ಸ್ಕ್ರ್ಯಾಂಬ್ಲರ್ 650 ಸೇರಿ ಮುಂಬರುವ ರಾಯಲ್ ಎನ್‌ಫೀಲ್ಡ್ 5 ಸೂಪರ್ ಮೋಟಾರ್‌ಸೈಕಲ್‌ಗಳಿವು!

ದೇಶೀಯ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್‌ಗಳು ತನ್ನ ಹಲವು ವೈಶಿಷ್ಟ್ಯಗಳಿಂದ ಯುವ ಜನರನ್ನು ಹೆಚ್ಚು ಆಕರ್ಷಿಸುತ್ತವೆ. ಇತ್ತೀಚೆಗೆ ಭಾರತದಲ್ಲಿ ಸೂಪರ್ ಮೆಟಿಯರ್ 650 ಸರಣಿ ಮೋಟಾರ್‌ಸೈಕಲ್‌ಗಳನ್ನು ರಾಯಲ್ ಎನ್‌ಫೀಲ್ಡ್ ಬಹಿರಂಗಪಡಿಸಿತ್ತು. ಇವು ತಕ್ಷಣವೇ ಗ್ರಾಹಕರ ಗಮನ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದವು.

ರಾಯಲ್ ಎನ್‌ಫೀಲ್ಡ್ ಕಂಪನಿಯು ದೇಶ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತನ್ನ ಮೋಟಾರ್‌ಸೈಕಲ್‌ ಮಾರಾಟದದಿಂದ ಅತ್ಯುತ್ತಮ ವೇಗದಲ್ಲಿ ಪ್ರಗತಿ ಸಾಧಿಸುತ್ತಿದೆ ಎಂದು ಹೇಳಬಹುದು. ಕೆಲವು ಹೊಸ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್‌ಗಳಿಗಿಂತ ಹೆಚ್ಚಿನ ವೈಶಿಷ್ಟ್ಯಗಳಿರುವ ಇನ್ನೂ ಹಲವು ಬೈಕ್ ಅಭಿವೃದ್ಧಿಪಡಿಸುತ್ತಿರುವುದರಿಂದ ಮುಂಬರುವ ವರ್ಷಗಳಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿ ಇನ್ನಷ್ಟು ಬೆಳವಣಿಗೆ ಸಾಧಿಸಲಿದೆ ಎಂಬುದನ್ನು ನಿರೀಕ್ಷೆ ಮಾಡಲಾಗಿದೆ. ಪ್ರಸ್ತುತ ಅಭಿವೃದ್ಧಿಪಡಿಸಲಾಗುತ್ತಿರುವ 5 ಸೂಪರ್ ಅತ್ಯಾಕರ್ಷಕ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್‌ಗಳು ಇಲ್ಲಿವೆ.

ರಾಯಲ್ ಎನ್‌ಫೀಲ್ಡ್ ಬುಲೆಟ್
ಅತ್ಯಂತ ಹಳೆಯ ಹೆಸರಿರುವ ಮೋಟಾರ್‌ಸೈಕಲ್‌ಗಳಲ್ಲಿ ರಾಯಲ್ ಎನ್‌ಫೀಲ್ಡ್ ಬುಲೆಟ್ ಸಹ ಒಂದಾಗಿದೆ. ಈ ಮಾದರಿಯು ಉತ್ಪಾದನೆಯಲ್ಲಿ ಕಂಪನಿಯು ತನ್ನದೇ ಆದ ದಾಖಲೆಯನ್ನು ಹೊಂದಿದೆ. ಪ್ರಸ್ತುತ, ರಾಯಲ್ ಎನ್‌ಫೀಲ್ಡ್ ಇತ್ತೀಚಿನ ಜೆ-ಸಿರೀಸ್ ಪ್ಲಾಟ್‌ಫಾರ್ಮ್ ಆಧರಿಸಿ ಎಲ್ಲಾ ಹೊಸ ಬುಲೆಟ್ 350 ಮೋಟಾರ್‌ಸೈಕಲ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಇದಲ್ಲದೆ, ಮೋಟಾರ್‌ಸೈಕಲ್‌ನ ಹಲವಾರು ಸ್ಪೈ ಶಾಟ್‌ಗಳು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಮುಂಬರುವ ಬುಲೆಟ್ ಸಿಂಗಲ್-ಪೀಸ್ ಸೀಟ್, ರೌಂಡ್ ಹೆಡ್‌ಲ್ಯಾಂಪ್‌ಗಳು ಸೇರಿದಂತೆ ಹಲವಾರು ವೈಶಿಷ್ಟ್ಯ ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450
ಮುಂಬರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಅನ್ನು ಕೆಟಿಎಂ 390 ಅಡ್ವೆಂಚರ್, ಬಿಎಂಡಬ್ಲ್ಯು ಜಿ 310 ಜಿಎಸ್, ಮತ್ತು ಜೋಂಟೆಸ್ 350 ಟಿ ಮುಂತಾದ ಹೆಚ್ಚು ಪವರ್ ಫುಲ್ ಅಡ್ವೆಂಚರ್ ಮೋಟಾರ್‌ಸೈಕಲ್‌ಗಳಿಗೆ ರಾಯಲ್ ಎನ್‌ಫೀಲ್ಡ್‌ ಹಿಮಾಲಯನ್ 450 ಉತ್ತರವೆಂದು ಪರಿಗಣಿಸಬಹುದು. 450 ಹೆಚ್ಚು ಶಕ್ತಿಶಾಲಿ, 450 ಸಿಸಿ, ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ ಸುಮಾರು 40 bhp ಗರಿಷ್ಠ ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 650
ರಾಯಲ್ ಎನ್‌ಫೀಲ್ಡ್ ಪ್ರಸ್ತುತ 650ಸಿಸಿ, ಪ್ಯಾರಲಲ್-ಟ್ವಿನ್ ಎಂಜಿನ್‌ನೊಂದಿಗೆ 'ಹಿಮಾಲಯನ್' ಬೈಕ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಈ ಮೋಟಾರ್‌ಸೈಕಲ್ ಲಾಂಗ್ ಅಡ್ವೆಂಚರ್ ಟೂರರ್ ಮೋಟಾರ್‌ಸೈಕಲ್‌ಗಾಗಿ ಹುಡುಕುತ್ತಿರುವ ಗ್ರಾಹಕರನ್ನು ಚೆನ್ನಾಗಿ ಆಕರ್ಷಿಸುವ ಸಾಧ್ಯತೆ ಎಂದು ಹೇಳಲಾಗಿದೆ. ಇದಲ್ಲದೆ, ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 650 ಮೋಟಾರ್‌ಸೈಕಲ್‌ನ ಬಿಡುಗಡೆಯು ಕಂಪನಿಗೆ ಅಂತರರಾಷ್ಟ್ರೀಯ ಅಡ್ವೆಂಚರ್ ಮೋಟಾರ್‌ಸೈಕ್ಲಿಂಗ್ ವಲಯದಲ್ಲಿ ಸಾಕಷ್ಟು ಮಾನ್ಯತೆ ತಂದುಕೊಡುವ ಸಾಧ್ಯತೆ ಇದೆ ಎಂದು ಹೇಳಬಹುದು.

ರಾಯಲ್ ಎನ್‌ಫೀಲ್ಡ್ ಸ್ಕ್ರ್ಯಾಂಬ್ಲರ್ 650
ನಮಗೆ ತಿಳಿದಿರುವಂತೆ, ರಾಯಲ್ ಎನ್‌ಫೀಲ್ಡ್‌ನ 650 ಸಿಸಿ, ಪ್ಯಾರಲಲ್-ಟ್ವಿನ್ ಎಂಜಿನ್, ವರ್ಸಟೈಲ್ ಪವರ್‌ಟ್ರೇನ್ ಹೊಂದಿದೆ. ಈ ಮೋಟಾರ್‌ಸೈಕಲ್ ಅನ್ನು ಕೆಲವು ಬಾರಿ ಪರೀಕ್ಷಿಸಲಾಗಿದೆ. ಈ ಬೈಕ್, ಟು-ಇನ್-ಒನ್ ಎಕ್ಸಾಸ್ಟ್ ಸಿಸ್ಟಮ್ ಅನ್ನು ಪಡೆದಿದ್ದು. ಸ್ಕ್ರಾಂಬ್ಲರ್ ಜೂನ್ 2023ರ ವೇಳೆಗೆ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಸ್ಕ್ರ್ಯಾಂಬ್ಲರ್ 650 ಬೆಲೆ 3.50 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಆಗಿರಬಹುದು.

ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 650
ಭಾರತ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಮೋಟಾರ್‌ಸೈಕಲ್‌ನ ಫುಲ್-ಫೇರ್ಡ್ ವರ್ಷನ್ ಅನ್ನು ಕೆಲವು ಭಾರಿ ಪರೀಕ್ಷೆಗೆ ಒಳಪಡಿಸಲಾಗಿದೆ. ಇದಲ್ಲದೆ, ಈ ಮಾದರಿಯು ಉತ್ತಮ ಏರೋಡೈನಾಮಿಕ್ಸ್ ಅನ್ನು ಹೊಂದಿಲ್ಲ. ಆದರೆ, ಇದರ ಸೇರ್ಪಡೆಯ ಪರಿಣಾಮ ಇದು ಹೆಚ್ಚಿನ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಲಿದೆ ಎಂದು ಅಂದಾಜಿಸಲಾಗಿದೆ. ಈ ಕಾಂಟಿನೆಂಟಲ್ ಜಿಟಿ 650 ಅಲಾಯ್ ವೀಲ್‌ಗಳು ಮತ್ತು ಎಲ್ಇಡಿ ಲೈಟಿಂಗ್ ಅನ್ನು ಹೊಂದಿದೆ.

ರಾಯಲ್ ಎನ್‌ಫೀಲ್ಡ್ ಕಂಪನಿಯ ಮುಂಬರುವ ವರ್ಷಗಳಲ್ಲಿ ಇನ್ನೂ ಹಲವು ಸರಣಿಯಲ್ಲಿ ಹೊಸ ಮೋಟಾರ್‌ಸೈಕಲ್‌ಗಳನ್ನು ತನ್ನ ಗ್ರಾಹಕರಿಗೆ ಒದಗಿಸುವ ಮೂಲಕ ದೇಶ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿಯೂ ತನ್ನ ಬಲವಾದ ಅಸ್ತಿತ್ವವನ್ನು ಹೊಂದುವ ಸಾಧ್ಯತೆ ಇದೆ. ಅಲ್ಲದೆ, ರಾಯಲ್ ಎನ್‌ಫೀಲ್ಡ್ ತನ್ನ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳನ್ನು ಭವಿಷ್ಯಕ್ಕಾಗಿ ಸಿದ್ಧಪಡಿಸುತ್ತಿದೆ. ಅದರ ಮೂಲ ಮಾದರಿ ಚಿತ್ರವು ಇತ್ತೀಚೆಗೆ ಸೋರಿಕೆಯಾಗಿತ್ತು. ಸದ್ಯ ಕಂಪನಿಯು ತನ್ನ ಬೆಳವಣಿಗೆಯನ್ನು ಸಾಧಿಸಲು ಈ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಹೇಳಬಹುದು.

Most Read Articles

Kannada
English summary
5 upcoming royal enfield super motorcycles including scrambler 650
Story first published: Monday, December 5, 2022, 13:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X