Bounce: ಬೆಂಗಳೂರಿನ ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಭಾರೀ ಇಳಿಕೆ.. ರೂ.89,900 ಆರಂಭಿಕ ದರ

ಬೆಂಗಳೂರು (Bengaluru) ಮೂಲದ ಬೌನ್ಸ್ ಇನ್ಫಿನಿಟಿ (Bounce Infinity) ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದ್ದು, ತನ್ನ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದೆ. ಇ1 ಪ್ಲಸ್ (E1+) ಎಲೆಕ್ಟ್ರಿಕ್ ಸ್ಕೂಟರ್ ದರವನ್ನು ರೂ.24,000 ಇಳಿಕೆ ಮಾಡಲಾಗಿದೆ ಎಂದು ಘೋಷಿಸಿದೆ.

ಇದೀಗ ನೂತನ ಬೌನ್ಸ್ ಇನ್ಫಿನಿಟಿ ಇ1 ಪ್ಲಸ್ (Bounce Infinity E1+) ಎಲೆಕ್ಟ್ರಿಕ್ ಸ್ಕೂಟರ್, ರೂ.89,999 ಎಕ್ಸ್ ಶೋರೂಂ ದರವನ್ನು ಹೊಂದಿದೆ. ಪರಿಷ್ಕೃತ ದರಗಳು ಇಂದಿನಿಂದ ದೇಶಾದ್ಯಂತ ಜಾರಿಗೆ ಬರಲಿದ್ದು, ಮಾರ್ಚ್ 31, 2024 ರವರೆಗೆ ಮಾನ್ಯವಾಗಿರಲಿದೆ. ಬೆಲೆ ಕಡಿಮೆ ಮಾಡಿರುವುದರಿಂದ ಇ1 ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಸುಲಭವಾಗಿ ಗ್ರಾಹಕರ ಕೈಗೆಟುಕಲಿದೆ.

Bounce Infinity E1+ Electric Scooter Price cut Rs 24,000: Starting Price Rs 89,900

ಬೌನ್ಸ್ ಇನ್ಫಿನಿಟಿ ಇ1 ಪ್ಲಸ್ ಇ-ಸ್ಕೂಟರ್‌ನಲ್ಲಿ 2 ಕೆಡಬ್ಲ್ಯೂಹೆಚ್ (kWh) ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಮತ್ತು 2.2 ಕೆಡಬ್ಲ್ಯೂ (kW) ಸಾಮರ್ಥ್ಯದ ಎಲೆಕ್ಟ್ರಿಕ್ ಮೋಟಾರ್ ಬಳಕೆ ಮಾಡಲಾಗಿದೆ. ಪೂರ್ತಿ ಚಾರ್ಜ್ ನಲ್ಲಿ 85 ಕಿ.ಮೀ ರೇಂಜ್ (ಮೈಲೇಜ್) ನೀಡುತ್ತದೆ. ಗಂಟೆಗೆ 65 ಕಿ.ಮೀ ಗರಿಷ್ಠ ವೇಗವನ್ನು ಪಡೆಯಲಿದೆ.

ಹೊಸ ಬೌನ್ಸ್ ಇನ್ಫಿನಿಟಿ ಇ1 ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಸಸ್ಪೆನ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಪೋರ್ಕ್ಸ್, ಹಿಂಭಾಗ (ರೇರ್) ಟ್ವಿನ್ ಸ್ಪ್ರಿಂಗ್ ಶಾರ್ಕ್ಸ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಬ್ರೇಕಿಂಗ್ ಸಿಸ್ಟಮ್ ವಿಚಾರಕ್ಕೆ ಬರುವುದಾದರೆ, ಈ ಸ್ಕೂಟರ್ ಮುಂಭಾಗ ಮತ್ತು ಹಿಂಭಾಗ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಒಳಗೊಂಡಿದೆ.

Bounce Infinity E1+ Electric Scooter Price cut Rs 24,000: Starting Price Rs 89,900

ಈ ಎಲೆಕ್ಟ್ರಿಕ್ ಸ್ಕೂಟರ್ ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಎಲ್ಇಡಿ ಲೈಟಿಂಗ್ ಸಿಸ್ಟಮ್, ಸ್ಮಾರ್ಟ್‌ಫೋನ್ ಕನೆಕ್ಟ್ ಮಾಡಲು ಸಾಧ್ಯವಾಗುವಂತಹ ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಪಡೆದಿದೆ. ಜೊತೆಗೆ ಗ್ರೇ, ಬ್ಲೂ, ಗ್ರೀನ್, ಡಾರ್ಕ್ ಗ್ರೇ, ಯೆಲ್ಲೋ ಸೇರಿದಂತೆ ಆಕರ್ಷಕ ಬಣ್ಣಗಳೊಂದಿಗೆ ಬೌನ್ಸ್ ಇನ್ಫಿನಿಟಿ ಇ1 ಪ್ಲಸ್ ಇ-ಸ್ಕೂಟರ್ ಖರೀದಿಗೆ ಲಭ್ಯವಿದೆ.

ಕೆಲವೇ ದಿನಗಳ ಹಿಂದೆ, ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಓಲಾ (Ola) ತನ್ನ ಎಸ್1 (S1) ಸರಣಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆಯನ್ನು ದೊಡ್ಡಮಟ್ಟದಲ್ಲಿ ಇಳಿಕೆ ಮಾಡಿತ್ತು. ಪರಿಷ್ಕೃತ ಬೆಲೆಗಳು ಈ ಫೆಬ್ರವರಿಯಲ್ಲಿ ಮಾತ್ರ ಮಾನ್ಯವಾಗಿರಲಿದೆ ಎಂದು ವರದಿಯಾಗಿತ್ತು. ದರ ಕಡಿತದ ಬಳಿಕ, ಕಂಪನಿಯ ಆರಂಭಿಕ ಆವೃತ್ತಿ ಎಸ್1 ಎಕ್ಸ್ ಪ್ಲಸ್ (S1 X+) ಸ್ಕೂಟರ್‌ನ್ನು ರೂ.84,999 (ಎಕ್ಸ್ ಶೋರೂಂ)ಕ್ಕೆ ಕೊಂಡುಕೊಳ್ಳಬಹುದು.

ಬೆಲೆ ಇಳಿಕೆಗೆ ಕಾರಣವೇನು?: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾಟರಿ ಸೆಲ್ ಬೆಲೆಗಳು ಗಣನೀಯವಾಗಿ ಕಡಿಮೆಯಾಗಿರುವುದರಿಂದ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳು ಬೆಲೆಯನ್ನು ಪರಿಷ್ಕರಿಸುತ್ತಿವೆ. ಎಲೆಕ್ಟ್ರಿಕ್ ವೆಹಿಕಲ್ (ಇವಿ) ಉತ್ಪಾದನೆಯಲ್ಲಿ ಬ್ಯಾಟರಿಗಾಗಿಯೇ ಸುಮಾರು 40% ಹಣವನ್ನು ವ್ಯಯಿಸುತ್ತಿವೆ. ಮುಂಬರುವ ದಿನಗಳಲ್ಲಿ ಬ್ಯಾಟರಿ ಸೆಲ್ ದರಗಳು ಮತ್ತಷ್ಟು ಇಳಿಕೆಯಾಗುವ ನೀರಿಕ್ಷೆಯಿದೆ. ಅದಕ್ಕೆ ತಕ್ಕಂತೆ ಎಲೆಕ್ಟ್ರಿಕ್ ವಾಹನಗಳ ದರಗಳು ಕಡಿಮೆಯಾಗಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, February 22, 2024, 14:34 [IST]
English summary
Bounce infinity e1 plus electric scooter price cut rs 24000 starting price rs 89900
Read more on ಬೌನ್ಸ್ bounce
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+