ಇವಿ ಬ್ಯಾಟರಿ ವಿನಿಮಯ ಸೌಲಭ್ಯಕ್ಕಾಗಿ ಬೌನ್ಸ್ ಜೊತೆ ಪಾಲುದಾರಿಕೆ ಪ್ರಕಟಿಸಿದ ಗ್ರಿವ್ಸ್ ರಿಟೇಲ್
ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಹೊಸ ಕ್ರಾಂತಿ ಆರಂಭಿಸಿರುವ ಬೌನ್ಸ್ ಕಂಪನಿಯು ಉದ್ಯಮ ವಿಭಾಗದಲ್ಲಿ ಮೊದಲ ಬಾರಿಗೆ ಇವಿ ವಾಹನಗಳಿಗಾಗಿ ಬ್ಯಾಟರಿ ವಿನಮಯ ಆಯ್ಕೆ ನೀಡಿದ್ದು, ಬೌನ್ಸ್ ಕಂಪನಿಯು ಹೊಸ ಯೋಜನೆಗೆ ಇವಿ ಉದ್ಯಮದಲ್ಲಿ ಸಾಕಷ್ಟು ಮೆಚ್ಚುಗೆಗೆ ಕಾರಣವಾಗಿದೆ.

ಬೌನ್ಸ್ ಕಂಪನಿಯು ತನ್ನ ಮೊದಲ ಇವಿ ಸ್ಕೂಟರ್ ಮಾದರಿಯಾದ ಇನ್ಪಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿ ವಿತರಣೆಗೆ ಸಿದ್ದಗೊಳ್ಳುತ್ತಿದ್ದು, ಇವಿ ಸ್ಕೂಟರ್ ಜೊತೆಗೆ ಕಂಪನಿಯು ಬ್ಯಾಟರಿ ರೀಚಾರ್ಜ್ ಮಾಡಲು ಸುಲಭ, ಸರಳ ಮತ್ತು ಅತಿ ಕಡಿಮೆ ಅವಧಿಯಲ್ಲಿ ಬ್ಯಾಟರಿ ಸೇವೆಗಳನ್ನು ಪಡೆದುಕೊಳ್ಳಬಹುದಾದ ಬ್ಯಾಟರಿ ವಿನಿಯಮ ಕೇಂದ್ರಗಳನ್ನು ಸ್ಥಾಪಿಸುತ್ತಿದೆ.

ಎಲೆಕ್ಟ್ರಿಕ್ ವಾಹನಗಳಿಗೆ ಸುಲಭವಾಗಿ ಬ್ಯಾಟರಿ ಸೇವೆಗಳನ್ನು ಒದಗಿಸಲು ಬ್ಯಾಟರಿ ವಿನಿಮಯ ಕೇಂದ್ರಗಳು ಸಾಕಷ್ಟು ಸಹಕಾರಿಯಾಗಿದ್ದು, ಬೌನ್ಸ್ ಕಂಪನಿಯು ಇವಿ ಸ್ಕೂಟರ್ ಉತ್ಪಾದನೆಯ ಜೊತೆಗೆ ಬೌನ್ಸ್ ಇನ್ಪಿನಿಟಿ ಎನ್ನುವ ಬ್ಯಾಟರಿ ನಿರ್ವಹಣೆಯ ಪ್ರತ್ಯೇಕ ವಿಭಾಗವನ್ನು ತೆರೆದು ಕಾರ್ಯನಿರ್ವಹಿಸುತ್ತಿದೆ.

ಬೌನ್ಸ್ ಇನ್ಪಿನಿಟಿ ಬ್ಯಾಟರಿ ನಿರ್ವಹಣಾ ವಿಭಾಗವು ಬೌನ್ಸ್ ಇವಿ ಸ್ಕೂಟರ್‌ಗಳಿಗೆ ಮಾತ್ರವಲ್ಲ ಹೊಸ ಪಾಲುದಾರಿಕೆ ಅಡಿ ವಿವಿಧ ಕಂಪನಿಗಳಿಗೂ ಬ್ಯಾಟರಿ ಸೇವೆಗಳನ್ನು ಒದಗಿಸುವ ಯೋಜನೆ ಹೊಂದಿದ್ದು, ಇದೀಗ ಕಂಪನಿಯು ವಾಣಿಜ್ಯ ವಾಹನಗಳ ಅತಿದೊಡ್ಡ ಸೇವಾ ಜಾಲಾ ಹೊಂದಿರುವ ಗ್ರಿವ್ಸ್ ರಿಟೇಲ್ ಜೊತೆ ಪಾಲುದಾರಿಕೆ ಪ್ರಕಟಿಸಿದೆ.

ಗ್ರಿವ್ಸ್ ರಿಟೇಲ್ ಕಂಪನಿಯು ಗ್ರಿವ್ಸ್ ಎಂಜಿನಿಯರಿಂಗ್ ಕಂಪನಿಯ ಪಾಲುದಾರ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಗ್ರಿವ್ಸ್ ಎಂಜಿನಿಯರಿಂಗ್ ಅಡಿಯಲ್ಲಿ ಪ್ರಮುಖ ಇವಿ ವಾಹನಗಳು ಉತ್ಪಾದನೆಗೊಳ್ಳುತ್ತಿದೆ. ಗ್ರಿವ್ಸ್ ಎಂಜಿನಿಯರಿಂಗ್ ಕಂಪನಿಯು ಸಹ ಬ್ರಾಂಡ್ ಇವಿ ವಾಹನಗಳಿಗೆ ಗ್ರಿಲ್ಸ್ ರಿಟೇಲ್‌ಗಳಲ್ಲಿ ಬೌನ್ಸ್ ಬ್ಯಾಟರಿ ಕೇಂದ್ರಗಳಿಂದ ಸೇವೆಯನ್ನು ಒದಗಿಸುವ ಯೋಜನೆ ರೂಪಿಸಿದೆ.

ಹೊಸ ಯೋಜನೆ ಅಡಿ ಬೌನ್ಸ್ ಕಂಪನಿಯು ದೇಶಾದ್ಯಂತ ಕಾರ್ಯನಿರ್ವಹುತ್ತಿರುವ ಗ್ರಿವ್ಸ್ ರಿಟೇಲ್ ವಾಣಿಜ್ಯ ವಾಹನಗಳ ಸರ್ವಿಸ್ ಸೆಂಟರ್‌ಗಳಲ್ಲಿ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಲಿದ್ದು, ಗ್ರಿವ್ಸ್ ಎಂಜಿನಿಯರಿಂಗ್ ಕಂಪನಿಯು ಸಹ ಬ್ರಾಂಡ್ ಇವಿ ವಾಹನಗಳಿಗೆ ಬ್ಯಾಟರಿ ವಿನಿಮಯ ಸೇವೆಗಳನ್ನು ನೀಡಲಿದೆ.

ಬೌನ್ಸ್ ಇನ್ಪಿನಿಟಿ ಕಂಪನಿಯು ಹೊಸ ಯೋಜನೆ ಅಡಿ ಆರಂಭಿಕವಾಗಿ ದೇಶದ ಪ್ರಮುಖ 10 ನಗರಗಳಲ್ಲಿ ಸುಮಾರು 300 ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆ ಹೊಂದಿದ್ದು, ಪ್ರಾಯೋಗಿಕವಾಗಿ ಕಂಪನಿಯು ನಮ್ಮ ಬೆಂಗಳೂರಿನಲ್ಲಿ ಬ್ಯಾಟರಿ ವಿನಿಮಯ ಸೇವೆಗಳಿಗೆ ಈಗಾಗಲೇ ಅಧಿಕೃತವಾಗಿ ಚಾಲನೆ ನೀಡಿದೆ.

ಗ್ರಿವ್ಸ್ ಎಂಜಿನಿಯರಿಂಗ್ ಕಂಪನಿಯ ಇವಿ ಬ್ರಾಂಡ್ ಆಂಪಿಯರ್ ಸದ್ಯ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಆಂಪಿಯರ್ ಬ್ರಾಂಡ್ ಅಡಿ ಇವಿ ಸ್ಕೂಟರ್ ಮತ್ತು ಸಣ್ಣ ಗಾತ್ರದ ವಾಣಿಜ್ಯ ವಾಹನಗಳನ್ನು ಸಹ ಮಾರಾಟ ಮಾಡುತ್ತಿದೆ.

ಬೌನ್ಸ್ ಕಂಪನಿ ಜೊತೆಗಿನ ಬ್ಯಾಟರಿ ವಿನಿಯಮ ಸೌಲಭ್ಯದೊಂದಿಗೆ ಆಂಪಿಯರ್ ಬ್ರಾಂಡ್ ಅಡಿ ಇವಿ ಸ್ಕೂಟರ್ ಮತ್ತು ಸಣ್ಣ ಗಾತ್ರದ ವಾಣಿಜ್ಯ ವಾಹನಗಳಿಗೆ ಅಗತ್ಯ ಬ್ಯಾಟರಿ ಪೂರೈಕೆ ಮಾಡುವ ಗುರಿಹೊಂದಲಾಗಿದ್ದು, ತಡೆರಹಿತ ಇವಿ ವಾಣಿಜ್ಯ ವಾಹನ ಸೇವೆಗಳಿಗೆ ಇದು ಮಹತ್ವದ ಯೋಜನೆಯಾಗಿದೆ.

ಬ್ಯಾಟರಿ ವಿನಿಮಯವು ವೇಗದ ಚಾರ್ಜಿಂಗ್ ತಂತ್ರಜ್ಞಾನದ ಅಗತ್ಯವಿಲ್ಲದೇ ಎಲೆಕ್ಟ್ರಿಕ್ ವಾಹನಗಳಿಗೆ ತ್ವರಿತವಾಗಿ ಚಾರ್ಜ್ ಮಾಡಲಾದ ಬ್ಯಾಟರಿ ಒದಗಿಸುವ ಮಾರ್ಗವಾಗಿದೆ. ಇವಿ ಬಳಕೆದಾರರು ಬ್ಯಾಟರಿ ವಿನಿಮಯ ಕೇಂದ್ರಗಳಿಗೆ ಅಗತ್ಯ ಸಂದರ್ಭದಲ್ಲಿ ಭೇಟಿ ನೀಡಬಹುದು ಮತ್ತು ಖಾಲಿಯಾದ ಬ್ಯಾಟರಿಯನ್ನು ಹಿಂದಿರುಗಿಸಿ ಚಾರ್ಜ್ ಮಾಡಲಾದ ಬ್ಯಾಟರಿಯೊಂದಿಗೆ ಬದಲಾಯಿಕೊಳ್ಳಬಹುದು.

ಇದಕ್ಕಾಗಿ ಭಾರತದಲ್ಲಿ ಇಂಧನ ಆಧಾರಿತ ವಾಹನಗಳನ್ನು ಖಡಿತಗೊಳಿಸಲು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳಲು ಬ್ಯಾಟರಿ ವಿನಿಮಯ ನೀತಿಯನ್ನು ಜಾರಿಗೆ ತರಲಾಗುತ್ತಿದ್ದು, ಬ್ಯಾಟರಿ ವಿನಿಮಯ ತಂತ್ರಜ್ಞಾನವು ಬಳಕೆದಾರರಿಗೆ ತಮ್ಮ ವಾಹನಗಳನ್ನು ಕೆಲವೇ ನಿಮಿಷಗಳಲ್ಲಿ ರೀಚಾರ್ಜ್ ಮಾಡಲು ಮತ್ತು ಬ್ಯಾಟರಿ ರೇಂಜ್ ಆತಂಕವನ್ನು ತೊಡೆದುಹಾಕಲು ಸಾಕಷ್ಟು ಸಹಕಾರಿಯಾಗಲಿದೆ.

ಬ್ಯಾಟರಿ ವಿನಿಮಯ ತಂತ್ರಜ್ಞಾನವನ್ನು ಸಾಮೂಹಿಕ ಅಳವಡಿಕೆಯಲ್ಲಿ ಹಲವಾರು ಸವಾಲುಗಳಿದ್ದು, ಹೊಸ ನೀತಿಯ ಮೂಲಕ ಭಾರತದಲ್ಲಿ ಇವಿ ಬಳಕೆಗೆ ಇರುವ ಸವಾಲುಗಳನ್ನು ಪರಿಹರಿಸಲು ಮತ್ತು ಇವಿ ವಾಹನ ಮಾರಾಟ ಹೆಚ್ಚಿಸಲು ಗುರಿಯನ್ನು ಹೊಂದಿದೆ.

ಬ್ಯಾಟರಿ ವಿನಿಮಯ ನೀತಿಯು ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯು ತ್ವರಿತ ಗತಿಯಲ್ಲಿ ಬೆಳವಣಿಗೆ ಸಾಧಿಸಲು ಮತ್ತು ಭಾರತದಲ್ಲಿ ಇವಿ ವಾಹನಗಳನ್ನು ವೇಗವಾಗಿ ಅಳವಡಿಸಿಕೊಳ್ಳಲು ಸಹಾಯ ಮಾಡಲಿದೆ.

ಮುಖ್ಯವಾಗಿ ಎಲೆಕ್ಟ್ರಿಕ್ ವಾಹನಗಳಲ್ಲಿ ಬಳಸಲಾದ ಬ್ಯಾಟರಿ ಪ್ಯಾಕ್ ಅನ್ನು ಸಾಮಾನ್ಯೀಕರಿಸಲು ಎಲ್ಲಾ ಇವಿ ವಾಹನ ತಯಾರಕರು ಒಂದೇ ಮಾನದಂಡವನ್ನು ಅನುಸರಿಸುವ ಅಗತ್ಯವಿದೆ. ಇದನ್ನು ಹೊಸ ಬ್ಯಾಟರಿ ವಿನಿಮಯ ನೀತಿಯಲ್ಲಿ ಉಲ್ಲೇಖಿಸಲಾಗಿದ್ದು, ಹೊಸ ನೀತಿಯಲ್ಲಿ ಮಾನದಂಡಗಳನ್ನು ಶೀಘ್ರದಲ್ಲಿಯೇ ಕಡ್ಡಾಯಗೊಳ್ಳಲಿವೆ.


Click it and Unblock the Notifications