ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಯಾದ ಯಮಹಾ ವೈಜೆಡ್ಎಫ್-ಆರ್15 ವಿ3 ಬೈಕ್

ಯಮಹಾ ಮೋಟಾರ್ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ವೈಜೆಡ್ಎಫ್ ಆರ್15 ವಿ3 ಬೈಕ್ ಮಾದರಿಯಲ್ಲಿ ಹೊಸ ಬಣ್ಣದ ಆಯ್ಕೆ ನೀಡಿದ್ದು, ಹೊಸ ಬೈಕ್ ಇದೀಗ ವಿವಿಧ ಬಣ್ಣಗಳ ಆಯ್ಕೆಯೊಂದಿಗೆ ರೆಡ್ ಮೆಟಾಲಿಕ್ ಬಣ್ಣದೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಯಾದ ಯಮಹಾ ವೈಜೆಡ್ಎಫ್-ಆರ್15 ವಿ3 ಬೈಕ್

ಹೊಸ ಬಣ್ಣದ ಆಯ್ಕೆ ಹೊರತುಪಡಿಸಿ ವೈಜೆಡ್ಎಫ್-ಆರ್15 ವಿ3 ಬೈಕ್ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ಸ್ಟ್ಯಾಂಡರ್ಡ್ ಮಾದರಿಯೆಂತೆ ತಾಂತ್ರಿಕ ಅಂಶಗಳನ್ನು ಹೊಂದಿದ್ದು, ಈಗಾಗಲೇ ಬಿಎಸ್ 6 ಎಂಜಿನ್ ಆಯ್ಕೆಯೊಂದಿಗೆ ಮಾರಾಟವಾಗುತ್ತಿರುವ ಹೊಸ ಬೈಕ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.52 ಲಕ್ಷ ಬೆಲೆ ಪಡೆದುಕೊಂಡಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಯಾದ ಯಮಹಾ ವೈಜೆಡ್ಎಫ್-ಆರ್15 ವಿ3 ಬೈಕ್

ರೆಡ್ ಮೆಟಾಲಿಕ್ ಬಣ್ಣದ ಆಯ್ಕೆ ಹೊಂದಿರುವ ವೈಜೆಡ್ಎಫ್-ಆರ್15 ವಿ3 ಬೈಕ್ ಮಾದರಿಗಾಗಿ ಯಮಹಾ ಕಂಪನಿಯು ಈಗಾಗಲೇ ಬುಕ್ಕಿಂಗ್ ಆರಂಭಿಸಿದ್ದು, ವೈಜೆಡ್ಎಫ್-ಆರ್15 ವಿ3 ಮಾದರಿಯು ರೇಸಿಂಗ್ ಬ್ಲ್ಯೂ, ಥಂಡರ್ ಗ್ರೇ, ಡಾರ್ಕ್ ನೈಟ್ ಬಣ್ಣಗಳಲ್ಲೂ ಖರೀದಿಗೆ ಲಭ್ಯವಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಯಾದ ಯಮಹಾ ವೈಜೆಡ್ಎಫ್-ಆರ್15 ವಿ3 ಬೈಕ್

ಯಮಹಾ ಕಂಪನಿಯು ವೈಜೆಡ್ಎಫ್ ಆರ್15 ವಿ3 ಬೈಕ್ ಮಾದರಿಯ ಬೆಲೆಯನ್ನು ಬಣ್ಣಗಳ ಆಧಾರ ಮೇಲೆ ಬೆಲೆ ನಿಗದಿಪಡಿಸುತ್ತಿದ್ದು, ಥಂಡರ್ ಗ್ರೇ ಬಣ್ಣದ ಮಾದರಿಗೆ ರೂ.1.49 ಲಕ್ಷಗಳಾದರೆ ರೇಸಿಂಗ್ ಬ್ಲೂ ಬಣ್ಣದ ಮಾದರಿಗೆ ರೂ.1.50 ಲಕ್ಷ ಮತ್ತು ಡಾರ್ಕ್ ನೈಟ್ ಬಣ್ಣದ ಮಾದರಿಗೆ ರೂ.1.52 ಲಕ್ಷಗಳಿಗೆ ಮತ್ತು ರೆಡ್ ಮೆಟಾಲಿಕ್ ಮಾದರಿಗೆ ರೂ. 1.52 ಲಕ್ಷ ನಿಗದಿಪಡಿಸಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಯಾದ ಯಮಹಾ ವೈಜೆಡ್ಎಫ್-ಆರ್15 ವಿ3 ಬೈಕ್

ಇನ್ನು ಹೊಸ ವೈಜೆಡ್ಎಫ್-ಆರ್15 ವಿ3 ಮಾದರಿಯು 155 ಸಿಸಿ, ಸಿಂಗಲ್ ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಎಂಜಿನ್ ಅನ್ನು ಹೊಂದಿದ್ದು, ಪ್ಪರ್ ಅಸಿಸ್ಟೆಡ್ ಕ್ಲಚ್‌ನೊಂದಗೆ ಸ್ಟ್ಯಾಂಡರ್ಡ್ ಸಿಕ್ಸ್-ಸ್ಪೀಡ್ ಗೇರ್‌ಬಾಕ್ಸ್ ಪಡೆದುಕೊಂಡಿರುವ ಹೊಸ ಬೈಕ್ 18.3 ಬಿಹೆಚ್‍ಪಿ ಪವರ್ ಮತ್ತು 14.1 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಯಾದ ಯಮಹಾ ವೈಜೆಡ್ಎಫ್-ಆರ್15 ವಿ3 ಬೈಕ್

ವೈಜೆಡ್ಎಫ್-ಆರ್15 ವಿ3 ಬೈಕಿನಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್ ಮತ್ತು ಟೈಲ್-ಲ್ಯಾಂಪ್, ಇನ್ಸ್ಟ್ರುಮೆಂಟ್ ಕ್ಲಸ್ಟರ್, ಪೂರ್ಣ ಪ್ರಮಾಣದ ಡಿಜಿಟಲ್ ಎಲ್‌ಸಿಡಿ, ಮತ್ತು ಸ್ಪ್ಲಿಟ್-ಸ್ಟೈಲ್ ಸ್ಟೆಪ್-ಅಪ್ ಸೀಟ್ ಜೋಡಿಸಲಾಗಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಯಾದ ಯಮಹಾ ವೈಜೆಡ್ಎಫ್-ಆರ್15 ವಿ3 ಬೈಕ್

ಹಾಗೆಯೇ ಈ ಹೊಸ ಬೈಕ್ ಮಾದರಿಯಲ್ಲಿ ರೇಡಿಯಲ್ ಟಯರ್, ಡ್ಯುಯಲ್-ಹಾರ್ನ್ ಮತ್ತು ಸೈಡ್-ಸ್ಟ್ಯಾಂಡ್ ಆಕ್ಟಿವೇಟೆಡ್ ಎಂಜಿನ್ ಕಟ್-ಆಫ್ ಫೀಚರ್ಸ್‌ಗಳನ್ನು ನೀಡಲಾಗಿದ್ದು, ಸ್ಟ್ರೀಟ್ ಫೈಟರ್ ಮಾದರಿಗಲ್ಲಿ ಉತ್ತಮ ಬೇಡಿಕೆ ಹೊಂದಿದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಯಾದ ಯಮಹಾ ವೈಜೆಡ್ಎಫ್-ಆರ್15 ವಿ3 ಬೈಕ್

ಬೈಕಿನ ಸಸ್ಪೆಂಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸಸ್ಪೆಂಕ್ಷನ್ ಸೆಟಪ್ ಅನ್ನು ಅಳವಡಿಸಲಾಗಿದ್ದು, ಬ್ರೇಕಿಂಗ್ ಸಿಸ್ಟಂಗಾಗಿ ಮುಂಭಾಗದಲ್ಲಿ 282 ಎಂಎಂ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಯಾದ ಯಮಹಾ ವೈಜೆಡ್ಎಫ್-ಆರ್15 ವಿ3 ಬೈಕ್

ಇದರೊಂದಿಗೆ ಯಮಹಾ ಕಂಪನಿಯು ಹೊಸ ಬೈಕಿನಲ್ಲಿ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಿದ್ದು, ಹೊಸ ಬಣ್ಣದ ಆಯ್ಕೆ ಮತ್ತು ಸ್ಟ್ಯಾಂಡರ್ಡ್ ಫೀಚರ್ಸ್‌ಗಳಿಂದಾಗಿ ಬೈಕ್ ಅಗ್ರೇಸಿವ್ ಮತ್ತು ಆಕರ್ಷಕ ಲುಕ್ ಅನ್ನು ಹೊಂದಿದೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಯಾದ ಯಮಹಾ ವೈಜೆಡ್ಎಫ್-ಆರ್15 ವಿ3 ಬೈಕ್

ಈ ಮೂಲಕ ಯಮಹಾ ವೈಜೆಡ್ಎಫ್-ಆರ್15 ವಿ3 ಬೈಕ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಕೆಟಿಎಂ ಆರ್‌ಸಿ200 ಮತ್ತು ಸುಜುಕಿ ಜಿಕ್ಸರ್ ಎಸ್‌ಎಫ್‌ ಬೈಕ್‌ಗಳಿಗೆ ಉತ್ತಮ ಪೈಪೋಟಿ ನೀಡುತ್ತಿದ್ದು, ಕಳೆದ ಕೆಲ ದಿನಗಳಿಂದ ಹೊಸ ಬೈಕ್ ಮಾದರಿಯಲ್ಲಿ ಹಲವಾರು ಬದಲಾವಣೆಗಳನ್ನು ಪರಿಚಯಿಸಲಾಗಿದೆ.

Article Published On: Thursday, April 1, 2021, 18:51 [IST]
English summary
Yamaha YZF-R15 V3.0 Metallic Red Colour Launched In India. Read in Kannada.
Read more on ಯಮಹಾ yamaha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+