ಎಲೆಕ್ಟ್ರಿಕ್ ವಾಹನಗಳ ಮೂಲಕ ಡೈರೆಕ್ಟ್ ಟು ಕಸ್ಟಮರ್ ವಿತರಣಾ ಸೇವೆ ನೀಡಲಿದೆ Zypp ಎಲೆಕ್ಟ್ರಿಕ್

ವಿಶ್ವಾದ್ಯಂತ ದಿನೇ ದಿನೇ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಪರಿಸರ ಸ್ನೇಹಿಯಾಗಿರುವ ಹಿನ್ನೆಲೆಯಲ್ಲಿ ಹಲವಾರು ದೇಶಗಳು ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡುತ್ತಿವೆ. ನಾರ್ವೆ ಸೇರಿದಂತೆ ಯುರೋಪಿನ ಹಲವು ದೇಶಗಳಲ್ಲಿ 2030ರ ವೇಳೆಗೆ ಸಂಪೂರ್ಣವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ. ಭಾರತದಲ್ಲಿಯೂ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ.

ಎಲೆಕ್ಟ್ರಿಕ್ ವಾಹನಗಳ ಮೂಲಕ ಡೈರೆಕ್ಟ್ ಟು ಕಸ್ಟಮರ್ ವಿತರಣಾ ಸೇವೆ ನೀಡಲಿದೆ Zypp ಎಲೆಕ್ಟ್ರಿಕ್

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಫೇಮ್ 2ನಂತಹ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಕೆಲವು ರಾಜ್ಯಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವವರಿಗೆ ಸಬ್ಸಿಡಿ ನೀಡಲಾಗುತ್ತಿದೆ. ಇನ್ನು ಕೆಲವು ರಾಜ್ಯಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿ ಮೇಲೆ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತದೆ. ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಹುತೇಕ ಎಲ್ಲಾ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಮುಂದಾಗಿವೆ.

ಎಲೆಕ್ಟ್ರಿಕ್ ವಾಹನಗಳ ಮೂಲಕ ಡೈರೆಕ್ಟ್ ಟು ಕಸ್ಟಮರ್ ವಿತರಣಾ ಸೇವೆ ನೀಡಲಿದೆ Zypp ಎಲೆಕ್ಟ್ರಿಕ್

ವಾಹನ ತಯಾರಕ ಕಂಪನಿಗಳು ಮಾತ್ರವಲ್ಲದೇ ಸೆಲ್ ಫೋನ್ ತಯಾರಕ ಕಂಪನಿಗಳು ಸಹ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸಲು ಮುಂದಾಗಿವೆ. ಕೆಲವು ತಿಂಗಳ ಹಿಂದಷ್ಟೇ Lenovo ಕಂಪನಿಯು ತನ್ನ ಸ್ಕೂಟರ್ ಮಾದರಿಯ ಎಲೆಕ್ಟ್ರಿಕ್ ವಾಹನವನ್ನು ಬಿಡುಗಡೆಗೊಳಿಸಿತ್ತು. ಈ ಹಿಂದೆ Apple, Huwai ನಂತಹ ಕಂಪನಿಗಳು ಸಹ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಮುಂದಾಗಿರುವ ಬಗ್ಗೆ ವರದಿಯಾಗಿತ್ತು.

ಎಲೆಕ್ಟ್ರಿಕ್ ವಾಹನಗಳ ಮೂಲಕ ಡೈರೆಕ್ಟ್ ಟು ಕಸ್ಟಮರ್ ವಿತರಣಾ ಸೇವೆ ನೀಡಲಿದೆ Zypp ಎಲೆಕ್ಟ್ರಿಕ್

ಕೆಲ ದಿನಗಳ ಹಿಂದಷ್ಟೇ ಜನಪ್ರಿಯ ಮೊಬೈಲ್ ಫೋನ್ ತಯಾರಕ ಕಂಪನಿಯಾದ Xiomi ಸಹ ಎಲೆಕ್ಟ್ರಿಕ್ ವಾಹನ ಉತ್ಪಾದನೆಗೆ ಮುಂದಾಗಿರುವ ಬಗ್ಗೆ ವರದಿಯಾಗಿತ್ತು. ಕೆಲವು ದಿನಗಳಿಂದ ಸಣ್ಣ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸುತ್ತಿರುವ Xiomi ಕಂಪನಿಯು ಈಗ ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲು ನಿರ್ಧರಿಸಿರುವ ಬಗ್ಗೆ ವರದಿಯಾಗಿದೆ.

ಎಲೆಕ್ಟ್ರಿಕ್ ವಾಹನಗಳ ಮೂಲಕ ಡೈರೆಕ್ಟ್ ಟು ಕಸ್ಟಮರ್ ವಿತರಣಾ ಸೇವೆ ನೀಡಲಿದೆ Zypp ಎಲೆಕ್ಟ್ರಿಕ್

ಈಗ ಮತ್ತೊಂದು ಜನಪ್ರಿಯ ಸೆಲ್ ಫೋನ್ ತಯಾರಕ ಕಂಪನಿಯಾದ RealMe ಸಹ ಶೀಘ್ರದಲ್ಲೇ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡಲಿದೆ ಎಂದು ವರದಿಯಾಗಿದೆ. RealMe ಕಂಪನಿಯು ಶೀಘ್ರದಲ್ಲೇ ಆಟೋ ಉದ್ಯಮಕ್ಕೆ ಕಾಲಿಡಲಿದೆ ಎಂದು ವರದಿಯಾಗಿದೆ. ಕಂಪನಿಯು ವಾಹನ ಉತ್ಪಾದನೆಗೆ ಮುಂದಾಗುತ್ತಿದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದ ಬೆನ್ನಲ್ಲೇ ಈ ಸುದ್ದಿ ಹೊರ ಬಂದಿದೆ.

ಎಲೆಕ್ಟ್ರಿಕ್ ವಾಹನಗಳ ಮೂಲಕ ಡೈರೆಕ್ಟ್ ಟು ಕಸ್ಟಮರ್ ವಿತರಣಾ ಸೇವೆ ನೀಡಲಿದೆ Zypp ಎಲೆಕ್ಟ್ರಿಕ್

ಲಾಜಿಸ್ಟಿಕ್ಸ್ ಡೆಲಿವರಿ ಸ್ಟಾರ್ಟ್ಅಪ್ ಕಂಪನಿಯಾದ Zypp ಎಲೆಕ್ಟ್ರಿಕ್ ತನ್ನ ಡೈರೆಕ್ಟ್ ಟು ಕಸ್ಟಮರ್ ವಿತರಣಾ ವ್ಯವಹಾರದಲ್ಲಿ ಕೇವಲ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವ ಭಾರತದ ಮೊದಲ ಕಂಪನಿಯಾಗಿದೆ. ಲಾಸ್ಟ್ ಮೈಲ್ ಲಾಜಿಸ್ಟಿಕ್ಸ್ ವಿತರಣೆಯಲ್ಲಿ Zypp ಎಲೆಕ್ಟ್ರಿಕ್ ಕಂಪನಿಯು 100% ಎಲೆಕ್ಟ್ರಿಕ್ ವಾಹನ ಬಳಕೆಯ ಗುರಿಯನ್ನು ಅನುಸರಿಸುತ್ತಿದೆ. ಕಂಪನಿಯು ದೊಡ್ಡ ಇ ಕಾಮರ್ಸ್ ಕಂಪನಿಗಳು, ಕಿರಾಣಿ ಅಂಗಡಿಗಳು, ರೆಸ್ಟೋರೆಂಟ್‌ಗಳು ಸೇರಿದಂತೆ ಹಲವು ಕಂಪನಿಗಳಿಂದ ತನ್ನ ಗ್ರಾಹಕರಿಗೆ ವಿತರಣಾ ಸೇವೆಗಳನ್ನು ಒದಗಿಸುತ್ತದೆ.

ಎಲೆಕ್ಟ್ರಿಕ್ ವಾಹನಗಳ ಮೂಲಕ ಡೈರೆಕ್ಟ್ ಟು ಕಸ್ಟಮರ್ ವಿತರಣಾ ಸೇವೆ ನೀಡಲಿದೆ Zypp ಎಲೆಕ್ಟ್ರಿಕ್

Zypp ಎಲೆಕ್ಟ್ರಿಕ್, ಅಂಗಡಿಯಿಂದ ನೇರವಾಗಿ ಗ್ರಾಹಕರ ಮನೆಗಳಿಗೆ ವಿತರಣಾ ಸೇವೆಗಳನ್ನು ಒದಗಿಸುತ್ತದೆ. ಕಂಪನಿಯು ತನ್ನ ವಿತರಣಾ ಸೇವೆಯಲ್ಲಿ ಕೇವಲ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವ ಮೂಲಕ ಕಾರ್ಬನ್ ಡೈ ಆಕ್ಸೈಡ್ ಹೊರಸೂಸುವಿಕೆ ಇಲ್ಲದ ಪರಿಸರವನ್ನು ಖಾತ್ರಿ ಪಡಿಸುತ್ತಿದೆ. ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ವಿತರಣೆಯನ್ನು ನೀಡಲು ಕಂಪನಿಯು ಬ್ಯಾಟರಿ ವಿನಿಮಯ ಮಾಡಿಕೊಳ್ಳುವ ಮೂಲಕ ಚಾರ್ಜ್ ಮಾಡುವ ಸಮಯವನ್ನು ಉಳಿಸುತ್ತಿದೆ.

ಎಲೆಕ್ಟ್ರಿಕ್ ವಾಹನಗಳ ಮೂಲಕ ಡೈರೆಕ್ಟ್ ಟು ಕಸ್ಟಮರ್ ವಿತರಣಾ ಸೇವೆ ನೀಡಲಿದೆ Zypp ಎಲೆಕ್ಟ್ರಿಕ್

ಇದಕ್ಕಾಗಿ ಕಂಪನಿಯು ತನ್ನ ಎಲೆಕ್ಟ್ರಿಕ್ ವಾಹನಗಳಿಗಾಗಿ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ವಿನ್ಯಾಸಗೊಳಿಸಿದೆ. ಸದ್ಯಕ್ಕೆ Zypp ಎಲೆಕ್ಟ್ರಿಕ್‌ನ ಡೆಲಿವರಿ ಫ್ಲೀಟ್‌ನಲ್ಲಿ 2000 ಕ್ಕೂ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್‌ಗಳು ಬಳಕೆಯಲ್ಲಿವೆ. ಕಂಪನಿಯು ಪ್ರತಿ ತಿಂಗಳು 50,000 ಕ್ಕೂ ಹೆಚ್ಚು ಡೆಲಿವರಿ ಆರ್ಡರ್‌ಗಳನ್ನು ಪೂರೈಸುತ್ತಿದೆ. ಇ ಕಾಮರ್ಸ್ ವಿತರಣಾ ವೇದಿಕೆಯು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿದೆ. ವರದಿಗಳ ಪ್ರಕಾರ 2025ರ ವೇಳೆಗೆ ಭಾರತದಲ್ಲಿ ಡೆಲಿವರಿ ಎಕ್ಸಿಕ್ಯೂಟಿವ್‌ಗಳ ಸಂಖ್ಯೆ 60 ಲಕ್ಷದ ಗಡಿ ದಾಟಲಿದೆ.

ಎಲೆಕ್ಟ್ರಿಕ್ ವಾಹನಗಳ ಮೂಲಕ ಡೈರೆಕ್ಟ್ ಟು ಕಸ್ಟಮರ್ ವಿತರಣಾ ಸೇವೆ ನೀಡಲಿದೆ Zypp ಎಲೆಕ್ಟ್ರಿಕ್

ಕಂಪನಿಯು ಈ ವರ್ಷದ ಜೂನ್‌ ತಿಂಗಳಿನಲ್ಲಿ ಹೈದರಾಬಾದ್‌ನಲ್ಲಿ ಹಾಗೂ ಆಗಸ್ಟ್‌ನಲ್ಲಿ ಬೆಂಗಳೂರು, ಪುಣೆ ನಗರಗಳಲ್ಲಿ ತನ್ನ ಸೇವೆಗಳನ್ನು ಆರಂಭಿಸಿದೆ. Zypp ಎಲೆಕ್ಟ್ರಿಕ್ ದೆಹಲಿ, ಗುರುಗ್ರಾಮ, ಗಾಜಿಯಾಬಾದ್, ನೋಯ್ಡಾ, ಫರಿದಾಬಾದ್ ಹಾಗೂ ಜೈಪುರದಂತಹ ಪ್ರಮುಖ ನಗರಗಳಲ್ಲಿ ಡೋರ್ ಸ್ಟೆಪ್ ಡೆಲಿವರಿ ಸೇವೆಯನ್ನು ನೀಡುತ್ತಿದೆ. ಕಂಪನಿಯು ತನ್ನ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮೂಲಕ ಸರಕು, ಔಷಧಿ, ಆಹಾರ ಹಾಗೂ ಪ್ಯಾಕೇಜ್‌ಗಳನ್ನು ಅಂಗಡಿಯಿಂದ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತದೆ.

ಎಲೆಕ್ಟ್ರಿಕ್ ವಾಹನಗಳ ಮೂಲಕ ಡೈರೆಕ್ಟ್ ಟು ಕಸ್ಟಮರ್ ವಿತರಣಾ ಸೇವೆ ನೀಡಲಿದೆ Zypp ಎಲೆಕ್ಟ್ರಿಕ್

Zypp ಕಂಪನಿಯು ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಕಡಿಮೆ ಬೆಲೆಗೆ ಬಾಡಿಗೆಗೆ ನೀಡುತ್ತದೆ. ಗ್ರಾಹಕರು Zypp ಮೊಬೈಲ್ ಅಪ್ಲಿಕೇಶನ್‌ನಲ್ಲಿ Zypp ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬುಕ್ ಮಾಡಬಹುದು. ಓಲಾ ಹಾಗೂ ಉಬರ್‌ ಕ್ಯಾಬ್‌ಗಳನ್ನು ಬುಕ್ ಮಾಡುವ ರೀತಿಯಲ್ಲಿಯೇ Zypp ಸ್ಕೂಟರ್‌ಗಳನ್ನು ಬುಕ್ಕಿಂಗ್ ಮಾಡ ಬಹುದು. ಕೇವಲ ರೂ. 5 ಪಾವತಿಸಿ Zypp ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಳಸಬಹುದು.

ಎಲೆಕ್ಟ್ರಿಕ್ ವಾಹನಗಳ ಮೂಲಕ ಡೈರೆಕ್ಟ್ ಟು ಕಸ್ಟಮರ್ ವಿತರಣಾ ಸೇವೆ ನೀಡಲಿದೆ Zypp ಎಲೆಕ್ಟ್ರಿಕ್

ಇದೇ ವೇಳೆ ಈ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಚಾರ್ಜ್ ಮಾಡಲು ಪ್ರತಿ ನಿಮಿಷಕ್ಕೆ 1 ರೂಪಾಯಿ ಚಾರ್ಜಿಂಗ್ ಶುಲ್ಕ ವಿಧಿಸಲಾಗುತ್ತದೆ. Zypp ಎಲೆಕ್ಟ್ರಿಕ್ ಸ್ಕೂಟರ್‌ಗಳು ಮಿತವ್ಯಯವಾಗಿರುವುದು ಮಾತ್ರವಲ್ಲದೆ ಮೆಟ್ರೋ ನಗರಗಳಲ್ಲಿ ಸುಲಭವಾಗಿ ಲಭ್ಯವಾಗುತ್ತವೆ. ಮುಂಬರುವ ದಿನಗಳಲ್ಲಿ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಗಳು ದೇಶದಾದ್ಯಂತ ಲಭ್ಯವಾಗುವ ಸಾಧ್ಯತೆಗಳಿವೆ.

ಗಮನಿಸಿ: ಮೊದಲ ಚಿತ್ರವನ್ನು ಹೊರತು ಪಡಿಸಿ ಉಳಿದ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Zypp electric offers direct to customer delivery business through electric vehicles details
Story first published: Wednesday, November 3, 2021, 10:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X