Just In
Don't Miss!
- Sports
ಐರ್ಲೆಂಡ್ನ ಹ್ಯಾರಿ ಟೆಕ್ಟರ್ಗೆ ಬ್ಯಾಟ್ ಗಿಫ್ಟ್ ನೀಡಿದ ಹಾರ್ದಿಕ್ ಪಾಂಡ್ಯ
- Movies
ಸಿಧು ಮೂಸೆವಾಲಾ ಹಾಡಿದ್ದ ಕೊನೆಯ ಹಾಡು ಬಿಡುಗಡೆ ಆದ ಮೂರೇ ದಿನಕ್ಕೆ ಡಿಲೀಟ್!
- News
Breaking; ತುರ್ತಾಗಿ ಬನ್ನಿ, ಸಿದ್ದರಾಮಯ್ಯ, ಡಿಕೆಶಿಗೆ ಹೈಕಮಾಂಡ್ ಕರೆ
- Lifestyle
ನಿಮ್ಮಿಬ್ಬರ ಸಂಬಂಧ ಹೀಗಿದ್ದರೆ ಒಟ್ಟಿಗಿದ್ದು ಪಡುವ ನರಕಕ್ಕಿಂತ ಗುಡ್ಬೈ ಹೇಳುವುದೇ ಬೆಸ್ಟ್!
- Finance
ಜೂ.27ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Education
UAS Dharwad Recruitment 2022 : ಅರೆಕಾಲಿಕ ಉಪನ್ಯಾಸಕ ಹುದ್ದೆಗಳಿಗೆ ಜು.2ಕ್ಕೆ ನೇರ ಸಂದರ್ಶನ
- Technology
‘ಫಾಸ್ಟ್ಯಾಗ್' ನಲ್ಲಿರುವ ಹಣವನ್ನು ಕದಿಯಬಹುದಾ? ವೈರಲ್ ವೀಡಿಯೊದ ಅಸಲಿಯತೆ ಏನು?
- Travel
ನಾಡ ಹಬ್ಬ ಮೈಸೂರು ದಸರಾ - ನವರಾತ್ರಿ ಉತ್ಸವ 2022
ನಮ್ಮ ಬೆಂಗಳೂರಿನಲ್ಲಿ ಮೊದಲ ಇವಿ ಬ್ಯಾಟರಿ ವಿನಿಮಯ ಕೇಂದ್ರ ಆರಂಭಿಸಿದ ಬೌನ್ಸ್ ಇನ್ಫಿನಿಟಿ
ಬೌನ್ಸ್ ಇನ್ಪಿನಿಟಿ ಕಂಪನಿಯು ತನ್ನ ಹೊಸ ಇ1 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯ ಮೂಲಕ ಇವಿ ವಾಹನ ಉದ್ಯಮದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಕಂಪನಿಯು ಇವಿ ಸ್ಕೂಟರ್ ಜೊತೆ ಚಾರ್ಜಿಂಗ್ ನಿಲ್ದಾಣಗಳ ಸೌಲಭ್ಯವನ್ನು ಹೆಚ್ಚಿಸುವ ಉದ್ದೇಶದೊಂದಿಗೆ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸುತ್ತಿದೆ.

ಇವಿ ಸ್ಕೂಟರ್ ಮಾರಾಟದೊಂದಿಗೆ ಬೌನ್ಸ್ ಕಂಪನಿಯು ತನ್ನ ಗ್ರಾಹಕರಿಗೆ ಬ್ಯಾಟರಿ ರಹಿತ ಮತ್ತು ಸಹಿತವಾಗಿ ಇವಿ ಸ್ಕೂಟರ್ ಅನ್ನು ಖರೀದಿಸುವ ಅವಕಾಶ ನೀಡಿದ್ದು, ಬ್ಯಾಟರಿ ರಹಿತ ಇವಿ ಸ್ಕೂಟರ್ ಖರೀದಿಸುವ ಗ್ರಾಹಕರು ಪ್ರತ್ಯೇಕವಾಗಿ ಬ್ಯಾಟರಿ ವಿನಿಮಯ ಕೇಂದ್ರಗಳೊಂದಿಗೆ ಚಂದಾದಾರಿಕೆ ಪಡೆದುಕೊಂಡು ಬ್ಯಾಟರಿ ಸೌಲಭ್ಯವನ್ನು ಅಳವಡಿಸಿಕೊಳ್ಳಬಹುದು.

ಬ್ಯಾಟರಿ ವಿನಿಮಯ ಸೌಲಭ್ಯವು ಭವಿಷ್ಯದಲ್ಲಿ ಸಾಮಾನ್ಯ ಇವಿ ಚಾರ್ಜಿಂಗ್ ನಿಲ್ದಾಣಗಳಿಂತಲೂ ಹೆಚ್ಚಿನ ಬೇಡಿಕೆ ಪಡೆದುಕೊಳ್ಳಲಿದ್ದು, ಚಾರ್ಜ್ ಮಾಡಲಾದ ಬ್ಯಾಟರಿಯನ್ನು ಖಾಲಿಯಾದ ಬ್ಯಾಟರಿಯೊಂದಿಗೆ ವಿನಿಮಯ ಮಾಡಿಕೊಳ್ಳುವ ಸೌಲಭ್ಯ ಇದಾಗಿದೆ.

ಬಿಡುವಿಲ್ಲದ ಕೆಲಸ ಒತ್ತಡದಲ್ಲಿ ಗ್ರಾಹಕರಿಗೆ ಚಾರ್ಜಿಂಗ್ ಸೌಲಭ್ಯಕ್ಕಾಗಿ ಕಾಯುವ ಬೇಕಿರುವ ಅನಿವಾರ್ಯತೆಯನ್ನು ಬ್ಯಾಟರಿ ವಿನಿಯಮ ಕೇಂದ್ರಗಳು ತಪ್ಪಿಸಲಿದ್ದು, ಗ್ರಾಹಕರು ಬ್ಯಾಟರಿ ಖಾಲಿಯಾದ ನಂತರ ನಿಗದಿತ ದರ ಪಾವತಿಸಿ ಮತ್ತೊಂದು ಬ್ಯಾಟರಿಯನ್ನು ಬದಲಾಯಿಸಿಕೊಳ್ಳಬಹುದಾದ ಸೌಲಭ್ಯ ಇದಾಗಿದೆ.

ಹೀಗಾಗಿ ಬ್ಯಾಟರಿ ವಿನಿಮಯದ ಮೇಲೆ ಹೆಚ್ಚಿನ ಹೂಡಿಕೆ ಮಾಡುತ್ತಿರುವ ಬೌನ್ಸ್ ಇನ್ಫಿನಿಟಿ ಕಂಪನಿಯು ಹೊಸ ಸೌಲಭ್ಯವನ್ನು ವಿಸ್ತರಿಸಲು ಪ್ರಮುಖ ಕಂಪನಿಗಳೊಂದಿಗೆ ಪಾಲುದಾರಿಕೆ ಪ್ರಕಟಿಸುತ್ತಿದ್ದು, ಹೊಸ ಪಾಲುದಾರಿಕೆ ಯೋಜನೆ ಅಡಿ ಕಂಪನಿಯು ಇದೀಗ ಮೊದಲ ಬ್ಯಾಟರಿ ವಿನಿಮಯ ಕೇಂದ್ರಕ್ಕೆ ಚಾಲನೆ ನೀಡಿದೆ.

ಹೊಸ ಪಾಲುದಾರಿಕೆ ಯೋಜನೆ ಅಡಿ ಕಂಪನಿಯು ಪೆಟ್ರೋಲ್ ಬಂಕ್, ಶಾಪಿಂಗ್ ಕಾಂಪ್ಲೆಕ್ಸ್, ಬಸ್ ನಿಲ್ದಾಣ ಪಾರ್ಕಿಂಗ್ ಸ್ಥಳಗಳಲ್ಲಿ ಬ್ಯಾಟರಿ ವಿನಿಮಯ ತೆರೆಯಲಿದ್ದು, ಇದೀಗ ಮೊದಲ ಬ್ಯಾಟರಿ ವಿನಿಮಯ ಕೇಂದ್ರವನ್ನು ಕಂಪನಿಯು ದೇಶದ ಪ್ರಮುಖ ತೈಲ ಮಾರಾಟ ಕಂಪನಿಯಾದ ಭಾರತ್ ಪೆಟ್ರೋಲಿಯಂ ಜೊತೆಗೂಡಿ ನಮ್ಮ ಬೆಂಗಳೂರಿನಲ್ಲಿ ಮೊದಲ ಬ್ಯಾಟರಿ ವಿನಿಮಯ ಕೇಂದ್ರ ಸ್ಥಾಪಿಸಿದೆ.

ಬೌನ್ಸ್ ಇನ್ಫಿನಿಟಿಯು ಭಾರತದಾದ್ಯಂತ ಪ್ರಮುಖ 10 ನಗರಗಳಲ್ಲಿ ಸುಮಾರು 3 ಸಾವಿರ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಲು ಯೋಜಿಸಿದ್ದು, ಭಾರತ್ ಪೆಟ್ರೋಲಿಯಂ ಜೊತೆಗೆ ಮಾತ್ರವಲ್ಲದೆ ಬ್ಯಾಟರಿ ವಿನಿಮಯ ಕೇಂದ್ರಗಳಿಗಾಗಿ ಗ್ರೀವ್ಸ್ ಎಲೆಕ್ಟ್ರಿಕ್ ಮತ್ತು ಬ್ಯಾಟ್‌ಆರ್‌ಇ ಜೊತೆಗೂ ಇದೇ ರೀತಿಯ ಪಾಲುದಾರಿಕೆಯನ್ನು ಘೋಷಿಸಿದೆ.

ಹೊಸ ಯೋಜನೆಯ ಪರಿಣಾಮ ಬ್ಯಾಟರಿ ವಿನಿಮಯ ಕೇಂದ್ರಗಳು ಇನ್ಮುಂಡೆ ಶಾಪಿಂಗ್ ಕಾಂಪ್ಲೆಕ್ಸ್, ಬೃಹತ್ ಮಾಲ್‌ಗಳಲ್ಲಿ, ಕಾರ್ಪೊರೇಟ್ ಕಚೇರಿಗಳಲ್ಲಿ, ಮೆಟ್ರೋ ನಿಲ್ದಾಣಗಳ ಪಾರ್ಕಿಂಗ್ ಸ್ಥಳಗಳಲ್ಲಿ ಹಾಗೂ ಇತರ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಲಭ್ಯವಿರಲಿದ್ದು, ಇದಕ್ಕಾಗಿಯೇ ಪ್ರತ್ಯೇಕ ಆ್ಯಪ್ ಅಭಿವೃದ್ದಿಪಡಿಸಿರುವ ಬೌನ್ಸ್ ಕಂಪನಿಯು ಬ್ಯಾಟರಿ ವಿನಿಯಮ ಮತ್ತು ಸೇವೆಗಳನ್ನು ಸರಳಗೊಳಿಸಿದೆ.

ಇದು ಇವಿ ಸ್ಕೂಟರ್ ಮಾಲೀಕತ್ವ ಮತ್ತು ಬಳಕೆಯನ್ನು ಮತ್ತಷ್ಟು ಸುಲಭಗೊಳಿಸಲಿದ್ದು, ಬ್ಯಾಟರಿ ಚಾರ್ಜ್ ಮಾಡಲು ಗಂಟೆಗಟ್ಟಲೇ ಕಾಯಬೇಕಾದ ಅನಿವಾರ್ಯತೆಯನ್ನು ಇದು ತಪ್ಪಿಸಲಿದೆ. ವಿನಿಮಯ ಕೇಂದ್ರಗಳಲ್ಲಿ ಖಾಲಿಯಾಗಿರುವ ಬ್ಯಾಟರಿಗಳನ್ನು ಮರಳಿಸುವುದು ಮತ್ತು ರೀಚಾರ್ಜ್ ಮಾಡಲಾದ ಬ್ಯಾಟರಿ ಪಡೆಯುವುದು ಸುಲಭವಾಗಿದೆ.

ಬ್ಯಾಟರಿ ವಿನಿಮಯ ವ್ಯವಹಾರವನ್ನು ಗ್ರಾಹಕರು ಸಂಪೂರ್ಣವಾಗಿ ಆ್ಯಪ್ ಮೂಲಕ ನಿರ್ವಹಿಸಬಹುದಾಗಿದ್ದು, ವಿನಿಯಮ ಕೇಂದ್ರಗಳಲ್ಲಿ ಬ್ಯಾಟರಿ ಲಭ್ಯತೆ, ರೀಚಾರ್ಜ್ ದರ ಪಾವತಿಯು ಸಾಕಷ್ಟು ಸರಳವಾಗಿದೆ.

ಇನ್ನು ಬೌನ್ಸ್ ಕಂಪನಿಯು ಪರಿಚಯಿಸಿರುವ ಹೊಸ ಇನ್ಪಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 45,099(ಬ್ಯಾಟರಿ ಮತ್ತು ಚಾರ್ಜರ್ ರಹಿತ) ಬೆಲೆ ಹೊಂದಿದ್ದು, ಬ್ಯಾಟರಿ ಜೋಡಣೆ ಹೊಂದಿರುವ ಬೌನ್ಸ್ ಇವಿ ಸ್ಕೂಟರ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 68,999 ಬೆಲೆ ಹೊಂದಿದೆ.

ಬೌನ್ಸ್ ಕಂಪನಿಯು ಹೊಸ ಇವಿ ಸ್ಕೂಟರ್ ಮಾದರಿಯಲ್ಲಿ 2kWh ಲೀಥಿಯಂ ಅಯಾನ್ ಬ್ಯಾಟರಿ ಅಳಡಿಸಿದ್ದು, ಅತ್ಯುತ್ತಮ ರೈಡಿಂಗ್ ಸೌಲಭ್ಯದೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 85 ಕಿ.ಮೀ ಮೈಲೇಜ್ ಪಡೆದುಕೊಳ್ಳಬಹುದಾಗಿದೆ.

ಹೊಸ ಇವಿ ಸ್ಕೂಟರ್‌ನಲ್ಲಿ ಬಿಎಲ್‌ಡಿಸಿ ಎಲೆಕ್ಟ್ರಿಕ್ ಮೋಟಾರ್ ಮೂಲಕ ಕೇವಲ 8 ಸೆಕೆಂಡುಗಳಲ್ಲಿ ಪ್ರತಿ ಗಂಟೆಗೆ ಸೊನ್ನೆಯಿಂದ 40 ಕಿ.ಮೀ ವೇಗ ಪಡೆದುಕೊಳ್ಳಬಹುದಾಗಿದ್ದು, ಹೊಸ ಸ್ಕೂಟರ್‌ನಲ್ಲಿ ಪ್ರತಿ ಗಂಟೆಗೆ ಗರಿಷ್ಠ 65 ಕಿ.ಮೀ ಟಾಪ್ ಸ್ಪೀಡ್‌ನೊಂದಿಗೆ ಡ್ರ್ಯಾಗ್ ಮತ್ತು ರಿವರ್ಸ್ ರೈಡ್ ಮೋಡ್ ನೀಡಲಾಗಿದೆ.

ಜೊತೆಗೆ ಬೌನ್ಸ್ ಕಂಪನಿಯು ಹೊಸ ಸ್ಕೂಟರ್ ಮೇಲೆ ಸ್ಟ್ಯಾಂಡರ್ಡ್ ಆಗಿ 3 ವರ್ಷ ಅಥವಾ 50 ಸಾವಿರ ಕಿ.ಮೀ ತನಕ ವಾರಂಟಿ ಘೋಷಣೆ ಮಾಡಿದ್ದು, ಶೋರೂಂಗಳ ಬದಲಾಗಿ ಕಂಪನಿಯು ಸಂಪೂರ್ಣವಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕ ಸ್ಕೂಟರ್ ಮಾರಾಟ ಮತ್ತು ಗ್ರಾಹಕರ ಸೇವೆಗಳನ್ನು ಮನೆಬಾಗಿಲಿಗೆ ತಲುಪಿಸಲಿದೆ.