Just In
Don't Miss!
- Lifestyle
ಆಯುರ್ವೇದ ಔಷಧಿ ಸೇವಿಸುವ ಮುನ್ನ ಈ ಎಚ್ಚರಿಕೆಗಳನ್ನು ನೀವು ತೆಗೆದುಕೊಳ್ಳಲೇಬೇಕು
- News
ಪಲ್ಲವಿ ಡೇ ಬಳಿಕ ಮತ್ತೊಬ್ಬ ಯುವ ರೂಪದರ್ಶಿ ಆತ್ಮಹತ್ಯೆ
- Sports
ಮಹಿಳಾ ಟಿ20 ಚಾಲೆಂಜ್: ವೆಲಾಸಿಟಿ ವಿರುದ್ಧ ಗೆದ್ದ ಟ್ರೈಲ್ಬ್ಲೇಜರ್ಸ್, ಆದ್ರೂ ಫೈನಲ್ ಮಿಸ್
- Finance
ಮೇ 26ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Movies
ಬಾಲಕೃಷ್ಣ 107ನೇ ಸಿನಿಮಾದ ಟೈಟಲ್ 'ಜೈ ಬಾಲಯ್ಯ'
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್ಫೋನ್ ಬಿಡುಗಡೆ! ವಿಶೇಷತೆ ಏನು?
- Education
Karnataka SSLC Revaluation 2022 : ಮರುಮೌಲ್ಯಮಾಪನ ಮತ್ತು ಮರುಎಣಿಕೆಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ ಬಜಾಜ್ ಪಲ್ಸರ್ ಎಫ್250 ಬೈಕ್
ಬಜಾಜ್ ಆಟೊ ಕಂಪನಿಯ ಸರಣಿಯಲ್ಲಿ ಪಲ್ಸರ್ ಎಫ್250 ಜನಪ್ರಿಯ ಮಾದರಿಗಳಲ್ಲಿ ಒಂದಾಗಿದೆ. ಇದೀಗ ಬಜಾಜ್ ಕಂಪನಿಯು ಈ ಪಲ್ಸರ್ ಎಫ್250 ಬೈಕ್ ಗಾಗಿ ಹೊಸ ನೀಲಿ ಬಣ್ಣದ ಆಯ್ಕೆಯನ್ನು ಪರಿಚಯಿಸಿದೆ. ಈ ಹೊಸ ಬಣ್ಣದ ಆಯ್ಕೆಯೊಂದಿಗೆ ಬಜಾಜ್ ಪಲ್ಸರ್ ಎಫ್250 ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ.

ಹೊಸ ನೀಲಿ ಬಣ್ಣದ ಆಯ್ಕೆಯನ್ನು ಪರಿಚಯಿಸುವ ಮೊದಲು, ಬಜಾಜ್ ಎಫ್250 ಬೈಕ್ ಕೇವಲ ಎರಡು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿತ್ತು, ಇದು ರೇಸಿಂಗ್ ರೆಡ್ ಮತ್ತು ಟೆಕ್ನೋ ಗ್ರೇ ಆಗಿದೆ. ಈ ಬೈಕ್ ಸ್ವಲ್ಪ ವಿಭಿನ್ನವಾದ ಗ್ರಾಫಿಕ್ಸ್ ಅನ್ನು ಹೊಂದಿವೆ.ಹೊಸದಾಗಿ ಪರಿಚಯಿಸಲಾದ ನೀಲಿ ಬಣ್ಣದ ಆಯ್ಕೆಯಲ್ಲಿ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ ಮತ್ತು ನೋಡುಗರ ಗಮನವನ್ನು ಸೆಳೆಯುತ್ತದೆ. ಇದಲ್ಲದೆ, ಎಂಜಿನ್‌ನಲ್ಲಿನ ಸಿಲ್ವರ್ ಬಣ್ಣವು ಇನ್ನಷ್ಟು ಸುಂದರವಾಗಿಸುತ್ತದೆ.

ಈ ಬಣ್ಣ ಸಂಯೋಜನೆಗಳ ಜೊತೆಗೆ, ಉಳಿದಂತೆ ಕಪ್ಪು ಬಣ್ಣದ ಫಿನಿಶಿಂಗ್ ಅನ್ನು ಹೊಂದಿದೆ. ಇದು ಉತ್ತಮ ವ್ಯತಿರಿಕ್ತ ನೋಟವನ್ನು ನೀಡುತ್ತದೆ. ಹೊಸ ಬಣ್ಣದ ಆಯ್ಕೆಯು ಬಜಾಜ್ ಪಲ್ಸರ್ ಎಫ್250 ಈಗ ಪಡೆದಿರುವ ಏಕೈಕ ಬದಲಾವಣೆಯಾಗಿದೆ. ಉಳಿದಂತೆ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ, ಏಕೆಂದರೆ ಈ ಮೋಟಾರ್ ಸೈಕಲ್ ಅನ್ನು 4 ತಿಂಗಳ ಹಿಂದಷ್ಟೇ ಬಿಡುಗಡೆ ಮಾಡಲಾಗಿತ್ತು.

ಬಜಾಜ್ ಪಲ್ಸರ್ ಎಫ್250 ಬೈಕಿನಲ್ಲಿ ಸೆಮಿ-ಫೇರ್ಡ್ ಬೈಕ್ ಆಗಿರುವುದರಿಂದ, ಮುಂಭಾಗದಲ್ಲಿ ಸಣ್ಣ ವಿಸರ್ ಅನ್ನು ಪಡೆಯುತ್ತದೆ ಮತ್ತು ಅದರ ಹಿಂಬದಿಯ ಮೀರರ್ ಬಾಡಿ ಪ್ಯಾನೆಲ್‌ಗಳಲ್ಲಿ ಅಳವಡಿಸಲಾಗಿದೆ. ಇದರಲ್ಲಿ ಎಲ್ಇಡಿ ಪ್ರೊಜೆಕ್ಟರ್ ಯುನಿಟ್ ಹೆಡ್‌ಲೈಟ್ ಕ್ಲಸ್ಟರ್‌ನ ಮಧ್ಯಭಾಗದಲ್ಲಿದೆ ಮತ್ತು ಹೆಚ್ಚಿನ ಮತ್ತು ಲೋ ಬೀಮ್ ಅನ್ನು ಅದೇ ರೀತಿಯಲ್ಲಿ ಸಂಯೋಜಿಸಲಾಗಿದೆ.

ಈ ಪಲ್ಸರ್ ಎಫ್250 ಬೈಕಿನಲ್ಲಿ ರಿವರ್ಸ್-ಬೂಮರಾಂಗ್ ಮತ್ತು ಎಲ್ಇಡಿ ಡಿಆರ್ಎಲ್ ಗಳನ್ನು ಬಲ ಮತ್ತು ಎಡಭಾಗದಲ್ಲಿ ಇರಿಸಲಾಗಿದೆ. ಹೆಡ್‌ಲೈಟ್‌ನ ಮೇಲೆ ಸಣ್ಣ ವಿಸರ್ ಗಾಳಿಯನ್ನು ಸ್ವಲ್ಪ ಮಟ್ಟಿಗೆ ತಡೆಯಲು ಸಹಾಯ ಮಾಡುತ್ತದೆ. ಅಲ್ಲದೇ ಇದು ಬೈಕ್ ಅನ್ನು ಮತ್ತಷ್ಟು ಆಕರ್ಷಕವಾಗಿ ಕಾಣಲು ಸಹಾಯ ಮಾಡುತ್ತದೆ.

ಬಜಾಜ್ ಪಲ್ಸರ್ ಎಫ್250 ಒಂದು ಸೆಮಿ-ಫೇರ್ಡ್ ಬೈಕ್ ಆಗಿದೆ. ಪಲ್ಸರ್ ಎಫ್250 ಎತ್ತರದ ಕ್ಲಿಪ್-ಆನ್ ಹ್ಯಾಂಡಲ್‌ಬಾರ್ ಅನ್ನು ಪಡೆಯುತ್ತದೆ ಮತ್ತು ಹೀಗಾಗಿ ಸ್ಪೋರ್ಟಿ ರೈಡಿಂಗ್ ಪೋಸಿಶನ್ ನೀಡುತ್ತದೆ. ಬಜಾಜ್ ಪಲ್ಸರ್ ಎಫ್250 ಪಲ್ಸರ್ ಎನ್250 ಬೈಕ್ ಗಿಂತ 2 ಕೆಜಿ ಹೆಚ್ಚು ತೂಕವಿದೆ. ಇದು ಪ್ರಾಥಮಿಕವಾಗಿ ಹೆಚ್ಚುವರಿ ಸೆಮಿ-ಫೇರಿಂಗ್ ಪ್ಲಾಸ್ಟಿಕ್ ಬಿಟ್‌ಗಳಿಂದಾಗಿದೆ.

ಪಲ್ಸರ್ ಎಫ್250 ಬೈಕ್ ಕ್ಲಿಪ್-ಆನ್ ಹ್ಯಾಂಡಲ್‌ಬಾರ್ ಅನ್ನು ಹೊಂದಿದೆ, ಇದರಿಂದಾಗಿ ಸೀಟ್ ಪೋಸಿಶನ್ ನೇರವಾಗಿರುತ್ತದೆ, ಅಂದರೆ ರೈಡರ್ ಮೇಲೆ ನೇರವಾಗಿ ಕುಳಿತುಕೊಳ್ಳಬಹುದು. ಬಜಾಜ್ ಪಲ್ಸರ್ ಎಫ್250 ಬೈಕಿನಲ್ಲಿ 249ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ.

ಈ ಎಂಜಿನ್ 24.1 ಬಿಹೆಚ್‍ಪಿ ಪವರ್ ಮತ್ತು 21.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್ ಹಿಂದಿನ ವ್ಹೀಲ್ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್ ಅನ್ನು ಒಳಗೊಂಡಿರುತ್ತದೆ.

ಬಜಾಜ್ ಪಲ್ಸರ್ ಎಫ್250 ಮಾದರಿಯಲ್ಲಿ ಅನಲಾಗ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಸೆಮಿ-ಫೇರಿಂಗ್‌ನಲ್ಲಿ ಇರಿಸಲಾಗಿದ್ದು, ಪಲ್ಸರ್ ಎಫ್250 ಕ್ಲಿಪ್-ಆನ್ ಹ್ಯಾಂಡಲ್‌ಬಾರ್ ಪಡೆದುಕೊಂಡಿದೆ. ಇದರಲ್ಲಿ ಸ್ವಿಚ್‌ಗೇರ್ ಕೂಡಾ ಹೊಚ್ಚ ಹೊಸ ಸೌಲಭ್ಯವಾಗಿದ್ದು, ಸ್ಪ್ಲಿಟ್-ಸೀಟ್‌ನ ಆಕಾರವು ಬೈಕಿಗೆ ಒಟ್ಟಾರೆ ವಿನ್ಯಾಸ ಮತ್ತು ಶೈಲಿಗೆ ಹೊಸ ಹೊಳಪು ನೀಡುತ್ತದೆ.

ಈ ಬೈಕಿನಲ್ಲಿ ಎಂಜಿನ್ ಕವಚವನ್ನು ಡಾರ್ಕ್ ಗೋಲ್ಡ್ ಶಾಡೋ ಪೂರ್ಣಗೊಳಿಸಲಾಗಿದ್ದು, ಎಂಜಿನ್‌ನ ಕೆಳಗಿರುವ ಸೂಪರ್ ಸ್ಟೈಲಿಶ್ ಬ್ಯಾಷ್‌ಪ್ಲೇಟ್ ಅನ್ನು ಬಾಡಿ ಕಲರ್‌ನೊಂದಿಗೆ ಪೂರ್ಣಗೊಳಿಸಲಾಗಿದೆ. ಈ ಮೂಲಕ ಹೊಸ ಬೈಕಿನಲ್ಲಿ ಸರಳ ಮತ್ತು ಕ್ಲಾಸಿ ರೆಡ್, ವೈಟ್ ಗ್ರಾಫಿಕ್ಸ್ ಅನ್ನು ಸಹ ಹೊಂದಿದೆ, ಈ ಎಫ್250 ಮಾದರಿಯಲ್ಲಿನ ಟ್ವಿನ್ ಎಕ್ಸಾಸ್ಟ್ ಘಟಕವು ಮೋಟಾರ್‌ಸೈಕಲ್‌ನ ಒಟ್ಟಾರೆ ವಿನ್ಯಾಸಕ್ಕೆ ಹೆಚ್ಚಿನ ಆಕರ್ಷಣೆ ನೀಡಿದ್ದು, ಟ್ವಿನ್-ಪೋರ್ಟ್ ಎಕ್ಸಾಸ್ಟ್ ಅನ್ನು ಸಿಲ್ವರ್-ಬಣ್ಣದ ಕವರ್ ಪಡೆಯುತ್ತದೆ.

ಇದರೊಂದಿಗೆ ಪಲ್ಸರ್ ಎಫ್250 ಮಾದರಿಯು 250ಸಿಸಿ ವಿಭಾಗದಲ್ಲಿ ಅತ್ಯಂತ ಸೊಗಸಾದ ಮೋಟಾರ್‌ಸೈಕಲ್‌ಗಳಲ್ಲಿ ಒಂದಾಗಿದ್ದು, ಸೆಮಿ-ಫೇರ್ಡ್ ಮೋಟಾರ್‌ಸೈಕಲ್‌ಗಳು ನಿಮ್ಮ ಆಯ್ಕೆಯಾಗಿದ್ದರೆ ಹೊಸ ಪಲ್ಸರ್ ಎಫ್250 ಆವೃತ್ತಿಯು ನಿಮ್ಮ ಆಯ್ಕೆಗೆ ಅತ್ಯುತ್ತಮ ಆಯ್ಕೆಯಾಗಿದೆ ಎನ್ನಬಹುದು. ಪಲ್ಸರ್ ಎಫ್250 ಮಾದರಿಯಲ್ಲಿ ಬಜಾಜ್ ಕಂಪನಿಯು ಹಲವಾರು ಹೊಸ ವೈಶಿಷ್ಟ್ಯತೆಗಳನ್ನು ಸೇರ್ಪಡೆಗೊಳಿಸಿದ್ದು, ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್‌ಗಳೊಂದಿಗೆ ಅನಲಾಗ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮಧ್ಯದಲ್ಲಿ ಇರಿಸಲಾಗಿರುವ ಟ್ಯಾಕೋ ಮೀಟರ್ ಆಕರ್ಷಕವಾಗಿದೆ.

ಬೈಕಿನ ಎಡಕ್ಕೆ ಟೆಲ್-ಟೇಲ್ ಲೈಟ್‌ಗಳು ಮತ್ತು ಬಲಕ್ಕೆ ಎಲ್‌ಸಿಡಿ ಪರದೆ ನೀಡಲಾಗಿದ್ದು, ಪರದೆಯ ಮೂಲಕ ಬೈಕ್ ಸವಾರರು ಸ್ಪೀಡೋ ಮೀಟರ್, ಓಡೋ ಮೀಟರ್, ಟ್ರಿಪ್ ಮೀಟರ್, ಇಂಧನ ಲಭ್ಯತೆ ಪ್ರಮಾಣ, ಇಂಧನ ದಕ್ಷತೆ ಪ್ರಮಾಣ, ಮೈಲೇಜ್ ಲಭ್ಯತೆ ಸೇರಿ ಇತರೆ ಮಾಹಿತಿಯನ್ನು ಪ್ರದರ್ಶಿಸುತ್ತದೆ. ಬಜಾಜ್ ಪಲ್ಸರ್ ಎಫ್250 ನೇರವಾಗಿ ಯಮಹಾ ಫೇಜರ್ 25 ಮತ್ತು ಸುಜುಕಿ ಜಿಕ್ಸರ್ 250 ಎಸ್ಎಫ್ ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.