳವಡಿಸಲಾಗಿದೆ. ಇತ್ತೀಚೆಗೆ ಪರಿಚಯಿಸಲಾದ ಬ್ಲೂಟೂತ್ ಕನೆಕ್ಟಿವಿಟಿ ತಂತ್ರಜ್ಞಾನವು ಸ್ಟ್ಯಾಂಡರ್ಡ್ ಆಗಿ ಇದರಲ್ಲಿ ನೀಡಬಹುದು.

ಯಮಹಾ ಎಫ್‍ಝಡ್-ಎಕ್ಸ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ನೊಂದಿಗೆ ಪ್ರಿ-ಲೋಡ್ಗೆ ಹೊಂದಾಣಿಕೆಯೊಂದಿಗೆ ಒಂದೇ ಆಗಿರುತ್ತದೆ.
MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಇನ್ನು ಇದರ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 282 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ. ಇದರೊಂದಿಗೆ ಸಿಂಗಲ್-ಚಾನೆಲ್ ಎಬಿಎಸ್ ಅನ್ನು ಕೂಡ ಒಳಗೊಂಡಿರುತ್ತದೆ.

ಯಮಹಾ ಎಫ್‍ಝಡ್-ಎಕ್ಸ್ ಬೈಕ್ ಸ್ಪೆಷಲ್ ಎಡಿಷನ್ ಆಗುವ ಸಾಧ್ಯತೆಗಳು ಕೂಡ ಇದೆ. ಒಂದು ವೇಳೆ ಸ್ಪೆಷಲ್ ಎಡಿಷನ್ ಆಗಿದ್ದರೆ, ಕೇವಲ ಕಾಸ್ಮೆಟಿಕ್ ನವೀಕರಣಗಳಿಗೆ ಮಾತ್ರ ಸೀಮಿತಗೊಳಿಸಲಾಗುತ್ತದೆ.

ಈ ಯಮಹಾ ಎಫ್‍ಝಡ್-ಎಕ್ಸ್ ಬೈಕ್ ಸ್ಟ್ಯಾಂಡರ್ಡ್ ಮಾದರಿಯ ಹೊಸ ರೂಪಾಂತರವಾಗಿರಬಹುದೆಂದು ಹೇಳಲಾಗುತ್ತಿದೆ. ದೇಶದಲ್ಲಿ ಕೈಗೆಟುಕುವ ಅಡ್ವೆಂಚರ್ ಬೈಕ್ ಗಳ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ, ಯಮಹಾ ಎಫ್‍ಝಡ್ ಆವೃತ್ತಿಯಂತೆ ಕಾಣುವ ಹೊಸ ಮಾದರಿಯನ್ನು ಬಿಡುಗಡೆಗೊಳಿಸಲು ಮುಂದಾಗಿರಬಹುದು.


Click it and Unblock the Notifications








