ಯುವಕರ ಹಾಟ್ ಫೆವರೇಟ್ 'ಹೀರೋ ಎಕ್ಸ್‌ಪಲ್ಸ್ 200T 4V' ಖರೀದಿಸಬೇಕೇ? ಇವುಗಳನ್ನು ನೆನಪಿಡಿ..

ಹೀರೋ ಮೋಟೊಕಾರ್ಪ್ ಇತ್ತೀಚೆಗೆ ತನ್ನ 'ಎಕ್ಸ್‌ಪಲ್ಸ್ 200T 4V' ಬೈಕ್ ಅನ್ನು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದು ಯುವಕರ ಹಾಟ್ ಫೆವರೇಟ್ ಆಗಿದೆ. ಎಕ್ಸ್‌ಪಲ್ಸ್ ಮಾದರಿಗಳು ಈಗಾಗಲೇ ಭಾರತದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿರುವುದರಿಂದ ಈ ಹೊಸ ಆವೃತ್ತಿಯು ಭರ್ಜರಿಯಾಗಿ ಮಾರಾಟವಾಗುವ ಸಾಧ್ಯತೆಯಿದೆ.

ಪ್ರಸ್ತುತ ಹೀರೋ ಮೋಟೋಕಾರ್ಪ್ ಸಹ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ಮತ್ತು ತನ್ನ ಮಾರುಕಟ್ಟೆ ಪಾಲನ್ನು ಇನ್ನಷ್ಟು ಸುಧಾರಿಸಲು ಎದುರು ನೋಡುತ್ತಿದೆ. ಅಂದಹಾಗೆ, ಇತ್ತೀಚಿಗೆ ಲಾಂಚ್ ಆಗಿರುವ ಹೀರೋ ಎಕ್ಸ್‌ಪಲ್ಸ್ 200T 4V ಬೈಕ್ ಖರೀದಿಸಲು, ಗ್ರಾಹಕರು ಬೆಲೆ ಮಾತ್ರವಲ್ಲದೆ ಬೈಕ್‌ನ ವಿನ್ಯಾಸ, ವೈಶಿಷ್ಟ್ಯಗಳು ಮತ್ತು ಎಂಜಿನ್ ಕಾರ್ಯಕ್ಷಮತೆಯನ್ನು ಸಹ ತಿಳಿದಿರಬೇಕು. ಇಲ್ಲಿ ಈ ಬೈಕ್‌ನ ಪ್ರಮುಖ ಐದು ಅಂಶಗಳ ಬಗ್ಗೆ ವಿವರವಾಗಿ ತಿಳಿಸಿಕೊಡುವ ಪ್ರಯತ್ನ ಮಾಡಲಾಗಿದೆ.

ಯುವಕರ ಹಾಟ್ ಫೆವರೇಟ್ ಹೀರೋ ಎಕ್ಸ್‌ಪಲ್ಸ್ 200T 4V ಖರೀದಿಸಬೇಕೇ?

ಬೆಲೆ:
ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಹೀರೋ ಎಕ್ಸ್‌ಪಲ್ಸ್ 200T 4V ಮೋಟಾರ್‌ಸೈಕಲ್ ನಲ್ಲಿ ಅದರ ಹಿಂದಿನ ಮೋಟಾರ್‌ಸೈಕಲ್‌ ಆವೃತ್ತಿಗಿಂತ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ. ಹೀರೋ ಎಕ್ಸ್‌ಪಲ್ಸ್ 200T ಯ ಫೇಸ್‌ಲಿಫ್ಟ್ ಆವೃತ್ತಿಯಾಗಿ ದೇಶದಲ್ಲಿ ಲಾಂಚ್ ಆಗಿದ್ದು,. ಬೆಲೆಗೆ ಸಂಬಂಧಿಸಿದಂತೆ, ಹೀರೋ ಎಕ್ಸ್‌ಪಲ್ಸ್ 200T 4V ಮೋಟಾರ್‌ಸೈಕಲ್‌ನ ಬೆಲೆ 1.25 ಲಕ್ಷ ರೂ.(ಎಕ್ಸ್ ಶೋರೂಂ, ಭಾರತ) ಇದ್ದು, ಬಹುತೇಕ ಖರೀದಿದಾರರಿಗೆ ಕೈಗೆಟುಕುವ ದರದಲ್ಲಿ ಇದೆ ಎಂದು ಹೇಳಬಹುದು.

ಪವರ್‌ಟ್ರೇನ್:
ನೂತನ ಹೀರೋ ಎಕ್ಸ್‌ಪಲ್ಸ್ 200T 4V, 199.6 ಸಿಸಿ, 4-ವಾಲ್ವ್, ಆಯಿಲ್-ಕೂಲ್ಡ್, ಸಿಂಗಲ್-ಸಿಲಿಂಡರ್, BS6 ಎಂಜಿನ್‌ ಮೂಲಕ ಖರೀದಿಗೆ ಲಭ್ಯವಿದೆ. ಇದು 8,500 rpm ನಲ್ಲಿ 18.83 bhp ಗರಿಷ್ಠ ಪವರ್ ಮತ್ತು 6,500 rpm ನಲ್ಲಿ 17.35 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ, ಈ ಎಂಜಿನ್ ಹೀರೋ ಹೀರೋ ಎಕ್ಸ್‌ಪಲ್ಸ್ 200T ಮೋಟಾರ್‌ಸೈಕಲ್‌ನಂತೆಯೇ ಅದೇ 5-ಸ್ಪೀಡ್ ಟ್ರಾನ್ಸ್‌ಮಿಷನ್‌ ಅನ್ನು ಪಡೆದುಕೊಂಡಿದೆ.

ಹಿಂದಿನ ಆವೃತ್ತಿಯ ಹೀರೋ ಎಕ್ಸ್‌ಪಲ್ಸ್ 200T 4V ಮೋಟಾರ್‌ಸೈಕಲ್ 199.6 ಸಿಸಿ, 2-ವಾಲ್ವ್ ಎಂಜಿನ್ ಅನ್ನು ಹೊಂದಿದ್ದು, 8,500 rpm ನಲ್ಲಿ 17.85 bhp ಗರಿಷ್ಠ ಪವರ್ ಮತ್ತು 6,500 rpm ನಲ್ಲಿ 16.15 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿತ್ತು. ನೂತನ ಹೀರೋ ಎಕ್ಸ್‌ಪಲ್ಸ್ 200T 4Vಯ 4-ವಾಲ್ವ್ ಪವರ್‌ಟ್ರೇನ್, ಹಿಂದಿನ ಆವೃತ್ತಿ 2-ವಾಲ್ವ್ ಎಂಜಿನ್‌ಗಿಂತ ಶೇಕಡ 6 ರಷ್ಟು ಹೆಚ್ಚು ಶಕ್ತಿಯುತವಾಗಿದೆ. ಇದು ಮೋಟಾರ್‌ಸೈಕಲ್‌ನ ಹೆಚ್ಚಿಗೆ ವೇಗಕ್ಕೆ ಕಾರಣವಾಗಿದೆ.

ವೈಶಿಷ್ಟ್ಯಗಳು:
ಹೊಸ ಹೀರೋ ಎಕ್ಸ್‌ಪಲ್ಸ್ 200T 4V ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಯುಎಸ್‌ಬಿ ಚಾರ್ಜರ್, ಎಲ್ಇಡಿ ಹೆಡ್‌ಲೈಟ್, ಸ್ಮಾರ್ಟ್‌ ಫೋನ್ ಕನೆಕ್ಟ್, ಕಾಲ್ ಅಲರ್ಟ್, ಬ್ಲೂಟೂತ್ ಕನೆಕ್ಟಿವಿಟಿ, ಎಲ್ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಗೇರ್ ಇಂಡಿಕೇಟರ್ ಮತ್ತು ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್ ಆಫ್‌ ಸೇರಿದಂತೆ ಹತ್ತು-ಹಲವು ವೈಶಿಷ್ಟ್ಯಗಳನ್ನು ಈ ಮೋಟಾರ್‌ಸೈಕಲ್ ಹೊಂದಿದೆ ಎಂದು ಹೇಳಬಹುದು. ಇಷ್ಟೇ ಅಲ್ಲದೆ, ಟ್ರಿಪ್ ಮೀಟರ್, ಸರ್ವಿಸ್ ರಿಮೆಂಡರ್ ಅನ್ನು ಪಡೆದುಕೊಂಡಿದೆ.

ವಿನ್ಯಾಸ:
ಹೀರೋ ಎಕ್ಸ್‌ಪಲ್ಸ್ 200T 4V ವಿನ್ಯಾಸದ ಬಗ್ಗೆ ಮಾತನಾಡುವುದಾದರೆ, ಹೊಸ ಮೋಟಾರ್‌ಸೈಕಲ್ ಹಿಂದಿನ ಮಾದರಿಗಿಂತ ಆಕರ್ಷಣೀಯವಾಗಿ ಕಾಣುತ್ತದೆ. ರಸ್ತೆ ಸಂಚಾರಕ್ಕೆ ಅತ್ಯುತ್ತಮವಾಗಿದೆ ಎಂದು ಹೇಳಬಹುದು. ಆದಾಗ್ಯೂ, ಅದರ ಹಳೇಯ ಆವೃತ್ತಿಗಿಂತ ಸೂಕ್ಷ್ಮ ಬದಲಾವಣೆಗಳು ಹೊಸ ಮೋಟಾರ್‌ಸೈಕಲ್ ಅನ್ನು ಸ್ವಲ್ಪ ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ಬೆಲ್ಲಿ ಪ್ಯಾನ್, ಫೋರ್ಕ್ ಗೈಟರ್‌ಗಳು, ಹೊಸ ಫ್ಲೈ ಸ್ಕ್ರೀನ್ ಮತ್ತು ಹೊಸ ಡ್ಯುಯಲ್-ಟೋನ್ ಸೀಟ್‌ನಂತಹ ಕೆಲವು ಕಾಸ್ಮೆಟಿಕ್ ಅಪ್‌ಗ್ರೇಡ್‌ಗಳನ್ನು ಹೊಸ ಬೈಕ್ ಒಳಗೊಂಡಿವೆ.

ಬಣ್ಣ:
ಹೊಸ ಮೋಟಾರ್‌ಸೈಕಲ್ ಮೂರು ಬಣ್ಣ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಮ್ಯಾಟ್ ಫಂಕ್ ಲೈಮ್ ಯೆಲ್ಲೋ, ಮ್ಯಾಟ್ ಶೀಲ್ಡ್ ಗೋಲ್ಡ್ ಮತ್ತು ಸ್ಪೋರ್ಟ್ಸ್ ರೆಡ್. ಅಲ್ಲದೆ, ಒಟ್ಟಾರೆ ವಿನ್ಯಾಸವು ಅಂದವಾಗಿ ಅತ್ಯಂತ ಆಕರ್ಷಕವಾಗಿ ಕಾಣುವ ಗ್ರಾಫಿಕ್ಸ್‌ನೊಂದಿಗೆ ಬರುತ್ತದೆ. ಈ ಬೈಕ್ ಯುವಕರನ್ನು ತನ್ನತ್ತ ಸೆಳೆಯಲಿದೆ ಎಂದು ಅಂದಾಜಿಸಲಾಗಿದ್ದು, ಇದರ ಬಿಡುಗಡೆಯೊಂದಿಗೆ ದೇಶದಲ್ಲಿ ತನ್ನ ಮಾರುಕಟ್ಟೆ ಪಾಲನ್ನು ಮತ್ತಷ್ಟು ವಿಸ್ತರಿಸಲು ಹೀರೋ ಮೋಟೋಕಾರ್ಪ್‌ಗೆ ಸಹಾಯ ಮಾಡುತ್ತದೆ ಎಂದು ನಿರೀಕ್ಷೆ ಮಾಡಲಾಗಿದೆ.

Most Read Articles

Kannada
English summary
Buy the youth favorite hero xpulse 200t 4v remember these
Story first published: Saturday, December 24, 2022, 9:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X