ಪ್ರತಿ ಚಾರ್ಜ್‌ಗೆ 110 ಕಿ.ಮೀ ಮೈಲೇಜ್ ನೀಡುವ ಡರ್ಟ್ ಇವಿ ಬೈಕ್ ಅನಾವರಣಗೊಳಿಸಿದ ಸೈಬೋರ್ಗ್

ಇಗ್ನಿಟ್ರಾನ್ ಮೋಟೋಕಾರ್ಪ್ ಕಂಪನಿಯು ತನ್ನ ಸಹ ಬ್ರಾಂಡ್ ಸೈಬೋರ್ಗ್ ನಿರ್ಮಾಣದ ಎರಡನೇ ಹೊಸ ಇವಿ ದ್ವಿಚಕ್ರ ವಾಹನವನ್ನು ಅನಾವರಣಗೊಳಿಸಿದ್ದು, ಡರ್ಟ್ ವೈಶಿಷ್ಟ್ಯತೆ ಹೊಂದಿರುವ ಹೊಸ ಬಾಬ್-ಇ ದ್ವಿಚಕ್ರ ವಾಹನವನ್ನು ಅನಾವರಣಗೊಳಿಸಿದೆ.

ಪ್ರತಿ ಚಾರ್ಜ್‌ಗೆ 110 ಕಿ.ಮೀ ಮೈಲೇಜ್ ನೀಡುವ ಡರ್ಟ್ ಇವಿ ಬೈಕ್ ಅನಾವರಣಗೊಳಿಸಿದ ಸೈಬೋರ್ಗ್

ಇಂಧನ ಚಾಲಿತ ವಾಹನಗಳನ್ನು ತಗ್ಗಿಸಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರವು ಫೇಮ್ 2 ಸಬ್ಸಡಿ ಯೋಜನೆಯಡಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಕಂಪನಿಗಳಿಗೆ ಮತ್ತು ಖರೀದಿ ಮಾಡುವ ಗ್ರಾಹಕರಿಗೆ ಗರಿಷ್ಠ ಧನಸಹಾಯ ಒದಗಿಸುತ್ತಿದ್ದು, ಫೇಮ್ 2 ಯೋಜನೆಯ ಸಬ್ಸಡಿ ಜೊತೆಗೆ ವಿವಿಧ ರಾಜ್ಯದ ಸರ್ಕಾರಗಳು ಸಹ ಕೆಲವು ವಿನಾಯ್ತಿಗಳನ್ನು ನೀಡುತ್ತಿರುವುದು ಇವಿ ಸ್ಟಾಟ್‌ಅಪ್ ಕಂಪನಿಗಳಿಗೆ ಸಾಕಷ್ಟು ಪ್ರಯೋಜನಕಾರಿಯಾಗಿದೆ.

ಪ್ರತಿ ಚಾರ್ಜ್‌ಗೆ 110 ಕಿ.ಮೀ ಮೈಲೇಜ್ ನೀಡುವ ಡರ್ಟ್ ಇವಿ ಬೈಕ್ ಅನಾವರಣಗೊಳಿಸಿದ ಸೈಬೋರ್ಗ್

ಕೇಂದ್ರ ಸರ್ಕಾರದ ಹೊಸ ಯೋಜನೆಗಳ ಪರಿಣಾಮ ಹಲವಾರು ಸ್ಟಾರ್ಟ್ಅಪ್ ಕಂಪನಿಗಳು ಇವಿ ಉತ್ಪಾದನೆಗೆ ಪ್ರವೇಶಿಸಿದ್ದು, ಗುರಾಗ್ರಾಮ್ ಮೂಲದ ಇಗ್ನಿಟ್ರಾನ್ ಮೋಟೋಕಾರ್ಪ್ ಕಂಪನಿಯು ಸಹ ತನ್ನ ಸಹ ಬ್ರಾಂಡ್ ಸೈಬೋರ್ಗ್ ನಿರ್ಮಾಣದ ಹೊಸ ಮಾದರಿಯ ಇವಿ ದ್ವಿಚಕ್ರ ವಾಹನಗಳನ್ನು ಪರಿಚಯಿಸುವ ಸಿದ್ದವಾಗುತ್ತಿದೆ.

ಪ್ರತಿ ಚಾರ್ಜ್‌ಗೆ 110 ಕಿ.ಮೀ ಮೈಲೇಜ್ ನೀಡುವ ಡರ್ಟ್ ಇವಿ ಬೈಕ್ ಅನಾವರಣಗೊಳಿಸಿದ ಸೈಬೋರ್ಗ್

ಸೈಬೋರ್ಗ್ ಕಂಪನಿಯು ಕಳೆದ ತಿಂಗಳ ಹಿಂದಷ್ಟೇ ಯೋಧ ಎಲೆಕ್ಟ್ರಿಕ್ ಕ್ರೂಸರ್ ಬೈಕ್ ಅನಾವರಣಗೊಳಿಸಿದ್ದು, ಇದೀಗ ಬಾಬ್-ಇ ಎನ್ನುವ ಡರ್ಟ್ ವೈಶಿಷ್ಟ್ಯತೆಯ ಬೈಕ್ ಮಾದರಿಯನ್ನು ಅನಾವರಣಗೊಳಿಸಿದೆ.

ಸೈಬೋರ್ಗ್ ಕಂಪನಿಯು ಶೀಘ್ರದಲ್ಲೇ ತನ್ನ ಮೊದಲ ಇವಿ ಬೈಕ್ ಮಾದರಿಯ ಉತ್ಪಾದನಾ ಮಾದರಿಯನ್ನು ಅನಾವರಣಗೊಳಿಸಿದ್ದು, ಈ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಅಧಿಕೃತವಾಗಿ ಮಾರುಕಟ್ಟೆ ಪ್ರವೇಶಿಸಲಿವೆ.

ಪ್ರತಿ ಚಾರ್ಜ್‌ಗೆ 110 ಕಿ.ಮೀ ಮೈಲೇಜ್ ನೀಡುವ ಡರ್ಟ್ ಇವಿ ಬೈಕ್ ಅನಾವರಣಗೊಳಿಸಿದ ಸೈಬೋರ್ಗ್

ಹೊಸದಾಗಿ ಅನಾವರಣಗೊಳಿಸಿರುವ ಬಾಬ್-ಇ ಎಲೆಕ್ಟ್ರಿಕ್ ಬೈಕ್ ಮಾದರಿಯು ಕ್ರೂಸರ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರಲಿದ್ದು, 2.88 kWh ಲಿಥಿಯಂ-ಐಯಾನ್ ಡಿಟ್ಯಾಚೇಬಲ್ ಬ್ಯಾಟರಿಯೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 110 ಕಿಮೀ ಮೈಲೇಜ್ ವ್ಯಾಪ್ತಿ ಹೊಂದಿದೆ.

ಪ್ರತಿ ಚಾರ್ಜ್‌ಗೆ 110 ಕಿ.ಮೀ ಮೈಲೇಜ್ ನೀಡುವ ಡರ್ಟ್ ಇವಿ ಬೈಕ್ ಅನಾವರಣಗೊಳಿಸಿದ ಸೈಬೋರ್ಗ್

ಬಾಬ್-ಇ ಬೈಕ್ ಮಾದರಿಯು ಕ್ರೂಸರ್ ಬೈಕ್ ಮಾದರಿಯಲ್ಲಿ ಪ್ರತಿ ಗಂಟೆಗೆ ಗರಿಷ್ಠ 85 ಕಿಮೀ ಟಾಪ್ ಸ್ಪೀಡ್ ಹೊಂದಿದ್ದು, ಅಕ್ರಮಣಕಾರಿ ವಿನ್ಯಾಸ ಹೊಂದಿರುವ ಹೊಸ ಬೈಕಿನಲ್ಲಿ ಕಂಪನಿಯು ಇಕೋ, ಸ್ಪೋರ್ಟ್ಸ್ ಮತ್ತು ನಾರ್ಮಲ್ ಎನ್ನುವ ಮೂರು ರೈಡ್ ಮೋಡ್ ಜೋಡಿಸಿದೆ.

ಜೊತೆಗೆ ಹೊಸ ಬೈಕಿನಲ್ಲಿ ಸುರಕ್ಷತೆಗಾಗಿ ಜಿಯೋ ಫೆನ್ಸಿಂಗ್, ಜಿಯೋ ಲೊಕೇಟ್, ಕ್ರೂಸ್ ಕಂಟ್ರೊಲ್, ರಿವರ್ಸ್ ಮೋಡ್ ಜೊತೆಗೆ ಬ್ಯಾಟರಿ ಸ್ಟೆಟಸ್, ಯುಎಸ್‌ಬಿ ಚಾರ್ಜಿಂಗ್, ಬ್ಲೂಟೂತ್, ಕೀಲೆಸ್ ಇಗ್ನಿಷನ್ ಮತ್ತು ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ನಂತಹ ವೈಶಿಷ್ಟ್ಯತೆಗಳನ್ನು ನೀಡಿದೆ.

ಪ್ರತಿ ಚಾರ್ಜ್‌ಗೆ 110 ಕಿ.ಮೀ ಮೈಲೇಜ್ ನೀಡುವ ಡರ್ಟ್ ಇವಿ ಬೈಕ್ ಅನಾವರಣಗೊಳಿಸಿದ ಸೈಬೋರ್ಗ್

ಹಾಗೆಯೇ ಹೊಸ ಬೈಕಿನ ಮುಂಭಾಗದಲ್ಲಿ ಡೌನ್ ಹೆಡ್ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಜೋಡಿಸಿದ್ದು, ಹೊಸ ಎಲೆಕ್ಟ್ರಿಕ್ ಬೈಕ್ ಅನ್ನು ಕಪ್ಪು ಮತ್ತು ಸಿಲ್ವರ್ ಬಣ್ಣದ ಆಯ್ಕೆಗಳಲ್ಲಿ ಪರಿಚಯಿಸಲಾಗುತ್ತಿದೆ.

ಪ್ರತಿ ಚಾರ್ಜ್‌ಗೆ 110 ಕಿ.ಮೀ ಮೈಲೇಜ್ ನೀಡುವ ಡರ್ಟ್ ಇವಿ ಬೈಕ್ ಅನಾವರಣಗೊಳಿಸಿದ ಸೈಬೋರ್ಗ್

ಹೊಸ ಬೈಕ್ ಮಾದರಿಯಲ್ಲಿರುವ ಬ್ಯಾಟರಿ ಪ್ಯಾಕ್ ಅನ್ನು ಪೂರ್ತಿಯಾಗಿ ಚಾರ್ಜ್ ಮಾಡಲು ಹೋಂ ಚಾರ್ಜರ್ ಮೂಲಕ 4-5 ಗಂಟೆಗಳ ಕಾಲಾವಕಾಶ ತೆಗೆದುಕೊಳ್ಳಲಿದ್ದು, ಫಾಸ್ಟ್ ಚಾರ್ಜಿಂಗ್ ಸೌಲಭ್ಯದ ಮೂಲಕ ಕೇವಲ 30 ನಿಮಿಷಗಳಲ್ಲಿ ಶೇ.80 ಚಾರ್ಜ್ ಮಾಡಬಹುದಾಗಿದೆ.

ಪ್ರತಿ ಚಾರ್ಜ್‌ಗೆ 110 ಕಿ.ಮೀ ಮೈಲೇಜ್ ನೀಡುವ ಡರ್ಟ್ ಇವಿ ಬೈಕ್ ಅನಾವರಣಗೊಳಿಸಿದ ಸೈಬೋರ್ಗ್

ಸದ್ಯ ಹೊಸ ಡರ್ಟ್ ಇವಿ ಬೈಕ್ ಮಾದರಿಯನ್ನು ಅನಾವರಣಗೊಳಿಸಿರುವ ಸೈಬೋರ್ಗ್ ಕಂಪನಿಯು ಬಿಡುಗಡೆಯ ಹೊತ್ತಿಗೆ ಇನ್ನು ಕೆಲವು ಬದಲಾವಣೆ ಮಾಡಬಹುದಾಗಿದ್ದು, ಹೊಸ ಬೈಕ್ ಮಾದರಿಯು ರೂ. 1.20 ಲಕ್ಷದಿಂದ ರೂ. 1.50 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆ ಮಾಡಬಹುದಾಗಿದೆ.

ಪ್ರತಿ ಚಾರ್ಜ್‌ಗೆ 110 ಕಿ.ಮೀ ಮೈಲೇಜ್ ನೀಡುವ ಡರ್ಟ್ ಇವಿ ಬೈಕ್ ಅನಾವರಣಗೊಳಿಸಿದ ಸೈಬೋರ್ಗ್

ಸೈಬೋರ್ಗ್ ಕಂಪನಿಯು ಬಾಬ್-ಇ ಡರ್ಟ್ ಬೈಕ್ ಬಿಡುಗಡೆಗೂ ಮುನ್ನ ಯೋಧ ಕ್ರೂಸರ್ ಎಲೆಕ್ಟ್ರಿಕ್ ಬೈಕ್ ಮಾದರಿಯನ್ನು ಬಿಡುಗಡೆ ಮಾಡಲಿದ್ದು, ಹೊಸ ಯೋಧ ಇವಿ ಕ್ರೂಸರ್ ಮಾದರಿಯು ಪ್ರತಿ ಚಾರ್ಜ್‌ಗೆ 120 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಪ್ರತಿ ಚಾರ್ಜ್‌ಗೆ 110 ಕಿ.ಮೀ ಮೈಲೇಜ್ ನೀಡುವ ಡರ್ಟ್ ಇವಿ ಬೈಕ್ ಅನಾವರಣಗೊಳಿಸಿದ ಸೈಬೋರ್ಗ್

ಸದ್ಯ ಗುರುಗ್ರಾಮ್‌ನಲ್ಲಿ ತನ್ನ ಮೊದಲ ಸೈಬೋರ್ಗ್ ಇವಿ ಬೈಕ್ ಉತ್ಪಾದನಾ ಘಟಕವನ್ನು ತೆರೆದಿರುವ ಇಗ್ನಿಟ್ರಾನ್ ಮೋಟೋಕಾರ್ಪ್ ಕಂಪನಿಯು ಇವಿ ವಾಹನಗಳೊಂದಿಗೆ ಬ್ಯಾಟರಿ ವಿನಿಯಮ ಕೇಂದ್ರಗಳ ಸ್ಥಾಪನೆಯ ಮೇಲೂ ಹೆಚ್ಚಿನ ಗಮನಹರಿಸಿದ್ದು, ಭಾರೀ ಪ್ರಮಾಣದ ಹೂಡಿಕೆಯೊಂದಿಗೆ ಕಂಪನಿಯು ವಾರ್ಷಿಕವಾಗಿ 40 ಸಾವಿರ ಇವಿ ಬೈಕ್ ಉತ್ಪಾದನೆಗೆ ಯೋಜನೆ ರೂಪಿಸಿದೆ.

More from DriveSpark

Article Published On: Saturday, January 15, 2022, 19:02 [IST]
English summary
Cyborg bob e dirt electric bike unveiled details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+