ಬೆಂಗಳೂರು ನಂತರ ಹುಬ್ಬಳ್ಳಿಯಲ್ಲೂ ಖರೀದಿಗೆ ಲಭ್ಯವಾದ ಬಜಾಜ್ ಚೇತಕ್ ಇವಿ ಸ್ಕೂಟರ್
ಚೇತಕ್ ಇವಿ ಮಾದರಿಯನ್ನು ಬಿಡುಗಡೆ ಮಾಡಿದ ಆರಂಭದಲ್ಲಿ ಬೆಂಗಳೂರು ಮತ್ತು ಪುಣೆಯಲ್ಲಿ ಮಾತ್ರ ಮಾರಾಟ ಆರಂಭಿಸಿದ್ದ ಬಜಾಜ್ ಆಟೋ ಕಂಪನಿಯು ಇದೀಗ ಗ್ರಾಹಕರ ಬೇಡಿಕೆಯೆಂತೆ ವಿವಿಧ ನಗರಗಳಿಗೆ ವಿಸ್ತರಿಸುತ್ತಿದ್ದು, ಶೀಘ್ರದಲ್ಲಿಯೇ ಒಟ್ಟು 12 ಹೊಸ ನಗರಗಳಲ್ಲಿ ಮಾರಾಟ ಪ್ರಕ್ರಿಯೆ ಆರಂಭಿಸುತ್ತಿದೆ.

ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯ ನಂತರ ವಿವಿಧ ಹೊಸ ನಗರಗಳಲ್ಲಿ ಮಾರಾಟ ವಿಸ್ತರಣೆಯೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿರುವ ಬಜಾಜ್ ಕಂಪನಿಯು ಬೆಂಗಳೂರು ಮತ್ತು ಪುಣೆ ನಂತರ ಈಗಾಗಲೇ ಪ್ರಮುಖ ಎಂಟು ನಗರಗಳಲ್ಲಿ ಮಾರಾಟ ಮಾಡುತ್ತಿದ್ದು, ಕಂಪನಿಯು ಮೂರನೇ ಹಂತ ಮಾರಾಟ ಮಳಿಗೆಗಳ ವಿಸ್ತರಣೆಯಲ್ಲಿ ಹುಬ್ಬಳ್ಳಿ ಸೇರಿದಂತೆ ಒಟ್ಟು 12 ಪ್ರಮುಖ ನಗರಗಳಲ್ಲಿ ಬುಕ್ಕಿಂಗ್ ಆರಂಭಿಸಿದೆ.

ಸದ್ಯ ಮಾರುಕಟ್ಟೆಯಲ್ಲಿನ ಪೆಟ್ರೋಲ್ ಸ್ಕೂಟರ್ ಮಾರಾಟ ಪ್ರಮಾಣಕ್ಕೆ ಹೋಲಿಕೆ ಮಾಡಿದರೆ ಇವಿ ಸ್ಕೂಟರ್ ಮಾರಾಟವು ಶೇ. 2 ಕ್ಕಿಂತಲೂ ಕಡಿಮೆ ಪ್ರಮಾಣದ ಬೇಡಿಕೆಯಿದ್ದು, ಇತ್ತೀಚೆಗೆ ಕೇಂದ್ರ ಸರ್ಕಾರದ ಸಬ್ಸಡಿ ಯೋಜನೆಯಿಂದಾಗಿ ಇವಿ ವಾಹನ ಖರೀದಿದಾರರ ಸಂಖ್ಯೆಯು ನಿಧಾನವಾಗಿ ಏರಿಕೆಯಾಗುತ್ತಿದೆ.

ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಸದ್ಯ ಎಥರ್ ಎನರ್ಜಿ, ಟಿವಿಎಸ್ ಮೋಟಾರ್, ಬಜಾಜ್ ಆಟೋ, ಹೀರೋ ಎಲೆಕ್ಟ್ರಿಕ್ ಮತ್ತು ಒಕಿನಾವ ನಡುವೆ ಉತ್ತಮ ಪೈಪೋಟಿಯಿದ್ದು, ಚೇತಕ್ ಇವಿ ಮಾದರಿಯೊಂದಿಗೆ ಬಜಾಜ್ ಕಂಪನಿಯು ಇತ್ತೀಚೆಗೆ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ.

ಬಜಾಜ್ ಚೇತಕ್ ಇವಿ ಸ್ಕೂಟರ್ ಮಾದರಿಯು ಕಳೆದ ವರ್ಷ ಉತ್ತಮ ಬೇಡಿಕೆ ಪಡೆದುಕೊಂಡಿದ್ದು, ಪೆಟ್ರೋಲ್ ಬೆಲೆ ಹೆಚ್ಚಳ ಪರಿಣಾಮ ಹೊಸ ಸ್ಕೂಟರ್ ಖರೀದಿದಾರರು ಇವಿ ಸ್ಕೂಟರ್ ಬಳಕೆಗೆ ಆದ್ಯತೆ ನೀಡುತ್ತಿದ್ದಾರೆ.

ಹೊಸ ಚೇತಕ್ ಇವಿ ಮಾದರಿಯು ಅರ್ಬೈನ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಎರಡು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಅರ್ಬೈನ್ ಮಾದರಿಯು ಆನ್‌ರೋಡ್ ಪ್ರಕಾರ ರೂ. 1.48 ಲಕ್ಷ ಮತ್ತು ಪ್ರೀಮಿಯಂ ವೆರಿಯೆಂಟ್‌ಗೆ ರೂ. 1.54 ಲಕ್ಷ ಬೆಲೆ ಹೊಂದಿದೆ.

ಸೆಮಿಕಂಡಕ್ಟರ್ ಕೊರತೆಯ ಪರಿಣಾಮ ಕೆಲ ತಿಂಗಳಿನಿಂದ ಹೊಸ ಸ್ಕೂಟರ್ ಬುಕ್ಕಿಂಗ್ ಪ್ರಮಾಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ಬಜಾಜ್ ಕಂಪನಿಯು ಬುಕ್ಕಿಂಗ್ ಪುನಾರಂಭದೊಂದಿಗೆ ವಿವಿಧ ನಗರಗಳಿಗೂ ಮಾರಾಟ ಸೌಲಭ್ಯ ವಿಸ್ತರಿಸಿದ್ದು, ಬಜಾಜ್ ಕಂಪನಿಯು ಸಹ ಮಾರಾಟ ಪಾಲುದಾರ ಕಂಪನಿಯಾದ ಕೆಟಿಎಂ ಶೋರೂಂಗಳ ಮೂಲಕ ಇವಿ ಸ್ಕೂಟರ್ ಮಾರಾಟ ಮಾಡುತ್ತದೆ.

ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು 4kW ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಇಕೋ ಮೋಡ್‍ನಲ್ಲಿ ಪ್ರತಿ ಚಾರ್ಜ್‌ಗೆ 95ಕಿ.ಮೀ ಮತ್ತು ಸ್ಪೋರ್ಟ್ ಮೋಡ್‌ನಲ್ಲಿ ಪ್ರತಿ ಚಾರ್ಜ್‌ಗೆ 85 ಕಿ.ಮೀ ಚಲಿಸುತ್ತದೆ.

ಹೊಸ ಇವಿ ಸ್ಕೂಟರ್‌ನಲ್ಲಿ ಬಜಾಜ್ ಅಪ್ಲಿಕೇಶನ್ ಹೆಚ್ಚು ಅನುಕೂಲಕವಾಗಿದ್ದು, ಈ ಆ್ಯಪ್ ಮೂಲಕ ಲೈವ್ ಟ್ರ್ಯಾಕಿಂಗ್ ಜೊತೆಗೆ ಟ್ರಿಪ್ ಅಂಕಿ ಅಂಶಗಳು, ಬಳಕೆದಾರರ ಮಾಹಿತಿ ಮತ್ತು ಹಲವಾರು ಸುರಕ್ಷತಾ ಫೀಚರ್ಸ್ ಬಳಕೆ ಮಾಡಿಕೊಳ್ಳಬಹುದಾಗಿದೆ.

ಹಾಗೆಯೇ ಹೊಸ ಸ್ಕೂಟರ್‌ನಲ್ಲಿ ರೌಂಡ್ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್, ಶಾರ್ಪ್ ಡಿಸೈನ್, ರೆಟ್ರೋ ಸ್ಟೈಲ್ ಬಾಡಿ ಡಿಸೈನ್, ಹಾರ್ನ್ ಮತ್ತು ಇಂಡಿಕೇಟರ್ ಸ್ವಿಚ್, ಎಲ್ಇಡಿ ಇಂಡಿಕೇಟರ್, ದೊಡ್ಡದಾದ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ರಿರ್ವಸ್ ಅಸಿಸ್ಟ್ ಮೋಡ್‌ನೊಂದಿಗೆ ಮೊಬಿಲಿಟಿ ತಂತ್ರಜ್ಞಾನ ಹೊಂದಿದೆ.

ಚೇತಕ್ ಸ್ಕೂಟರ್ ಮೊದಲ ನೋಟದಲ್ಲಿ ವೆಸ್ಪಾ ಸ್ಕೂಟರ್ನಂತೆ ಕಂಡರೂ ಹಲವಾರು ಫೀಚರ್ಸ್‌ಗಳ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದ್ದು, ಹೊಸ ಸ್ಕೂಟರ್ನಲ್ಲಿ ಬಳಕೆ ಮಾಡಲಾಗಿರುವ ಬ್ಯಾಟರಿಯು ಬರೋಬ್ಬರಿ 70 ಸಾವಿರ ಕಿ.ಮೀ ನಷ್ಟು ಕಾರ್ಯಕ್ಷಮತೆ ಹೊಂದಿದೆ.

ಹೊಸ ಸ್ಕೂಟರ್‌ನಲ್ಲಿ ಸವಾರರ ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್, ಜೀಯೊ ಫೆನ್ಸಿಂಗ್, ವೆಹಿಕಲ್ ಟ್ರಾಕಿಂಗ್ ಸೌಲಭ್ಯಗಳನ್ನು ನೀಡಲಾಗಿದ್ದು, ಪ್ರತಿ 15 ಸಾವಿರ ಕಿ.ಮೀ ಗೆ ಒಂದು ಬಾರಿ ಸರ್ವೀಸ್ ಸೇರಿದಂತೆ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಸೌಲಭ್ಯಗಳನ್ನು ಅಪ್‌ಡೇಟ್ ಮಾಡಲಾಗುತ್ತದೆ.

ಇಂಧನಗಳ ಬೆಲೆ ಹೆಚ್ಚಳ ಮತ್ತು ಇವಿ ವಾಹನಗಳಿಗೆ ನೀಡಲಾಗುತ್ತಿರುವ ಸಬ್ಸಡಿ ಯೋಜನೆಗಳಿಂದಾಗಿ ಇವಿ ವಾಹನ ಮಾರಾಟವು ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಏರಿಕೆಯಾಗಿದ್ದು, ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಸದ್ಯ ಇವಿ ಸ್ಕೂಟರ್ ಬೇಡಿಕೆಯು ಅಗ್ರಸ್ಥಾನದಲ್ಲಿದೆ.

ಕೇಂದ್ರ ಸರ್ಕಾರದ ಫೇಮ್ 2 ಸಬ್ಸಡಿ ಯೋಜನೆ ಹೊರತುಪಡಿಸಿ ವಿವಿಧ ರಾಜ್ಯ ಸರ್ಕಾರಗಳು ರಾಜ್ಯ ಮಟ್ಟದಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಜಿಎಸ್‌ಟಿ ವಿನಾಯ್ತಿ, ಗರಿಷ್ಠ ಸಬ್ಸಡಿ ಮತ್ತು ತೆರಿಗೆ ವಿನಾಯ್ತಿಗಳನ್ನು ನೀಡಲಾಗುತ್ತಿದ್ದು, ವಾಹನ ಉತ್ಪಾದನಾ ಕಂಪನಿಗಳಿಗೂ ಹಲವಾರು ಪ್ರೋತ್ಸಾಹ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಸದ್ಯ ಎಥರ್ ಎನರ್ಜಿ, ಟಿವಿಎಸ್ ಮೋಟಾರ್, ಬಜಾಜ್ ಆಟೋ ಕಂಪನಿಗಳು ಮುಂಚೂಣಿಯಲ್ಲಿದ್ದು, ಕಳೆದ ತಿಂಗಳು ಜನವರಿಯಲ್ಲಿ ಇವಿ ಸ್ಕೂಟರ್ ಮಾರಾಟದಲ್ಲಿ ಮೂರು ಕಂಪನಿಗಳು ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಂಡಿವೆ.

ಎಥರ್ ಎನರ್ಜಿ ಕಂಪನಿಯು ಜನವರಿ ಅವಧಿಯಲ್ಲಿ 2,825 ಯುನಿಟ್ ಮಾರಾಟದೊಂದಿಗೆ ಕಳೆದ ಜನವರಿಗಿಂತಲೂ ಶೇ. 366 ರಷ್ಟು ಬೆಳವಣಿಗೆ ಸಾಧಿಸಿದರೆ ಟಿವಿಎಸ್ ಐಕ್ಯೂಬ್ ಮಾದರಿಯು 1,529 ಯುನಿಟ್ ಮಾರಾಟದೊಂದಿಗೆ ಶೇ.625ರಷ್ಟು ಮತ್ತು ಬಜಾಜ್ ಚೇತಕ್ ಮಾದರಿಯು 1,268 ಯುನಿಟ್ ಮಾರಾಟದೊಂದಿಗೆ ಶೇ.300 ರಷ್ಟು ಹೆಚ್ಚು ಬೆಳವಣಿಗೆ ಸಾಧಿಸಿದೆ.


Click it and Unblock the Notifications








