ಭಾರತದಲ್ಲಿ ಬೆಲೆ ಏರಿಕ ಪಡೆದುಕೊಂಡ Bajaj Dominar ಬೈಕ್‌ಗಳು
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬಜಾಜ್ ಆಟೋ ತನ್ನ ಡೋಮಿನಾರ್ 250 ಮತ್ತು ಡೊಮಿನಾರ್ 400 ಬೈಕ್‌ಗಳ ಬೆಲೆಯನ್ನು ಹೆಚ್ಚಿಸಲಾಗಿದೆ. ಬಜಾಜ್ ಡೋಮಿನಾರ್ 250 ಮತ್ತು ಡೊಮಿನಾರ್ 400 ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಬೈಕ್‌ಗಳಾಗಿವೆ.

ಬಜಾಜ್ ಡೋಮಿನಾರ್ 250 ಬೈಕ್ ಬೆಲೆಯು ಸುಮಾರು ರೂ,5,000 ರಷ್ಟು ದುಬಾರಿಯಾಗಿದ್ದರೆ, ದೊಡ್ಡದಾದ ಡೋಮಿನಾರ್ 400 ಬೈಕಿನ ಬೆಲೆಯ ರೂ.4,500 ರಷ್ಟು ದುಬಾರಿಯಾಗಿದೆ. ಇತ್ತೀಚಿನ ಬೆಲೆ ಏರಿಕೆಯ ನಂತರ,ಬಜಾಜ್ ಡೋಮಿನಾರ್ 250 ಬೈಕಿನ ಬೆಲೆಯು ರೂ,1.64 ಲಕ್ಷಗಳಾದರೆ, ಡೋಮಿನಾರ್ 400 ಬೈಕಿನ ಬೆಲೆಯು ರೂ,2.17 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ,

ಮೊದಲಿಗೆ ಬಜಾಜ್ ಡೋಮಿನಾರ್ 400 ಬೈಕ್ ಬಗ್ಗೆ ಹೇಳುವುದಾದರೆ, ನವೀಕರಿಸಿದ ಬಜಾಜ್ ಈ ಬೈಕ್ ಅನ್ನು ಹಲವು ನವೀಕರಣಳೊಂದಿಗೆ ಕಳೆದ ವರ್ಷ ಬಿಡುಗಡೆಗೊಳಿಸಿತ್ತು. ಬಜಾಜ್ ಡೋಮಿನಾರ್ 400 ಬೈಕ್ ಯಾವಾಗಲೂ ಅದ್ಭುತವಾದ ಟೂರಿಂಗ್ ಬೈಕ್ ಆಗಿದೆ, ಹೊಸ ಬದಲಾವಣೆಗಳೊಂದಿಗೆ ಇದು ಇನ್ನಷ್ಟು ಉತ್ತಮವಾಗಿದೆ.

ನವೀಕರಿಸಿದ ಬಜಾಜ್ ಡೋಮಿನಾರ್ 400 ಬೈಕ್ ಟೂರಿಂಗ್ ಸಾಮರ್ಥ್ಯವನ್ನು ಹೆಚ್ಚಿಸಲು ಫ್ಯಾಕ್ಟರಿ-ಫಿಟೆಡ್ ಟೂರಿಂಗ್ ಅಕ್ಸೆಸರೀಸ್‍ಗಳೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಬಜಾಜ್ ಡೋಮಿನಾರ್ 400 ಬೈಕ್ CFD ತಂತ್ರಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿಪಡಿಸಲಾದ ಎತ್ತರದ ವಿಂಡ್‌ಶೀಲ್ಡ್‌ನೊಂದಿಗೆ ಬರುತ್ತದೆ.

ಇದು ಗಾಳಿಯಿಂದ ರಕ್ಷಣೆಯನ್ನು ನೀಡಲು ವಿನ್ಯಾಸಗೊಳಿಸಲಾಗಿದೆ ಮತ್ತು ಹೀಗಾಗಿ ರೈಡರ್ ಸೌಕರ್ಯವನ್ನು ಸುಧಾರಿಸುತ್ತದೆ. 2022ರ ಬಜಾಜ್ ಡೋಮಿನಾರ್ 400 ಬೈಕ್ ಫ್ಲೆಕ್ಸಿ-ವಿಂಗ್‌ಲೆಟ್‌ಗಳೊಂದಿಗೆ ಜೆಟ್-ಫೈಟರ್ ಪ್ರೇರಿತ ಹ್ಯಾಂಡ್‌ಗಾರ್ಡ್ ಅನ್ನು ಹೊಂದಿದೆ, ಇದು ಗರಿಷ್ಠ ಗಾಳಿಯಿಂದ ರಕ್ಷಣೆಯನ್ನು ನೀಡುತ್ತದೆ ಎಂದು ಹೇಳಲಾಗಿದೆ

ಈ ಬೈಕ್ ಫ್ಯಾಕ್ಟರಿ-ಫಿಟೆಡ್ ಟೂರಿಂಗ್ ಕಿಟ್‌ನೊಂದಿಗೆ ಬರುತ್ತದೆ, ಇದರಲ್ಲಿ ಎತ್ತರದ ವಿಂಡ್‌ಸ್ಕ್ರೀನ್, ಹ್ಯಾಂಡ್‌ಗಾರ್ಡ್‌ಗಳು, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಮತ್ತು ನ್ಯಾವಿಗೇಷನ್ ಸಾಧನಗಳಿಗೆ ಸಂಯೋಜಿತ ಮೌಂಟ್ ಅನ್ನು ಸ್ಟ್ಯಾಂಡರ್ಡ್ ಆಗಿ ಒಳಗೊಂಡಿದೆ. ಹಿಂಭಾಗದ ತುದಿಯಲ್ಲಿ ಲಗೇಜ್ ಕ್ಯಾರಿಯರ್ ಅನ್ನು ಸೇರಿಸಲಾಗಿದೆ, ಜೊತೆಗೆ ಪಿಲಿಯನ್‌ಗೆ ಸಣ್ಣ ಬ್ಯಾಕ್ ರೆಸ್ಟ್ ಅನ್ನು ಸಹ ಒಳಗೊಂಡಿವೆ.

ಆಯ್ಕೆಯ ಆಕ್ಸೆಸರೀಸ್ ಸ್ಯಾಡಲ್‌ಬ್ಯಾಗ್‌ಗಳಿಗೆ ಸ್ಯಾಡಲ್ ಸ್ಟೆ ಅನ್ನು ಒಳಗೊಂಡಿರುತ್ತವೆ, ಇವುಗಳು ಒಂದು ಇಂಜಿಗ್ರೇಟೆಡ್ ಮೆಟಲ್ ಸ್ಕಿಡ್ ಪ್ಲೇಟ್ನೊಂದಿಗೆ ಹೊಸ ಎಂಜಿನ್ ಬ್ಯಾಷ್ ಪ್ಲೇಟ್ ಅನ್ನು ಒಳಗೊಂಡಿವೆ. ಈ ಹೊಸ ಬೈಕಿನಲ್ಲಿ ಉತ್ತಮ ಕ್ರ್ಯಾಶ್ ರಕ್ಷಣೆಗಾಗಿ ಹೊಸ ಲೆಗ್ ಗಾರ್ಡ್ ಅನ್ನು ಹೊಂದಿದೆ. ಇದು ಅಚ್ಚುಕಟ್ಟಾಗಿ ಸಂಯೋಜಿತ ಅಲ್ಯೂಮಿನಿಯಂ ಬಿಲ್ಡ್ ನ್ಯಾವಿಗೇಷನ್ ಸ್ಟೇ ಅನ್ನು ಹೊಂದಿದೆ,

ಈ ಬಜಾಜ್ ಡೋಮಿನಾರ್ 400 ಬೈಕಿನ ಇತರ ಪ್ರಮುಖ ಲಕ್ಷಣಗಳೆಂದರೆ ಪೂರ್ಣ ಎಲ್ಇಡಿ ಹೆಡ್ ಲ್ಯಾಂಪ್ ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಆನ್, ಪೊಸಿಷನ್ ಲ್ಯಾಂಪ್, ಲೋ ಬೀಮ್ ಮತ್ತು ಹೈ ಬೀಮ್ ಅನ್ನು ಒಳಗೊಂಡಿದೆ. ಅಂತರ್ನಿರ್ಮಿತ ಸ್ಟೇರ್ಪ್ಸ್ ಸಹ ಒದಗಿಸಲಾಗಿದೆ, ಇದು ಬೈಕಿನ ಟೂರಿಂಗ್ ಸಾಮರ್ಥ್ಯವನ್ನು ಸುಧಾರಿಸುತ್ತದೆ. ಈ ಬೈಕ್ ವಿಶಾಲವಾದ ಹ್ಯಾಂಡಲ್‌ಬಾರ್‌ಗಳೊಂದಿಗೆ ಆರಾಮದಾಯಕ, ನೇರವಾದ ಸವಾರಿ ನಿಲುವನ್ನು ಹೊಂದಿದೆ, ಇದು ದೂರ ಪ್ರವಾಸದ ಉದ್ದೇಶಗಳಿಗೆ ಸೂಕ್ತವಾಗಿದೆ.

ಡೋಮಿನಾರ್ 400 ಬೈಕಿನಲ್ಲಿ 373.3cc ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ DOHC ಫ್ಯೂಯಲ್-ಇಂಜೆಕ್ಟೆಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 40 ಬಿಹೆಚ್‍ಪಿ ಪವರ್ ಮತ್ತು 35 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ನವೀಕರಿಸಿದ ಬಜಾಜ್ ಡೋಮಿನಾರ್ 400 ಬೈಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಯುಸಎಸ್ಡಿ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸೆಟಪ್ ಅನ್ನು ಒಳಗೊಂಡಿದೆ, ಹಿಂದಿನ ಮಾದರಿಗೆ ಹೋಲಿಸಿದರೆ ಸಸ್ಪೆಂಕ್ಷನ್ ಸೆಟಪ್ ಯಾವುದೇ ಬದಲಾವಣಗೆಳನ್ನು ಕಂಡಿದೆ, ಇನ್ನು ಪ್ರಮುಖವಾಗಿ ನವೀಕರಿಸಿದ ಡೋಮಿನಾರ್ 400 ಟೂರಿಂಗ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗ ಡಿಸ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಇನ್ನು ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ಎಬಿಎಸ್ ಸಿಸ್ಟಂ ಅನ್ನ್ ಒಳಗೊಂಡಿದೆ.

ಇನ್ನು ಬಜಾಜ್ ಪಲ್ಸರ್ 250 ಬೈಕಿನ ಬಗ್ಗೆ ಹೇಳುವುದಾದರೆ, ಹೊಸ 220 ಸಿಸಿ, ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್ ಇಂಜಿನ್ ಅನ್ನು ಹೊಂದಿದೆ.ಈ ಎಂಜಿನ್ 27 ಬಿಎಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ, ಈ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಆಕ್ಸಲ್ಗಳಲ್ಲಿ ಸಾಂಪ್ರದಾಯಿಕ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ. ಇನ್ನು ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಸ್ಟ್ಯಾಂಡರ್ಡ್ ಡ್ಯುಯಲ್-ಚಾನೆಲ್ ಎಬಿಎಸ್ (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ) ಅನ್ನು ಓಳಗೊಂಡಿರುತ್ತದೆ.

ಬಜಾಜ್ ಪಲ್ಸರ್ 250 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಸುಜುಕಿ ಜಿಕ್ಸರ್ 250, ಯಮಹಾ ಎಫ್‌ಜೆಡ್ -25 ಮತ್ತು ಕೆಟಿಎಂ ಡ್ಯೂಕ್ 250 ಬೈಕ್‌ಗಳಿಗೆ ಪೈಪೋಟಿ ನೀಡುತ್ತದೆ. ಇನ್ನು ಬಜಾಜ್ ಡೋಮಿನಾರ್ 250 ಮತ್ತು ಡೊಮಿನಾರ್ 400 ಬೈಕ್‌ಗಳ ಬೆಲೆ ಏರಿಕೆಯು ಮಾರಾಟದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದನ್ನು ಕಾದು ನೋಡಬೇಕು.


Click it and Unblock the Notifications