ಪವರ್‌ಫುಲ್ ಎಂಜಿನ್‌ನೊಂದಿಗೆ ಬಿಡುಗಡೆಗೊಂಡ ಯಮಹಾ ಸ್ನೈಪರ್ 155 ಮೋಟೋ ಸ್ಕೂಟರ್
ದ್ವಿಚಕ್ರ ತಯಾರಕ ಕಂಪನಿಯಾದ ಯಮಹಾ ಕಂಪನಿಯು ತನ್ನ ಹೊಸ ಸ್ನೈಪರ್ 155 ಮೋಟೋ ಸ್ಕೂಟರ್ ಅನ್ನು ಫಿಲಿಪೈನ್ಸ್ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಯಮಹಾ ಸ್ನೈಪರ್ 155 ಮೋಟೋ ಸ್ಕೂಟರ್ ಆಕರ್ಷಕ ವಿನ್ಯಾಸ, ಹೊಸ ಫೀಚರ್ಸ್ ಮತ್ತು ಅತ್ಯಾಧುನಿಕ ತಂತ್ರಜ್ಙಾನಗಳನ್ನು ಒಳಗೊಂಡಿವೆ.

ಯಮಹಾ ಸ್ನೈಪರ್ 155 ಮೋಟೋ ಸ್ಕೂಟರ್ ನಲ್ಲಿ ಆರ್15 ಬೈಕಿನ ಮೂಲದ 155 ಸಿಸಿ ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ನಾಲ್ಕು-ವಾಲ್ವ್ ಎಸ್‌ಒಹೆಚ್‌ಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 9,500 ಆರ್‌ಪಿಎಂನಲ್ಲಿ 17.7 ಬಿಹೆಚ್‌ಪಿ ಮತ್ತು ಸ್ನೈಪರ್ 155 ರಲ್ಲಿ 8,000 ಆರ್‌ಪಿಎಂನಲ್ಲಿ 14.4 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಫೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ.

ಇನ್ನು ಈ ಹೊಸ ಯಮಹಾ ಸ್ನೈಪರ್ 155 ಮೋಟೋ ಸ್ಕೂಟರ್ ನಲ್ಲಿ ಪೇಟೆಂಟ್ ವಿವಿಎ (ವೇರಿಯಬಲ್ ವಾಲ್ವ್ ಆಕ್ಟಿವೇಷನ್) ತಂತ್ರಜ್ಞಾನದೊಂದಿಗೆ ಬರುತ್ತದೆ, ಈ ತಂತ್ರಜ್ಞಾನವು ವೈಝೆಡ್ಎಫ್-ಆರ್15 ಸ್ಪೋರ್ಟ್ಸ್‌ಬೈಕ್‌ನಲ್ಲಿ ಕಂಡುಬರುತ್ತದೆ.
MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ಈ ಹೊಸ ಯಮಹಾ ಸ್ನೈಪರ್ 155 ಮೋಟೋ ಸ್ಕೂಟರ್ ಆಕರ್ಷಕ ಲುಕ್ ಅನ್ನು ಹೊಂದಿದೆ. ಇನ್ನು ಈ ಸ್ಕೂಟರ್ ಸೈಡ್ ಬಾಡಿ ಕಿಟ್‌ಗಿಂತ 155 ರ ಗ್ರಾಫಿಕ್ಸ್ ಸೆಟಪ್ ಅನ್ನು ಪಡೆಯುತ್ತದೆ. ಇನ್ನು 5.4-ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ.

ಇನ್ನು ಈ ಸ್ಕೂಟರ್ ನಲ್ಲಿ ಸಿಂಗಲ್-ಪೀಸ್ ಸೀಟ್, ನಯವಾದ ಹಿಂಭಾಗದ ಗ್ರ್ಯಾಬ್ ಹ್ಯಾಂಡಲ್ ಮತ್ತು ಸೈಡ್-ಮೌಂಟೆಡ್ ಎಕ್ಸಾಸ್ಟ್ ಮಫ್ಲರ್ ಅನ್ನು ಒಳಗೊಂಡಿದೆ. ಯಮಹಾ ಸ್ನೈಪರ್ 155 ಮೋಟೋ ಸ್ಕೂಟರ್ ಆಕರ್ಷಕ ಸ್ಪೋರ್ಟಿ ಲುಕ್ ಅನ್ನು ಹೊಂದಿದೆ.
MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಈ ಹೊಸ ಸ್ಕೂಟರ್‌ನಲ್ಲಿ ಸ್ಲಿಪ್ಪರ್ ಕ್ಲಚ್, 12 ವಿ ಡಿಸಿ ಪವರ್ ಸಾಕೆಟ್, ಸ್ಮಾರ್ಟ್ ಕೀ ಸಿಸ್ಟಮ್, ಎಲ್ಲಾ ಎಲ್ಇಡಿ ಲ್ಯಾಂಪ್ ಗಳು ಮತ್ತು ಪೂರ್ಣ-ಎಲ್ಸಿಡಿ ಮಲ್ಟಿ-ಫಂಕ್ಷನ್ ಇನ್ಸ್ ಟ್ರೂಮೆಂತ್ ಕ್ಲಸ್ಟರ್ ಅನ್ನು ಹೊಂದಿದೆ. ಇದು ಸವಾರನಿಗೆ ಸ್ಪೀಡ್, ಇಂಧನ ಬಳಕೆ ಮತ್ತು ಇತರ ಮಾಹಿತಿಗಳನ್ನು ನೀಡುತ್ತದೆ

ಯಮಹಾ ಸ್ನೈಪರ್ 155 ಮೋಟೋ ಸ್ಕೂಟರ್ ರೇಸ್ ಬ್ಲೂ, ಬ್ಲ್ಯಾಕ್ ರಾವೆನ್, ಯೆಲ್ಲೊ ಹಾರ್ನೆಟ್, ಮತ್ತು ಮ್ಯಾಟ್ ಟೈಟಾನ್ ಎಂಬ ನಾಲ್ಕು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಇನ್ನು ಇದರ ಎರಡು ಕಡೆಗಳಲ್ಲಿ 17 ಇಂಚಿನ ವ್ಹೀಲ್ ಗಳನ್ನು ಒಳಗೊಂಡಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಸ್ನೈಪರ್ 155 ಮೋಟೋ ಸ್ಕೂಟರ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಸ್ವಿಂಗಾರ್ಮ್ ಸೆಟಪ್ ಅನ್ನು ಒಳಗೊಂಡಿದೆ.

ಇನ್ನು ಪ್ರಮುಖವಾಗಿ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಹೈಡ್ರಾಲಿಕ್ ಸಿಂಗಲ್ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇನ್ನು ಈ ಹೊಸ ಯಮಹಾ ಸ್ನೈಪರ್ 155 ಮೋಟೋ ಸ್ಕೂಟರ್ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದೆ. ಆದರೆ ಈ ಸ್ಕೂಟರ್ ಬಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿಲ್ಲ.


Click it and Unblock the Notifications








