ಫಾಸಿನೋ 125 ಮತ್ತು ರೇ ಜೆಡ್ಆರ್ 125 ಸ್ಕೂಟರ್‌ಗಳ ಬೆಲೆ ಹೆಚ್ಚಿಸಿದ ಯಮಹಾ
ಯಮಹಾ ಇಂಡಿಯಾ ಕಂಪನಿಯು ಹೊಸ ವಾಹನಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಸಾಕಷ್ಟು ಬೆಳವಣಿಗೆ ಸಾಧಿಸುತ್ತಿದ್ದು, ಉತ್ಪಾದನಾ ವೆಚ್ಚ ಹೆಚ್ಚಿರುವ ಹಿನ್ನಲೆಯಲ್ಲಿ ಸ್ಕೂಟರ್‌ಗಳ ಬೆಲೆಯನ್ನು ಹೆಚ್ಚಳ ಮಾಡಿ ಹೊಸ ದರ ಪಟ್ಟಿ ಪ್ರಕಟಿಸಿದೆ.

2020ರ ಮಧ್ಯಂತರದಲ್ಲಿ ನವೀಕರಿಸಲಾಗಿದ್ದ ಫಾಸಿನೋ 125 ಮತ್ತು ರೇ ಜೆಡ್ಆರ್ 125 ಸ್ಕೂಟರ್‌ಗಳ ಬೆಲೆಯನ್ನು ಹೆಚ್ಚಳ ಮಾಡಿದ್ದು, ವಿವಿಧ ಮಾದರಿಗಳಿಗೆ ಅನುಗುಣವಾಗಿ ರೂ.2,500 ತನಕ ಹೆಚ್ಚಳ ಮಾಡಲಾಗಿದೆ. ಬಿಡಿಭಾಗಗಳ ಬೆಲೆಯಲ್ಲಿ ನಿರಂತರವಾಗಿ ಹೆಚ್ಚಳವಾಗುತ್ತಿರುವುದರಿಂದ ಬಹುತೇಕ ವಾಹನ ಕಂಪನಿಗಳು ಬೆಲೆ ಹೆಚ್ಚಳ ಮಾಡಿದ್ದು, ಯಮಹಾ ಕೂಡಾ ಸ್ಕೂಟರ್‌ಗಳ ಬೆಲೆ ಹೆಚ್ಚಳ ಮಾಡಿ ಹೊಸ ದರ ಪ್ರಕಟಿಸಿದೆ.

ಹೊಸ ದರ ಪ್ರ ನಂತರ ಫಾಸಿನೋ 125 ಸ್ಕೂಟರ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 72,032 ಮತ್ತು ಟಾಪ್ ಎಂಡ್ ವೆರಿಯೆಂಟ್ ಮಾದರಿಯು ರೂ.74,530 ಬೆಲೆ ಹೊಂದಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಡ್ರಮ್ ಮತ್ತು ಡಿಸ್ಕ್ ವೆರಿಯೆಂಟ್ ಹೊಂದಿದೆ.

ರೇ ಜೆಡ್ಆರ್ 125 ಸ್ಕೂಟರ್ ಮಾದರಿಯು ಬೆಲೆ ಹೆಚ್ಚಳ ನಂತರ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 73,330 ಮತ್ತು ಟಾಪ್ ಎಂಡ್ ಮಾದರಿಯು ರೂ. 77,330 ಬೆಲೆ ಹೊಂದಿದ್ದು, ರೇ ಜೆಡ್ಆರ್125 ಮಾದರಿಯು ಪ್ರಮುಖ ಮೂರು ವೆರಿಯೆಂಟ್‌ಗಳನ್ನು ಹೊಂದಿದೆ.

ಸ್ಟ್ಯಾಂಡರ್ಡ್ ಮಾದರಿಗಳಾದ ರೇ ಜೆಡ್ಆರ್ 125 ಮಾದರಿಯಲ್ಲಿ ಡ್ರಮ್ ಮತ್ತು ಡಿಸ್ಕ್ ಮಾದರಿಗಳಿದ್ದಲ್ಲಿ ಟಾಪ್ ಎಂಡ್ ಮಾದರಿಯಾದ ಸ್ಟ್ರೀಟ್ ರ‍್ಯಾಲಿ ಮಾದರಿಯು ಹೆಚ್ಚಿನ ಮಟ್ಟದ ತಾಂತ್ರಿಕ ಅಂಶಗಳೊಂದಿಗೆ ಸ್ಪೋರ್ಟಿ ಲುಕ್ ಪಡೆದುಕೊಂಡಿದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಎಂಜಿನ್ ಸಾಮರ್ಥ್ಯ
ವಿನ್ಯಾಸದಲ್ಲಿ ಬೇರೆ ಬೇರೆಯಾಗಿರುವ ಫಾಸಿನೋ 125 ಮತ್ತು ರೇ ಜೆಡ್ಆರ್ 125 ಸ್ಕೂಟರ್‌ಗಳು ತಾಂತ್ರಿಕವಾಗಿ ಒಂದೇ ಮಾದರಿಯಾಗಿದ್ದು, ಎರಡು ಸ್ಕೂಟರ್‌ಗಳಲ್ಲೂ ಬಿಎಸ್-6 ವೈಶಿಷ್ಟ್ಯತೆಯ 125 ಸಿಸಿ ಏರ್ ಕೂಲ್ಡ್, ಫ್ಯೂಲ್ ಇಂಜೆಕ್ಷೆಡ್ ಎಂಜಿನ್ ಹೊಂದಿದ್ದು, 8-ಬಿಎಚ್‌ಪಿ ಮತ್ತು 9.7-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿವೆ.

ಗ್ರಾಹಕರ ಬೇಡಿಕೆಯೆಂತೆ ಎರಡು ಸ್ಕೂಟರ್ ಮಾದರಿಯಲ್ಲೂ ಡ್ರಮ್, ಡಿಸ್ಕ್ ವೆರಿಯೆಂಟ್‌ಗಳೊಂದಿಗೆ ಹಲವಾರು ಸ್ಪೋರ್ಟಿ ಫೀಚರ್ಸ್ ನೀಡಲಾಗಿದ್ದು, ಹೊಸ ಸ್ಕೂಟರ್‌ಗಳಲ್ಲಿ 12 ಇಂಚಿನ ಅಲಾಯ್ ವೀಲ್ಹ್, ಯುಎಸ್‌ಬಿ ಚಾರ್ಜರ್, ಮಲ್ಟಿ ಫಂಕ್ಷನಲ್ ಕೀ, ಸೈಡ್ ಸ್ಟ್ಯಾಂಡ್ ಕಟ್ಅಪ್ ಸ್ವಿಚ್ ನೀಡಲಾಗಿದೆ.
MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಖರೀದಿಗೆ ಲಭ್ಯವಿರುವ ಬಣ್ಣಗಳು
ಫಾಸಿನೋ 125 ಮಾದರಿಯು ಸ್ಪಾರ್ಕಲ್ ಗ್ರೀನ್ ಮತ್ತು ಬ್ಲ್ಯೂ ಮೆಟಾಲಿಕ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದಲ್ಲಿ ರೇ ಜೆಡ್ಆರ್ 125 ಎಫ್ಐ ಮಾದರಿಯು ಡ್ರಮ್ ವೆರಿಯೆಂಟ್‌ನಲ್ಲಿ ಮೆಟಾಲಿಕ್ ಬ್ಲ್ಯಾಕ್, ಕೆನ್ ಬ್ಲ್ಯೂ ಹೊಂದಿದ್ದರೆ ಡಿಸ್ಕ್ ಬ್ರೇಕ್‌ನಲ್ಲಿ ಡಾರ್ಕ್ ಮ್ಯಾಟೆ ಬ್ಲ್ಯೂ, ಯೆಲ್ಲೊ ಕಾಕ್‌ಟೈಲ್, ಮ್ಯಾಟೆ ರೆಡ್ ಮೆಟಾಲಿಕ್, ಮೆಟಾಲಿಕ್ ಬ್ಲ್ಯಾಕ್ ಮತ್ತು ಕೆನ್ ಬ್ಲ್ಯೂ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ರೇ ಜೆಡ್ಆರ್ 125 ಮಾದರಿಯಲ್ಲಿ ಡ್ರಮ್ ಮತ್ತು ಡಿಸ್ಕ್ ಮಾದರಿಗಳನ್ನು ಹೊರತುಪಡಿಸಿ ಟಾಪ್ ಎಂಡ್ ಮಾದರಿಯಲ್ಲಿ ನೀಡಲಾಗಿರುವ ಸ್ಟ್ರೀಟ್ ರ‍್ಯಾಲಿ ಮಾದರಿಯು ಸ್ಕೂಟರ್ ಮಾದರಿಗಳಲ್ಲೇ ವಿಭಿನ್ನ ವಿನ್ಯಾಸದೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದ್ದು, ಸ್ಪೋರ್ಟಿ ಲುಕ್‌ನೊಂದಿಗೆ ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದೆ.


Click it and Unblock the Notifications