ಬೆಂಗಳೂರಿನ ನಂತರ ಪ್ರಮುಖ ನಾಲ್ಕು ನಗರಗಳಲ್ಲಿ ಇವಿ ಸ್ಕೂಟರ್ ಟೆಸ್ಟ್ ರೈಡ್ ಆಯೋಜಿಸಿದ ಬೌನ್ಸ್

ಬೌನ್ಸ್ ಕಂಪನಿಯು ಹೊಸ ಇನ್ಪಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಬಿಡುಗಡೆಗೊಳಿಸಿ ವಿತರಣೆಗೆ ಸಿದ್ದಗೊಳ್ಳುತ್ತಿದ್ದು, ಹೊಸ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆಗೆ ಮುನ್ನ ಕಂಪನಿಯು ದೇಶದ ಪ್ರಮುಖ ನಗರಗಳಲ್ಲಿ ಆಸಕ್ತ ಗ್ರಾಹಕರಿಗೆ ಟೆಸ್ಟ್ ರೈಡ್ ಆಯೋಜಿಸುತ್ತಿದೆ.

ಇವಿ ಸ್ಕೂಟರ್ ಟೆಸ್ಟ್ ರೈಡ್ ಆಯೋಜಿಸಿದ ಬೌನ್ಸ್

ಹೊಸ ಇನ್ಪಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗಾಗಿ ಬುಕ್ಕಿಂಗ್ ಸಲ್ಲಿಸಿರುವ ಗ್ರಾಹಕರಿಗೆ ಟೆಸ್ಟ್ ರೈಡ್ ಆರಂಭಿಸಿರುವ ಬೌನ್ಸ್ ಕಂಪನಿಯ ಕಳೆದ ವಾರ ನಮ್ಮ ಬೆಂಗಳೂರಿನಲ್ಲಿ 2900 ಗ್ರಾಹಕರಿಗೆ ಟೆಸ್ಟ್ ರೈಡ್ ಒದಗಿಸಿದ್ದು, ಇದೀಗ ಕಂಪನಿಯು ಎರಡನೇ ಹಂತದಲ್ಲಿ ಮುಂಬೈ, ಪುಣೆ, ಹೈದ್ರಾಬಾದ್ ಮತ್ತು ಅಹಮದಾಬಾದ್‌ನಲ್ಲಿ ಟೆಸ್ಟ್ ರೈಡ್ ಆಯೋಜಿಸಿದೆ.

ಇವಿ ಸ್ಕೂಟರ್ ಟೆಸ್ಟ್ ರೈಡ್ ಆಯೋಜಿಸಿದ ಬೌನ್ಸ್

ಎರಡನೇ ಹಂತದ ಟೆಸ್ಟ್ ರೈಡ್ ನಂತರ ಕರ್ನಾಟಕದ ಪ್ರಮುಖ ಜಿಲ್ಲಾ ಕೇಂದ್ರಗಳಲ್ಲೂ ಟೆಸ್ಟ್ ರೈಡ್ ಆಯೋಜಿಸುವ ಬಗೆಗೆ ಮಾಹಿತಿ ಹಂಚಿಕೊಂಡಿದ್ದು, ಹೊಸ ಇವಿ ಸ್ಕೂಟರ್‌ ವಿತರಣೆಯು ಈ ತಿಂಗಳಾಂತ್ಯಕ್ಕೆ ಇಲ್ಲವೇ ಏಪ್ರಿಲ್ ಆರಂಭದಲ್ಲಿ ಅಧಿಕೃತವಾಗಿ ಆರಂಭವಾಗಲಿದೆ.

ಇವಿ ಸ್ಕೂಟರ್ ಟೆಸ್ಟ್ ರೈಡ್ ಆಯೋಜಿಸಿದ ಬೌನ್ಸ್

ಬುಕ್ಕಿಂಗ್ ನಂತರ ಟೆಸ್ಟ್ ರೈಡ್‌ನಲ್ಲಿ ಭಾಗಿಯಾದ ಶೇ.55 ರಷ್ಟು ಗ್ರಾಹಕರು ಹೊಸ ಇವಿ ಸ್ಕೂಟರ್ ಪರ್ಫಾಮೆನ್ಸ್ ಮತ್ತು ಸ್ಕೂಟರ್ ವಿನ್ಯಾಸದ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಖರೀದಿಗಾಗಿ ಅಂತಿಮ ಹಂತದ ಖರೀದಿ ಪ್ರಕ್ರಿಯೆಗೆ ಒಪ್ಪಿಗೆ ಸೂಚಿಸಿದ್ದಾರೆ.

ಇವಿ ಸ್ಕೂಟರ್ ಟೆಸ್ಟ್ ರೈಡ್ ಆಯೋಜಿಸಿದ ಬೌನ್ಸ್

ಸದ್ಯಕ್ಕೆ ಬೌನ್ಸ್ ಹೊಸ ಇವಿ ಸ್ಕೂಟರ್ ಬಿಡುಗಡೆಯೊಂದಿಗೆ ರೂ. 499 ಮುಂಗಡ ಪಾವತಿಯೊಂದಿಗೆ ಬುಕ್ಕಿಂಗ್ ಆರಂಭಿಸಲಾಗಿದ್ದು, ಹೊಸ ಬೌನ್ಸ್ ಇನ್ಪಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಬಜೆಟ್ ಬೆಲೆಯೊಂದಿಗೆ ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದೆ. ಬೌನ್ಸ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಹೊಸ ಸ್ಕೂಟರ್ ಅನ್ನು ಬ್ಯಾಟರಿ ರಹಿತ ಮತ್ತು ಬ್ಯಾಟರಿ ಸಹಿತ ಮಾರಾಟ ಆರಂಭಿಸಿದ್ದು, ಕಂಪನಿಯು ಬ್ಯಾಟರಿ ವಿನಿಯಮ ಮತ್ತು ಸೇವೆಗಳನ್ನು ಪರಿಚಯಿಸಿಸುವುದರಿಂದ ಹೊಸ ಸ್ಕೂಟರಿನ ಶೇ.40 ನಷ್ಟು ಬೆಲೆ ಕಡಿಮೆ ಮಾಡಲು ಸಹಕಾರಿಯಾಗಿದೆ.

ಇವಿ ಸ್ಕೂಟರ್ ಟೆಸ್ಟ್ ರೈಡ್ ಆಯೋಜಿಸಿದ ಬೌನ್ಸ್

ಹೊಸ ಆಯ್ಕೆಯಿಂದ ಗ್ರಾಹಕರು ಸ್ವಂತಕ್ಕೆ ಬ್ಯಾಟರಿ ಖರೀದಿಸಬಹುದು ಇಲ್ಲವೇ ಬ್ಯಾಟರಿ ವಿನಿಮಯ ಕೇಂದ್ರದಲ್ಲಿ ಚಂದಾದಾರಿಕೆ ಆಧಾರದ ಮೇಲೆ ಬ್ಯಾಟರಿ ವಿನಿಯಮ ಮಾಡಿಕೊಳ್ಳಬಹುದಾಗಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 45,099(ಬ್ಯಾಟರಿ ಮತ್ತು ಚಾರ್ಜರ್ ರಹಿತ) ಬೆಲೆ ಹೊಂದಿದ್ದರೆ ಬ್ಯಾಟರಿ ಜೋಡಣೆ ಹೊಂದಿರುವ ಬೌನ್ಸ್ ಇವಿ ಸ್ಕೂಟರ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 68,999 ಬೆಲೆ ಹೊಂದಿದೆ.

ಇವಿ ಸ್ಕೂಟರ್ ಟೆಸ್ಟ್ ರೈಡ್ ಆಯೋಜಿಸಿದ ಬೌನ್ಸ್

ಹೊಸ ಸ್ಕೂಟರ್ ಮಾದರಿಯು ಹೆಚ್ಚುವರಿ ಸಬ್ಸಡಿ ಹೊಂದಿರುವ ದೆಹಲಿ, ಗುಜರಾತ್, ಕರ್ನಾಟಕ, ದೆಹಲಿ, ಮಾಹಾರಾಷ್ಟ್ರ ಮತ್ತು ರಾಜಸ್ತಾನ ರಾಜ್ಯಗಳನ್ನು ಹೊರತುಪಡಿಸಿ ಇನ್ನುಳಿದ ರಾಜ್ಯಗಳಲ್ಲಿ ತುಸು ದುಬಾರಿಯಾಗಲಿದ್ದು, ಮೇಲೆ ನಮೂದಿಸಲಾದ ರಾಜ್ಯಗಳನ್ನು ಹೊರತುಪಡಿಸಿ ಇನ್ನುಳಿದ ರಾಜ್ಯಗಳಲ್ಲಿ ಹೊಸ ಸ್ಕೂಟರ್ ಬೆಲೆಯು ರೂ. 79,999 ದರ ಹೊಂದಿದೆ.

ಇವಿ ಸ್ಕೂಟರ್ ಟೆಸ್ಟ್ ರೈಡ್ ಆಯೋಜಿಸಿದ ಬೌನ್ಸ್

ಗುಜರಾತ್‌ನಲ್ಲಿ ಇತರೆ ರಾಜ್ಯಗಳಿಂತಲೂ ಹೆಚ್ಚಿನ ಮಟ್ಟದ ಸಬ್ಸಡಿ ಲಭ್ಯವಿದ್ದು, ಬ್ಯಾಟರಿ ರಹಿತವಾಗಿರುವ ಬೌನ್ಸ್ ಸ್ಕೂಟರ್ ಆರಂಭಿಕವಾಗಿ ಈ ರಾಜ್ಯದಲ್ಲಿ ಮಾತ್ರ ರೂ. 36 ಸಾವಿರ ಹೊಂದಿದೆ. ಹಾಗೆಯೇ ಬ್ಯಾಟರಿ ಸಹಿತ ಮಾದರಿಯ ಗುಜರಾತ್‌ನಲ್ಲಿ ರೂ. 59 ಸಾವಿರ ಬೆಲೆ ಹೊಂದಿದೆ. ಇನ್ನುಳಿದ ರಾಜ್ಯಗಳಲ್ಲಿ ಆಯಾ ರಾಜ್ಯ ಸರ್ಕಾರಗಳ ಸಬ್ಸಡಿ ಆಧರಿಸಿ ಬೆಲೆ ನಿರ್ಧಾರವಾಗಲಿದ್ದು, ಬೌನ್ಸ್ ಇವಿ ಸ್ಕೂಟರ್ ಮಾದರಿಯು ಅತ್ಯುತ್ತಮ ಬೆಲೆ ಪಡೆದುಕೊಂಡಿರುವ ಗ್ರಾಹಕರ ಪ್ರಮುಖ ಆಕರ್ಷಣೆಯಾಗಲಿದೆ.

ಇವಿ ಸ್ಕೂಟರ್ ಟೆಸ್ಟ್ ರೈಡ್ ಆಯೋಜಿಸಿದ ಬೌನ್ಸ್

ಇನ್ನು ಬೌನ್ಸ್ ಕಂಪನಿಯು ಹೊಸ ಇವಿ ಸ್ಕೂಟರ್ ಮಾದರಿಯಲ್ಲಿ 2kWh ಲೀಥಿಯಂ ಅಯಾನ್ ಬ್ಯಾಟರಿ ಅಳಡಿಸಿದ್ದು, ಅತ್ಯುತ್ತಮ ರೈಡಿಂಗ್ ಸೌಲಭ್ಯದೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 85 ಕಿ.ಮೀ ಮೈಲೇಜ್ ಪಡೆದುಕೊಳ್ಳಬಹುದಾಗಿದೆ.

ಇವಿ ಸ್ಕೂಟರ್ ಟೆಸ್ಟ್ ರೈಡ್ ಆಯೋಜಿಸಿದ ಬೌನ್ಸ್

ಹೊಸ ಇವಿ ಸ್ಕೂಟರ್‌ನಲ್ಲಿ ಬಿಎಲ್‌ಡಿಸಿ ಎಲೆಕ್ಟ್ರಿಕ್ ಮೋಟಾರ್ ಮೂಲಕ ಕೇವಲ 8 ಸೆಕೆಂಡುಗಳಲ್ಲಿ ಪ್ರತಿ ಗಂಟೆಗೆ ಸೊನ್ನೆಯಿಂದ 40 ಕಿ.ಮೀ ವೇಗ ಪಡೆದುಕೊಳ್ಳಬಹುದಾಗಿದ್ದು, ಹೊಸ ಸ್ಕೂಟರ್‌ನಲ್ಲಿ ಪ್ರತಿ ಗಂಟೆಗೆ ಗರಿಷ್ಠ 65 ಕಿ.ಮೀ ಟಾಪ್ ಸ್ಪೀಡ್‌ನೊಂದಿಗೆ ಡ್ರ್ಯಾಗ್ ಮತ್ತು ರಿವರ್ಸ್ ರೈಡ್ ಮೋಡ್ ನೀಡಲಾಗಿದೆ.

ಇವಿ ಸ್ಕೂಟರ್ ಟೆಸ್ಟ್ ರೈಡ್ ಆಯೋಜಿಸಿದ ಬೌನ್ಸ್

ಜೊತೆಗೆ ಬೌನ್ಸ್ ಕಂಪನಿಯು ಹೊಸ ಸ್ಕೂಟರ್ ಮೇಲೆ ಸ್ಟ್ಯಾಂಡರ್ಡ್ ಆಗಿ 3 ವರ್ಷ ಅಥವಾ 45 ಸಾವಿರ ಕಿ.ಮೀ ತನಕ ವಾರಂಟಿ ಘೋಷಣೆ ಮಾಡಿದ್ದು, ಶೋರೂಂಗಳ ಬದಲಾಗಿ ಕಂಪನಿಯು ಸಂಪೂರ್ಣವಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕ ಸ್ಕೂಟರ್ ಮಾರಾಟ ಮತ್ತು ಗ್ರಾಹಕರ ಸೇವೆಗಳನ್ನು ಮನೆಬಾಗಿಲಿಗೆ ತಲುಪಿಸಲಿದೆ.

ಇವಿ ಸ್ಕೂಟರ್ ಟೆಸ್ಟ್ ರೈಡ್ ಆಯೋಜಿಸಿದ ಬೌನ್ಸ್

ಹೊಸ ಇವಿ ಸ್ಕೂಟರ್ ಮಾದರಿಯಲ್ಲಿ ಕಂಪನಿಯು ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಿದ್ದು, ರೌಂಡ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ರೆಟ್ರೊ-ಶೈಲಿಯ ಫ್ರಂಟ್ ಫೆಂಡರ್, ಎಲ್‌ಸಿಡಿ ಇನ್ಸ್ ಟ್ರೂಮೆಂಟ್ ಕನ್ಸೋಲ್, ಸಿಂಗಲ್ ಪೀಸ್ ಸೀಟ್, 12 ಇಂಚಿನ ಸ್ಪೋರ್ಟಿ ಅಲಾಯ್ ವ್ಹೀಲ್ಸ್, ಪ್ರಮುಖ ಗ್ರ್ಯಾಬ್ ರೈಲ್ ಮತ್ತು ಹರಿತವಾದ ಟೈಲ್ ಲ್ಯಾಂಪ್‌ನಂತಹ ವೈಶಿಷ್ಟ್ಯತೆಗಳೊಂದಿಗೆ ಏರೋಡೈನಾಮಿಕ್ ಪ್ರೊಫೈಲ್ ಹೊಂದಿದೆ.

ಇವಿ ಸ್ಕೂಟರ್ ಟೆಸ್ಟ್ ರೈಡ್ ಆಯೋಜಿಸಿದ ಬೌನ್ಸ್

ಹಾಗೆಯೇ ಹೊಸ ಇವಿ ಸ್ಕೂಟರ್‌ನಲ್ಲಿ 12 ಲೀಟರ್ ಸಾಮರ್ಥ್ಯದ ಅಂಡರ್ ಸೀಟ್ ಸ್ಟೊರೇಜ್, ಹೈ ಎಂಡ್ ಸ್ಕೂಟರ್‌ಗಳಲ್ಲಿ ಕಂಡುಬರುವ ಕ್ಯಾನ್ಬಸ್ ಜೊತೆ ಹೈಡ್ರಾಲಿಕ್ ಟೆಲಿಸ್ಕೋಪಿಕ್ ಫ್ರಂಟ್ ಸಸ್ಷೆಂಷನ್ ಹಾಗೂ ಹಿಂಬದಿಯಲ್ಲಿ ಟ್ವಿನ್ ಶಾಕ್ ಅಬ್ಸಾರ್ಬರ್ ಹೊಂದಿದೆ.

ಇವಿ ಸ್ಕೂಟರ್ ಟೆಸ್ಟ್ ರೈಡ್ ಆಯೋಜಿಸಿದ ಬೌನ್ಸ್

ಬೌನ್ಸ್ ಸ್ಕೂಟರ್‌ನಲ್ಲಿ ಸುರಕ್ಷತೆಗಾಗಿ ಓವರ್/ಅಂಡರ್ ವೊಲ್ಟೇಜ್ ಪ್ರೊಟೆಕ್ಷನ್, ಸೈಡ್ ಸ್ಟ್ಯಾಂಡ್ ಸೆನ್ಸಾರ್, ಬ್ಯಾಟರಿ ಮತ್ತು ಮೋಟಾರ್ ಕಂಟ್ರೋಲರ್, ವಿಸಿಯು, ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಸ್ಕೂಟರ್ ಚಾಲನೆಯನ್ನು ಸರಳಗೊಳಿಸುವ ಕನೆಕ್ಟೆಡ್ ಫೀಚರ್ಸ್, ಆಂಟಿ ಥೆಪ್ಟ್ ಅಲಾರಾಂ ಸೌಲಭ್ಯ ಹೊಂದಿದೆ.

ಇವಿ ಸ್ಕೂಟರ್ ಟೆಸ್ಟ್ ರೈಡ್ ಆಯೋಜಿಸಿದ ಬೌನ್ಸ್

ಇದರೊಂದಿಗೆ ಹೊಸ ಸ್ಕೂಟರ್ ಮಾದರಿಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಸ್ಪೋರ್ಟಿ ರೆಡ್, ಸ್ಪಾರ್ಕಲ್ ಬ್ಲ್ಯಾಕ್, ಪರ್ಲ್ ವೈಟ್, ಡಿಸ್ಯಾಟ್ ಸಿಲ್ವರ್ ಮತ್ತು ಗ್ರೇ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಮಾರುಕಟ್ಟೆಯಲ್ಲಿ ಪ್ರಮುಖ ಇವಿ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದೆ.

ಇವಿ ಸ್ಕೂಟರ್ ಟೆಸ್ಟ್ ರೈಡ್ ಆಯೋಜಿಸಿದ ಬೌನ್ಸ್

ಇದರೊಂದಿಗೆ ಬೌನ್ಸ್ ಕಂಪನಿಯು ಈ ಬ್ಯಾಟರಿ ಸೌಲಭ್ಯಕ್ಕಾಗಿ ವಿನಿಮಯ ಕೇಂದ್ರಗಳನ್ನು ತೆರೆಯುತ್ತಿದ್ದು, ವಿನಿಮಯ ಕೇಂದ್ರಗಳು ಶಾಪಿಂಗ್ ಕಾಂಪ್ಲೆಕ್ಸ್‌, ಮಾಲ್‌, ಕಾರ್ಪೊರೇಟ್ ಕಚೇರಿ, ಮೆಟ್ರೋ ನಿಲ್ದಾಣಗಳು, ಪಾರ್ಕಿಂಗ್ ವಲಯ ಹಾಗೂ ಇತರ ಪ್ರಮುಖ ಸ್ಥಳಗಳಲ್ಲಿ ಲಭ್ಯವಿರಲಿವೆ.

More from DriveSpark

Article Published On: Wednesday, March 9, 2022, 15:21 [IST]
English summary
Bounce begin four more cities infinity e1 electric scooter test rides soon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+