ವಿಮಾನಗಳಿಗೆ ಎಂಜಿನ್ ತಯಾರಿಸಲಿದೆ ಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿ

ಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಯಮಹಾ ಶೀಘ್ರದಲ್ಲಿಯೇ ಲಘು ವಿಮಾನವನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ ಎಂದು ವರದಿಯಾಗಿದೆ. ಈ ನಿಟ್ಟಿನಲ್ಲಿ ಯಮಹಾ ಕಂಪನಿಯು ವಿಮಾನ ತಯಾರಕ ಕಂಪನಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ.

ವಿಮಾನಗಳಿಗೆ ಎಂಜಿನ್ ತಯಾರಿಸಲಿದೆ ಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿ

ಯಮಹಾ ಕಂಪನಿಯು ಜಪಾನ್ ಮೂಲದ ವಿಮಾನಯಾನ ಕಂಪನಿಯಾದ ಶಿನ್ಮೆವಾ ಜೊತೆ ಮೈತ್ರಿ ಮಾಡಿಕೊಂಡಿದೆ. ಎರಡು ಕಂಪನಿಗಳ ನಡುವಿನ ಮೈತ್ರಿ ಜೂನ್ 29ರಿಂದ ಜಾರಿಗೆ ಬರಲಿದೆ ಎಂದು ಯಮಹಾ ಕಂಪನಿ ಘೋಷಿಸಿದೆ.

ವಿಮಾನಗಳಿಗೆ ಎಂಜಿನ್ ತಯಾರಿಸಲಿದೆ ಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿ

ದ್ವಿಚಕ್ರ ವಾಹನಗಳ ತಯಾರಿಕೆಯಲ್ಲಿ ವಿಶ್ವದ ಪ್ರಮುಖ ಕಂಪನಿಗಳಲ್ಲಿ ಒಂದಾದ ಯಮಹಾ, ಈಗ ವಿಮಾನ ಉತ್ಪಾದನೆಯಲ್ಲಿ ತನ್ನ ಹೆಜ್ಜೆಗುರುತನ್ನು ಮೂಡಿಸಲು ಮುಂದಾಗಿದೆ.

ವಿಮಾನಗಳಿಗೆ ಎಂಜಿನ್ ತಯಾರಿಸಲಿದೆ ಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿ

ಯಮಹಾ ಕಂಪನಿಯು ವಾಯುಯಾನ ಉದ್ಯಮಕ್ಕೆ ಕಾಲಿಡುತ್ತಿರುವುದು ಇದೇ ಮೊದಲಲ್ಲ. ಯಮಹಾ ಕಂಪನಿಯು ಈಗಾಗಲೇ ಹೆಲಿಕಾಪ್ಟರ್‌ ಹಾಗೂ ವಿಮಾನಗಳಿಗಾಗಿ ಎಂಜಿನ್‌ಗಳ ಉತ್ಪಾದನೆಯಲ್ಲಿ ತೊಡಗಿದೆ.

ವಿಮಾನಗಳಿಗೆ ಎಂಜಿನ್ ತಯಾರಿಸಲಿದೆ ಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿ

ಈಗ ಮಾಡಿಕೊಂಡಿರುವ ಮೈತ್ರಿಯಲ್ಲೂ ಸಹ ಯಮಹಾ ಕಂಪನಿಯು ಎಂಜಿನ್ ತಯಾರಿಸುವ ಪ್ರಕ್ರಿಯೆಯಲ್ಲಿದೆ. ಯಮಹಾ ಕಂಪನಿಯು ಲಘು ವಿಮಾನಗಳಿಗಾಗಿ ಸಣ್ಣ ಪ್ಯಾರಾಲಲ್ ಟ್ವಿನ್ ಎಂಜಿನ್ ಅಭಿವೃದ್ಧಿಪಡಿಸುತ್ತಿದೆ.

ವಿಮಾನಗಳಿಗೆ ಎಂಜಿನ್ ತಯಾರಿಸಲಿದೆ ಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿ

ಶಿನ್ಮೆವಾ ಕಂಪನಿಯು ಲಘು ವಿಮಾನವನ್ನು ವಿನ್ಯಾಸಗೊಳಿಸಿ ನಿರ್ಮಿಸಲಿದೆ. ಕಂಪನಿಯು ಈ ಹಿಂದೆ ಹಾರುವ ಹಡಗುಗಳನ್ನು ಉತ್ಪಾದಿಸಿತ್ತು ಎಂಬುದು ಗಮನಾರ್ಹ. ಶಿನ್ಮೆವಾ ಈಗ ಯಮಹಾ ಸಹಭಾಗಿತ್ವದಲ್ಲಿ ಲಘು ಕಮರ್ಷಿಯಲ್ ವಿಮಾನಗಳನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಯಲ್ಲಿದೆ.

ವಿಮಾನಗಳಿಗೆ ಎಂಜಿನ್ ತಯಾರಿಸಲಿದೆ ಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿ

ಯಮಹಾ ಕಂಪನಿಯು 1990ರ ದಶಕದಲ್ಲಿಯೇ ವಿಮಾನಗಳ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳಲು ಆರಂಭಿಸಿತು ಎಂಬುದು ಗಮನಾರ್ಹ. ಕೃಷಿ ಕೆಲಸಗಳಿಗೆ ನೆರವಾಗಲು ಆರ್-ಮ್ಯಾಕ್ಸ್ ಹೆಲಿಕಾಪ್ಟರ್ ಪರಿಚಯಿಸುವ ಮೂಲಕ ಯಮಹಾ ಕಂಪನಿಯು ವಾಯುಯಾನ ಉದ್ಯಮದಲ್ಲಿ ತನ್ನ ಛಾಪು ಮೂಡಿಸಿತು.

ವಿಮಾನಗಳಿಗೆ ಎಂಜಿನ್ ತಯಾರಿಸಲಿದೆ ಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿ

ಅಮೆರಿಕಾ ಮೂಲದ ಮೊಹಾವ್ಕ್ ಏರ್ ಲೈನ್ಸ್ 2000ನೇ ಇಸವಿಯಿಂದಲೂ ತನ್ನ ಕಿರೊಕಾಪ್ಟರ್'ಗಳಿಗಾಗಿ ಯಮಹಾ ಕಂಪನಿಯ ಸ್ನೋಮೊಬೈಲ್ ಎಂಜಿನ್'ಗಳನ್ನು ಬಳಸುತ್ತಿದೆ. ಈಗ ಯಮಹಾ ಕಂಪನಿಯು ಶಿನ್ಮೆವಾ ಕಂಪನಿಯ ವಿಮಾನಗಳಿಗಾಗಿ ಎಂಜಿನ್ ತಯಾರಿಸುವ ಪ್ರಕ್ರಿಯೆಯಲ್ಲಿದೆ.

ವಿಮಾನಗಳಿಗೆ ಎಂಜಿನ್ ತಯಾರಿಸಲಿದೆ ಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿ

ಎರಡನೇ ಮಹಾಯುದ್ಧದ ನಂತರ ಜಪಾನ್ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಶಿನ್ಮೆವಾ 1952ರಿಂದ ವಿಮಾನ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದೆ. ಇದರ ನಂತರ 1966ರಲ್ಲಿ ಕಂಪನಿಯು ನಾಲ್ಕು ಎಂಜಿನ್ ಪ್ರೊಪೆಲ್ಲರ್ ವಿಮಾನಗಳ ಉತ್ಪಾದನೆಗೆ ಜಪಾನ್ ಸರ್ಕಾರದಿಂದ ಆರ್ಡರ್ ಪಡೆದಿತ್ತು.

ವಿಮಾನಗಳಿಗೆ ಎಂಜಿನ್ ತಯಾರಿಸಲಿದೆ ಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿ

ಯುಎಸ್ -2ನ ಅಪ್ ಡೇಟೆಡ್ ಆವೃತ್ತಿಯನ್ನು ಶಿನ್ಮೈವಾ ಕಂಪನಿಯು 2003ರಲ್ಲಿ ಪರಿಚಯಿಸಿತು. ಈ ಹಿನ್ನೆಲೆಯಲ್ಲಿ ಕಂಪನಿಯು ಲಘು ವಿಮಾನವನ್ನು ನಿರ್ಮಿಸಲು ಯಮಹಾ ಜೊತೆ ಕೈಜೋಡಿಸಿದೆ.

ವಿಮಾನಗಳಿಗೆ ಎಂಜಿನ್ ತಯಾರಿಸಲಿದೆ ಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿ

ಯಮಹಾ ಕಂಪನಿಯು ತಯಾರಿಸಲಿರುವ ಎಂಜಿನ್ ಯಾವ ರೀತಿಯ ಸಾಮರ್ಥ್ಯವನ್ನು ಹೊಂದಿರಲಿದೆ ಎಂಬ ಬಗ್ಗೆ ಸದ್ಯಕ್ಕೆ ಯಾವುದೇ ಲಭ್ಯವಾಗಿಲ್ಲ.ಕಂಪನಿಯು ಶೀಘ್ರದಲ್ಲಿಯೇ ಈ ಕುರಿತು ಮಾಹಿತಿ ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ.

ಚಿತ್ರ ಕೃಪೆ: ಶಿನ್ಮೇವಾ

Most Read Articles

Kannada
Read more on ಯಮಹಾ yamaha
English summary
Yamaha joins with aeronautical firm to provide engine for aircrafts. Read in Kannada.
Story first published: Monday, July 12, 2021, 18:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X