ಆರ್15 ಬೈಕ್ ಮಾದರಿಗಾಗಿ ಹೊಸ ಬಣ್ಣದ ಆಯ್ಕೆ ನೀಡಿದ ಯಮಹಾ

ಯಮಹಾ ಮೋಟಾರ್ ಕಂಪನಿಯು ತನ್ನ ಜನಪ್ರಿಯ ಎಂಟ್ರಿ ಲೆವಲ್ ಸ್ಪೋರ್ಟ್ ಬೈಕ್ ಮಾದರಿಯಾದ ಆರ್15 ಮಾದರಿಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಹಲವಾರು ಬದಲಾವಣೆಗಳನ್ನು ತಂದಿದ್ದು, ಇತ್ತೀಚೆಗೆ ಹೊಸ ಬೈಕಿನಲ್ಲಿ ಸಿಲ್ವರ್/ಗ್ರೆ ಬಣ್ಣದ ಆಯ್ಕೆ ಪಡೆದುಕೊಂಡಿದೆ.

ಆರ್15 ಬೈಕ್ ಮಾರದರಿಗಾಗಿ ಹೊಸ ಬಣ್ಣದ ಆಯ್ಕೆ ನೀಡಿದ ಯಮಹಾ

ಆರ್15 ಮಾದರಿಗಾಗಿ ಹೊಸ ಬಣ್ಣದ ಆಯ್ಕೆಯನ್ನು ಸದ್ಯಕ್ಕೆ ಮಲೇಷಿಯಾದಲ್ಲಿ ಮಾತ್ರ ಪರಿಚಯಿಸಿರುವ ಯಮಹಾ ಕಂಪನಿಯು ಶೀಘ್ರದಲ್ಲೇ ಭಾರತದಲ್ಲೂ ಹೊಸ ಬಣ್ಣದ ಆಯ್ಕೆ ನೀಡಲಿದ್ದು, ಸ್ಪೋರ್ಟಿ ಬೈಕಿಗೆ ಹೊಸ ಬಣ್ಣದ ಆಯ್ಕೆಯು ಸಾಕಷ್ಟು ಆಕರ್ಷಕವಾಗಲಿದೆ. ಹೊಸ ಬಣ್ಣದ ಆಯ್ಕೆ ಹೊರತುಪಡಿಸಿ ತಾಂತ್ರಿಕ ಅಂಶಗಳನ್ನು ಈ ಹಿಂದಿನ ಮಾದರಿಯಲ್ಲಿರುವಂತೆಯೇ ಮುಂದುವರಿಸಲಾಗಿದ್ದು, ಭಾರತದಲ್ಲಿ ಯಮಹಾ ಕಂಪನಿಯು ರೆಡ್ ಮೆಟಾಲಿಕ್ ಮಾದರಿಯನ್ನು ಪರಿಚಯಿಸಿತ್ತು.

ಆರ್15 ಬೈಕ್ ಮಾರದರಿಗಾಗಿ ಹೊಸ ಬಣ್ಣದ ಆಯ್ಕೆ ನೀಡಿದ ಯಮಹಾ

ವೈಜೆಡ್ಎಫ್-ಆರ್15 ವಿ3 ಮಾದರಿಯು ರೆಡ್ ಮೆಟಾಲಿಕ್ ಜೊತೆಗೆ ರೇಸಿಂಗ್ ಬ್ಲ್ಯೂ, ಥಂಡರ್ ಗ್ರೇ, ಡಾರ್ಕ್ ನೈಟ್ ಬಣ್ಣಗಳಲ್ಲೂ ಖರೀದಿಗೆ ಲಭ್ಯವಿದ್ದು, ಹೊಸ ಬೈಕ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 1.52 ಲಕ್ಷ ಬೆಲೆ ಪಡೆದುಕೊಂಡಿದೆ.

ಆರ್15 ಬೈಕ್ ಮಾರದರಿಗಾಗಿ ಹೊಸ ಬಣ್ಣದ ಆಯ್ಕೆ ನೀಡಿದ ಯಮಹಾ

ಹೊಸ ಬಣ್ಣದ ಆಯ್ಕೆ ಹೊರತುಪಡಿಸಿ ವೈಜೆಡ್ಎಫ್-ಆರ್15 ವಿ3 ಬೈಕ್ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ಸ್ಟ್ಯಾಂಡರ್ಡ್ ಮಾದರಿಯೆಂತೆ ತಾಂತ್ರಿಕ ಅಂಶಗಳನ್ನು ಹೊಂದಿದ್ದು, ಬೈಕಿನ ಸ್ಪೋರ್ಟಿ ಲುಕ್ ಹೆಚ್ಚಿಸಲು ಹೊಸ ಬಣ್ಣದ ಆಯ್ಕೆ ಸಹಕಾರಿಯಾಗಿವೆ.

ಆರ್15 ಬೈಕ್ ಮಾರದರಿಗಾಗಿ ಹೊಸ ಬಣ್ಣದ ಆಯ್ಕೆ ನೀಡಿದ ಯಮಹಾ

ಯಮಹಾ ಕಂಪನಿಯು ವೈಜೆಡ್ಎಫ್ ಆರ್15 ವಿ3 ಬೈಕ್ ಮಾದರಿಯ ಬೆಲೆಯನ್ನು ಬಣ್ಣಗಳ ಆಧಾರ ಮೇಲೆ ಬೆಲೆ ನಿಗದಿಪಡಿಸುತ್ತಿದ್ದು, ಥಂಡರ್ ಗ್ರೇ ಬಣ್ಣದ ಮಾದರಿಗೆ ರೂ.1.52 ಲಕ್ಷಗಳಾದರೆ ರೆಡ್ ಮೆಟಾಲಿಕ್ ಮಾದರಿಗೆ ರೂ. 1.52 ಲಕ್ಷ, ರೇಸಿಂಗ್ ಬ್ಲೂ ಬಣ್ಣದ ಮಾದರಿಗೆ ರೂ.1.53 ಲಕ್ಷ ಮತ್ತು ಡಾರ್ಕ್ ನೈಟ್ ಬಣ್ಣದ ಮಾದರಿಗೆ ರೂ.1.54 ಲಕ್ಷ ಬೆಲೆ ಹೊಂದಿದೆ.

ಆರ್15 ಬೈಕ್ ಮಾರದರಿಗಾಗಿ ಹೊಸ ಬಣ್ಣದ ಆಯ್ಕೆ ನೀಡಿದ ಯಮಹಾ

ಇನ್ನು ಹೊಸ ವೈಜೆಡ್ಎಫ್-ಆರ್15 ವಿ3 ಮಾದರಿಯು 155 ಸಿಸಿ, ಸಿಂಗಲ್ ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಎಂಜಿನ್ ಅನ್ನು ಹೊಂದಿದ್ದು, ಪ್ಪರ್ ಅಸಿಸ್ಟೆಡ್ ಕ್ಲಚ್‌ನೊಂದಗೆ ಸ್ಟ್ಯಾಂಡರ್ಡ್ ಸಿಕ್ಸ್-ಸ್ಪೀಡ್ ಗೇರ್‌ಬಾಕ್ಸ್ ಪಡೆದುಕೊಂಡಿರುವ ಹೊಸ ಬೈಕ್ 18.3 ಬಿಹೆಚ್‍ಪಿ ಪವರ್ ಮತ್ತು 14.1 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಆರ್15 ಬೈಕ್ ಮಾರದರಿಗಾಗಿ ಹೊಸ ಬಣ್ಣದ ಆಯ್ಕೆ ನೀಡಿದ ಯಮಹಾ

ವೈಜೆಡ್ಎಫ್-ಆರ್15 ವಿ3 ಬೈಕಿನಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್ ಮತ್ತು ಟೈಲ್-ಲ್ಯಾಂಪ್, ಇನ್ಸ್ಟ್ರುಮೆಂಟ್ ಕ್ಲಸ್ಟರ್, ಪೂರ್ಣ ಪ್ರಮಾಣದ ಡಿಜಿಟಲ್ ಎಲ್‌ಸಿಡಿ, ಮತ್ತು ಸ್ಪ್ಲಿಟ್-ಸ್ಟೈಲ್ ಸ್ಟೆಪ್-ಅಪ್ ಸೀಟ್ ಜೋಡಿಸಲಾಗಿದೆ.

ಆರ್15 ಬೈಕ್ ಮಾರದರಿಗಾಗಿ ಹೊಸ ಬಣ್ಣದ ಆಯ್ಕೆ ನೀಡಿದ ಯಮಹಾ

ಹಾಗೆಯೇ ಈ ಹೊಸ ಬೈಕ್ ಮಾದರಿಯಲ್ಲಿ ರೇಡಿಯಲ್ ಟಯರ್, ಡ್ಯುಯಲ್-ಹಾರ್ನ್ ಮತ್ತು ಸೈಡ್-ಸ್ಟ್ಯಾಂಡ್ ಆಕ್ಟಿವೇಟೆಡ್ ಎಂಜಿನ್ ಕಟ್-ಆಫ್ ಫೀಚರ್ಸ್‌ಗಳನ್ನು ನೀಡಲಾಗಿದ್ದು, ಸ್ಟ್ರೀಟ್ ಫೈಟರ್ ಮಾದರಿಗಲ್ಲಿ ಉತ್ತಮ ಬೇಡಿಕೆ ಹೊಂದಿದೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಆರ್15 ಬೈಕ್ ಮಾರದರಿಗಾಗಿ ಹೊಸ ಬಣ್ಣದ ಆಯ್ಕೆ ನೀಡಿದ ಯಮಹಾ

ಬೈಕಿನ ಸಸ್ಪೆಂಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸಸ್ಪೆಂಕ್ಷನ್ ಸೆಟಪ್ ಅನ್ನು ಅಳವಡಿಸಲಾಗಿದ್ದು, ಬ್ರೇಕಿಂಗ್ ಸಿಸ್ಟಂಗಾಗಿ ಮುಂಭಾಗದಲ್ಲಿ 282 ಎಂಎಂ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

ಆರ್15 ಬೈಕ್ ಮಾರದರಿಗಾಗಿ ಹೊಸ ಬಣ್ಣದ ಆಯ್ಕೆ ನೀಡಿದ ಯಮಹಾ

ಇದರೊಂದಿಗೆ ಯಮಹಾ ಕಂಪನಿಯು ಹೊಸ ಬೈಕಿನಲ್ಲಿ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಿದ್ದು, ಹೊಸ ಬಣ್ಣದ ಆಯ್ಕೆ ಮತ್ತು ಸ್ಟ್ಯಾಂಡರ್ಡ್ ಫೀಚರ್ಸ್‌ಗಳಿಂದಾಗಿ ಬೈಕ್ ಅಗ್ರೇಸಿವ್ ಮತ್ತು ಆಕರ್ಷಕ ಲುಕ್ ಅನ್ನು ಹೊಂದಿದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಆರ್15 ಬೈಕ್ ಮಾರದರಿಗಾಗಿ ಹೊಸ ಬಣ್ಣದ ಆಯ್ಕೆ ನೀಡಿದ ಯಮಹಾ

ಈ ಮೂಲಕ ಯಮಹಾ ವೈಜೆಡ್ಎಫ್-ಆರ್15 ವಿ3 ಬೈಕ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಕೆಟಿಎಂ ಆರ್‌ಸಿ200 ಮತ್ತು ಸುಜುಕಿ ಜಿಕ್ಸರ್ ಎಸ್‌ಎಫ್‌ ಬೈಕ್‌ಗಳಿಗೆ ಉತ್ತಮ ಪೈಪೋಟಿ ನೀಡುತ್ತಿದ್ದು, ಕಳೆದ ಕೆಲ ದಿನಗಳಿಂದ ಹೊಸ ಬೈಕ್ ಮಾದರಿಯಲ್ಲಿ ಹಲವಾರು ಬದಲಾವಣೆಗಳನ್ನು ಪರಿಚಯಿಸಲಾಗಿದೆ.

Most Read Articles

Kannada
Read more on ಯಮಹಾ yamaha
English summary
Yamaha YZF-R15 gets a new silver/grey paint. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X