ಅತಿ ಶೀಘ್ರದಲ್ಲೇ ಬಜಾಜ್ ಪಲ್ಸರ್ N150 ಬಿಡುಗಡೆ: ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವ ನಿರೀಕ್ಷೆ
ಬಜಾಜ್ ಪಲ್ಸರ್ N150 ಬೈಕ್ ವಿನ್ಯಾಸದ ವಿಷಯದಲ್ಲಿ ಪಲ್ಸರ್ N250 ಮತ್ತು N160 ನಿಂದ ಹೆಚ್ಚು ಪ್ರೇರಿತವಾಗಿರುವ ಕಾರಣ ಹೊಸ ಏರ್-ಕೂಲ್ಡ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ.
ಬಿಡುಗಡೆಗೆ ಸಜ್ಜಾಗಿ ಪರೀಕ್ಷಾ ಹಂತದಲ್ಲಿರುವ ಬಜಾಜ್ ಪಲ್ಸರ್ N150 ಬೈಕ್ ಇತ್ತೀಚೆಗೆ ಕ್ಯಾಮರಾ ಕಣ್ಣಿಗೆ ಬಿದ್ದಿದೆ. ಈ ಟೆಸ್ಟಿಂಗ್ ಬೈಕ್ ಹಲವು ವಿಷಯಗಳನ್ನು ಬಹಿರಂಗಪಡಿಸಿದ್ದು, ಇನ್ನೇನು ಬಜಾಜ್ ಆಟೋ ಮುಂಬರುವ ವಾರಗಳಲ್ಲಿ ಪಲ್ಸರ್ N150 ಅನ್ನು ಪರಿಚಯಿಸುವ ಸಾಧ್ಯತೆಯಿದೆ.

ಕಳೆದ ಹಲವು ತಿಂಗಳುಗಳಲ್ಲಿ ಹೊಸ ಬಜಾಜ್ ಪಲ್ಸರ್ ಶ್ರೇಣಿಯ ಪ್ರವೇಶ ಮಟ್ಟದ ಸ್ಪೋರ್ಟಿ N150 ಬೈಕನ್ನು ಸಾರ್ವಜನಿಕ ರಸ್ತೆಗಳಲ್ಲಿ ಟೆಸ್ಟಿಂಗ್ ವೇಳೆ ಹಲವು ಬಾರಿ ಗುರುತಿಸಲಾಗಿದೆ. ಆದರೆ ಬಜಾಜ್ ಕಂಪನಿ ಮಾತ್ರ ಇನ್ನೂ ಯಾವುದೇ ಅಧಿಕೃತ ಬಿಡುಗಡೆ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಆದರೆ ಟೆಸ್ಟಿಂಗ್ ಬೈಕನ್ನು ನೊಡಿದರೆ ಬಹುತೇಕ ಬಿಡುಗಡೆಗೆ ಸಿದ್ಧವಿರುವಂತೆ ಕಾಣುತ್ತಿದೆ.
ಬಜಾಜ್ ಇತ್ತೀಚೆಗೆ ಹೊಸ ಪೀಳಿಗೆಯ ಪಲ್ಸರ್ ಶ್ರೇಣಿಯನ್ನು ವಿಸ್ತರಿಸುವಲ್ಲಿ ಕಾರ್ಯನಿರತವಾಗಿದೆ. ಕಳೆದ ವರ್ಷ ಬಜಾಜ್ ಪಲ್ಸರ್ N250 ಮತ್ತು F250 ಹೊಚ್ಚ ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆ ಪ್ರವೇಶ ಮಾಡಿತು. ಜೊತೆಗೆ ಕೆಲವು ತಿಂಗಳ ಹಿಂದೆ ಪಲ್ಸರ್ N160 ಅನ್ನು ಕೂಡ ಬಿಡುಗಡೆ ಮಾಡಿತು. ಸದ್ಯ ಇದು ಭಾರತದಲ್ಲಿಯೂ ಸ್ಪರ್ಧಾತ್ಮಕ ಬೆಲೆಯನ್ನು ಹೊಂದಿದೆ.

ಮುಂಬರುವ ಪಲ್ಸರ್ N150, N160 ಗಿಂತ ಕಡಿಯಿರುವ ನಿರೀಕ್ಷೆಯಿದೆ. ಸ್ಪೋರ್ಟಿಯಾಗಿ ಕಾಣುವ ಮೋಟಾರ್‌ಸೈಕಲ್ ಖರೀದಿಸಲು ಬಯಸುವ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ನೀಡುವುದು ಈ ಬೈಕ್ ನಿರ್ಮಾಣದ ಮುಖ್ಯ ಉದ್ದೇಶವಾಗಿದೆ. ಪಲ್ಸರ್ N160 ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದು, ಈಗ N150 ಅನ್ನು ಒಟ್ಟು ಎರಡು ಪುನರಾವರ್ತನೆಗಳಲ್ಲಿ ಲಭ್ಯವಾಗುವಂತೆ ಮಾಡಬಹುದು.
ಬಜಾಜ್ ಪಲ್ಸರ್ N150 ನ ಪ್ರಮುಖ ಪ್ರಯೋಜನವೆಂದರೆ ಇದು N250 ಮತ್ತು N160 ಬೈಕಿನ ಬಹುತೇಕ ಅದೇ ವಿನ್ಯಾಸವನ್ನು ಹೊಂದಿರುತ್ತದೆ. ಯಮಹಾ ಎಫ್‌ಜೆಡ್ ವಿ3, ಸುಜುಕಿ ಜಿಕ್ಸರ್ 155, ಟಿವಿಎಸ್ ಅಪಾಚೆ ಆರ್‌ಟಿಆರ್ 160 2ವಿ, ಹೋಂಡಾ ಯುನಿಕಾರ್ನ್ ಮತ್ತು ಮುಂತಾದವುಗಳ ವಿರುದ್ಧ ಮೋಟಾರ್‌ಸೈಕಲ್ ಅನ್ನು ಆಕ್ರಮಣಕಾರಿಯಾಗಿ ಇರಿಸಲು ಕಡಿಮೆ ಬೆಲೆಗೆ ತರಲಾಗುವುದು.

ಬಜಾಜ್ ಪಲ್ಸರ್ N150 ಬೆಲೆ ಸುಮಾರು ರೂ. 1.07 ಲಕ್ಷ (ಎಕ್ಸ್ ಶೋರೂಂ) ಇರಲಿದ್ದು, ಇದು ಈಗಾಗಲೇ ಅಸ್ತಿತ್ವದಲ್ಲಿರುವ ಪಲ್ಸರ್ 150 ನಲ್ಲಿ ಕಂಡುಬರುವ ಹೆಡ್‌ಲ್ಯಾಂಪ್ ಪಡೆಯಲಿದೆ. ಜೊತೆಗೆ N160 ನಲ್ಲಿ ಬಳಸಲಾದ ಕೊಳವೆಯಾಕಾರದ ಚೌಕಟ್ಟನ್ನು ಮುಂಬರುವ ಮಾದರಿಯನ್ನು ಬೆಂಬಲಿಸಲು ಟ್ವೀಕ್ ಮಾಡಬಹುದು.
ಪವರ್‌ಟ್ರೇನ್ ಅನ್ನು N160 ಬೈಕಿನಿಂದ ಪಡೆಯುವ ನಿರೀಕ್ಷೆಯಿದೆ. ಸ್ಪ್ಲಿಟ್ ಗ್ರ್ಯಾಬ್ ರೈಲ್‌ಗಳು, ಅಂಡರ್‌ಬೆಲ್ಲಿ ಎಕ್ಸಾಸ್ಟ್ ಯೂನಿಟ್, ಟ್ವಿನ್ ಎಲ್‌ಇಡಿ ಟೈಲ್‌ಲೈಟ್‌ಗಳು, ಹ್ಯಾಲೊಜೆನ್ ಹೆಡ್‌ಲ್ಯಾಂಪ್ ಇಲ್ಯುಮಿನೇಷನ್, ಹ್ಯಾಲೊಜೆನ್ ಟರ್ನ್ ಸಿಗ್ನಲ್‌ಗಳು, ಮಿಡಲ್ ಸೆಟ್ ಫುಟ್‌ಪೆಗ್‌ಗಳ ಸ್ಥಾನೀಕರಣ, ನೇರವಾದ ಹ್ಯಾಂಡಲ್‌ಬಾರ್ ಪೊಸಿಷನಿಂಗ್, ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ರಿಯರ್ ಮೊನೊಶಾಕ್ ಸಸ್ಪೆನ್ಷನ್, ಸೆಮಿ-ಡಿಜಿಟಲ್ ಇನ್‌ಸ್ಟ್ರುಮೆಂಟ್ cluster ಇತರ ಹೈಲೈಟ್‌ಗಳನ್ನು ಒಳಗೊಂಡಿರಲಿದೆ.


Click it and Unblock the Notifications








