Just In
- 1 hr ago
ಇಂದಿನಿಂದ ಸ್ಕಾರ್ಪಿಯೋ-ಎನ್ ಕಾರು ಮಾದರಿಯ ಟೆಸ್ಟ್ ಡ್ರೈವ್ ಆರಂಭಿಸಿದ ಮಹೀಂದ್ರಾ
- 1 hr ago
ಬೈಕ್ ನೀಡಿದ್ದ ಮೊದಲ ದಿನವೇ ಕಣ್ಮರೆಯಾಗಿದ್ದ ಧೋನಿ: ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಶ್ರೀನಿವಾಸನ್
- 1 hr ago
ನೀವು ಖರೀದಿಸಬಹುದಾದ ಅತ್ಯುತ್ತಮ ಸೆಕೆಂಡ್ ಹ್ಯಾಂಡ್ ಆಟೋಮ್ಯಾಟಿಕ್ ಹ್ಯಾಚ್ಬ್ಯಾಕ್ ಕಾರುಗಳಿವು...
- 3 hrs ago
ಮ್ಯಾಗ್ನೈಟ್ ಕಾರು ಮಾದರಿಯಲ್ಲಿ ಪ್ರಮುಖ ವೆರಿಯೆಂಟ್ಗಳನ್ನು ತೆಗೆದುಹಾಕಿದ ನಿಸ್ಸಾನ್
Don't Miss!
- News
ಐಎಎಸ್, ಐಪಿಎಸ್ ಅಧಿಕಾರಿಗಳ ಬಂಧನದ ಹಿಂದೆ ಒಂದೇ ಕಾರಣ?
- Sports
ನತದೃಷ್ಟ ಪಂತ್: ಈತ ಶತಕ ಬಾರಿಸಿದರೆ ಭಾರತಕ್ಕೆ ಸೋಲು ಖಚಿತ ಎನ್ನುತ್ತಿವೆ ಅಂಕಿಅಂಶಗಳು!
- Movies
'ಸ್ಮೋಕಿಂಗ್ ಕಾಳಿ' ಪೋಸ್ಟರ್ ತೆಗೆದುಹಾಕಲು ಕೆನಡಾದ ಭಾರತೀಯ ಹೈಕಮಿಷನ್ ಕೋರಿಕೆ!
- Finance
ಎಲ್ಐಸಿ ಷೇರು ಖರೀದಿಸಲು ಮೋತಿಲಾಲ್ ಓಸ್ವಾಲ್ ಸಲಹೆ
- Technology
ಸಾರ್ವಜನಿಕರೇ ನಿಮ್ಮ ಮನೆ ಮೇಲೆ ಮೊಬೈಲ್ ಟವರ್ ಹಾಕಿಸುವ ಮುನ್ನ ಎಚ್ಚರ?
- Lifestyle
ಮಾನ್ಸೂನ್ ಸಮಯದಲ್ಲಿ ಜೀರ್ಣಕ್ರಿಯೆ ಸುಧಾರಿಸಲು ಇಂಥಾ ಆಹಾರಗಳಿಂದ ದೂರವಿರಿ
- Education
AIFD Recruitment 2022 : 5 ಪ್ಯಾಧ್ಯಾಪಕ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ ಬಜಾಜ್ ಪಲ್ಸರ್ ಬೈಕ್‍ಗಳು
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬಜಾಜ್ ಆಟೋ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಪಲ್ಸರ್ ಎಫ್250 ಮತ್ತು ಪಲ್ಸರ್ ಎನ್250 ಬೈಕ್‍ಗಳಿಗಾಗಿ ಹೊಸ ಬಣ್ಣವನ್ನು ಪರಿಚಯಿಸಿದೆ. ಬಜಾಜ್ ಪಲ್ಸರ್ 250 ಬೈಕ್‍ಗಳು 'ಕೆರಿಬಿಯನ್ ಬ್ಲೂ' ಎಂಬ ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡಿದೆ.

'ಹೊಸ ಕೆರಿಬಿಯನ್ ಬ್ಲೂ ಬಣ್ಣದ ಆಯ್ಕೆಯು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಲಭ್ಯವಿದೆ. ಈ ಬಜಾಜ್ ಪಲ್ಸರ್ ಎಫ್250 ಬೈಕ್ ಬೆಲೆಯು ರೂ.1,44,979 ಗಳಾದರೆ, ಪಲ್ಸರ್ ಎನ್250 ಬೈಕ್ ಬೆಲೆಯು ರೂ.1,43,680 ಗಳಾಗಿದೆ. ಬಾಡಿಯ ಪ್ಯಾನೆಲ್‌ಗಳ ಜೊತೆಗೆ, ಮೋಟಾರ್‌ಸೈಕಲ್‌ನಲ್ಲಿನ ವೀಲ್ ಸ್ಟ್ರಿಪ್‌ಗಳು ಕೆರಿಬಿಯನ್ ಬ್ಲೂ ಬಣ್ಣದ ಸ್ಕೀಮ್ ಅನ್ನು ಸಹ ಹೊಂದಿವೆ. ಇನ್ನು ಬಜಾಜ್ ಆಟೋದ ಪಲ್ಸರ್ 250 ಸರಣಿಯ ಹೊಸ ಬೈಕ್‌ಗಳು ಇತ್ತೀಚೆಗೆ 10,000 ಯುನಿಟ್‌ಗಳ ಮಾರಾಟದ ಗಡಿಯನ್ನು ದಾಟಿವೆ.

ಬಜಾಜ್ ಆಟೋ ಕಂಪನಿಯು ಕಳೆದ ವರ್ಷ ಪಲ್ಸರ್ ಎಫ್250 ಮತ್ತು ಎನ್250 ಎಂಬ ಹೊಸ ಬೈಕ್‍ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಇದರ ಮೂಲಕ ಪಲ್ಸರ್ ಸರಣಿಯನ್ನು ವಿಸ್ತರಿಸಿದೆ. ಹೊಸ ಪಲ್ಸರ್ 250 ರೇಂಜ್ ದೊಡ್ಡ ಮತ್ತು ಪವರ್ ಫುಲ್ ಬೈಕ್‍ಗಳಾಗಿವೆ. ಇದರಲ್ಲಿ ಹೊಸ ಪಲ್ಸರ್ ಎನ್250 ನೇಕೆಡ್ ಸ್ಟ್ರೀಟ್‌ಫೈಟರ್ ಆಗಿದ್ದರೆ, ಪಲ್ಸರ್ ಎಫ್250 ಸೆಮಿ-ಫೇರ್ಡ್ ಬೈಕ್ ಆಗಿದೆ.

ಈ ಬಜಾಜ್ ಪಲ್ಸರ್ ಎಫ್250 ಬೈಕಿನಲ್ಲಿ ಸೆಮಿ-ಫೇರ್ಡ್ ಬೈಕ್ ಆಗಿರುವುದರಿಂದ, ಮುಂಭಾಗದಲ್ಲಿ ಸಣ್ಣ ವಿಸರ್ ಅನ್ನು ಪಡೆಯುತ್ತದೆ ಮತ್ತು ಅದರ ಹಿಂಬದಿಯ ಮೀರರ್ ಬಾಡಿ ಪ್ಯಾನೆಲ್‌ಗಳಲ್ಲಿ ಅಳವಡಿಸಲಾಗಿದೆ. ಇದರಲ್ಲಿ ಎಲ್ಇಡಿ ಪ್ರೊಜೆಕ್ಟರ್ ಯುನಿಟ್ ಹೆಡ್‌ಲೈಟ್ ಕ್ಲಸ್ಟರ್‌ನ ಮಧ್ಯಭಾಗದಲ್ಲಿದೆ ಮತ್ತು ಹೆಚ್ಚಿನ ಮತ್ತು ಲೋ ಬೀಮ್ ಅನ್ನು ಸಂಯೋಜಿಸಲಾಗಿದೆ.

ಬಜಾಜ್ ಪಲ್ಸರ್ ಎಫ್250 ಬೈಕಿನಲ್ಲಿ ರಿವರ್ಸ್-ಬೂಮರಾಂಗ್ ಮತ್ತು ಎಲ್ಇಡಿ ಡಿಆರ್ಎಲ್ ಗಳನ್ನು ಬಲ ಮತ್ತು ಎಡಭಾಗದಲ್ಲಿ ಇರಿಸಲಾಗಿದೆ. ಹೆಡ್‌ಲೈಟ್‌ನ ಮೇಲೆ ಸಣ್ಣ ವಿಸರ್ ಗಾಳಿಯನ್ನು ಸ್ವಲ್ಪ ಮಟ್ಟಿಗೆ ತಡೆಯಲು ಸಹಾಯ ಮಾಡುತ್ತದೆ. ಅಲ್ಲದೇ ಇದು ಬೈಕ್ ಅನ್ನು ಮತ್ತಷ್ಟು ಆಕರ್ಷಕವಾಗಿ ಕಾಣಲು ಇದು ಸಹಾಯ ಮಾಡುತ್ತದೆ.

ಇನ್ನು ಈ ಪಲ್ಸರ್ ಎನ್250 ಬೈಕ್ ಶಾರ್ಪ್ ಮತ್ತು ಸ್ಟೈಲಿಶ್ ಹೆಡ್‌ಲೈಟ್ ಯುನಿಟ್ ಅನ್ನು ಒಳಗೊಂಡಿದೆ. ಹೆಡ್‌ಲೈಟ್ ಕ್ಲಸ್ಟರ್‌ನ ಮಧ್ಯಭಾಗದಲ್ಲಿ ಎಲ್‌ಇಡಿ ಪ್ರೊಜೆಕ್ಟರ್ ಅನ್ನು ನೀಡಲಾಗಿದೆ ಮತ್ತು ಎಲ್‌ಇಡಿ ಡಿಆರ್‌ಎಲ್‌ಗಳನ್ನು ಎರಡೂ ಬದಿಗಳಲ್ಲಿ ನೀಡಲಾಗಿದೆ ಮತ್ತು ಅನಲಾಗ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೆಡ್‌ಲೈಟ್‌ನ ಮೇಲೆ ಇರಿಸಲಾಗಿದೆ. ಇದರ ವಿನ್ಯಾಸವನ್ನು ತೀಕ್ಷ್ಣ ಮತ್ತು ಅಗ್ರೇಸಿವ್ ಆಗಿದೆ.

ಈ ಬಜಾಜ್ ಪಲ್ಸರ್ ಎಫ್250 ಒಂದು ಸೆಮಿ-ಫೇರ್ಡ್ ಬೈಕ್ ಆಗಿದ್ದು, ಇದು ನೇಕೆಡ್ ಪಲ್ಸರ್ ಎನ್250 ಬೈಕ್ ಗಿಂತ ಹೆಚ್ಚು ಸ್ಪೋರ್ಟಿ ಕೊಡುಗೆಯನ್ನು ನೀಡುತ್ತದೆ ಮತ್ತು ಅದೇ ಗುಣಲಕ್ಷಣವು ಎರ್ಗಾನಾಮಿಕ್ಸ್ ನಲ್ಲಿ ಬಹಳ ಸ್ಪಷ್ಟವಾಗಿ ಕಂಡುಬರುತ್ತದೆ. ಎರಡೂ ಬೈಕ್‍ಗಳು ಒಂದೇ ರೀತಿಯ ಫುಟ್‌ಪೆಗ್‌ಗಳು ಮತ್ತು ಸ್ಪ್ಲಿಟ್ ಸೀಟ್‌ಗಳನ್ನು ಪಡೆದರೆ, ಪಲ್ಸರ್ ಎಫ್250 ಎತ್ತರದ ಕ್ಲಿಪ್-ಆನ್ ಹ್ಯಾಂಡಲ್‌ಬಾರ್ ಅನ್ನು ಪಡೆಯುತ್ತದೆ ಮತ್ತು ಹೀಗಾಗಿ ಸ್ಪೋರ್ಟಿ ರೈಡಿಂಗ್ ಪೋಸಿಶನ್ ಹೊಂದಿದೆ,

ಈ ಪಲ್ಸರ್ ಎನ್250 ಸಾಮಾನ್ಯ ಸಿಂಗಲ್-ಪೀಸ್ ಹ್ಯಾಂಡಲ್‌ಬಾರ್ ಅನ್ನು ಪಡೆಯುತ್ತದೆ. ಬಜಾಜ್ ಪಲ್ಸರ್ ಎಫ್250 ಪಲ್ಸರ್ ಎನ್250 ಬೈಕ್ ಗಿಂತ 2 ಕೆಜಿ ಹೆಚ್ಚು ತೂಕವಿದೆ. ಇದು ಪ್ರಾಥಮಿಕವಾಗಿ ಹೆಚ್ಚುವರಿ ಸೆಮಿ-ಫೇರಿಂಗ್ ಪ್ಲಾಸ್ಟಿಕ್ ಬಿಟ್‌ಗಳಿಂದಾಗಿ .ಪಲ್ಸರ್ ಎನ್250 ನೇಕೆಡ್ ಸ್ಟ್ರೀಟ್‌ಫೈಟರ್ ಬೈಕ್ 162 ಕೆಜಿ ತೂಕವನ್ನು ಹೊಂದಿದೆ. ಆದರೆ ಸೆಮಿ-ಫೇರ್ಡ್ ಪಲ್ಸರ್ ಎಫ್250 ಬೈಕ್ 164 ಕೆಜಿ ತೂಕವನ್ನು ಹೊಂದಿರಲಿದೆ.

ಈ ಬಜಾಜ್ ಪಲ್ಸರ್ ಎಫ್250 ಬೈಕ್ ಕ್ಲಿಪ್-ಆನ್ ಹ್ಯಾಂಡಲ್‌ಬಾರ್ ಅನ್ನು ಹೊಂದಿದೆ, ಇದರಿಂದಾಗಿ ಸೀಟ್ ಪೋಸಿಶನ್ ನೇರವಾಗಿರುತ್ತದೆ, ಅಂದರೆ ರೈಡರ್ ಮೇಲೆ ನೇರವಾಗಿ ಕುಳಿತುಕೊಳ್ಳಬಹುದು. ಇನ್ನು ಪಲ್ಸರ್ ಎನ್250 ಬೈಕಿನಲ್ಲಿ ಸಿಂಗಲ್ ಪೀಸ್ ಬಾರ್ ಹ್ಯಾಂಡಲ್ ಅನ್ನು ನೀಡಲಾಗಿದೆ, ಇದರಿಂದಾಗಿ ಸೀಟ್ ಪೋಸಿಶನ್ ಅಗ್ರೇಸಿವ್ ಆಗಿದೆ. ಅಂದರೆ ರೈಡರ್ ಸ್ವಲ್ಪ ಹೊರೆಯಾಗಿ ಕುಳಿತುಕೊಳ್ಳಬೇಕಾಗುತ್ತದೆ.

ಹೊಸ ಬಜಾಜ್ ಪಲ್ಸರ್ ಎಫ್250 ಬೈಕಿನಲ್ಲಿ ಲೆನ್ಸ್ ಸ್ವಲ್ಪಮಟ್ಟಿಗೆ ಮುಚ್ಚಲ್ಪಟ್ಟಿದೆ. ಆದರೆ ಪಲ್ಸರ್ ಎನ್250 ಬೈಕಿನಲ್ಲಿ ಪ್ರೊಜೆಕ್ಟರ್ ಲೆನ್ಸ್ ತೆರೆದಿರುತ್ತದೆ. ಆದರೆ ಇದು ಮುಂಚಿರುವಂತೆ ಕಾಣುತ್ತದೆ. ಇದು ಕೂಡ ಕ್ವಾರ್ಟರ್-ಲೀಟರ್ ಪಲ್ಸರ್ ಬೈಕ್‍ಗಳ ನಡುವಿನ ವ್ಯತ್ಯಾಸಗಳಲ್ಲಿ ಒಂದಾಗಿದೆ.

ಈ ಬಜಾಜ್ ಪಲ್ಸರ್ ಎಫ್250 ಮತ್ತು ಪಲ್ಸರ್ ಎನ್250 ಬೈಕ್‍ಗಳಲ್ಲಿ 249ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 24.1 ಬಿಹೆಚ್‍ಪಿ ಪವರ್ ಮತ್ತು 21.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್ ಹಿಂದಿನ ವ್ಹೀಲ್ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್ ಅನ್ನು ಒಳಗೊಂಡಿರುತ್ತದೆ.

ಇನ್ನು ಬಜಾಜ್ ಆಟೋ ಕಳೆದ ಕೆಲವು ತಿಂಗಳುಗಳಿಂದ ತನ್ನ ಪಲ್ಸರ್ ಬೈಕ್‌ಗಳನ್ನು ನವೀಕರಿಸುವುದಾಗಿ ಹೇಳುತ್ತಲೇ ಬಂದಿದೆ. ಇದಕ್ಕೆ ಪುಷ್ಟಿ ನೀಡುವಂತೆ ಇತ್ತೀಚೆಗಷ್ಟೇ ಪುಣೆ ಬಳಿ ಪರೀಕ್ಷಾರ್ಥ ಸಂಚಾರ ನಡೆಸಿದಾಗ ಹೊಸ ತಲೆಮಾರಿನ ಪಲ್ಸರ್ 125 ಬೈಕ್ ಅನ್ನು ಗುರುತಿಸಲಾಗಿತ್ತು. ಈ ಬೈಕ್ ವಿನ್ಯಾಸದಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದ್ದು, ಬಹುತೇಕ ಪಲ್ಸರ್ ಸರಣಿಯ ಅದೇ ಡಿಸೈನ್ ಅನ್ನು ಹಾಗೇ ಉಳಿಸಿಕೊಳ್ಳಲಾಗಿದೆ. ಪರ್ಫಾಮೆನ್ಸ್, ಪವರ್, ಮತ್ತಿತರರ ಬದಲಾವಣೆಗಳು ಆಕರ್ಷಣೀಯವಾಗಿದ್ದು, ಯುವ ಪೀಳಿಗೆಯನ್ನು ತನ್ನತ್ತ ಸೆಳೆಯುವ ತವಕದಲ್ಲಿದೆ

ಇನ್ನು ಬಜಾಜ್ ಪಲ್ಸರ್ ಎನ್250 ಭಾರತೀಯ ಮಾರುಕಟ್ಟೆಯಲ್ಲಿ ಯಮಹಾ FZ25 ಮತ್ತು ಸುಜುಕಿ ಜಿಕ್ಸರ್ ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ. ಕ್ವಾರ್ಟರ್-ಲೀಟರ್ ವಿಭಾಗದಲ್ಲಿ ಕೆಲವು ಇತರ ಬೈಕ್ ಗಳು, ಬಜಾಜ್ ಡೊಮಿನಾರ್ 250, ಕೆಟಿಎಂ 250 ಡ್ಯೂಕ್, ಇತ್ಯಾದಿಗಳನ್ನು ಒಳಗೊಂಡಿವೆ.