Just In
- 1 hr ago
2023ರಿಂದ ಭಾರತದಲ್ಲಿ ಮಾರಾಟಗೊಳ್ಳಲಿದೆ ಜೈವಿಕ ಇಂಧನ ಒಳಗೊಂಡ ಇ20 ಪೆಟ್ರೋಲ್ ಮಾದರಿ
- 2 hrs ago
ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಸಲು ಹೊಸ ರೂಪದಲ್ಲಿ ಬರುತ್ತಿದೆ ಮಾರುತಿ ಆಲ್ಟೋ ಕೆ10
- 2 hrs ago
ಹೊಸ ಆಕ್ಟಿವಾ ಟೀಸರ್ ಬಿಟ್ಟು ನಿರೀಕ್ಷೆ ಹೆಚ್ಚಿಸಿದ ಹೋಂಡಾ: ಆಕ್ಟಿವಾ 7G ಆಗಿರಬಹುದೇ?
- 3 hrs ago
ಇವಿ ಸ್ಕೂಟರ್ಗಳ ಬೆಲೆ ನಿಯಂತ್ರಿಸಲು ಬೃಹತ್ ಯೋಜನೆಗೆ ಚಾಲನೆ ನೀಡಿದ ಓಲಾ ಎಲೆಕ್ಟ್ರಿಕ್
Don't Miss!
- Finance
ಪೇಟಿಎಂ ಷೇರು ಶೇಕಡ 6ರಷ್ಟು ಕುಸಿತ, ಕಾರಣವೇನು?
- Sports
ಆ ಒಂದು ಕ್ರಮಾಂಕಕ್ಕೆ ಶೀಘ್ರದಲ್ಲೇ ಪರಿಹಾರ ಕಂಡುಕೊಳ್ಳಿ: ಟೀಮ್ ಇಂಡಿಯಾಗೆ ಸಬಾ ಕರೀಮ್ ಸಲಹೆ
- News
ಬಿಜೆಪಿ ನಾಯಕರಿಗೆ 'ಈಗಲೇ ಬಿಟ್ಟು ಹೊರಡಿ' ಎಂಬ ಸಂದೇಶ ನೀಡುತ್ತಿದ್ದಾರೆ ನಿತೀಶ್ ಕುಮಾರ್
- Technology
ಭಾರತದಲ್ಲಿ ವಿವೋ V25 ಪ್ರೊ ಸ್ಮಾರ್ಟ್ಫೋನಿನ ಲಾಂಚ್ ಡೇಟ್ ಬಹಿರಂಗ!
- Movies
ರಶ್ಮಿಕಾ ಆಯ್ತು, ಅನನ್ಯಾ ಪಾಂಡೆ ಕಡೆ ವಾಲಿದ ವಿಜಯ್ ದೇವರಕೊಂಡ!
- Lifestyle
ವಿಶ್ವ ಆನೆ ದಿನ 2022: ಆನೆಗಳ ಕುರಿತ ಈ ಆಸಕ್ತಿಕರ ಸಂಗತಿಗಳು ಗೊತ್ತಿದೆಯೇ?
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
350 ಸಿಸಿ ವಿಭಾಗದ ಎಪ್ರಿಲ್ ಮಾರಾಟದಲ್ಲಿ ಟಾಪ್ 4 ಸ್ಥಾನಗಳನ್ನು ವಶಪಡಿಸಿಕೊಂಡ ರಾಯಲ್ ಎನ್ಫೀಲ್ಡ್
350 ಸಿಸಿಗಿಂತ ಹೆಚ್ಚಿನ ಸಿಸಿ ಬೈಕ್‌ಗಳಿಗೆ ಭಾರತದಲ್ಲಿ ಪ್ರತ್ಯೇಕ ಅಭಿಮಾನಿ ಬಳಗವೇ ಇದೆ. ದೇಶದಲ್ಲಿ ಅನೇಕರು ಈ ಬೈಕುಗಳನ್ನು ಇಷ್ಟಪಟ್ಟು ಖರೀದಿಸುತ್ತಾರೆ. ಉತ್ತಮ ಪರ್ಫಾಮೆನ್ಸ್ ಮತ್ತು ಲುಕ್ ನೋಡುವ ಬೈಕ್ ಪ್ರಿಯರಿಗೆ ಈ ವಿಭಾಗದಲ್ಲಿ ಸಾಕಷ್ಟು ಮಾದರಿಗಳಿವೆ.

ಭಾರತದಲ್ಲಿ 350 ಸಿಸಿ ಬೈಕ್ ಎಂದಾಕ್ಷಣ ಎಲ್ಲರ ಮೆದುಳಿಗೆ ಹೊಳೆಯುವುದು ರಾಯಲ್ ಎನ್ಫೀಲ್ಡ್, ಈ ಕಂಪನಿಯು ದೇಶದಲ್ಲಿ ತನ್ನದೇ ಆದ ಪ್ರತ್ಯೇಕತೆಯನ್ನು ಹೊಂದುವ ಮೂಲಕ ಗುರ್ತಿಸಿಕೊಂಡಿದೆ. ಈ ವಿಭಾಗದಲ್ಲಿ ಗ್ರಾಹಕರಿಗೆ ಸಮಾಧಾನಕರ ಮಾದರಿಗಳನ್ನು ನೀಡುತ್ತಾ ಹಲವು ವರ್ಷಗಳಿಂದ ಮಾರಾಟದಲ್ಲಿ ಉತ್ತಮ ಬೆಳವಣಿಗೆ ಸಾಧಿಸುತ್ತಲೇ ಬಂದಿದೆ.

350 ಸಿಸಿ ಹಾಗೂ ಅದಕ್ಕಿಂತ ಹೆಚ್ಚು ಸಿಸಿ ಹೊಂದಿರುವ ವಿಭಾಗದಲ್ಲಿ ಕಳೆದ ಏಪ್ರಿಲ್ ಮಾರಾಟದಲ್ಲಿ ಟಾಪ್ 4 ನಲ್ಲಿ ರಾಯಲ್ ಎನ್ಫೀಲ್ಡ್ ಮಾದರಿಗಳಿದ್ದು, ಉಳಿದಂತೆ ಇತರ ಬ್ರಾಂಡ್‌ಗಳು 5-6 ಸ್ಥಾನಗಳನ್ನು ಗಳಿಸಿವೆ. ಒಟ್ಟಾರೆ ಎಷ್ಟು ಬೈಕ್‌ಗಳು ಮಾರಾಟವಾಗಿವೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಈ ವಿಭಾಗದಲ್ಲಿ ಏಪ್ರಿಲ್ ತಿಂಗಳವೊಂದರಲ್ಲೇ ಒಟ್ಟು 51,827 ಬೈಕ್‌ಗಳು ಮಾರಾಟವಾಗಿದ್ದು, ಇದೇ ತಿಂಗಳ 2021ರಲ್ಲಿ ಒಟ್ಟು 47,650 ವಾಹನಗಳು ಮಾರಾಟವಾಗಿವೆ. ಒಂದೇ ವರ್ಷದಲ್ಲಿ ಶೇ.8.77ರಷ್ಟು ಹೆಚ್ಚಳವಾಗಿದೆ. ಕಳೆದ ಮಾರ್ಚ್ ನಲ್ಲಿ ಈ ವಿಭಾಗದಲ್ಲಿ 55,432 ಬೈಕ್‌ಗಳು ಮಾರಾಟವಾಗಿವೆ. ಕಳೆದ ತಿಂಗಳಿಗೆ ಹೋಸಿಕೊಂಡರೆ ಶೇ.6.5ರಷ್ಟು ಇಳಿಕೆಯಾಗಿದೆ.

ರಾಯಲ್ ಎನ್‌ಫೀಲ್ಡ್‌ನ ಕ್ಲಾಸಿಕ್ 350 ಬೈಕ್ ಈ ವಿಭಾಗದಲ್ಲಿ ಅರ್ಧಕ್ಕಿಂತ ಹೆಚ್ಚು ಮಾರುಕಟ್ಟೆಯನ್ನು ವಶಪಡಿಸಿಕೊಂಡಿದೆ. ಕಳೆದ ಏಪ್ರಿಲ್‌ನಲ್ಲಿ ನಿರ್ದಿಷ್ಟ ವಿಭಾಗದಲ್ಲಿ ಬೈಕ್ ಶೇ.62.85 ಪಾಲನ್ನು ಹೊಂದಿತ್ತು. ಕಳೆದ ತಿಂಗಳೊಂದರಲ್ಲೇ 32,575 ಬೈಕ್‌ಗಳು ಮಾರಾಟವಾಗಿವೆ.

ಕಳೆದ ವರ್ಷ ಏಪ್ರಿಲ್‌ನಲ್ಲಿ 23,298 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಈ ಮೂಲಕ 39.82ರಷ್ಟು ಹೆಚ್ಚಳವಾಗಿದೆ. ಆದರೆ ಏಪ್ರಿಲ್ ಮಾರಾಟವು ಮಾರ್ಚ್ ಮಾರಾಟಕ್ಕಿಂತ ಶೇಕಡಾ 0.36 ರಷ್ಟು ಕಡಿಮೆಯಾಗಿದೆ. ಈ ಬೈಕ್ ಮಾರುಕಟ್ಟೆಯಲ್ಲಿ 1.90 ಲಕ್ಷದಿಂದ 2.20 ಲಕ್ಷ ರೂ.ವರೆಗೆ ಮಾರಾಟವಾಗುತ್ತಿದೆ.

ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಇದೇ ರಾಯಲ್ ಎನ್‌ಫೀಲ್ಡ್ ಕಂಪನಿಯ ಬುಲೆಟ್ 350 ಬೈಕ್ ಇದೆ. ಕಳೆದ ಏಪ್ರಿಲ್ ನಲ್ಲಿ ಒಟ್ಟು 7,513 ಬೈಕ್ ಗಳು ಮಾರಾಟವಾಗಿವೆ. ಕಳೆದ ವರ್ಷ ಏಪ್ರಿಲ್‌ನಲ್ಲಿ 9,908 ಬೈಕ್‌ಗಳನ್ನು ಮಾರಾಟ ಮಾಡಿತ್ತು. ಪ್ರಸ್ತುತ ಮಾರಾಟದಲ್ಲಿ ಶೇ.24.17ರಷ್ಟು ಇಳಿಕೆಯಾಗಿದೆ. ಈ ವರ್ಷಾಂತ್ಯದಲ್ಲಿ ಹೊಸ ಬುಲೆಟ್ ಬೈಕ್ ಬಿಡುಗಡೆಯಾಗುತ್ತಿದ್ದಂತೆ ಮಾರಾಟದಲ್ಲಿ ಕುಸಿತ ಉಂಟಾಗಿದೆ ಎನ್ನಲಾಗಿದೆ.

ರಾಯಲ್ ಎನ್‌ಫೀಲ್ಡ್‌ನ ಮೀಟಿಯರ್ ಬೈಕ್ ಕೂಡ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಕಳೆದ ತಿಂಗಳ ಏಪ್ರಿಲ್ ನಲ್ಲಿ ಒಟ್ಟು 4,617 ಬೈಕ್ ಗಳು ಮಾರಾಟವಾಗಿವೆ. ಇದೇ ಬೈಕ್ ಕಳೆದ ವರ್ಷ ಏಪ್ರಿಲ್‌ನಲ್ಲಿ ಒಟ್ಟು 7,844 ಬೈಕ್‌ಗಳ ಮಾರಾಟವನ್ನು ಹೊಂದಿದ್ದು, ಅದೇ ವರ್ಷದಲ್ಲಿ ಶೇಕಡಾ 41.14 ರಷ್ಟು ಕಡಿಮೆಯಾಗಿದೆ. ಈ ಬೈಕ್ ಅನ್ನು ಇತ್ತೀಚೆಗೆ ನವೀಕರಿಸಲಾಗಿದ್ದು ಬೆಲೆಯು 5,000 ರೂ.ಗೆ ಇಳಿಕೆಯಾಗಿದೆ.

ಎಲೆಕ್ಟ್ರಾ 350 ಬೈಕ್ ಈ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಇದು ಒಟ್ಟು 3,918 ಬೈಕ್‌ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ಇದು 3,631 ಮಾರಾಟ ಮಾಡಿದ್ದು ಈ ಮೂಲಕ 7.90 ರಷ್ಟು ಬೆಳವಣಿಗೆಯಾಗಿದೆ. ಪಟ್ಟಿಯ ಕೆಳಭಾಗದಲ್ಲಿ ಹೋಂಡಾದ CB350 ಬೈಕ್ ಇದೆ. ಇದು ಒಟ್ಟು 3,204 ಬೈಕ್‌ಗಳು ಮಾರಾಟವಾಗಿವೆ. ಕಳೆದ ವರ್ಷ ಏಪ್ರಿಲ್ ನಲ್ಲಿ 2,969 ಬೈಕ್ ಗಳು ಮಾತ್ರ ಮಾರಾಟವಾಗಿದ್ದವು. ಈ ಮೂಲಕ ಶೇ 7.92 ರಷ್ಟು ಬೆಳವಣಿಗೆಯಾಗಿದೆ.

ಆದರೆ ವಿದೇಶಿ ರಫ್ತು ಮಾರುಕಟ್ಟೆಯಲ್ಲಿ ಪರಿಸ್ಥಿತಿ ವ್ಯತಿರಿಕ್ತವಾಗಿದ್ದು, ಹೋಂಡಾ CB350 ಬೈಕ್ ರಫ್ತಿನಲ್ಲಿ ನಂಬರ್ 1 ಬೈಕ್ ಆಗಿದೆ. CB350 ಒಟ್ಟು 2,221 ಬೈಕ್‌ಗಳು, ಕ್ಲಾಸಿಕ್ 350 ಒಟ್ಟು 1797 ಬೈಕ್‌ಗಳು, ಮೀಟಿಯರ್ 350 ಒಟ್ಟು 1,138 ಬೈಕ್‌ಗಳು ಮತ್ತು ಬುಲೆಟ್ 350 7 ಬೈಕ್‌ಗಳನ್ನು ಈ ವಿಭಾಗದಲ್ಲಿ ರಫ್ತು ಮಾಡಿದೆ.