ಭಾರತದಲ್ಲಿ 75th Anniversary Edition ಸ್ಕೂಟರ್ ಬಿಡುಗಡೆ ಮಾಡಿದ Vespa

Vespa ಕಂಪನಿಯು ಭಾರತದಲ್ಲಿ 75th Anniversary Edition ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದ್ದು, ಸ್ಪೆಷಲ್ ಎಡಿಷನ್ ಸ್ಕೂಟರ್‌ಗಳು ಸ್ಟ್ಯಾಂಡರ್ಡ್ ಮಾದರಿಗಿಂತಲೂ ಅತ್ಯುತ್ತಮ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿವೆ.

ಭಾರತದಲ್ಲಿ 75th Anniversary Edition ಸ್ಕೂಟರ್‌ ಗಳನ್ನು ಬಿಡುಗಡೆ ಮಾಡಿದ Vespa ಇಂಡಿಯಾ

75th Anniversary Edition ಸ್ಕೂಟರ್‌ಗಳನ್ನು Vespa ಮಾತೃಸಂಸ್ಥೆಯಾದ ಪಿಯಾಜಿಯೋ ಕಂಪನಿಯು ಉದ್ಯಮ ಕಾರ್ಯಾಚರಣೆ ಆರಂಭಿಸಿ 75 ವರ್ಷಗಳ ಸಂಭ್ರಮಕ್ಕಾಗಿ ಸ್ಪೆಷಲ್ ಎಡಿಷನ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲಾಗುತ್ತಿದ್ದು, ಹೊಸ ಸ್ಕೂಟರ್‌ಗಳು ಭಾರತ ಸೇರಿದಂತೆ ವಿಶ್ವಾದ್ಯಂತ ಮಾರಾಟಗೊಳ್ಳುತ್ತಿವೆ.

ಭಾರತದಲ್ಲಿ 75th Anniversary Edition ಸ್ಕೂಟರ್‌ ಗಳನ್ನು ಬಿಡುಗಡೆ ಮಾಡಿದ Vespa ಇಂಡಿಯಾ

ಕಳೆದ ಜೂನ್‌ನಲ್ಲಿಯೇ 75th Anniversary Edition ಸ್ಕೂಟರ್‌ಗಳನ್ನು ಯುರೋಪ್ ಮಾರುಕಟ್ಟೆಗಳಲ್ಲಿ ಪರಿಚಯಿಸಿದ್ದ Vespa ಕಂಪನಿಯು ಇದೀಗ ಏಷಿಯನ್ ಮಾರುಕಟ್ಟೆಗಳಲ್ಲೂ ಬಿಡುಗಡೆ ಮಾಡುತ್ತಿದ್ದು, ಹೊಸ ಎಡಿಷನ್‌ಗಳು 125 ಸಿಸಿ ಮತ್ತು 150 ಸಿಸಿ ಆವೃತ್ತಿಗಳನ್ನು ಒಳಗೊಂಡಿದೆ.

ಭಾರತದಲ್ಲಿ 75th Anniversary Edition ಸ್ಕೂಟರ್‌ ಗಳನ್ನು ಬಿಡುಗಡೆ ಮಾಡಿದ Vespa ಇಂಡಿಯಾ

75th Anniversary Edition ಸ್ಕೂಟರ್‌ಗಳು ಸ್ಟ್ಯಾಂಡರ್ಡ್ Vespa ಸ್ಕೂಟರ್‌ಗಳಿಂತಲೂ ತುಸು ಹೆಚ್ಚುವರಿ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ಮಾದರಿಯು ರೂ. 1.25 ಲಕ್ಷಕ್ಕೆ ಮತ್ತು ಹೈ ಎಂಡ್ ಮಾದರಿಯು ರೂ.1.39 ಲಕ್ಷ ಬೆಲೆ ಹೊಂದಿದೆ.

ಭಾರತದಲ್ಲಿ 75th Anniversary Edition ಸ್ಕೂಟರ್‌ ಗಳನ್ನು ಬಿಡುಗಡೆ ಮಾಡಿದ Vespa ಇಂಡಿಯಾ

Vespa ಕಂಪನಿಯು ಹೊಸ ಸ್ಕೂಟರ್‌ಗಳ ಬಿಡುಗಡೆಯೊಂದಿಗೆ ರೂ.5 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ಆರಂಭಿಸಿದ್ದು, ಮುಂದಿನ ತಿಂಗಳು ಆರಂಭದಲ್ಲಿ ಹೊಸ ಸ್ಕೂಟರ್ ವಿತರಣೆ ಆರಂಭವಾಗಲಿದೆ.

ಭಾರತದಲ್ಲಿ 75th Anniversary Edition ಸ್ಕೂಟರ್‌ ಗಳನ್ನು ಬಿಡುಗಡೆ ಮಾಡಿದ Vespa ಇಂಡಿಯಾ

ಹೊಸ ಸ್ಪೆಷಲ್ ಎಡಿಷನ್ ಸ್ಕೂಟರ್‌ಗಳಲ್ಲಿ Vespa ಕಂಪನಿಯು ಮೆಟಾಲಿಕ್ ಯೆಲ್ಲೊ ಬಣ್ಣದ ಆಯ್ಕೆಯನ್ನು ನೀಡಿದ್ದು, ಸೈಡ್ ಪ್ಯಾನಲ್‌ಗಳಲ್ಲಿ 75ನೇ ವರ್ಷದ ಸಂಭ್ರಮಕ್ಕಾಗಿ ಸ್ಟಿಕರ್ಸ್ ಜೊತೆಗೆ ಬ್ಯಾಡ್ಜ್ ಸಹ ನೀಡಲಾಗಿದೆ.

ಭಾರತದಲ್ಲಿ 75th Anniversary Edition ಸ್ಕೂಟರ್‌ ಗಳನ್ನು ಬಿಡುಗಡೆ ಮಾಡಿದ Vespa ಇಂಡಿಯಾ

ಸ್ಪೆಷಲ್ ಎಡಿಷನ್ ಮಾದರಿಯಾಗಿ ಗುರುತಿಸಿಕೊಳ್ಳಲು ಕಂಪನಿಯು ಹೊಸ ಸ್ಕೂಟರ್‌ನಲ್ಲಿ ರೌಂಡ್ ಸೇಫ್ ಹೊಂದಿರುವ ಲೆದರ್ ಬ್ಯಾಗ್, ಕ್ರೋಮ್ ರಾಕ್, ಗ್ರೆ ಮೌಂಟೆಡ್ ಡೈಮಂಡ್ ಕಟ್ ಅಲಾಯ್ ವ್ಹೀಲ್, ಲೆದರ್ ಸೀಟ್ ಮತ್ತು ಹೊಸ ಸ್ಕೂಟರ್ ಖರೀದಿಯೊಂದಿಗೆ ಗ್ರಾಹಕರಿಗೆ ಕಂಪನಿಯ ಇತಿಹಾಸ ಕುರತಾಗಿ ವಿವರಿಸುವ 75th Anniversary Edition ಕಿಟ್ ನೀಡಲಾಗುತ್ತಿದೆ.

ಭಾರತದಲ್ಲಿ 75th Anniversary Edition ಸ್ಕೂಟರ್‌ ಗಳನ್ನು ಬಿಡುಗಡೆ ಮಾಡಿದ Vespa ಇಂಡಿಯಾ

75th Anniversary Edition ಸ್ಕೂಟರ್‌ಗಳಲ್ಲಿ 125 ಮಾದರಿಯು 125 ಸಿಸಿ ಎಂಜಿನ್ ಹೊಂದಿದ್ದರೆ 150 ಮಾದರಿಯು 149 ಸಿಸಿ ಎಂಜಿನ್ ಹೊಂದಿದ್ದು, ಫ್ಯೂಲ್ ಇಂಜೆಕ್ಷೆಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 125 ಮಾದರಿಯು 9.7 ಬಿಎಚ್‌ಪಿ, 9.6 ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 150 ಮಾದರಿಯು 10.3 ಬಿಎಚ್‌ಪಿ, 10.6 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಭಾರತದಲ್ಲಿ 75th Anniversary Edition ಸ್ಕೂಟರ್‌ ಗಳನ್ನು ಬಿಡುಗಡೆ ಮಾಡಿದ Vespa ಇಂಡಿಯಾ

Vespa ಕಂಪನಿಯು 150 ಸಿಸಿ 75th Anniversary Edition ಮಾದರಿಯಲ್ಲಿ ಸಿಂಗಲ್ ಚಾನೆಲ್ ಎಬಿಎಸ್ ಸ್ಟ್ಯಾಂಡರ್ಡ್ ಆಗಿ ನೀಡಿದ್ದು, 125 ಸಿಸಿ 75th Anniversary Edition ನಲ್ಲಿ ಕಂಬೈನ್ ಬ್ರೇಕಿಂಗ್ ಸಿಸ್ಟಂ(ಸಿಬಿಎಸ್) ಜೋಡಣೆ ಮಾಡಿದೆ.

ಭಾರತದಲ್ಲಿ 75th Anniversary Edition ಸ್ಕೂಟರ್‌ ಗಳನ್ನು ಬಿಡುಗಡೆ ಮಾಡಿದ Vespa ಇಂಡಿಯಾ

ಇನ್ನುಳಿಂತೆ ಹೊಸ ಸ್ಕೂಟರ್‌ನಲ್ಲಿ ಕಾಂಟೊರ್ಡ್ ಬಾಡಿ ಪ್ಯಾನೆಲ್, ಎಲ್ಇಡಿ ಹೆಡ್‌ಲೈಟ್ಸ್ ಜೊತೆ ಡಿಆರ್‌ಎಲ್ಎಸ್, ರೌಂಡ್ ಸೇಫ್ ಹೆಡ್‌ಲ್ಯಾಂಪ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಸಿಂಗಲ್ ಪೀಸ್ ಸೀಟ್, ಆಕರ್ಷಕವಾದ ಎಕ್ಸಾಸ್ಟ್ ಮತ್ತು ಎಲ್‌ಇಡಿ ಹೆಡ್‌ಲ್ಯಾಂಪ್ ನೀಡಲಾಗಿದೆ.

ಭಾರತದಲ್ಲಿ 75th Anniversary Edition ಸ್ಕೂಟರ್‌ ಗಳನ್ನು ಬಿಡುಗಡೆ ಮಾಡಿದ Vespa ಇಂಡಿಯಾ

ಹೊಸ ಸ್ಪೆಷಲ್ ಎಡಿಷನ್ ಸ್ಕೂಟರ್‌ಗಳನ್ನು Vespa ಕಂಪನಿಯು ಸೀಮಿತ ಅವಧಿಗಾಗಿ ಮಾತ್ರ ಮಾರಾಟ ಮಾಡಲಿದ್ದು, ಸೀಮಿತ ಸಂಖ್ಯೆಯ ಮಾರಾಟದ ನಂತರ ಸ್ಪೆಷಲ್ ಎಡಿಷನ್ ಮಾರಾಟವನ್ನು ಸ್ಥಗಿತಗೊಳಿಸಿ ಸ್ಟ್ಯಾಂಡರ್ಡ್ ಮಾದರಿಗಳನ್ನು ಎಂದಿನಂತೆ ಮಾರಾಟವನ್ನು ಮುಂದುವರಿಸಲಿದೆ.

ಭಾರತದಲ್ಲಿ 75th Anniversary Edition ಸ್ಕೂಟರ್‌ ಗಳನ್ನು ಬಿಡುಗಡೆ ಮಾಡಿದ Vespa ಇಂಡಿಯಾ

ಇನ್ನು ಯುರೋಪಿನ್ ಮಾರುಕಟ್ಟೆಗಳಲ್ಲಿ ವೆಸ್ಪಾ ಮತ್ತು ಎಪ್ರಿಲಿಯಾ ಬ್ರಾಂಡ್‌ಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಪಿಯಾಜಿಯೊ ಕಂಪನಿಯು ವೆಸ್ಪಾ ಮಾದರಿಯನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸಿ 75 ವರ್ಷಗಳ ಯಶಸ್ವಿ ಉದ್ಯಮ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದೆ.

ಭಾರತದಲ್ಲಿ 75th Anniversary Edition ಸ್ಕೂಟರ್‌ ಗಳನ್ನು ಬಿಡುಗಡೆ ಮಾಡಿದ Vespa ಇಂಡಿಯಾ

ವೆಸ್ಪಾ ದ್ವಿಚಕ್ರ ವಾಹನಗಳ ಉತ್ಪಾದನೆಯು ಯಶಸ್ವಿ 75 ವರ್ಷಗಳೊಂದಿಗೆ ಇದುವರೆಗೆ 19 ಮಿಲಿಯನ್(1.90 ಕೋಟಿ) ಸ್ಕೂಟರ್‌ಗಳ ಉತ್ಪಾದನಾ ಗುರಿತಲುಪಿದ್ದು, ವಿಶ್ವದ ಪ್ರಮುಖ 83 ರಾಷ್ಟ್ರಗಳಲ್ಲಿ ಮಾರಾಟ ಜಾಲ ಹೊಂದಿದೆ. ವಿಶ್ವಾದ್ಯಂತ ಮೂರು ಉತ್ಪಾದನಾ ಘಟಕಗಳ ಮೂಲಕ ಇದುವರೆಗೆ 1.90 ಕೋಟಿ ಯುನಿಟ್ ಉತ್ಪಾದನೆ ಪೂರ್ಣಗೊಳಿಸುವ ಮೂಲಕ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಭಾರತದಲ್ಲಿ 75th Anniversary Edition ಸ್ಕೂಟರ್‌ ಗಳನ್ನು ಬಿಡುಗಡೆ ಮಾಡಿದ Vespa ಇಂಡಿಯಾ

ಪ್ರೀಮಿಯಂ ಸ್ಕೂಟರ್ ಮಾದರಿಯಾಗಿರುವ ವೆಸ್ಪಾ ಆವೃತ್ತಿಗಳು ಇತರೆ ಸ್ಕೂಟರ್ ಮಾದರಿಗಳಿಂತಲೂ ತುಸು ದುಬಾರಿ ಎನ್ನಿಸಿದರೂ ತನ್ನದೆ ಬ್ರಾಂಡ್ ಜನಪ್ರಿಯತೆ, ಗುಣಮಟ್ಟದೊಂದಿಗೆ ವಿಶ್ವಾದ್ಯಂತ ಬೇಡಿಕೆ ಹೊಂದಿದೆ.

ಭಾರತದಲ್ಲಿ 75th Anniversary Edition ಸ್ಕೂಟರ್‌ ಗಳನ್ನು ಬಿಡುಗಡೆ ಮಾಡಿದ Vespa ಇಂಡಿಯಾ

ಹೀಗಾಗಿ 75ನೇ ವರ್ಷದ ಸಂಭ್ರಮಕ್ಕಾಗಿ ಗ್ರಾಹಕರಿಗೆ ವಿಶೇಷ ಸೌಲಭ್ಯಗಳನ್ನು ಒಳಗೊಂಡ ಸ್ಪೆಷಲ್ ಎಡಿಷನ್‌ಗಳನ್ನು ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್‌ಗಳು ಇದೀಗ ಭಾರತದಲ್ಲೂ ಬಿಡುಗಡೆಯಾಗಿರುವುದು ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುವ ನೀರಿಕ್ಷೆಯಿದೆ.

More from DriveSpark

Article Published On: Thursday, August 19, 2021, 16:43 [IST]
English summary
Vespa 75th Anniversary Edition 125 & 150 Launched In India.
Read more on ವೆಸ್ಪಾ vespa
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+