ಹೀರೋ ಎಕ್ಸ್‌ಪಲ್ಸ್ 200 4ವಿ ರ್‍ಯಾಲಿ ಎಡಿಷನ್‌ಗೆ ಭರ್ಜರಿ ಬೇಡಿಕೆ: ಎರಡನೇ ಬ್ಯಾಚ್ ಕೂಡ ಸೋಲ್ಡ್ ಔಟ್
ಜನಪ್ರಿಯ ಮತ್ತು ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೋಕಾರ್ಪ್ ತನ್ನ ಎಕ್ಸ್‌ಪಲ್ಸ್ 200 4ವಿ ರ್‍ಯಾಲಿ ಎಡಿಷನ್ ಮಾದರಿಯನ್ನು ಭಾರತದಲ್ಲಿ ಈ ವರ್ಷದ ಜುಲೈ ತಿಂಗಳಿನಲ್ಲಿ ಬಿಡುಗಡೆಗೊಳಿಸಿತ್ತು. ಈ ಹೀರೋ ಎಕ್ಸ್‌ಪಲ್ಸ್ 200 4ವಿ ರ್‍ಯಾಲಿ ಎಡಿಷನ್ ಬಿಡುಗಡೆಯಾದ ನಾಲ್ಕು ದಿನಗಳಲ್ಲಿ ಮೊದಲ ಬ್ಯಾಚ್ ಮಾರಾಟವಾಯಿತು.

ಹೀರೋ ಕಂಪನಿಯು ಎಕ್ಸ್‌ಪಲ್ಸ್ 200 4ವಿ ರ್‍ಯಾಲಿ ಎಡಿಷನ್ ಮಾದರಿಯ ಖರೀದಿಗಾಗಿ ಎರಡನೇ ಹಂತದ ಬುಕ್ಕಿಂಗ್ ಅನ್ನು ಇತ್ತೀಚೆಗೆ ಪ್ರಾರಂಭಿಸಿತು. ಇದೀಗ ಎರಡನೇ ಬ್ಯಾಚ್‌ನಲ್ಲಿ ಮಾರಾಟಕ್ಕೆ ಲಭ್ಯವಿರುವ ಎಲ್ಲಾ ಯುನಿಟ್ ಗಳು ಮಾರಾಟವಾಗಿವೆ. ಇದರಿಂದ ಕಂಪನಿಯು ಈ ಅಡ್ವೆಂಚರ್ ಬೈಕಿನ ಎರಡನೇ ಬ್ಯಾಚ್‌ನ ಬುಕಿಂಗ್‌ಗಳನ್ನು ಸ್ಥಗಿತಗೊಳಿಸಿದೆ. ಎರಡನೇ ಬ್ಯಾಚ್‌ನ ಅಡಿಯಲ್ಲಿ ಲಭ್ಯವಿರುವ ಒಟ್ಟು ಯುನಿಟ್ ಗಳ ಸಂಖ್ಯೆಯನ್ನು ಕಂಪನಿಯು ಘೋಷಿಸದಿದ್ದರೂ, ಮೊದಲ ಬ್ಯಾಚ್ ಮೋಟಾರ್‌ಸೈಕಲ್‌ಗಳಿಗೆ, ಅಂದರೆ 100 ಯೂನಿಟ್‌ಗಳಿಗೆ ಸಮಾನವಾಗಿದೆ ಎಂದು ನಾವು ನಿರೀಕ್ಷಿಸುತ್ತೇವೆ.

ಈ ಹೊಸ ಹೀರೋ ಎಕ್ಸ್‌ಪಲ್ಸ್ 200 4ವಿ ರ್‍ಯಾಲಿ ಎಡಿಷನ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.52 ಲಕ್ಷವಾಗಿದೆ. ಭಾರತದಲ್ಲಿ ದ್ವಿಚಕ್ರ ವಾಹನ ತಯಾರಕರ ಮೊದಲ-ಎಕ್ಸ್‌ಪಲ್ಸ್ ಎಕ್ಸ್‌ಪೀರಿಯನ್ಸ್ ಸೆಂಟರ್ ಅನ್ನು ಬೆಂಗಳೂರಿನಲ್ಲಿ ಉದ್ಘಾಟಿಸಿ ನಂತರ ಈ ಎಕ್ಸ್‌ಪಲ್ಸ್ 200 4ವಿ ರ್‍ಯಾಲಿ ಎಡಿಷನ್ ಮೊದಲ ಬ್ಯಾಚ್ ಅನ್ನು ವಿತರಿಸಿದ್ದರು, ಹೀರೋ ಮೋಟೋಕಾರ್ಪ್ ಶೀಘ್ರದಲ್ಲೇ ಭಾರತದಾದ್ಯಂತ ಇಂತಹ ಹೆಚ್ಚಿನ ಕೇಂದ್ರಗಳನ್ನು ಸ್ಥಾಪಿಸಲಿದೆ.

ಖರೀದಿದಾರರು ಹೀರೋ ಎಕ್ಸ್‌ಪಲ್ಸ್ 200 4ವಿಯ ಫ್ಯಾಕ್ಟರಿ ಕಸ್ಟಮ್ ರೂಪಾಂತರವನ್ನು ಹೆಚ್ಚು ಆಫ್-ರೋಡ್ ಸಿದ್ಧ ವೈಶಿಷ್ಟ್ಯಗಳು ಮತ್ತು ವಿಶೇಷಣಗಳೊಂದಿಗೆ ಪಡೆಯಬಹುದು. ಈ ಹೊಸ ಹೀರೋ ಎಕ್ಸ್‌ಪಲ್ಸ್ 200 4ವಿ ರ್‍ಯಾಲಿ ಎಡಿಷನ್ ಮಾದರಿಯು ಫ್ಯಾಕ್ಟರಿ ಫಿಟಡ್ ರ್‍ಯಾಲಿ ಕಿಟ್ ಅನ್ನು ಪಡೆಯುತ್ತಾರೆ.

ಈ ಬೈಕಿನ ಮತ್ತು ಸೆಟಪ್ ಬಗ್ಗೆ ಹೇಳುವುದಾದರೆ, ಇದರ 250 ಎಂಎಂ ಟ್ರ್ಯಾವೆಲ್ ನೊಂದಿಗೆ ಎತ್ತರದ ಮತ್ತು ಸಂಪೂರ್ಣ-ಹೊಂದಾಣಿಕೆಯ ಮುಂಭಾಗದ ಸಸ್ಪೆಕ್ಷನ್ ಮತ್ತು 220 ಎಂಎಂ ಟ್ರ್ಯಾವೆಲ್ ನೊಂದಿಗೆ ಸಂಪೂರ್ಣ-ಹೊಂದಾಣಿಕೆ ಮಾಡಬಹುದಾದ 10-ಹಂತದ ಹಿಂಭಾಗದ ಸಸ್ಪೆಕ್ಷನ್ ಅನ್ನು ಇದು ಹೊಂದಿದೆ.

ಈ ಬಹುಬೇಡಿಕೆಯ ಹೀರೋ ಎಕ್ಸ್‌ಪಲ್ಸ್ 200 4ವಿ ರ್‍ಯಾಲಿ ಎಡಿಷನ್ ಮಾದರಿಯು 885 ಎಂಎಂ ಸೀಟ್ ಎತ್ತರ, 40 ಎಂಎಂ ಹ್ಯಾಂಡಲ್‌ಬಾರ್ ರೈಸರ್‌ಗಳು, 270 ಎಂಎಂ ಹೆಚ್ಚಿದ ಗ್ರೌಂಡ್ ಕ್ಲಿಯರೆನ್ಸ್, 1,426 ಎಂಎಂನ ವೀಲ್‌ಬೇಸ್ ಮತ್ತು 116 ಎಂಎಂನ ಹೆಚ್ಚಿದ ಟ್ರಯಲ್ ಆಫ್ ರೋಡ್‌ನಲ್ಲಿ ಆತ್ಮವಿಶ್ವಾಸದ ರೈಡಿಂಗ್ ನಿಲುವನ್ನು ಇದು ಒಳಗೊಂಡಿದೆ.

ಈ ಹೀರೋ ಎಕ್ಸ್‌ಪಲ್ಸ್ 200 4ವಿ ರ್‍ಯಾಲಿ ಎಡಿಷನ್ ಬೈಕಿನಲ್ಲಿ 200 ಸಿಸಿ ನಾಲ್ಕು-ವಾಲ್ವ್, ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 18.9 ಬಿಹೆಚ್‍ಪಿ ಪವರ್ ಮತ್ತು 13.7 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಹೀರೋ ಎಕ್ಸ್‌ಪಲ್ಸ್ 200 4ವಿ ರ್‍ಯಾಲಿ ಎಡಿಷನ್ ಅದೇ 7-ಫಿನ್ ಆಯಿಲ್ ಕೂಲರ್ ಅನ್ನು ಹೊಂದಿದೆ,

ಇದು ಭಾರೀ ಟ್ರಾಫಿಕ್‌ನಲ್ಲಿ ಉತ್ತಮ ಶಾಖ ನಿರ್ವಹಣೆಯನ್ನು ನೀಡುತ್ತದೆ ಎಂದು ಹೇಳಲಾಗುತ್ತಿದೆ. ಈ ಹೊಸ ಹೀರೋ ಎಕ್ಸ್‌ಪಲ್ಸ್ 200 4ವಿ ರ್‍ಯಾಲಿ ಎಡಿಷನ್ ಹೀರೋ MotoSports ರ್‍ಯಾಲಿ ಬೈಕ್ ನಿಂದ ಪ್ರೇರಿತವಾಗಿದೆ ಎಂದು ಹೇಳಲಾಗುತ್ತದೆ ಮತ್ತು Hero MotoSports ರ್‍ಯಾಲಿನ ಅದೇ ಬಣ್ಣದ ಸಂಯೋಜನೆಯನ್ನು ಹೊಂದಿದೆ ಮತ್ತು ಇಂಧನ ಟ್ಯಾಂಕ್‌ನ ಮೇಲ್ಭಾಗದಲ್ಲಿ ಹೀರೋ ರ್‍ಯಾಲಿ ತಂಡದ ಸಿಎಸ್ ಸಂತೋಷ್ ಅವರ ಆಟೋಗ್ರಾಫ್ ಅನ್ನು ಹೊಂದಿರುವುದು ಕೂಡ ವಿಶೇಷ

ಈ ಹೀರೋ ಎಕ್ಸ್‌ಪಲ್ಸ್ 200 4ವಿ ರ್‍ಯಾಲಿ ಎಡಿಷನ್ ಸ್ಟ್ಯಾಂಡರ್ಡ್ ಮಾದರಿಯ ಮೂಲ ವಿನ್ಯಾಸವನ್ನು ಉಳಿಸಿಕೊಂಡಿದೆ. ಆದರೆ ಲಾಂಗ್-ಟ್ರ್ಯಾವೆಲ್ ಸಸ್ಪೆಂಕ್ಷನ್, ಹೆಚ್ಚಿದ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಹ್ಯಾಂಡಲ್‌ಬಾರ್ ರೈಸರ್‌ಗಳೊಂದಿಗೆ ಬೈಕ್‌ನ ಆಫ್-ರೋಡ್ ವಿಶ್ವಾಸಾರ್ಹತೆಯನ್ನು ಹಲವಾರು ಹಂತಗಳನ್ನು ಇದು ತೆಗೆದುಕೊಳ್ಳಲಿದೆ.

ಈ ಹೊಸ ಹೀರೋ ರ್‍ಯಾಲಿ ಎಡಿಷನ್ ಮ್ಯಾಕ್ಸ್‌ಸಿಸ್ ನಾಬಿ ಟೈರ್‌ಗಳು ಮತ್ತು ರ್‍ಯಾಲಿ ಕಿಟ್‌ನಿಂದ ಫ್ಲಾಟ್ ಸೀಟ್ ಅನ್ನು ಹೊಂದಿಲ್ಲ. ಬಣ್ಣ ಮತ್ತು ಗ್ರಾಫಿಕ್ಸ್ ಹೀರೋನ ರ್‍ಯಾಲಿ ತಂಡದಿಂದ ಪ್ರೇರಿತವಾಗಿದೆ.ಬೈಕ್ ಎಂಜಿನ್ ಅನ್ನು ರಕ್ಷಿಸುವ ಅಲ್ಯೂಮಿನಿಯಂ ಸ್ಕಿಡ್ ಪ್ಲೇಟ್, ಗರಿಷ್ಠ ಗ್ರಿಪ್ ಮತ್ತು ನಿಯಂತ್ರಣಕ್ಕಾಗಿ ಬ್ರೇಕ್ ಪೆಡಲ್, ಜೊತೆಗೆ ವಿಸ್ತೃತ ಗೇರ್ ಲಿವರ್ ಮತ್ತು ಉದ್ದವಾದ ಸೈಡ್ ಸ್ಟ್ಯಾಂಡ್‌ನೊಂದಿಗೆ ಬರುತ್ತದೆ. ಈ ರ್‍ಯಾಲಿ ಎಡಿಷನ್ ಆಪ್-ರೋಡ್ ಬೈಕ್ 160 ಕೆಜಿ ತೂಕವನ್ನು ಹೊಂದಿದೆ.

ಹೀರೋ ಎಕ್ಸ್‌ಪಲ್ಸ್ 200 4ವಿ ಯಾವಾಗಲೂ ನೈಜ ಆಫ್-ರೋಡ್ ಸಾಮರ್ಥ್ಯ ಹೊಂದಿರುವ ಅತ್ಯಂತ ಸಮರ್ಥ ಎಂಟ್ರಿ ಲೆವೆಲ್ ಅಡ್ವೆಂಚರ್ ಬೈಕ್ ಆಗಿದೆ. ಹೀರೋ ಎಕ್ಸ್‌ಪಲ್ಸ್ 200 ಕಡಿಮೆ ತೂಕ ಮತ್ತು ವೇಗದ ಆಫ್-ರೋಡ್ ಸಾಮರ್ಥ್ಯದೊಂದಿಗೆ ಸಾಕಷ್ಟು ಜನಪ್ರಿಯ ಮಾದರಿಯಾಗಿದೆ. ಈ ಹೀರೋ ಎಕ್ಸ್‌ಪಲ್ಸ್ 200 4ವಿ ಸ್ಟಾಕ್ ಮಾದರಿಗೆ ಹೋಲಿಸಿದರೆ ಹೆಚ್ಚು ಸಾಮರ್ಥ್ಯದ ಆಫ್-ರೋಡರ್ ಇದಾಗಿದೆ, ಇನ್ನು ಹೀರೋ ಮೋಟೋಕಾರ್ಪ್ ಇತ್ತೀಚೆಗೆ ಸೆಕೆಂಡ್ ಹ್ಯಾಂಡ್ ದ್ವಿಚಕ್ರ ವಾಹನ ವಿಭಾಗಕ್ಕೂ ಲಗ್ಗೆಯಿಟ್ಟಿದ್ದು, ಸೆಕೆಂಡ್ ಹ್ಯಾಂಡ್ ದ್ವಿಚಕ್ರ ವಾಹನ ಮಾರಾಟ ವಿಭಾಗವನ್ನು ಮತ್ತಷ್ಟು ಬಲಪಡಿಸಲು ಹೊಸ ಪ್ಲ್ಯಾಟ್‌ಫಾರ್ಮ್‌ಗೆ ಚಾಲನೆ ನೀಡಿದೆ.

ದ್ವಿಚಕ್ರ ವಾಹನಗಳ ಮರುಮಾರಾಟ ವಿಭಾಗವನ್ನು ಬಲಪಡಿಸಲು ಕಂಪನಿಯು ವೀಲ್ಸ್ ಆಫ್ ಟ್ರಸ್ಟ್ ಪ್ಲ್ಯಾಟ್‌ಫಾರ್ಮ್‌ಗೆ ಚಾಲನೆ ನೀಡಿದ್ದು, ಇದು ಇದೀಗ ಡಿಜಿಟಲ್ ಮತ್ತು ಆನ್-ಗ್ರೌಂಡ್ ಸೌಲಭ್ಯದೊಂದಿಗೆ ಗ್ರಾಹಕರಿಗೆ ಮತ್ತಷ್ಟು ಸಹಕಾರಿಯಾಗಲಿದೆ. ಹೊಸ ಪ್ಲ್ಯಾಟ್‌ಫಾರ್ಮ್ ಮೂಲಕ ಗ್ರಾಹಕರು ಕೇವಲ 30 ಸೆಕೆಂಡುಗಳಲ್ಲಿ ಬಳಸಿದ ದ್ವಿಚಕ್ರ ವಾಹನದ ಮೌಲ್ಯವನ್ನು ತಿಳಿಯಬಹುದಾಗಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಹೀರೋ ಮೋಟೋಕಾರ್ಪ್ ತನ್ನ ಈ ಹೀರೋ ಎಕ್ಸ್‌ಪಲ್ಸ್ 200 4ವಿ ರ್‍ಯಾಲಿ ಎಡಿಷನ್ ಅನ್ನು ಭಾರತದಲ್ಲಿ ಈ ವರ್ಷದ ಜುಲೈ ತಿಂಗಳಿನಲ್ಲಿ ಬಿಡುಗಡೆಗೊಳಿಸಿತು. ಈ ಬೈಕ್ ಸ್ಟ್ಯಾಂಡರ್ಡ್ ರೂಪಾಂತರಕ್ಕೆ ಹೋಲಿಸಿದರೆ ಕೆಲವು ದೊಡ್ಡ ಬದಲಾವಣೆಯನ್ನು ಹೊಂದಿದೆ, ಅಲ್ಲದೇ ಇದು ಅತ್ಯುತ್ತಮ ಆಫ್-ರೋಡ್ ಸಾಮರ್ಥ್ಯವನ್ನು ಹೊಂದಿದೆ. ಈ ಹೀರೋ ಎಕ್ಸ್‌ಪಲ್ಸ್ 200 4ವಿ ರ್‍ಯಾಲಿ ಎಡಿಷನ್ ಮಾದರಿಗೆ ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆಯನ್ನು ಪಡೆದುಕೊಂಡಿದೆ.


Click it and Unblock the Notifications