ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2022ರ ಯಮಹಾ ಆರ್3 ಬೈಕ್
ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಯಮಹಾ ತನ್ನ ಹೊಸ ಆರ್3 ಬೈಕ್ ಅನ್ನು ಹೊಸ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆ ಮಾಡಿದೆ. ನವೀಕರಿಸಿದ ಬಣ್ಣದ ಆಯ್ಕೆಯೊಂದಿಗೆ ಈ ಹೊಸ 2022 ಯಮಹಾ ಆರ್3 ಅನ್ನು ತೈವಾನ್ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ.

ಮೂಲಗಳ ಪ್ರಕಾರ, 2022ರ ಯಮಹಾ ಆರ್3 ಅದರ ಹೊಸ ಆರೆಂಜ್ ಪೇಂಟ್ ಸ್ಕೀಮ್‌ನೊಂದಿಗೆ ಮಿಡ್‌ನೈಟ್ ಬ್ಲ್ಯಾಕ್ ಮತ್ತು ರೇಸಿಂಗ್ ಬ್ಲೂ ಮುಂತಾದ ಇತರ ಬಣ್ಣ ಆಯ್ಕೆಗಳೊಂದಿಗೆ ಮಾರಾಟವಾಗಲಿದೆ. ಯಮಹಾ ಆರ್3 ಬೈಕಿನಲ್ಲಿನ ಹೊಸ ಆರೆಂಜ್ ಪೇಂಟ್ ಸ್ಕೀಮ್ ಕುರಿತು ಹೇಳುವುದಾದರೆ, ಬಣ್ಣವು ಮೋಟಾರ್‌ಸೈಕಲ್ ಎದ್ದು ಕಾಣಲು ಸಹಾಯ ಮಾಡುತ್ತದೆ ಮತ್ತು ಬೂದು ಬಣ್ಣದ ಕೆಳಭಾಗದ ಡ್ಯುಯಲ್-ಟೋನ್ ಫಿನಿಶ್ ಮೋಟಾರ್‌ಸೈಕಲ್‌ನ ಸ್ಪೋರ್ಟಿ ಸ್ವಭಾವವನ್ನು ಒತ್ತಿಹೇಳುತ್ತದೆ. ಯಮಹಾ ಆರ್3 ಬೈಕ್ ಆಕರ್ಷಕ ಗ್ರಾಫಿಕ್ಸ್ ಬೈಕಿಗೆ ಹೆಚ್ಚಿನ ಸ್ಪೋರ್ಟಿ ಲುಕ್ ಅನ್ನು ನೀಡುತ್ತದೆ.

ಆರೆಂಜ್ ಬಣ್ಣವು ಇಂಧನ ಟ್ಯಾಂಕ್, ಮುಂಭಾಗದ ಫೆಂಡರ್ ಮತ್ತು ಫೇರಿಂಗ್‌ನ ಮೇಲಿನ ಅರ್ಧಭಾಗದಲ್ಲಿದೆ. ಅದರ ಹೊರತಾಗಿ, ಹೊಸ ಯಮಹಾ ಆರ್3 ಅದರ ಸಿಗ್ನೇಚರ್ ಎಲ್ಇಡಿ ಹೆಡ್‌ಲೈಟ್‌ಗಳು ಮತ್ತು ಫೇರಿಂಗ್-ಮೌಂಟೆಡ್ ರಿಯರ್‌ವ್ಯೂ ಮಿರರ್‌ಗಳೊಂದಿಗೆ ಇತರ ಯಮಹಾ ಆರ್3 ಗಳಿಗೆ ಹೋಲುತ್ತದೆ.

ಈ ಹೊಸ ಯಮಹಾ ಆರ್3 ಬೈಕ್ ಹಿಂದಿನ ಮಾದರಿಗೆ ಹೋಲುತ್ತದೆ. ಈ ಯಮಹಾ ಆರ್3 ಬೈಕ್ ಹೆಚ್ಚು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಹೊಸ ವಿನ್ಯಾಸದ ಹೊರತಾಗಿ, ಬಿಎಸ್6 ಆರ್3 ಬೈಕ್ ಡ್ಯುಯಲ್-ಚಾನೆಲ್ ಎಬಿಎಸ್ ಜೊತೆಗೆ ಐಎಂಯು ಸೆನ್ಸರ್ ಗಳನ್ನು ಒಳಗೊಂಡಿದೆ.

ಈ ಬೈಕಿನಲ್ಲಿ ಒಂದೇ ರೀತಿಯ ಸೈಡ್-ಸ್ಲಂಗ್ ಎಕ್ಸಾಸ್ಟ್ ಜೊತೆಗೆ ತುದಿಯಲ್ಲಿ ಬ್ರಷ್ಡ್-ಅಲ್ಯೂಮಿನಿಯಂ ಫಿನಿಶ್ ಮತ್ತು ಸ್ಪ್ಲಿಟ್ ಅಲಾಯ್ ವೀಲ್‌ಗಳು ಹೊಂದಿವೆ. ಇದರೊಂದಿಗೆ ಎಲ್ಇಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಎಬಿಎಸ್ ಮತ್ತು ನ್ನೂ ಕೆಲವು ತಂತ್ರಜ್ಞಾನಗಳಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಈ ಯಮಹಾ ಆರ್3 ಬೈಕಿನಲ್ಲಿ ಅದೇ 321 ಸಿಸಿ, ಲಿಕ್ವಿಡ್-ಕೂಲ್ಡ್, ಪ್ಯಾರೆಲಲ್-ಟ್ವಿನ್-ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಅನ್ನು 10,750 ಆರ್‌ಪಿಎಂನಲ್ಲಿ 41 ಬಿಹೆಚ್‌ಪಿ ಪವರ್ ಮತ್ತು 9,000 ಆರ್‌ಪಿಎಂನಲ್ಲಿ 29 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ 2022ರ ಯಮಹಾ ಆರ್3 ಬೈಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಹೊಂದಾಣಿಕೆ ಮಾಡಬಹುದಾದ ಮೊನೊ-ಶಾಕ್ ಸೆಟಪ್ ಅನ್ನು ಒಳಗೊಂಡಿದೆ,

ಇನ್ನು ಪ್ರಮುಖವಾಗಿ ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 298 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಸಿಸ್ಟಂ ಅನ್ನು ಹೊಂದಿದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ನೀಡಲಾಗಿದೆ.

ಕಟ್ಟುನಿಟ್ಟಾದ ಬಿಎಸ್-6 ಮಾನದಂಡಗಳನ್ನು ಪೂರೈಸಲು ಎಂಜಿನ್ ಅನ್ನು ಮಾರ್ಪಡಿಸಲು ಸಾಧ್ಯವಾಗದ ಕಾರಣ ಯಮಹಾ ಆರ್3 ಅನ್ನು ನಿಲ್ಲಿಸಲಾಯಿತು. ಯಮಹಾ ಭಾರತದಲ್ಲಿ ಯಮಹಾ ಆರ್3 ಮಾರಾಟವನ್ನು ಸ್ಥಗಿತಗೊಳಿಸಿದ್ದರೂ, ಅದರ ಸಹೋದರ ಮಾದರಿ ಆರ್15 ಇನ್ನೂ ಮಾರುಕಟ್ಟೆಯಲ್ಲಿ ಲಭ್ಯವಿದೆ

ಯಮಹಾ ಮೋಟಾರ್ ತನ್ನ ಆರ್15ಎಸ್ ವಿ3 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ವರ್ಷ ಬಿಡುಗಡೆಗೊಳಿಸಿತ್ತು ಈ ಹೊಸ ಯಮಹಾ ಆರ್15ಎಸ್ ವಿ3 ಬೈಕ್ ಹೆಚ್ಚು ಕೈಗೆಟುಕುವ ದರದ ಸ್ಪೋರ್ಟ್ಸ್ ಬೈಕ್ ಆಗಿದೆ. ಮೊದಲು ಆರ್15ಎಸ್ ನೇಮ್‌ಪ್ಲೇಟ್ ಅನ್ನು ಮೊದಲ ತಲೆಮಾರಿನ ಆರ್15 ಅನ್ನು ಹೆಚ್ಚು ಟೋನ್-ಡೌನ್ ಆವೃತ್ತಿಯಾಗಿ ಬಳಸಲಾಗುತ್ತಿತ್ತು ಮತ್ತು ಈಗ ಅದು ಬಹುತೇಕ ಒಂದೇ ರೀತಿಯ ಗುರುತನ್ನು ಹೊಂದಿದೆ. ಈ ಹೊಸ ಬೈಕ್ ಅನ್ನು ವೈಜೆಡ್ಎಫ್-ಆರ್15 ವಿ3.0 ಬೈಕಿಗೆ ಹೋಲಿಸಿದರೆ ದೊಡ್ಡ ವ್ಯತ್ಯಾಸವೆಂದರೆ ಸ್ಪ್ಲಿಟ್ ಟೈಪ್ ಸೀಟ್ ಸೆಟಪ್ ಅನ್ನು ಸಿಂಗಲ್-ಪೀಸ್ ಯೂನಿಟ್ ಪರವಾಗಿ ಡಿಚ್ ಮಾಡಲಾಗಿದೆ ಮತ್ತು ಇದನ್ನು ರೇಸಿಂಗ್ ಬ್ಲೂ ಎಂಬ ಒಂದೇ ಬಣ್ಣದಲ್ಲಿ ನೀಡಲಾಗಿದೆ.

ಕೆಲವೇ ತಿಂಗಳುಗಳ ಹಿಂದೆ, ಯಮಹಾ ನಾಲ್ಕನೇ ತಲೆಮಾರಿನ ವೈಜೆಡ್ಎಫ್-ಆರ್15ಎಸ್ ವಿ4 ಅನ್ನು ಪರಿಚಯಿಸಿತು ಮತ್ತು ಇದು ಅಂತರರಾಷ್ಟ್ರೀಯವಾಗಿ ಮಾರಾಟವಾದ ಇತ್ತೀಚಿನ ಆರ್ ಮಾದರಿಗಳಿಂದ ವಿನ್ಯಾಸ ಸ್ಫೂರ್ತಿಯನ್ನು ಪಡೆದುಕೊಂಡಿತು. ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ, ಹೊಸ ಯಮಹಾ ಆರ್15ಎಸ್ ವಿ3 ಬೈಕಿನಲ್ಲಿ ಪರಿಚಿತ 155 ಸಿಸಿ ಸಿಂಗಲ್-ಸಿಲಿಂಡರ್ ಫ್ಯೂಯಲ್-ಇಂಜೆಕ್ಟೆಡ್ SHOC ಲಿಕ್ವಿಡ್-ಕೂಲ್ಡ್ ನಾಲ್ಕು-ವಾಲ್ವ್ಡ್ ಎಂಜಿನ್ ಜೊತೆಗೆ ವಿವಿಎ (ವೇರಿಯಬಲ್ ವಾಲ್ವ್ ಆಕ್ಚುಯೇಶನ್) ತಂತ್ರಜ್ಞಾನವನ್ನು ಬಳಸುತ್ತದೆ.

ಇನ್ನು ಯಮಹಾ ಕಂಪನಿಯು ಆರ್3 ಬೈಕನ್ನು ಭಾರತೀಯ ಮಾರುಕಟ್ಟೆಗೆ ಮರಳಿ ತರಬಹುದು ಎಂದು ನಿರೀಕ್ಷಿಸುತ್ತೇವೆ. ಈ ಹೊಸ ಯಮಹಾ ಆರ್3 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಅಪಾಚೆ ಆರ್ಆರ್310 ಮತ್ತು ಕೆಟಿಎಂ ಆರ್ಸಿ390 ಬೈಕ್ ಗಳನ್ನು ಪೈಪೋಟಿ ನೀಡುತ್ತದೆ.


Click it and Unblock the Notifications