ದುಬಾರಿಯಾಯ್ತು ಯಮಹಾ ವೈಝಡ್ಎಫ್ ಆರ್15 ವಿ3 ಬೈಕ್

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಯಮಹಾ ತನ್ನ ವೈಝಡ್ಎಫ್ ಆರ್15 ವಿ3 ಬೈಕಿನ ಬೆಲೆಯನ್ನು ಹೆಚ್ಚಿಸಿದೆ. ಇದರಿಂದಾಗಿ ಯಮಹಾ ವೈಝಡ್ಎಫ್ ಆರ್15 ವಿ3 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ತುಸು ದುಬಾರಿಯಾಗಿದೆ.

ದುಬಾರಿಯಾಯ್ತು ಯಮಹಾ ವೈಝಡ್ಎಫ್ ಆರ್15 ವಿ3 ಬೈಕ್

ಇತ್ತೀಚಿನ ವರದಿಗಳ ಪ್ರಕಾರ, ಯಮಹಾ ಕಂಪನಿಯು ತನ್ನ ಎಂಟ್ರಿ ಲೆವೆಲ್ ಸ್ಪೋರ್ಟ್ಸ್ ಬೈಕ್ ವೈಝಡ್ಎಫ್ ಆರ್15 ವಿ3 ಮಾದರಿಯ ಬೆಲೆಯನ್ನು ರೂ.1,200 ಗಳವರೆಗೆ ಹೆಚ್ಚಿಸಲಾಗಿದೆ. ಯಮಹಾ ವೈಝಡ್ಎಫ್ ಆರ್15 ವಿ3 ಬೈಕಿನ ಬಣ್ಣಗಳ ಆಧಾರ ಮೇಲೆ ಹೊಸ ಬೆಲೆಗಳನ್ನು ಹೇಳುವುದಾದರೆ, ಥಂಡರ್ ಗ್ರೇ ಬಣ್ಣದ ಮಾದರಿಗೆ ರೂ.1,49,100 ಗಳಾದರೆ ರೇಸಿಂಗ್ ಬ್ಲೂ ಬಣ್ಣದ ಮಾದರಿಗೆ ರೂ.1,50,200 ಗಳಾಗಿದೆ. ಇನ್ನು ಡಾರ್ಕ್ ನೈಟ್ ಬಣ್ಣದ ಮಾದರಿಗೆ ರೂ.151,200 ಗಳಾಗಿದೆ.

ದುಬಾರಿಯಾಯ್ತು ಯಮಹಾ ವೈಝಡ್ಎಫ್ ಆರ್15 ವಿ3 ಬೈಕ್

ಮೇಲಿನ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ಪ್ರಕಾರವಾಗಿದೆ. ಯಮಹಾ ಕಂಪನಿಯು ವೈಝಡ್ಎಫ್ ಆರ್15 ವಿ3 ಬೈಕಿನ ಬೆಲೆ ಏರಿಕೆ ಮಾಡಿರುವುದರ ಹಿಂದಿನ ಕಾರಣವನ್ನು ಬಹಿರಂಗಪಡಿಸಿಲ್ಲ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ದುಬಾರಿಯಾಯ್ತು ಯಮಹಾ ವೈಝಡ್ಎಫ್ ಆರ್15 ವಿ3 ಬೈಕ್

ಯಮಹಾ ವೈಝಡ್ಎಫ್ ಆರ್15 ವಿ3 ಮಾದರಿಯಲ್ಲಿ 155 ಸಿಸಿ, ಸಿಂಗಲ್ ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 18.3 ಬಿಹೆಚ್‍ಪಿ ಪವರ್ ಮತ್ತು 14.1 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಸ್ಲಿಪ್ಪರ್ ಅಸಿಸ್ಟೆಡ್ ಕ್ಲಚ್ನೊಂದಿಗೆ ಸ್ಟ್ಯಾಂಡರ್ಡ್ ಸಿಕ್ಸ್-ಸ್ಪೀಡ್ ಗೇರ್ ಬಾಕ್ಸ್ ಜೋಡಿಸಲಾಗಿದೆ.

ದುಬಾರಿಯಾಯ್ತು ಯಮಹಾ ವೈಝಡ್ಎಫ್ ಆರ್15 ವಿ3 ಬೈಕ್

ಯಮಹಾ ವೈಝಡ್ಎಫ್ ಆರ್15 ವಿ3 ಬೈಕಿನಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್ ಮತ್ತು ಟೈಲ್-ಲ್ಯಾಂಪ್, ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಗಾಗಿ ಸಂಪೂರ್ಣ ಡಿಜಿಟಲ್ ಎಲ್‌ಸಿಡಿ, ಮತ್ತು ಸ್ಪ್ಲಿಟ್-ಸ್ಟೈಲ್ ಸ್ಟೆಪ್-ಅಪ್ ಸೀಟ್ ಅನ್ನು ಹೊಂದಿದೆ. ಇನ್ನು ಈ ಹೊಸ ಮಾದರಿಯಲ್ಲಿ ರೇಡಿಯಲ್ ಟಯರ್, ಡ್ಯುಯಲ್ ಡ್ಯುಯಲ್-ಹಾರ್ನ್ ಮತ್ತು ಸೈಡ್-ಸ್ಟ್ಯಾಂಡ್ ಆಕ್ಟಿವೇಟೆಡ್ ಎಂಜಿನ್ ಕಟ್-ಆಫ್ ಫೀಚರುಗಳನ್ನು ಒಳಗೊಂಡಿವೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ದುಬಾರಿಯಾಯ್ತು ಯಮಹಾ ವೈಝಡ್ಎಫ್ ಆರ್15 ವಿ3 ಬೈಕ್

ಈ ಯಮಹಾ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸಸ್ಪೆಂಕ್ಷನ್ ಸೆಟಪ್ ಅನ್ನು ಅಳವಡಿಸಲಾಗಿದೆ.

ದುಬಾರಿಯಾಯ್ತು ಯಮಹಾ ವೈಝಡ್ಎಫ್ ಆರ್15 ವಿ3 ಬೈಕ್

ಇನ್ನು ಈ ಯಮಹಾ ವೈಝಡ್ಎಫ್ ಆರ್15 ವಿ3 ಬೈಕಿನಲ್ಲಿ ಬ್ರೇಕಿಂಗ್ ಸಿಸ್ಟಂಗಾಗಿ ಮುಂಭಾಗದಲ್ಲಿ 282 ಎಂಎಂ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ದುಬಾರಿಯಾಯ್ತು ಯಮಹಾ ವೈಝಡ್ಎಫ್ ಆರ್15 ವಿ3 ಬೈಕ್

ಯಮಹಾ ವೈಝಡ್ಎಫ್ ಆರ್15 ವಿ3 ಮಾದರಿ ಭಾರತೀಯ ಮಾರುಕಟ್ಟೆಯಲ್ಲಿ ಕೆಟಿಎಂ ಆರ್‌ಸಿ 200 ಮತ್ತು ಸುಜುಕಿ ಜಿಕ್ಸರ್ ಎಸ್‌ಎಫ್‌ ಬೈಕುಗಳಿಗೆ ಪೈಪೋಟಿ ನೀಡುತ್ತದೆ. ಈ ಯಮಹಾ ಬೈಕ್ ಅಗ್ರೇಸಿವ್ ಮತ್ತು ಆಕರ್ಷಕ ಲುಕ್ ಅನ್ನು ಹೊಂದಿದೆ.

ದುಬಾರಿಯಾಯ್ತು ಯಮಹಾ ವೈಝಡ್ಎಫ್ ಆರ್15 ವಿ3 ಬೈಕ್

ಯಮಹಾ ವೈಝಡ್ಎಫ್ ಆರ್15 ವಿ3 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಉತ್ತಮ ಸ್ಪೋರ್ಟ್ಸ್ ಬೈಕ್‌ಗಳಲ್ಲಿ ಒಂದಾಗಿದೆ. ಯಮಹಾ ವೈಝಡ್ಎಫ್ ಆರ್15 ವಿ3 ಬೈಕಿನ ಬೆಲೆ ಏರಿಕೆ ಮಾಡಿರುವುದರಿಂದ ಮಾರುಕಟ್ಟೆಯಲ್ಲಿ ಇದರ ಬೇಡಿಕೆಯ ಮೇಲೆ ಪರಿಣಾಮ ಬೀರುವುದಿಲ್ಲವೆಂದು ನಿರೀಕ್ಷಿಸುತ್ತೇವೆ.

Article Published On: Tuesday, March 2, 2021, 21:00 [IST]
English summary
Yamaha YZF R15 V3 Price Increased. Read In Kannada.
Read more on ಯಮಹಾ yamaha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+