ಅನಾವರಣವಾಯ್ತು ಬಹುನಿರೀಕ್ಷಿತ ಯಮಹಾ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕ್

ಜಪಾನ್ ಮೂಲದ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಯಮಹಾ ತನ್ನ ಹೊಸ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕನ್ನು ಜಾಗತಿಕವಾಗಿ ಅನಾವರಣಗೊಳಿಸಿದೆ. ಯಮಹಾ ಕಂಪನಿಯು ತನ್ನ ಪೋರ್ಟ್ಫೋಲಿಯೊದಲ್ಲಿದ್ದ ವೈಜೆಡ್ಎಫ್-ಆರ್6 ಬೈಕನ್ನು ಬದಲಾಯಿಸಿ ವೈಜೆಡ್ಎಫ್-ಆರ್7 ಮಾದರಿಯನ್ನು ಪರಿಚಯಿಸಲಾಗುತ್ತದೆ.

ಅನಾವರಣವಾಯ್ತು ಬಹುನಿರೀಕ್ಷಿತ ಯಮಹಾ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕ್

2022ರ ಯಮಹಾ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕಿನ ವಿನ್ಯಾಸವು ವೈಜೆಡ್ಆರ್-ಎಂ1 ಮೋಟೋ ಜಿಪಿ ಮಾದರಿಯಿಂದ ಸ್ಫೂರ್ತಿ ಪಡೆದಿದೆ. ಇನ್ನು ಈ ಹೊಸ ಯಮಹಾ ವೈಜೆಡ್ಎಫ್-ಆರ್7 ಬೈಕಿನಲ್ಲಿ ಎಲ್ಇಡಿ ಡಿಆರ್ಎಲ್ ಗಳೊಂದಿಗೆ ಫ್ರಂಟ್ ಟ್ವಿನ್ ಎಲ್ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳನ್ನು ಹೊಂದಿದ್ದು, ಇದು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಇನ್ನು ಹೊಸ ಬೈಕಿನ ವಿಂಡ್‌ಸ್ಕ್ರೀನ್ ವೈಜೆಡ್ಎಫ್-ಆರ್6 ಮಾದರಿಗಿಂತ ಅಗಲ ಮತ್ತು ಎತ್ತರವಾಗಿದೆ.

ಅನಾವರಣವಾಯ್ತು ಬಹುನಿರೀಕ್ಷಿತ ಯಮಹಾ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕ್

ಸೈಡ್ ಫೇರಿಂಗ್‌ನಲ್ಲಿನ 'ಆರ್7' ಬ್ಯಾಡ್ಜ್‌ಗಳು, ಸೆಂಟ್ರಲ್ ರಾಮ್ ಏರ್-ಇಂಟೆಕ್, ಫ್ಯೂಯಲ್ ಟ್ಯಾಂಕ್, ಕ್ಲಿಪ್-ಆನ್ ಹ್ಯಾಂಡಲ್‌ ಬಾರ್ ಗಳು, ಸ್ಪ್ಲಿಟ್ ಸೀಟ್, ರಿಯರ್ ಸೆಟ್ ಫುಟ್‌ಪೆಗ್ಸ್, ಟ್ಯಾಪರ್ಡ್ ರಿಯರ್ ಸೆಕ್ಷನ್, ಎಲ್ಇಡಿ ಟೈಲ್‌ಲ್ಯಾಂಪ್ಸ್, ಹೊಸದಾಗಿ ಇದರ ವಿನ್ಯಾಸದ ಕೆಲವು ಮುಖ್ಯಾಂಶಗಳು ಸೇರಿವೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಅನಾವರಣವಾಯ್ತು ಬಹುನಿರೀಕ್ಷಿತ ಯಮಹಾ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕ್

ಹೊಸ ಯಮಹಾ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕಿನಲ್ಲಿ ಎಂಟಿ-07 ಮಾದರಿಯಿಂದ ಎರವಲು 689 ಸಿಸಿ, ಪ್ಯಾರಲಲ್ ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಇದು ಹೊಸ ಇಯುಸಿ (ಎಂಜಿನ್ ನಿಯಂತ್ರಣ ಘಟಕ) ಜೊತೆಗೆ ಖೋಟಾ ಅಲ್ಯೂಮಿನಿಯಂ ಪಿಸ್ಟನ್‌ಗಳನ್ನು ಹೊಂದಿದ್ದು, ಇದರ ಲಿಂಡರ್‌ಗಳನ್ನು ಕ್ರ್ಯಾನ್‌ಕೇಸ್‌ನೊಂದಿಗೆ ಸಂಯೋಜಿಸಲಾಗಿದೆ.

ಅನಾವರಣವಾಯ್ತು ಬಹುನಿರೀಕ್ಷಿತ ಯಮಹಾ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕ್

ಈ ಎಂಜಿನ್ 8,750 ಆರ್‌ಪಿಎಂನಲ್ಲಿ 73.4 ಬಿಹೆಚ್‌ಪಿ ಮತ್ತು 6,500 ಆರ್‌ಪಿಎಂನಲ್ಲಿ 67 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಸ್ಲಿಪ್ ಮತ್ತು ಅಸಿಸ್ಟ್ ಫಂಕ್ಷನ್‌ನೊಂದಿಗೆ ಬರುತ್ತದೆ. ಇದರೊಂದಿಗೆ ಕ್ವಿಕ್‌ಶಿಫ್ಟರ್ ಅನ್ನು ಆಯ್ಕೆಯಾಗಿ ನೀಡಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಅನಾವರಣವಾಯ್ತು ಬಹುನಿರೀಕ್ಷಿತ ಯಮಹಾ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕ್

ಹೊಸ ಯಮಹಾ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಸಂಪೂರ್ಣ ಹೊಂದಾಣಿಕೆ ಮಾಡಬಹುದಾದ 41 ಎಂಎಂ ಕೆವೈಬಿ ಯುಎಸ್‌ಡಿ ಫೋರ್ಕ್ ಮತ್ತು ಹಿಂಭಾಗದಲ್ಲಿ ಲೈನ್-ಟೈಪ್ ಮೊನೊಶಾಕ್ ಸೆಟಪ್ ಅನ್ನು ಹೊಂದಿದೆ.

ಅನಾವರಣವಾಯ್ತು ಬಹುನಿರೀಕ್ಷಿತ ಯಮಹಾ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕ್

ಈ ಸೂಪರ್‌ಸ್ಪೋರ್ಟ್ ಬೈಕನ್ನು ಎಂಟಿ-07 ಮಾದರಿಗೆ ಹೋಲಿಸಿದರೆ 5 ಎಂಎಂ ಕಡಿಮೆ ವ್ಹೀಲ್‌ಬೇಸ್‌ ಅನ್ನು ಹೊಂದಿದೆ. ಅಗ್ರೇಸಿವ್ ಸ್ಟೀರಿಂಗ್ ಹೊಂದಿದ್ದು, ಇದು ಅದರ ಒಟ್ಟಾರೆ ಕಾರ್ಯಕ್ಷಮತೆಗೆ ಹೆಚ್ಚಿನದನ್ನು ನೀಡುತ್ತದೆ. ಈ ಬೈಕಿನಲ್ಲಿ ಸ್ವಿಂಗಾರ್ಮ್ ಬಳಿ ಅಲ್ಯೂಮಿನಿಯಂ ಸೆಂಟರ್ ಬ್ರೇಸ್‌ನೊಂದಿಗೆ ಹೊಂದಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಅನಾವರಣವಾಯ್ತು ಬಹುನಿರೀಕ್ಷಿತ ಯಮಹಾ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕ್

ಹೊಸ ಯಮಹಾ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ನಾಲ್ಕು-ಪಾಟ್ ಕ್ಯಾಲಿಪರ್ ನೊಂದಿಗೆ 298 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಒಂದೇ 245 ಎಂಎಂ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ.

ಅನಾವರಣವಾಯ್ತು ಬಹುನಿರೀಕ್ಷಿತ ಯಮಹಾ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕ್

ಇನ್ನು ಈ ಹೊಸ ಸೂಪರ್‌ಸ್ಪೋರ್ಟ್ ಬೈಕಿನಲ್ಲಿ 17 ಇಂಚಿನ ಅಲಾಯ್ ವ್ಹೀಲ್ ಗಳಲ್ಲಿ ಬ್ರಿಡ್ಜ್‌ಸ್ಟೋನ್ ಬ್ಯಾಟ್‌ಲ್ಯಾಕ್ಸ್ ಹೈಪರ್ಸ್ಪೋರ್ಟ್ ಟೈರ್ ಹೊಂದಿದೆ. ಇನ್ನು ಈ ಹೊಸ ಬೈಕಿನಲ್ಲಿ ಡಿಜಿಟಲ್ ಟಿಎಫ್‌ಟಿ ಡಿಸ್ ಪ್ಲೇಯನ್ನು ಹೊಂದಿದೆ. ಇದು ಸವಾರರಿಗೆ ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತದೆ.

ಅನಾವರಣವಾಯ್ತು ಬಹುನಿರೀಕ್ಷಿತ ಯಮಹಾ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕ್

ಹ್ಯಾಂಡಲ್‌ಬಾರ್‌ನಲ್ಲಿ ಇರಿಸಲಾಗಿರುವ ಹೊಸ ಸ್ವಿಚ್‌ಗಿಯರ್ ಅನ್ನು ಸ ಯಮಹಾ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕಿನಲ್ಲಿ ಎಲೆಕ್ಟ್ರಾನಿಕ್ ರೈಡರ್ ಅಸಿಸ್ಟ್ ಗಳು ಕೇವಲ ಡ್ಯುಯಲ್-ಚಾನೆಲ್ ಎಬಿಎಸ್‌ಗೆ ಸೀಮಿತವಾಗಿದೆ. ಇನ್ನು ಟ್ರ್ಯಾಕ್ಷನ್ ಕಂಟ್ರೋಲ್ ಅಥವಾ ಕ್ರೂಸ್ ಕಂಟ್ರೋಲ್ ನಂತರ ಯಾವುದೇ ರೈಡರ್ ಅಸಿಸ್ಟ್ ಗಳನ್ನು ಹೊಂದಿರುವುದರ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲ.

Most Read Articles

Kannada
Read more on ಯಮಹಾ yamaha
English summary
2022 Yamaha YZF-R7 Globally Unveiled. Read In Kannada.
Story first published: Wednesday, May 19, 2021, 12:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X