ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ ಹೀರೋ ಗ್ಲ್ಯಾಮರ್ ಬೈಕ್

ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ ತನ್ನ ಪೋರ್ಟ್ಫೋಲಿಯೊದಲ್ಲಿರುವ ಹಲವಾರು ಜನಪ್ರಿಯ ಮಾದರಿಗಳನ್ನು ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಳಿಸುತ್ತಿದೆ. ಇದೀಗ ಹೀರೋ ಕಂಪನಿಯು ಜನಪ್ರಿಯ ಗ್ಲ್ಯಾಮರ್ ನವೀಕರಿಸಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ ಹೀರೋ ಗ್ಲ್ಯಾಮರ್ ಬೈಕ್

ಹೀರೋ ಮೋಟೊಕಾರ್ಪ್ ಕಂಪನಿಯು ಹೊಸ ಗ್ಲ್ಯಾಮರ್ ಬೈಕಿನ ಹೊಸ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಹೊಸ ಹೀರೋ ಗ್ಲ್ಯಾಮರ್ ಬೈಕ್ ಕಾಸ್ಮೆಟಿಕ್ ಮತ್ತು ಸಣ್ಣ ಯಾಂತ್ರಿಕ ನವೀಕರಣಗಳನ್ನು ಪಡೆದುಕೊಳ್ಳುತ್ತದೆ. ನವೀಕರಿಸಿದ ಹೊಸ ಗ್ಲ್ಯಾಮರ್ ಬೈಕ್ ಎಲ್ಇಡಿ ಹೆಡ್‌ಲ್ಯಾಂಪ್, ಎಚ್-ಆಕಾರದ ಡಿಆರ್‌ಎಲ್, ಹೊಸ ಗ್ಲೋಸ್ ಬ್ಲ್ಯಾಕ್ ಬಣ್ಣ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಮತ್ತು ಕಾಲ್ ಅಲರ್ಟ್‌ಗಳನ್ನು ಪ್ರದರ್ಶಿಸು ಸಂಪೂರ್ಣವಾದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಪಡೆಯಬಹುದು ಎಂದು ನಿರೀಕ್ಷಿಸುತ್ತೇವೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ ಹೀರೋ ಗ್ಲ್ಯಾಮರ್ ಬೈಕ್

ಇದರೊಂದಿಗೆ ಬ್ಲೂಟೂತ್ ಕನೆಕ್ಟಿವಿಟಿ, ಡಿಜಿಟಲ್ ಡ್ಯಾಶ್ ಗೇರ್ ಪೋಷಿಸನ್, ಟೈಮ್ ಮತ್ತು ಸರ್ವಿಸ್ ಅಲರ್ಟ್ ಅನ್ನು ಕೂಡ ಪ್ರದರ್ಶಿಸುತ್ತದೆ. ಮುಂದಿನ ದಿನಗಳಲ್ಲಿ ನವೀಕರಿಸಿದ ಹೊಸ ಹೀರೋ ಗ್ಲ್ಯಾಮರ್ ಬೈಕಿನ ಬಗ್ಗೆ ಹೆಚ್ಚಿನ ಮಾಹಿತಿಗಳು ಬಹಿರಂಗವಾಗುತ್ತದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ ಹೀರೋ ಗ್ಲ್ಯಾಮರ್ ಬೈಕ್

ಇನ್ನು ಹೊಸದಾಗಿ ಬಿಡುಗಡೆಗೊಂಡ ಗ್ಲ್ಯಾಮರ್ ಎಕ್ಸ್‌ಟೆಕ್‌ಗೆ ಹೋಲಿಸಿದರೆ, ಸಾಮಾನ್ಯ ಗ್ಲ್ಯಾಮರ್‌ನ ನವೀಕರಿಸಿದ ಮಾದರಿಯು ಸ್ವಲ್ಪ ಭಿನ್ನವಾಗಿರುತ್ತದೆ. ಹೆಚ್ಚಾಗಿ ಇದು ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ಕಳೆದುಕೊಳ್ಳುತ್ತದೆ. ಸಣ್ಣ ವಿನ್ಯಾಸ ಬದಲಾವಣೆಗಳೊಂದಿಗೆ, ಇದು ತಾಜಾವಾಗಿ ಕಾಣುತ್ತದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ ಹೀರೋ ಗ್ಲ್ಯಾಮರ್ ಬೈಕ್

ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಹೀರೋ ಗ್ಲ್ಯಾಮರ್ ಬೈಕಿನಲ್ಲಿರುವ ಅದೇ 124ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್‌ ಹೊಸ ಮಾದರಿಯಲ್ಲಿ ಹೊಂದಿರುತ್ತದೆ. ಈ ಎಂಜಿನ್ 7500 ಆರ್‌ಪಿಎಂನಲ್ಲಿ 10.7 ಬಿಹೆಚ್‌ಪಿ ಪವರ್ ಮತ್ತು 6000 ಆರ್‌ಪಿಎಂನಲ್ಲಿ 10.6 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ,

ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ ಹೀರೋ ಗ್ಲ್ಯಾಮರ್ ಬೈಕ್

ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಹೀರೋ ಗ್ಲ್ಯಾಮರ್ ಬೈಕ್ ಎಲ್ಇಡಿ ಡಿಆರ್ಎಲ್ ಮತ್ತು ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನಂತಹ ಪ್ರೀಮಿಯಂ ಫೀಚರ್ ಗಳನ್ನು ಕೂಡ ಒಳಗೊಂಡಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ ಹೀರೋ ಗ್ಲ್ಯಾಮರ್ ಬೈಕ್

ಈ ಹೀರೋ ಗ್ಲ್ಯಾಮರ್ ಬ್ರ್ಯಾಂಡ್ ನಿಂದ ಮಾರಾಟವಾಗುವ ಜನಪ್ರಿಯ ಪ್ರೀಮಿಯಂ ಕಮ್ಯೂಟರ್ ಬೈಕ್ ಆಗಿದೆ. ಈ ಹೀರೋ ಗ್ಲ್ಯಾಮರ್ ಮಾದರಿಯು ದೇಶಿಯ ಮಾರುಕಟ್ಟೆಯಲ್ಲಿ ಹೋಂಡಾ ಶೈನ್ ಮತ್ತು ಎಸ್‌ಪಿ 125 ಬೈಕುಗಳಿಗೆ ಪೈಪೋಟಿ ನೀಡುತ್ತದೆ.

ಇತ್ತೀಚೆಗೆ ಬಿಡುಗಡೆಗೊಂಡ ಹೀರೋ ಗ್ಲ್ಯಾಮರ್ ಎಕ್ಸ್‌ಟೆಕ್ ಬೈಕಿನಲ್ಲಿ ಬ್ಲೂಟೂತ್ ಕನೆಕ್ಟಿವಿಟಿ, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಇಂಟಿಗ್ರೇಟೆಡ್ ಯುಎಸ್‌ಬಿ ಚಾರ್ಜರ್ ಜೊತೆಗೆ ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್ ಆಫ್, ಬ್ಯಾಂಕ್ ಆಂಗಲ್ ಸೆನ್ಸರ್ ಮತ್ತು ಎಲ್ಇಡಿ ಹೆಡ್‌ಲ್ಯಾಂಪ್ ಹೊಂದಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ ಹೀರೋ ಗ್ಲ್ಯಾಮರ್ ಬೈಕ್

ಈ ಬೈಕಿನಲ್ಲಿ ಕರೆ ಮತ್ತು ಎಸ್‌ಎಂಎಸ್‌ನೊಂದಿಗೆ ಬ್ಲೂಟೂತ್ ಕನೆಕ್ಟಿವಿಟಿ ನೀಡುತ್ತದೆ ಮ್ಯಾಪ್ ಜೊತೆ ಅಲರ್ಟ್ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಒಳಗೊಂಡಿದೆ. ಇನ್ನು ಒಟ್ಟಿನಲ್ಲಿ ಸ್ಟ್ಯಾಂಡರ್ಡ್ ಹೀರೋ ಗ್ಲ್ಯಾಮರ್ ಹೊಸ ನವೀಕರಣಗಳನ್ನು ಪಡೆಯಲಿದೆ. ಈ ಹೊಸ ಹೀರೋ ಗ್ಲ್ಯಾಮರ್ ಬೈಕ್ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ.

Most Read Articles

Kannada
English summary
Updated Hero Glamour Teased. Read In Kannada.
Story first published: Tuesday, July 27, 2021, 17:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X