ಕೈಗೆಟುಕುವ ಬೆಲೆಯ ಬಜಾಜ್ ಪ್ಲಾಟಿನಾ 110 ಎಬಿಎಸ್ ಖರೀದಿಸುತ್ತಿದ್ದೀರಾ? ಈ ಅಂಶಗಳ ಬಗ್ಗೆ ತಿಳಿದಿರಲಿ...

ಭಾರತದಲ್ಲಿ ಪ್ರತಿಯೊಬ್ಬರು ಬಜಾಜ್ ಬೈಕ್‌ಗಳನ್ನು ಇಷ್ಟಪಡುತ್ತಾರೆ. ಅಷ್ಟರಮಟ್ಟಿಗೆ ಇವು ಜನಪ್ರಿಯತೆಯನ್ನು ಪಡೆದುಕೊಂಡಿದ್ದು, ಕೈಗೆಟಕುವ ಬೆಲೆಯಲ್ಲಿ ದೊರೆಯುವುದರಿಂದ ಬಹುತೇಕರು ಇದೇ ಬಜಾಜ್ ಬೈಕ್‌ ಖರೀದಿಸಲು ಲೈಕ್ ಮಾಡುತ್ತಾರೆ. ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಬಜಾಜ್ ಪ್ಲಾಟಿನಾ 110 ಎಬಿಎಸ್ ಬಿಡುಗಡೆಯಾಗಿದೆ. ಇದಕ್ಕೆ ಗ್ರಾಹಕರಿಂದಲೂ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಭಾರತದಲ್ಲಿ ಲಾಂಚ್ ಆಗಿರುವ ಬಜಾಜ್ ಪ್ಲಾಟಿನಾ 110 ಮೋಟಾರ್‌ಸೈಕಲ್, ಎಬಿಎಸ್ (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್) ಒಳಗೊಂಡಿರುವ ಮೊದಲ ಕೈಗೆಟುವ ಬೆಲೆಯ ಬೈಕ್ ಆಗಿದೆ. ಮೋಟಾರ್‌ಸೈಕಲ್‌ಗಳಲ್ಲಿ ಎಬಿಎಸ್ ಬಳಕೆಯನ್ನು ಭಾರತ ಸರ್ಕಾರವು ಕಡ್ಡಾಯಗೊಳಿಸಿದೆ. ಅದರಂತೆ ಈ ಬೈಕ್‌ನಲ್ಲಿಯು ಇದರ ಅಳವಡಿಕೆ ಮಾಡಲಾಗಿದ್ದು, ಪ್ಲಾಟಿನಾ 110 ಎಬಿಎಸ್ ಬಗ್ಗೆ ಬೆಲೆ, ವೈಶಿಷ್ಟ್ಯ ಬಣ್ಣ, ಹಾಗೂ ಎಂಜಿನ್ ಕಾರ್ಯಕ್ಷಮತೆ ಸೇರಿದಂತೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ 5 ವಿಷಯಗಳು ಇಲ್ಲಿವೆ.

ಬಜಾಜ್ ಪ್ಲಾಟಿನಾ 110 ಎಬಿಎಸ್ ಖರೀದಿಸುತ್ತಿದ್ದೀರಾ? ಈ ಅಂಶಗಳ ಬಗ್ಗೆ ತಿಳಿದಿರಲಿ...

ಬೆಲೆ:
ಬಜಾಜ್ ದೇಶೀಯ ಮಾರುಕಟ್ಟೆಯಲ್ಲಿ ಹೊಸ ಪ್ಲಾಟಿನಾ 110 ಎಬಿಎಸ್ ಮೋಟಾರ್‌ಸೈಕಲ್ ಅನ್ನು ರೂ.72,224ಕ್ಕೆ ಬಿಡುಗಡೆ ಮಾಡಿದೆ (ಎಕ್ಸ್ ಶೋ ರೂಂ, ಭಾರತ). ಹೊಸದಾಗಿ ಬಿಡುಗಡೆಯಾದ ಬಜಾಜ್ ಪ್ಲಾಟಿನಾ 110 ಎಬಿಎಸ್ ಮೋಟಾರ್‌ಸೈಕಲ್ ಮಾರುಕಟ್ಟೆಯಲ್ಲಿರುವ ಪ್ಲಾಟಿನಾ 110 ಮೋಟಾರ್‌ಸೈಕಲ್‌ನ ಸ್ಟ್ಯಾಂಡರ್ಡ್ ರೂಪಾಂತರಕ್ಕಿಂತ ರೂ.3,680 ಹೆಚ್ಚು ದುಬಾರಿಯಾಗಿದೆ ಎಂದು ಹೇಳಬಹುದು. ಎಬಿಎಸ್ ವೈಶಿಷ್ಟ್ಯವನ್ನು ಹೊಂದಿರುವುದರಿಂದ ಇದು ಸ್ಟ್ಯಾಂಡರ್ಡ್ ಮಾಡೆಲ್‌ಗಿಂತ ಸಮರ್ಥನೀಯ ಬೆಲೆ ಏರಿಕೆ ಆಗಿದೆ.

ಎಂಜಿನ್ & ಗೇರ್ ಬಾಕ್ಸ್:
ಪವರ್‌ಟ್ರೇನ್‌ಗೆ ಸಂಬಂಧಿಸಿದಂತೆ, ಹೊಸದಾಗಿ ಬಿಡುಗಡೆಯಾದ ಬಜಾಜ್ ಪ್ಲಾಟಿನಾ 110 ಎಬಿಎಸ್ ಮೋಟಾರ್‌ಸೈಕಲ್ 115.45 ಸಿಸಿ, ಸಿಂಗಲ್-ಸಿಲಿಂಡರ್, ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿದೆ. ಇದು 7,000 rpmನಲ್ಲಿ 8.54 bhp ಗರಿಷ್ಠ ಪವರ್ ಮತ್ತು 5,000 rpmನಲ್ಲಿ 9.81Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇಷ್ಟೇ ಅಲ್ಲದೆ, ಹೊಸ ಬಜಾಜ್ ಪ್ಲಾಟಿನಾ 110 ಎಬಿಎಸ್ ಮೋಟಾರ್‌ಸೈಕಲ್ 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಖರೀದಿಗೆ ಲಭ್ಯವಿದೆ.

ವೈಶಿಷ್ಟ್ಯಗಳು:
ಹೊಸದಾಗಿ ಬಿಡುಗಡೆಯಾದ ಬಜಾಜ್ ಪ್ಲಾಟಿನಾ 110 ಎಬಿಎಸ್‌ನ ಅತಿ ದೊಡ್ಡ ವೈಶಿಷ್ಟ್ಯವೆಂದರೇ, ಅದರ ವಿಭಾಗದಲ್ಲಿ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ಹೊಂದಿರುವ ಏಕೈಕ ಮೋಟಾರ್‌ಸೈಕಲ್ ಇದಾಗಿದೆ. ಒಂದು ವೇಳೆ ಬ್ರೇಕ್ ವೈಪಲ್ಯವಾದರೂ ತೊಂದರೆಯಾಗವುದು ಕಡಿಮೆ. ಪರಿಣಾಮ ಈ ಮೋಟಾರ್‌ಸೈಕಲ್‌ ರೈಡಿಂಗ್ ಮಾಡಲು ಹೆಚ್ಚು ಸುರಕ್ಷಿತವಾಗಿದೆ. ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆನ್ಷನ್, ಡಿಜಿಟಲ್ ಸ್ಪೀಡೋಮೀಟರ್, ಅಲಾಯ್ ವೀಲ್‌ಗಳು ಹಾಗೂ ಗ್ಯಾಸ್-ಚಾರ್ಜ್ಡ್ ಟ್ವಿನ್ ರಿಯರ್ ಶಾಕ್‌ಗಳನ್ನು ಹೊಂದಿದೆ.

ಗ್ಯಾಸ್-ಚಾರ್ಜ್ಡ್ ಟ್ವಿನ್ ರಿಯರ್ ಶಾಕ್‌ಗಳು, ಕ್ಲಿಯರ್ ಲೆನ್ಸ್ ಹೆಡ್‌ಲ್ಯಾಂಪ್, ಎಲ್‌ಇಡಿ ಡಿಆರ್‌ಎಲ್, ಫ್ರಂಟ್ ಡಿಸ್ಕ್ ಬ್ರೇಕ್ ಸೇರಿದಂತೆ ಹಲವು ಆಧುನಿಕ ವೈಶಿಷ್ಟ್ಯಗನ್ನು ಹೊಂದಿದ್ದು, ಡಿಜಿಟಲ್ ಸ್ಪೀಡೋಮೀಟರ್‌ನಲ್ಲಿ ಇಂಟಿಗ್ರೇಟೆಡ್ ಎಬಿಎಸ್ ಇಂಡಿಕೇಟರ್, ಗೇರ್ ಪೊಸಿಷನ್ ಇಂಡಿಕೇಟರ್ ಮತ್ತು ಗೇರ್ ಚೇಂಜ್ ಇಂಡಿಕೇಟರ್, ಇದಲ್ಲದೆ, ಹೊಸದಾಗಿ ಬಿಡುಗಡೆಯಾಗಿರುವ ಬಜಾಜ್ ಪ್ಲಾಟಿನಾ 110 ಎಬಿಎಸ್ ಮೋಟಾರ್‌ಸೈಕಲ್ ಮುಂಭಾಗದ ವೀಲ್ ನ ಲಾಕ್-ಅಪ್ ತಡೆಯಲು ಸಿಂಗಲ್-ಚಾನೆಲ್ ಎಬಿಎಸ್ ಯುನಿಟ್ ಅನ್ನು ಪಡೆದುಕೊಂಡಿದೆ.

ಬಣ್ಣಗಳು:
ಹೊಸದಾಗಿ ಬಿಡುಗಡೆಯಾದ ಬಜಾಜ್ ಪ್ಲಾಟಿನಾ 110 ಎಬಿಎಸ್‌ ಮೋಟಾರ್‌ಸೈಕಲ್ ಬಣ್ಣಗಳ ಆಯ್ಕೆಗಳ ಹೇಳುವುದಾದರೆ, ಈ ಬೈಕ್, ನಾಲ್ಕು ಹೊಸ ಬಣ್ಣ ಆಯ್ಕೆಗಳೊಂದಿಗೆ ಖರೀದಿಗೆ ಸಿಗಲಿದೆ. ಅವುಗಳೆಂದರೆ, ಗ್ಲೋಸ್ ಪ್ಯೂಟರ್ ಗ್ರೇ, ಕಾಕ್‌ಟೈಲ್ ವೈನ್ ರೆಡ್, ಎಬೊನಿ ಬ್ಲಾಕ್ ಮತ್ತು ಸ್ಯಾಫೈರ್ ಬ್ಲೂ. ಇದಲ್ಲದೆ, ಹೊಸದಾಗಿ ಬಿಡುಗಡೆಯಾದ ಮೋಟಾರ್‌ಸೈಕಲ್ ತುಂಬಾ ಆಕರ್ಷಕವಾಗಿ ಕಾಣುವ ಬಾಡಿ ಗ್ರಾಫಿಕ್ಸ್‌ ಅನ್ನು ಪಡೆದುಕೊಂಡಿದೆ. ಇದರಿಂದ ಹೊಸ ಖರೀದಿದಾರರನ್ನು ತನ್ನತ್ತ ಸೆಳೆಯಲು ಬಜಾಜ್ ಕಂಪನಿಗೆ ಸಾಧ್ಯವಾಗುತ್ತದೆ.

ಸ್ಪರ್ಧೆ:
ಹೊಸದಾಗಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಬಜಾಜ್ ಪ್ಲಾಟಿನಾ 110 ಎಬಿಎಸ್ ಮೋಟಾರ್‌ಸೈಕಲ್, ಹೋಂಡಾ ಸಿಡಿ 110 ಡ್ರೀಮ್ ಡಿಲಕ್ಸ್, ಹೀರೋ ಪ್ಯಾಶನ್ ಪ್ರೊ ಮತ್ತು ಟಿವಿಎಸ್ ಸ್ಟಾರ್ ಸಿಟಿ ಪ್ಲಸ್‌ನಂತಹ ಇತರೆ ಮೋಟಾರ್‌ಸೈಕಲ್‌ಗಳಿಗೆ ಭಾರೀ ಪೈಪೋಟಿ ನೀಡಲಿದೆ. ಹೆಚ್ಚಿನ ದ್ವಿಚಕ್ರ ವಾಹನ ತಯಾರಕರು, ಎಬಿಎಸ್ ಅಳಡಿಸಿದ ಬೈಕುಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿ ಎಂಬುದು ಗ್ರಾಹಕರ ಬಯಕೆಯಾಗಿದೆ. ಅಲ್ಲದೆ, ಹೊಸ ಪ್ಲಾಟಿನಾ 110 ABS ಬಜಾಜ್ ಡೀಲರ್‌ಶಿಪ್‌ಗಳಿಗೆ ಹೆಚ್ಚಿನ ಖರೀದಿದಾರರನ್ನು ತನ್ನತ್ತ ಆಕರ್ಷಿಸಲಿದೆ ಎಂದು ಹೇಳಬಹುದು.

Most Read Articles

Kannada
English summary
Buying bajaj platina 110 ABS be aware of these factors
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X