250 ಕಿ.ಮೀ ರೇಂಜ್ ಹೊಂದಿರುವ Vmoto Stash ಎಲೆಕ್ಟ್ರಿಕ್ ಬೈಕ್ ಅನಾವರಣ

ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಳುತ್ತಿದೆ. ಹೆಚ್ಚಿನ ಜನರು ನಿಧಾನವಾಗಿ ಎಲೆಕ್ಟ್ರಿಕ್ ವಾಹನಗಳ ಕಡೆ ಮೊರೆ ಹೋಗುತ್ತಿದ್ದಾರೆ. ಇದರಿಂದ ಹಲವು ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿದೆ.

250 ಕಿ.ಮೀ ರೇಂಜ್ ಹೊಂದಿರುವ Vmoto Stash ಎಲೆಕ್ಟ್ರಿಕ್ ಬೈಕ್ ಅನಾವರಣ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಲವು ಜನಪ್ರಿಯ ವಾಹನ ತಯಾರಕ ಕಂಪನಿಯು ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳ ಕಡೆ ಗಮನಹರಿಸುತ್ತಿದೆ. ಇದರ ನಡುವೆ ಯುರೋಪಿಯನ್ ಮಾರುಕಟ್ಟೆಗಳಿಗಾಗಿ, Vmoto Soco ಗ್ರೂಪ್ ಇಟಲಿಯ ಮಿಲನ್‌ನಲ್ಲಿ ನಡೆಯುತ್ತಿರುವ EICMA ಮೋಟಾರ್‌ಸೈಕಲ್ ಶೋನಲ್ಲಿ ತನ್ನ ಸ್ಟ್ಯಾಶ್ ಎಲೆಕ್ಟ್ರಿಕ್ ಬೈಕ್ ಅನ್ನು ಅನಾವರಣಗೊಳಿಸಿದೆ. ಇದು ಕಂಪನಿಯ ಪೋರ್ಟ್‌ಫೋಲಿಯೊದಲ್ಲಿ ಪ್ರೀಮಿಯಂ ಉತ್ಪನ್ನವಾಗಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ವಿಮೋಟೋ ಈಗಾಗಲೇ ಸೂಪರ್ ಸೊಕೊ TS, TC, TSX ಮತ್ತು TC ಮ್ಯಾಕ್ಸ್‌ನಂತಹ ಹಲವಾರು ಇತರ ಎಲೆಕ್ಟ್ರಿಕ್ ಬೈಕ್ ಗಳನ್ನು ಹೊಂದಿದೆ.

250 ಕಿ.ಮೀ ರೇಂಜ್ ಹೊಂದಿರುವ Vmoto Stash ಎಲೆಕ್ಟ್ರಿಕ್ ಬೈಕ್ ಅನಾವರಣ

ಸ್ಟ್ಯಾಶ್ ಎಲೆಕ್ಟ್ರಿಕ್ ಬೈಕ್ ನಯವಾದ ವಿನ್ಯಾಸ, ಅಗ್ರೇಸಿವ್ ಫಾಸಿಕ ಮತ್ತು ತೀಕ್ಷ್ಣವಾದ ಬಾಡಿಯ ಪ್ಯಾನೆಲ್ ಗಳಲ್ಲಿ ಪ್ಯಾಕ್ ಮಾಡುತ್ತದೆ, ಇದು ಪ್ರಬಲವಾದ ರಸ್ತೆ ಉಪಸ್ಥಿತಿಯನ್ನು ಖಚಿತಪಡಿಸುತ್ತದೆ. ಈ ಹೊಸ ಎಲೆಕ್ಟ್ರಿಕ್ ಬೈಕ್ ಮುಂಭಾಗದ ಕೌಲ್ ಮತ್ತು ಟ್ಯಾಂಕ್ ವಿಭಾಗದಲ್ಲಿ ವ್ಯತಿರಿಕ್ತ ಬಣ್ಣಗಳ ಬಳಕೆಯೊಂದಿಗೆ ಡ್ಯುಯಲ್-ಟೋನ್ ಥೀಮ್ ಬೈಕ್‌ನ ನೋಟ ಮತ್ತು ಭಾವನೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

250 ಕಿ.ಮೀ ರೇಂಜ್ ಹೊಂದಿರುವ Vmoto Stash ಎಲೆಕ್ಟ್ರಿಕ್ ಬೈಕ್ ಅನಾವರಣ

ಈ ಹೊಸ ಎಲೆಕ್ಟ್ರಿಕ್ ಬೈಕ್ ಸೈಡ್ ಪ್ಯಾನೆಲ್‌ಗಳು ಬೈಕ್‌ಗೆ ಸ್ಪೋರ್ಟಿ, ಮಸ್ಕಲರ್ ಪ್ರೊಫೈಲ್ ಅನ್ನು ಖಚಿತಪಡಿಸುತ್ತದೆ. ವಿಮೋಟೋ ಸ್ಟ್ಯಾಶ್ ಎಲೆಕ್ಟ್ರಿಕ್ ಬೈಕ್ ಕೆಲವು ಪ್ರಮುಖ ವೈಶಿಷ್ಟ್ಯಗಳು ಟ್ರೆಂಡಿ DRL ಜೊತೆಗೆ ನಯವಾದ ಹೆಡ್‌ಲ್ಯಾಂಪ್, ಬ್ಲ್ಯಾಕ್ ಛಾಯೆಯಲ್ಲಿ ಸ್ಪೋರ್ಟಿ ವಿಂಡ್‌ಸ್ಕ್ರೀನ್, ಈಟಿ-ಆಕಾರದ ಮುಂಭಾಗ ಮತ್ತು ಹಿಂಭಾಗದ ಟರ್ನ್ ಸಿಗ್ನಲ್‌ಗಳನ್ನು ಹೊಂದಿದೆ.

250 ಕಿ.ಮೀ ರೇಂಜ್ ಹೊಂದಿರುವ Vmoto Stash ಎಲೆಕ್ಟ್ರಿಕ್ ಬೈಕ್ ಅನಾವರಣ

ಇದರೊಂದಿಗೆ ಫ್ಲಾಟ್ ಹ್ಯಾಂಡಲ್‌ಬಾರ್, ಸಿನೆವಿ ಟ್ಯಾಂಕ್, ಸ್ಪ್ಲಿಟ್ ಸೀಟ್‌ಗಳು, ಅಲಾಯ್ ವ್ಹೀಲ್ ಗಳು, ನಯವಾದ ಗ್ರಾಬ್ ರೈಲ್‌ಗಳು, ಹರಿತವಾದ ಟೈಲ್ ಲ್ಯಾಂಪ್ ಮತ್ತು ಹಿಂಭಾಗ. ಟೈರ್ ಹಗ್ಗರ್ ಅನ್ನು ಹೊಂದಿದೆ.

250 ಕಿ.ಮೀ ರೇಂಜ್ ಹೊಂದಿರುವ Vmoto Stash ಎಲೆಕ್ಟ್ರಿಕ್ ಬೈಕ್ ಅನಾವರಣ

ಹಿಂಭಾಗದ ಟೈರ್ ಹಗ್ಗರ್‌ನಲ್ಲಿ ನೋಂದಣಿ ನಂಬರ್ ಪ್ಲೇಟ್ ಅನ್ನು ಮೌಂಟಡ್ ಸ್ಥಳವನ್ನು ಒದಗಿಸಲಾಗಿದೆ. ಬೈಕ್ ಆಯತಾಕಾರದ ಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್‌ನೊಂದಿಗೆ ಬರುತ್ತದೆ. ಬ್ಲೂಟೂತ್ ಆಧಾರಿತ ಕನೆಕ್ಟಿವಿಟಿಗಳೊಂದಿಗೆ ಬೈಕ್ ಅನ್ನು ನೀಡುವ ಸಾಧ್ಯತೆಯಿದೆ.

250 ಕಿ.ಮೀ ರೇಂಜ್ ಹೊಂದಿರುವ Vmoto Stash ಎಲೆಕ್ಟ್ರಿಕ್ ಬೈಕ್ ಅನಾವರಣ

ಹೊಸ ವಿಮೋಟೋ ಸ್ಟ್ಯಾಶ್ ಎಲೆಕ್ಟ್ರಿಕ್ ಬೈಕ್ ಬ್ಲ್ಯಾಕ್, ಸಿಲ್ವರ್ ಮತ್ತು ಯೆಲ್ಲೋ ಮೂರು ಬಣ್ಣದ ಆಯ್ಕೆಗಳು ಇರುತ್ತವೆ. ಸ್ಟೈಲಿಂಗ್‌ನ ವಿಷಯದಲ್ಲಿ ಈ ಎಲೆಕ್ಟ್ರಿಕ್ ಬೈಕ್ ಎಲ್ಲಾ ಸರಿಯಾದ ಬಾಕ್ಸ್‌ಗಳನ್ನು ಟಿಕ್ ಮಾಡುವಾಗ, ದೈನಂದಿನ ಪ್ರಯಾಣದ ಅವಶ್ಯಕತೆಗಳನ್ನು ಪೂರೈಸಲು ಇದನ್ನು ವಿನ್ಯಾಸಗೊಳಿಸಲಾಗಿದೆ.

250 ಕಿ.ಮೀ ರೇಂಜ್ ಹೊಂದಿರುವ Vmoto Stash ಎಲೆಕ್ಟ್ರಿಕ್ ಬೈಕ್ ಅನಾವರಣ

ಫ್ಯೂಯಲ್ ಟ್ಯಾಂಕ್ ಮೇಲಿನ ವಿಭಾಗವು ಯೋಗ್ಯ ಗಾತ್ರದ ಸ್ಟೋರೇಜ್ ಸ್ಪೇಸ್ ಅನ್ನು ಬಹಿರಂಗಪಡಿಸಲು ಮುಚ್ಚಳದಂತೆ ತೆರೆಯುತ್ತದೆ. ಇದು ಪೂರ್ಣ ಗಾತ್ರದ ಹೆಲ್ಮೆಟ್ ಅನ್ನು ಸುಲಭವಾಗಿ ಇಟ್ಟುಕೊಳ್ಳಬಹುದು. ಫುಟ್‌ಪೆಗ್‌ಗಳು ಸ್ವಲ್ಪ ಹಿಂಬದಿಗೆ ಹೊಂದಿದ್ದರೂ ಸಹ, ಬಳಕೆದಾರರು ಆರಾಮದಾಯಕ ಸವಾರಿ ನಿಲುವನ್ನು ಪಡೆಯಲು ಸಾಧ್ಯವಾಗುತ್ತದೆ.

250 ಕಿ.ಮೀ ರೇಂಜ್ ಹೊಂದಿರುವ Vmoto Stash ಎಲೆಕ್ಟ್ರಿಕ್ ಬೈಕ್ ಅನಾವರಣ

ಇನ್ನು ಬೈಕ್ ಸವಾರ ಮತ್ತು ಪಿಲಿಯನ್ ಇಬ್ಬರಿಗೂ ಸೂಕ್ತವಾದ ಬಾಹ್ಯರೇಖೆಗಳೊಂದಿಗೆ ವಿಶಾಲವಾದ ಸೀಟುಗಳನ್ನು ಹೊಂದಿದೆ. ಇದು ಯಾವುದೇ ರೀತಿಯ ಬಮ್ ಮತ್ತು ಆಯಾಸವನ್ನು ತಪ್ಪಿಸಲು ಸಹಾಯ ಮಾಡುತ್ತದೆ.

250 ಕಿ.ಮೀ ರೇಂಜ್ ಹೊಂದಿರುವ Vmoto Stash ಎಲೆಕ್ಟ್ರಿಕ್ ಬೈಕ್ ಅನಾವರಣ

ಹೊಸ ವಿಮೋಟೋ ಸ್ಟ್ಯಾಶ್ ಎಲೆಕ್ಟ್ರಿಕ್ ಬೈಕ್ 72V-100Ah - 7.2 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು ಅದು 6-kW ಮೋಟಾರ್‌ಗೆ ಪವರ್ ಅನ್ನು ಪೂರೈಸುತ್ತದೆ. ಇದನ್ನು ಸಂಪೂರ್ಣ ಚಾರ್ಜ್ ಮಾಡಿದರೆ, 250 ಕಿಮೀ ದೂರವನ್ನು ಕ್ರಮಿಸುತ್ತದೆ. ಆದರೆ 45 ಕಿಮೀ ವೇಗದಲ್ಲಿ ಚಲಿಸಿದಾಗ ಮಾತ್ರ ಈ ರೇಂಜ್ ಲಭ್ಯವಾಗುತ್ತದೆ.

250 ಕಿ.ಮೀ ರೇಂಜ್ ಹೊಂದಿರುವ Vmoto Stash ಎಲೆಕ್ಟ್ರಿಕ್ ಬೈಕ್ ಅನಾವರಣ

ಡ್ಯುಯಲ್ ರೈಡ್ ಮೋಡ್‌ಗಳಿರುವ ಸಾಧ್ಯತೆಯಿದೆ. ಇದು ಬಳಕೆದಾರರು ನಿರ್ದಿಷ್ಟ ಸಮಯದಲ್ಲಿ ಅವರು ಬಯಸುವ ಕಾರ್ಯಕ್ಷಮತೆಯ ಪ್ರಕಾರವನ್ನು ಆಯ್ಕೆ ಮಾಡಲು ಅನುಮತಿಸುತ್ತದೆ. ಬೈಕ್‌ನ ಗರಿಷ್ಠ ವೇಗ ಗಂಟೆಗೆ 105 ಕಿ.ಮೀ ಆಗಿದೆ. ಈ ಬೈಕಿನಲ್ಲಿ 785 ಎಂಎಂ ಕಡಿಮೆ ಸೀಟ್ ಎತ್ತರದೊಂದಿಗೆ, ಬಳಕೆದಾರರು ಬೈಕ್‌ನ ಅತ್ಯುತ್ತಮ ನಿಯಂತ್ರಣವನ್ನು ಚಲಾಯಿಸಲು ಸಾಧ್ಯವಾಗುತ್ತದೆ. ವಿಮೋಟೋ ಸ್ಟ್ಯಾಶ್ ಎಲೆಕ್ಟ್ರಿಕ್ ಬೈಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಮುಂಭಾಗದಲ್ಲಿ ಸ್ಟ್ಯಾಂಡರ್ಡ್ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಮೊನೊಶಾಕ್ ಸೆಟಪ್ ಅನ್ನು ಒಳಗೊಂಡಿದೆ.

250 ಕಿ.ಮೀ ರೇಂಜ್ ಹೊಂದಿರುವ Vmoto Stash ಎಲೆಕ್ಟ್ರಿಕ್ ಬೈಕ್ ಅನಾವರಣ

ಇನ್ನು ಪ್ರಮುಖವಾಗಿ ಎಲೆಕ್ಟ್ರಿಕ್ ಬೈಕ್ ಬ್ರೇಕಿಂಗ್ ಸಿಸ್ಟಂಗಳ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ. ಯುರೋಪ್‌ನಲ್ಲಿ, ವಿಮೋಟೋ ಸ್ಟ್ಯಾಶ್ ಸೂಪರ್ ಸೊಕೊ ಟಿಸಿ ಮ್ಯಾಕ್ಸ್‌ಗಿಂತ ಮೇಲಿನ ಸ್ಥಾನದಲ್ಲಿರುತ್ತದೆ. ಮೋಟೋ ಸ್ಟ್ಯಾಶ್ ಅಧಿಕ ರೇಂಜ್, ಅತ್ಯಾಧುನಿಕ ಫೀಚರ್ಸ್ ಮತ್ತು ಆಕರ್ಷಕ ವಿನ್ಯಾಸವನ್ನು ಹೊಂದಿರುವುದರಿಂದ ಈ ಎಲೆಕ್ಟ್ರಿಕ್ ಬೈಕ್ ಯುರೋಪಿಯನ್ ಮಾರುಕಟ್ಟೆಗಳ ಗ್ರಾಹಕರನ್ನು ಸೆಳೆಯಬಹುದು.

Most Read Articles

Kannada
English summary
Vmoto unveiled new stash electric motorcycle range details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X