ಜಪಾನ್‌ನಲ್ಲಿ ಬಿಡುಗಡೆಯಾಯ್ತು ಮೇಡ್ ಇನ್ ಇಂಡಿಯಾ 2021ರ ಸುಜುಕಿ ಜಿಕ್ಸರ್ 250 ಬೈಕ್
ಜಪಾನ್ ಮೂಲದ ಬೈಕ್ ತಯಾರಕ ಕಂಪನಿಯಾದ ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ಮೇಡ್ ಇನ್ ಇಂಡಿಯಾ 2021ರ ಜಿಕ್ಸರ್ 250 ಬೈಕನ್ನು ತಾಯಿನಾಡು ಜಪಾನ್‌ನಲ್ಲಿ ಬಿಡುಗಡೆಗೊಳಿಸಿದೆ. ಈ 2021ರ ಸುಜುಕಿ ಜಿಕ್ಸರ್ 250 ಬೈಕ್ ಎರಡು ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡಿದೆ.

2021ರ ಸುಜುಕಿ ಜಿಕ್ಸರ್ 250 ಬೈಕ್ ಮ್ಯಾಟ್ ಬ್ಲ್ಯಾಕ್ ಮೆಟಾಲಿಕ್ ಮತ್ತು ಟ್ರೈಟಾನ್ ಬ್ಲೂ ಮೆಟಾಲಿಕ್ ಎಂಬ ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡಿವೆ. ಈ ಬಣ್ಣಗಳು ಈಗಾಗಲೇ ಇಂಡಿಯಾ-ಸ್ಪೆಕ್ ಮಾದರಿಯಲ್ಲಿ ಲಭ್ಯವಿದೆ. ಜಪಾನೀಸ್ ಮಾದರಿಯ ಫೀಚರ್ ಮತ್ತು ಯಾಂತ್ರಿಕ ವಿಶೇಷಣಗಳು ಸಹ ಇಲ್ಲಿ ಮಾರಾಟವಾಗುವ ಜಿಕ್ಸರ್ 250 ಬೈಕಿಗಿಂತ ಭಿನ್ನವಾಗಿಲ್ಲ.

2021ರ ಸುಜುಕಿ ಜಿಕ್ಸರ್ 250 ಬೈಕಿನಲ್ಲಿ 249 ಸಿಸಿ, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 9,000 ಆರ್‌ಪಿಎಂನಲ್ಲಿ 26 ಬಿಹೆಚ್‌ಪಿ ಪವರ್ ಮತ್ತು 7,300 ಆರ್‌ಪಿಎಂನಲ್ಲಿ 22 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಈ ಎಂಜಿನ್ ಅನ್ನು ಆರು-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. 2021ರ ಸುಜುಕಿ ಜಿಕ್ಸರ್ 250 ಬೈಕ್ ಎಲ್‍ಇಡಿ ಹೆಡ್‍ಲ್ಯಾಂಪ್‍ಗಳು, ಎಲ್‍ಇಡಿ ಟೈಲ್‍ಲೈಟ್‍ಗಳು, ಎಲ್‍ಸಿಡಿ ಡಿಜಿಟಲ್ ಎನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಇತರ ಫೀಚರ್ ಗಳನ್ನು ಒಳಗೊಂಡಿದೆ.

ಈ ಹೊಸ ಸುಜುಕಿ ಜಿಕ್ಸರ್ 250 ಬೈಕಿನಲ್ಲಿ ಹೊಸದಾಗಿ ವಿನ್ಯಾಸಗೊಳಿಸಲಾದ ಟ್ಯಾಂಕಿನ ಮೇಲೆ ವಿಶಿಷ್ಟವಾದ ಬಾಡಿ ಗ್ರಾಫಿಕ್ಸ್ ಗಳಿದ್ದು, ಇದರ ಜೊತೆಗೆ ಒವಲ್ ಆಕಾರಾದ ಎಲ್ಇಡಿ ಹೆಡ್‌ಲ್ಯಾಂಪ್ ಯೂನಿಟ್‍ಗಳಿವೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಜಿಕ್ಸರ್ 250 ಬೈಕಿನಲ್ಲಿ ಟಯರ್ ಹಗ್ಗರ್, ಸ್ಪ್ಲಿಟ್ ಸೀಟ್, ಕಪ್ಪು ಬಣ್ಣದ ಅಲಾಯ್ ವ್ಹೀಲ್ ಹಾಗೂ ಕ್ರೋಮ್ ಅಂಶಗಳನ್ನು ಹೊಂದಿರುವ ಡ್ಯುಯಲ್ ಮಫ್ಲರ್ ಗಳನ್ನು ಕೂಡ ಒಳಗೊಂಡಿದೆ.

ಹೊಸ ಸುಜುಕಿ ಜಿಕ್ಸರ್ 250 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‍ಗಳು ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಸಸ್ಪೆಂಷನ್ ಸೆಟಪ್ ಅನ್ನು ಹೊಂದಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಇನ್ನು ಇದರ ಬ್ರೈಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ ಇದು ಉತ್ತಮವಾಗಿದ್ದು, ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‍ಗಳನ್ನು ಅಳವಡಿಸಿದ್ದಾರೆ. ಇದರೊಂದಿಗೆ ಸ್ಟ್ಯಾಂಡರ್ಡ್ ಡ್ಯುಯಲ್ ಚಾನೆಲ್ ಎಬಿಎಸ್ ಸಿಸ್ಟಂ ಅನ್ನು ನೀಡಿದ್ದಾರೆ.

ಇನ್ನು ಸುಜುಕಿ ಜಿಕ್ಸರ್ 250 ಮಾದರಿಯು ದೇಶಿಯ ಮಾರುಕಟ್ಟೆಯಲ್ಲಿ ಕೆಟಿಎಂ ಡ್ಯೂಕ್ 250, ಬಜಾಜ್ ಪಲ್ಸರ್ ಆರ್‍ಎಸ್ 200 ಮತ್ತು ಟಿವಿಎಸ್ ಅಪಾಚೆ ಆರ್‍ಆರ್ 310 ಬೈಕ್‍ಗಳಿಗೆ ಪೈಪೋಟಿಯನ್ನು ನೀಡುತ್ತದೆ. ಜಪಾನ್‌ನಲ್ಲಿ ಬಿಡುಗಡೆಗೊಂಡ ಮಾದರಿಯು ಹೊಸ ಬಣ್ಣದ ಆಯ್ಜೆಯನ್ನು ಹೊರತುಪಡಿಸಿ ಹೆಚ್ಚಿನ ಬದಲಾವಣೆಗಳಿಲ್ಲ. ಆದರೆ ಈ ಹೊಸ ಬಣ್ಣಗಳ ಆಯ್ಕೆಯಲ್ಲಿ ಸುಜುಕಿ ಜಿಕ್ಸರ್ 250 ಭಾರತದಲ್ಲಿ ಮಾರಾಟವಾಗುತ್ತಿದೆ.


Click it and Unblock the Notifications








