ಅಡ್ವೆಂಚರ್ ಅಂದ್ರೆ ಹೀಗಿರಬೇಕು...ಒಂದೇ ಸಮನೆ ಪರ್ವತವೇರಿ ನೋಡುಗರ ಹುಬ್ಬೇರಿಸಿದ ರೈಡರ್
ಕಾರು ಅಥವಾ ಮೋಟಾರ್‌ಸೈಕಲ್‌ಗಳನ್ನು ಆಫ್-ರೋಡ್‌ನಲ್ಲಿ ಓಡಿಸಲು ವಿಶೇಷ ಕೌಶಲ್ಯ ಇರಬೇಕು. ಏಕೆಂದರೆ ಆಫ್‌ರೋಡ್‌ಗಳು ಥಾರ್ ರೋಡಿನಂತೆ ಆರಾಮದಾಯಕ ರೈಡ್ ನೀಡುವುದಿಲ್ಲ. ಸ್ವಲ್ಪ ಯಾಮಾರಿದರೂ ವಾಹನ ಸಮೇತ ಬಿದ್ದು ಪೆಟ್ಟು ಮಾಡಿಕೊಳ್ಳುವುದು ಖಚಿತ. ಹಾಗಾಗಿ ರೈಡರ್‌ಗೆ ಅಗತ್ಯವಿರುವ ಕೌಶಲ್ಯಗಳು ಚಾಲನೆ ಮಾಡುವ ಭೂಪ್ರದೇಶದ ತೊಂದರೆ ಮಟ್ಟಕ್ಕೆ ನೇರವಾಗಿ ಅನುಪಾತದಲ್ಲಿರುತ್ತವೆ.
ಇದೇ ರೀತಿಯ ಆಫ್‌ರೋಡ್ ರೈಡಿಂಗ್ ಪ್ರದರ್ಶನದಲ್ಲಿ, ಮೋಟಾರ್ ಸೈಕಲ್ ಸವಾರನೊಬ್ಬನ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಲೊ+ವೈರಲ್ ಎಂಬ ಹೆಸರಿನ ಖಾತೆಯು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ಮೋಟರ್ ಸೈಕ್ಲಿಸ್ಟ್ ಅತ್ಯಂತ ಕಡಿದಾದ, ನೇರವಾದ ಪರ್ವತವನ್ನು ಹತ್ತುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಸವಾರನು ಜಾರು ಪರ್ವತದ ಮೇಲೆ ಬೈಕ್ ಅನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿರುವ ಪ್ರೊಫೆಷನಲ್ ರೈಡರ್ ಎಂದು ತೋರುತ್ತಿದೆ.

"ಕೆಲವೊಮ್ಮೆ ಅಸಾಧ್ಯವೂ ಸಾಧ್ಯ" ಎಂಬ ಶೀರ್ಷಿಕೆಯೊಂದಿಗೆ ಲೊ+ವೈರಲ್ ಅಕೌಂಟ್ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ವಿಡಿಯೋವನ್ನು ಈಗಾಗಲೇ 374,000 ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಇನ್ನೂ ಹೆಚ್ಚಿನ ವೀಕ್ಷಣೆಗಳನ್ನು ಪಡೆಯುತ್ತಲೇ ಇದೆ. ಅದೇ ಸಮಯದಲ್ಲಿ ಈ ವಿಡಿಯೋಗೆ ಲೈಕ್‌ಗಳು ಹೆಚ್ಚಾಗುತ್ತಿವೆ, ಇದುವರೆಗೂ 11,000 ಕ್ಕೂ ಹೆಚ್ಚು ಲೈಕ್‌ಗಳನ್ನು ಈ ವಿಡಿಯೋ ಪಡೆದುಕೊಂಡಿದೆ. ವಿಮಾನ ಹಾರಿದಂತೆ ಮೋಟಾರ್ ಸೈಕಲ್ ಪರ್ವತವನ್ನು ಏರುವುದು ವಿಡಿಯೋದಲ್ಲಿ ಅದ್ಬುತವಾಗಿ ಕಾಣುತ್ತದೆ.
ಮೋಟಾರ್‌ಸೈಕಲ್ ವೇಗವಾಗಿ ಚಲಿಸುತ್ತಿರುವುದನ್ನು ತೋರಿಸುವ ಮೂಲಕ ಪ್ರಾರಂಭವಾಗುವ ವಿಡಿಯೋ, ನಂತರ ಪರ್ವತದ ಮೇಲೆ ಏರಲು ಪ್ರಾರಂಭಿಸುತ್ತದೆ. ಸ್ಪಷ್ಟವಾಗಿ ಗೋಚರಿಸದಿದ್ದರೂ, ಬೈಕ್ ಸವಾರ ರ್ಯಾಲಿ ಬೈಕ್ ಬಳಸುತ್ತಿರುವಂತೆ ತೋರುತ್ತಿದೆ. ಇದಲ್ಲದೆ, ಪರ್ವತದ ಮೇಲಿನ ಗುರುತುಗಳಿಂದಾಗಿ ಪರ್ವತದ ಮೇಲ್ಮೆಯನ್ನು ಅಷ್ಟು ಸ್ಪಷ್ಟವಾಗಿ ನೋಡಲು ಸಾಧ್ಯವಾಗುವುದಿಲ್ಲ. ಆದರೆ ಈ ಪರ್ವತ ಸಂಪೂರ್ಣ ಕಲ್ಲು, ಬಂಡೆಗಳಿಂದ ಕೂಡಿರುವುದಾಗಿ ಪರ್ವತದ ಬಗ್ಗೆ ತಿಳಿದಿರುವ ಹಲವರು ಕಮೆಂಟ್ ಮಾಡಿದ್ದಾರೆ.
ವಿಡಿಯೋ ಚಲಿಸುತ್ತಿದ್ದಂತೆ, ಆರಂಭದಲ್ಲಿ ಅರ್ಧದಷ್ಟು ಪರ್ವತವನ್ನು ಏರಲು ತೋರುತ್ತಿದ್ದ ಬೈಕರ್ ಸ್ವಲ್ಪ ಕಷ್ಟಪಡುತ್ತಿರುವಂತೆ ತೋರುತ್ತದೆ. ಬೈಕ್ ಸವಾರ ಅರ್ಧದಾರಿಯಲ್ಲಿ ಸಾಗಿದ ಮೇಲೆ ಬೈಕ್ ಎರಡು ಕಡೆ ಸ್ಕಿಡ್ ಆಗುತ್ತದೆ. ಸವಾರಿ ಎಷ್ಟೇ ಕಷ್ಟಕರವಾಗಿದ್ದರೂ, ಬೈಕರ್ ತನ್ನ ಗುರಿಯನ್ನು ಸಾಧಿಸುತ್ತಾನೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಭಾರೀ ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ. ರೈಡರ್ ಸಾಧಿಸಿದ ಸಾಧನೆಯಿಂದ ಹಲವರು ಆಶ್ಚರ್ಯಚಕಿತರಾಗಿದ್ದರೆ, ಹಲವರು ಇದನ್ನು ಮಾಡುವ ಅಗತ್ಯವೇನು ಎಂದು ಪ್ರಶ್ನಿಸುತ್ತಿದ್ದಾರೆ.
ಏನೇ ಆಗಲಿ ಇವೆಲ್ಲವೂ ಕೇವಲ ಒಂದು ಕ್ರೇಜ್‌ಗಾಗಿ ಮಾಡಲಾಗುತ್ತದೆ. ಇದಕ್ಕೆ ಹಲವರು ವಿರೋಧ ವ್ಯಕ್ತಿಪಡಿಸಿ ಪ್ರಶ್ನಿಸಿದರೆ, ಇನ್ನೂ ಕೆಲವರು ಪ್ರೋತ್ಸಾಹ ನೀಡಿ ಪ್ರಶಂಸಿಸುತ್ತಿದ್ದಾರೆ. ಇಂತಹ ಸಾಹಸಗಳನ್ನು ಎಲ್ಲರೂ ಮಾಡಲು ಸಾಧ್ಯವಿಲ್ಲ ಇವು ಕೇವಲ ಅನುಭವಿ ರೈಡರ್‌ಗಳು ಮಾತ್ರ ಮಾಡಲು ಸಾಧ್ಯ. ಇಂತಹ ಹೊಸ ಸಾಹಸಗಳನ್ನು ಡ್ರೈವ್‌ಸ್ಪಾರ್ಕ್ ತಂಡವು ಪ್ರಶಂಸಿಸುತ್ತದೆ. ಏಕೆಂದರೆ ನಮ್ಮ ಟೀಂ ಸಂಪೂರ್ಣ ಆಟೋ ಮೋಟಿವ್ ವಿಭಾಗಕ್ಕೆ ಸಂಬಂಧಿಸಿರುವುದರಿಂದ ಎಲ್ಲಾ ರೀತಿಯ ವಾಹನ ಸಂಬಂಧಿತ ವಿಷಯಗಳಿಗೆ ಸಪೋರ್ಟ್ ಮಾಡುತ್ತದೆ.
ನಮ್ಮ ಡ್ರೈವ್‌ಸ್ಪಾರ್ಕ್ ವೆಬ್ ತಾಣವು ಇಂತಹ ಪ್ರತಿಯೊಂದು ಸುದ್ದಿಯನ್ನು ಬಹಳ ಆಸಕ್ತಿದಾಯಕವಾಗಿ ವಿವರಿಸುತ್ತದೆ. ಕರ್ನಾಟಕದ ಬಹುತೇಕ ಆಟೋ ಪ್ರಿಯರು ನಮ್ಮ ಎಲ್ಲಾ ಸೋಷಿಯಲ್ ಮೀಡಿಯಾಗಳನ್ನು ಫಾಲೋ ಮಾಡುವ ಮೂಲಕ ಪ್ರೋತ್ಸಾಹಿಸುತ್ತಿದ್ದಾರೆ. ಇಂತಹ ಇನ್ನೂ ಹಲವು ಅಡ್ವೆಂಚರ್ ಕುರಿತ ಸುದ್ದಿಗಳನ್ನು ಓದಲು ನಿಮಗೆ ಆಸಕ್ತಿ ಇದ್ದಲ್ಲಿ ನಮ್ಮ ಸಾಮಾಜಿಕ ಜಾಲತಾಣ ಮಾಧ್ಯಮಗಳಲ್ಲಿ ನಮ್ಮ ಸುದ್ದಿಗಳಿಗೆ ಕಮೆಂಟ್ ಮಾಡಿ ತಿಳಿಸಿ. ಇಂತಹ ಇನ್ನು ಹಲವು ಸುದ್ದಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ.


Click it and Unblock the Notifications