ಆಕರ್ಷಕ ಬೆಲೆಯ ಸೈಬೋರ್ಗ್ ಯೋಧ, ಜಿಟಿ 120 ಮತ್ತು ಬಾಬ್-ಇ ಎಲೆಕ್ಟ್ರಿಕ್ ಬೈಕ್‌ಗಳು ಬಿಡುಗಡೆ

ಇಗ್ನಿಟ್ರಾನ್ ಮೋಟೋಕಾರ್ಪ್ ಕಂಪನಿಯು ತನ್ನ ಸೈಬೋರ್ಗ್ ಬ್ರಾಂಡ್ ಅಡಿ ವಿವಿಧ ಮಾದರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡಿದ್ದು, ಗ್ರಾಹಕರ ಬೇಡಿಕೆಯೆಂತೆ ಕಂಪನಿಯು ಪ್ರಮುಖ ಎಲೆಕ್ಟ್ರಿಕ್ ಬೈಕ್ ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಸೈಬೋರ್ಗ್ ಯೋಧ, ಜಿಟಿ 120 ಮತ್ತು ಬಾಬ್-ಇ ಎಲೆಕ್ಟ್ರಿಕ್ ಬೈಕ್‌ ಬಿಡುಗಡೆ

ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಕಳೆದ ಒಂದು ವರ್ಷದಲ್ಲಿ ಹಲವಾರು ಸ್ಟಾರ್ಟ್ಅಪ್ ಇವಿ ಕಂಪನಿಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಗುರಾಗ್ರಾಮ್ ಮೂಲದ ಇಗ್ನಿಟ್ರಾನ್ ಮೋಟೋಕಾರ್ಪ್ ಕಂಪನಿಯು ಸಹ ಸೈಬೋರ್ಗ್ ಬ್ರಾಂಡ್ ಅಡಿಯಲ್ಲಿ ವಿವಿಧ ಸೆಗ್ಮೆಂಟ್‌ಗಳಲ್ಲಿ ಒಟ್ಟು ಮೂರು ಇವಿ ದ್ವಿಚಕ್ರ ವಾಹನಗಳನ್ನು ಅಭಿವೃದ್ದಿಗೊಳಿಸಿದೆ.

ಸೈಬೋರ್ಗ್ ಯೋಧ, ಜಿಟಿ 120 ಮತ್ತು ಬಾಬ್-ಇ ಎಲೆಕ್ಟ್ರಿಕ್ ಬೈಕ್‌ ಬಿಡುಗಡೆ

ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಯೋಧ, ಬಾಬ್-ಇ ಮತ್ತು ಜಿಟಿ 120 ಎಲೆಕ್ಟ್ರಿಕ್ ಬೈಕ್‌ಗಳನ್ನು ಖರೀದಿ ಮಾಡಬಹುದಾಗಿದ್ದು, ಹೊಸ ಎಲೆಕ್ಟ್ರಿಕ್ ಬೈಕ್ ಮಾದರಿಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1,14,999 ರಿಂದ ಟಾಪ್ ಎಂಡ್ ಮಾದರಿಯು ರೂ. 1,84,999 ಬೆಲೆ ಹೊಂದಿವೆ.

ಯೋಧ- ರೂ. 1,14,999

ಬಾಬ್-ಇ- ರೂ. 1,64,999

ಜಿಟಿ 120- ರೂ. 1,14,999

ಸೈಬೋರ್ಗ್ ಯೋಧ, ಜಿಟಿ 120 ಮತ್ತು ಬಾಬ್-ಇ ಎಲೆಕ್ಟ್ರಿಕ್ ಬೈಕ್‌ ಬಿಡುಗಡೆ

ಸೈಬೋರ್ಗ್ ಕಂಪನಿಯು ಬಿಡುಗಡೆ ಮಾಡಿರುವ ಹೊಸ ಇವಿ ಬೈಕ್ ಮಾದರಿಗಳಲ್ಲಿ ಯೋಧ ಮಾದರಿಯು ಕ್ರೂಸರ್ ಬೈಕ್ ಆಗಿದ್ದರೆ ಬಾಬ್-ಇ ಬೈಕ್ ಡರ್ಟ್ ಆವೃತ್ತಿಯಾಗಿ ಮತ್ತು ಜಿಟಿ 120 ಮಾದರಿಯು ಸ್ಪೋರ್ಟ್ ಬೈಕ್ ಆವೃತ್ತಿಯಾಗಿ ಅಭಿವೃದ್ದಿಗೊಂಡಿವೆ.

ಸೈಬೋರ್ಗ್ ಯೋಧ, ಜಿಟಿ 120 ಮತ್ತು ಬಾಬ್-ಇ ಎಲೆಕ್ಟ್ರಿಕ್ ಬೈಕ್‌ ಬಿಡುಗಡೆ

ಹೊಸ ಬೈಕ್ ಮಾದರಿಗಳಲ್ಲಿ ಯೋಧ ಇ ಬೈಕ್ ಮಾದರಿಯು 3.24 kWH ಲೀಥಿಯಂ ಅಯಾನ್ ಬ್ಯಾಟರಿ ಮತ್ತು 8.5 KW ಎಲೆಕ್ಟ್ರಿಕ್ ಮೋಟಾರ್ ಜೋಡಣೆಯೊಂದಿಗೆ ಪ್ರತಿ ಚಾರ್ಜ್‌ಗೆ 150 ಕಿ.ಮೀ ಮೈಲೇಜ್(ಇಕೋ ಮೋಡ್) ಹಿಂದಿರುಗಿಸಲಿದ್ದು, ಪ್ರತಿ ಗಂಟೆಗೆ 90ಕಿ.ಮೀ ಟಾಪ್ ಸ್ಪೀಡ್ ಹೊಂದಿದೆ.

ಸೈಬೋರ್ಗ್ ಯೋಧ, ಜಿಟಿ 120 ಮತ್ತು ಬಾಬ್-ಇ ಎಲೆಕ್ಟ್ರಿಕ್ ಬೈಕ್‌ ಬಿಡುಗಡೆ

ಯೋಧ ಕ್ರೂಸರ್ ಇವಿ ಬೈಕ್ ಮಾದರಿಯು ಟಾಪ್ ಸ್ಪೀಡ್ ಚಾಲನೆಯಲ್ಲೂ ಪ್ರತಿ ಚಾರ್ಜ್‌ಗೆ ಕನಿಷ್ಠ 120 ಕಿ.ಮೀ ಮೈಲೇಜ್ ಖಾತ್ರಿಪಡಿಸಲಿದ್ದು, ಹೊಸ ಬೈಕ್ ಮಾದರಿಯು ಬ್ಲ್ಯಾಕ್ ಮತ್ತು ಸಿಲ್ವರ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ.

ಸೈಬೋರ್ಗ್ ಯೋಧ, ಜಿಟಿ 120 ಮತ್ತು ಬಾಬ್-ಇ ಎಲೆಕ್ಟ್ರಿಕ್ ಬೈಕ್‌ ಬಿಡುಗಡೆ

ಬಾಬ್-ಇ ಡರ್ಟ್ ಬೈಕ್ ಮಾದರಿಯು ಸಹ ಯೋಧ ಮಾದರಿಯೊಂದಿಗೆ ಹಲವು ತಾಂತ್ರಿಕ ಸೌಲಭ್ಯಗಳನ್ನು ಹಂಚಿಕೊಂಡಿದ್ದು, ಬಾಬ್-ಇ ಬೈಕಿನಲ್ಲಿ ಕಂಪನಿಯು 2.88 kWH ಲೀಥಿಯಂ ಅಯಾನ್ ಬ್ಯಾಟರಿ ಮತ್ತು 8.5 KW ಎಲೆಕ್ಟ್ರಿಕ್ ಮೋಟಾರ್ ಜೋಡಣೆಯೊಂದಿಗೆ ಪ್ರತಿ ಚಾರ್ಜ್‌ಗೆ 110 ಕಿ.ಮೀ ಮೈಲೇಜ್(ಇಕೋ ಮೋಡ್) ಹಿಂದಿರುಗಿಸಲಿದೆ.

ಸೈಬೋರ್ಗ್ ಯೋಧ, ಜಿಟಿ 120 ಮತ್ತು ಬಾಬ್-ಇ ಎಲೆಕ್ಟ್ರಿಕ್ ಬೈಕ್‌ ಬಿಡುಗಡೆ

ಹೊಸ ಬಾಬ್-ಇ ಡರ್ಟ್ ಬೈಕ್ ಮಾದರಿಯು ಪ್ರತಿ ಗಂಟೆಗೆ 85 ಕಿ.ಮೀ ಟಾಪ್ ಸ್ಪೀಡ್ ಹೊಂದಿದ್ದು, ಹೊಸ ಬೈಕ್ ಮಾದರಿಯು ಬ್ಲ್ಯಾಕ್ ಮತ್ತು ರೆಡ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ವಿನ್ಯಾಸದಲ್ಲಿ ವಿಭಿನ್ನತೆ ಹೊರತು ಪಡಿಸಿ ಯೋಧ ಮತ್ತು ಬಾಬ್-ಇ ಬೈಕ್ ತಾಂತ್ರಿಕ ಅಂಶಗಳು ಒಂದೇ ರೀತಿಯಲ್ಲಿರಲಿವೆ.

ಸೈಬೋರ್ಗ್ ಯೋಧ, ಜಿಟಿ 120 ಮತ್ತು ಬಾಬ್-ಇ ಎಲೆಕ್ಟ್ರಿಕ್ ಬೈಕ್‌ ಬಿಡುಗಡೆ

ಮೇಲಿನ ಎರಡೂ ಎಲೆಕ್ಟ್ರಿಕ್ ಬೈಕ್‌ಗಳನ್ನು ಕಂಪನಿಯು ಸ್ವಾಪ್ ಮಾಡಬಹುದಾದ ಬ್ಯಾಟರಿ ಆಯ್ಕೆ ನೀಡಿದ್ದು, ಹೊಸ ಬೈಕ್‌ಗಳಲ್ಲಿ ಜಿಯೋ ಲೊಕೇಟ್/ಜಿಯೋ ಫೆನ್ಸಿಂಗ್, ಬ್ಯಾಟರಿ ಸ್ಟೆಟಸ್, ಯುಎಸ್‌ಬಿ ಚಾರ್ಜಿಂಗ್, ಬ್ಲೂಟೂಥ್ ಕನೆಕ್ಟ್, ಕೀ ಲೆಸ್ ಇಗ್ನಿಷನ್ (ರಿಮೋಟ್ ಕಂಟ್ರೋಲ್) ಮತ್ತು ಡಿಜಿಟಲ್ ಕ್ಲಸ್ಟರ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿವೆ.

ಸೈಬೋರ್ಗ್ ಯೋಧ, ಜಿಟಿ 120 ಮತ್ತು ಬಾಬ್-ಇ ಎಲೆಕ್ಟ್ರಿಕ್ ಬೈಕ್‌ ಬಿಡುಗಡೆ

ಜೊತೆಗೆ ಹೊಸ ಬೈಕ್‌ಗಳಲ್ಲಿ ಬ್ಯಾಟರಿ ಪೋರ್ಟಬಲ್, 4- 5 ಗಂಟೆಗಳ ಪೂರ್ತಿ ಚಾರ್ಜ್ ಮಾಡಬಹುದಾದ ಬ್ಯಾಟರಿ ಬ್ಯಾಕ್-ಅಪ್, 15 amp ಫಾಸ್ಟ್ ಹೋಮ್ ಚಾರ್ಜರ್‌‌ ನೀಡಲಾಗಿದ್ದು, ಎರಡು ಬೈಕ್ ಮಾದರಿಗಳಲ್ಲೂ ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿರಲಿದೆ.

ಸೈಬೋರ್ಗ್ ಯೋಧ, ಜಿಟಿ 120 ಮತ್ತು ಬಾಬ್-ಇ ಎಲೆಕ್ಟ್ರಿಕ್ ಬೈಕ್‌ ಬಿಡುಗಡೆ

ಹಾಗೆಯೇ ಹೊಸ ಬೈಕ್‌ಗಳಲ್ಲಿ ರಿವರ್ಸ್ ಮೋಡ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಸಹ ಹೊಂದಿದ್ದು, ಟೆಲಿಸ್ಕೋಪಿಕ್ ಫೋರ್ಕ್ಸ್ ಅಪ್-ಫ್ರಂಟ್ ಮತ್ತು ಅತ್ಯುತ್ತಮ ಸವಾರಿ ಅನುಭವವನ್ನು ನೀಡಲು ಹಿಂಭಾಗದಲ್ಲಿ ಸಂಪೂರ್ಣವಾಗಿ ಹೊಂದಾಣಿಕೆ ಮಾಡಬಹುದಾದ ಮೊನೊ ಶಾಕ್‌ ಸೌಲಭ್ಯ ಹೊಂದಿರಲಿವೆ.

ಸೈಬೋರ್ಗ್ ಯೋಧ, ಜಿಟಿ 120 ಮತ್ತು ಬಾಬ್-ಇ ಎಲೆಕ್ಟ್ರಿಕ್ ಬೈಕ್‌ ಬಿಡುಗಡೆ

ಇನ್ನು ಸೈಬೋರ್ಗ್ ಕಂಪನಿಯ ಹೊಸ ಜಿಟಿ 120 ಬೈಕ್ ಮಾದರಿಯಲ್ಲಿ 4.68 kWH ಲೀಥಿಯಂ ಅಯಾನ್ ಬ್ಯಾಟರಿ ಮತ್ತು 6000 W ಬಿಎಲ್‌ಡಿಸಿ ಹಬ್ ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಲಾಗಿದ್ದು, ಬ್ಯಾಟರಿ ಪ್ಯಾಕ್ ತೆಗೆದುಹಾಕಲು ಸಾಕಷ್ಟು ತೂಕ ಹೊಂದಿರುವ ಹಿನ್ನಲೆಯಲ್ಲಿ ಈ ಬೈಕಿನಲ್ಲಿ ಮಾತ್ರ ಕಂಪನಿಯು ಫಿಕ್ಸ್ಡ್ ಬ್ಯಾಟರಿ ಜೋಡಣೆ ಮಾಡಿದೆ.

ಸೈಬೋರ್ಗ್ ಯೋಧ, ಜಿಟಿ 120 ಮತ್ತು ಬಾಬ್-ಇ ಎಲೆಕ್ಟ್ರಿಕ್ ಬೈಕ್‌ ಬಿಡುಗಡೆ

ಫಾಸ್ಟ್ ಚಾರ್ಜಿಂಗ್ ಚಾರ್ಜಿಂಗ್ ಸರ್ಪೊಟ್ ಹೊಂದಿರುವುದರಿಂದ ಜಿಟಿ 120 ಬೈಕ್ ಮಾದರಿಯನ್ನು ಅತಿ ಕಡಿಮೆ ಅವಧಿಯಲ್ಲಿ ಇದನ್ನು ಚಾರ್ಜ್ ಮಾಡಬಹುದಾಗಿದ್ದು, ಪ್ರತಿ ಗಂಟೆಗೆ 125 ಕಿ.ಮೀ ಟಾಪ್ ಸ್ಪೀಡ್‌ನೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 180 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಸೈಬೋರ್ಗ್ ಯೋಧ, ಜಿಟಿ 120 ಮತ್ತು ಬಾಬ್-ಇ ಎಲೆಕ್ಟ್ರಿಕ್ ಬೈಕ್‌ ಬಿಡುಗಡೆ

ಹೊಸ ಬೈಕಿನಲ್ಲಿ 260 ಎಂಎಂ ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ ಎನ್ನುವ ಮೂರು ರೈಡಿಂಗ್ ಮೋಡ್ ನೀಡಲಾಗಿದ್ದು, ರಿವರ್ಸ್ ಮೋಡ್, ವಿವಿಧ ರೀತಿದ ಶಬ್ದಗಳನ್ನು ಒಳಗೊಂಡಿರುವ ಪಾರ್ಕಿಂಗ್ ಅಸಿಸ್ಟ್ ಸೌಲಭ್ಯಗಳನ್ನು ಬೈಕ್ ಚಾಲನೆಯನ್ನು ಸುಲಭವಾಗಿಸುತ್ತದೆ.

ಸೈಬೋರ್ಗ್ ಯೋಧ, ಜಿಟಿ 120 ಮತ್ತು ಬಾಬ್-ಇ ಎಲೆಕ್ಟ್ರಿಕ್ ಬೈಕ್‌ ಬಿಡುಗಡೆ

ಇನ್ನುಳಿದಂತೆ ಹೊಸ ಜಿಟಿ 120 ಇವಿ ಸ್ಪೋರ್ಟ್ ಬೈಕಿನಲ್ಲಿ ಎಲ್ಇಡಿ ಸ್ಕ್ರೀನ್, ಐಪಿ65 ಪ್ರಮಾಣಿತ ಬಾಡಿ ಪ್ಯಾನೆಲ್, ರಿಜನರೇಟಿವ್ ಬ್ರೇಕಿಂಗ್ ಸಿಸ್ಟಂ, ಸಿಬಿಎಸ್ ಬ್ರೇಕಿಂಗ್ ಸಿಸ್ಟಂ ಜೊತೆ ಫ್ರಂಟ್ ಡಿಸ್ಕ್ ಸೇರಿದಂತೆ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಅಪ್ ಮತ್ತು ಹಿಂಬದಿಯಲ್ಲಿ ವಿವಿಧ ಹಂತಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಮೊನೊ ಶಾಕ್ ಸಸ್ಷೆಷನ್ ನೀಡಲಾಗಿದೆ.

ಸೈಬೋರ್ಗ್ ಯೋಧ, ಜಿಟಿ 120 ಮತ್ತು ಬಾಬ್-ಇ ಎಲೆಕ್ಟ್ರಿಕ್ ಬೈಕ್‌ ಬಿಡುಗಡೆ

ಇನ್ನುಳಿದಂತೆ ಹೊಸ ಎಲೆಕ್ಟ್ರಿಕ್ ಬೈಕಿನಲ್ಲಿ ಸುರಕ್ಷತೆಗಾಗಿ ಜಿಯೋ ಫೆನ್ಸಿಂಗ್ ಸೇರಿದಂತೆ ಬ್ಯಾಟರಿ ಸ್ಟೇಟಸ್, ಯುಎಸ್‌ಬಿ ಚಾರ್ಜಿಂಗ್, ಬ್ಲೂಟೂಥ್, ಕೀ ಲೆಸ್ ಇಗ್ನಿಷನ್(ರಿಮೋಟ್ ಕಂಟ್ರೋಲ್), ಡಿಜಿಟಲ್ ಕ್ಲಸ್ಟರ್ ನೀಡಲಾಗಿದೆ.

ಸೈಬೋರ್ಗ್ ಯೋಧ, ಜಿಟಿ 120 ಮತ್ತು ಬಾಬ್-ಇ ಎಲೆಕ್ಟ್ರಿಕ್ ಬೈಕ್‌ ಬಿಡುಗಡೆ

ಹಾಗೆಯೇ ಹೊಸ ಬೈಕ್‌ಗಳನ್ನು ಖರೀದಿಸುವ ಗ್ರಾಹಕರಿಗೆ ಕಂಪನಿಯು ಮೋಟಾರ್, ಬ್ಯಾಟರಿ ಮತ್ತು ಬೈಕ್ ಬಿಡಿಭಾಗಗಳ ಮೇಲೆ ಗರಿಷ್ಠ 5 ವರ್ಷಗಳ ವಾರಂಟಿ ಘೋಷಣೆ ಮಾಡಿದ್ದು, ಶೀಘ್ರದಲ್ಲಿಯೇ ಕಂಪನಿಯು ಹೊಸ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭಿಸುವುದರ ಜೊತೆಗೆ ವಿತರಣೆ ಮಾಡುವುದಾಗಿ ಹೇಳಿಕೊಂಡಿದೆ.

ಸೈಬೋರ್ಗ್ ಯೋಧ, ಜಿಟಿ 120 ಮತ್ತು ಬಾಬ್-ಇ ಎಲೆಕ್ಟ್ರಿಕ್ ಬೈಕ್‌ ಬಿಡುಗಡೆ

ಹೊಸ ಇವಿ ಬೈಕ್ ಮಾದರಿಗಳನ್ನು ಸೈಬೋರ್ಗ್ ಕಂಪನಿಯು ಸಂಪೂರ್ಣವಾಗಿ ಸ್ಥಳೀಯ ಬಿಡಿಭಾಗಗಳೊಂದಿಗೆ ಅಭಿವೃದ್ದಿಪಡಿಸಲಿದ್ದು, ಭಾರೀ ಪ್ರಮಾಣದ ಹೂಡಿಕೆಯೊಂದಿಗೆ ವಾರ್ಷಿಕವಾಗಿ 40 ಸಾವಿರ ಯುನಿಟ್ ಉತ್ಪಾದನೆಗೆ ಯೋಜನೆ ರೂಪಿಸಿದೆ. ಗುರುಗ್ರಾಮ್‌ನಲ್ಲಿ ತನ್ನ ಮೊದಲ ಇವಿ ಬೈಕ್ ಉತ್ಪಾದನಾ ಘಟಕವನ್ನು ತೆರೆಯಲು ಉದ್ದೇಶಿಸಿರುವ ಇಗ್ನಿಟ್ರಾನ್ ಮೋಟೋಕಾರ್ಪ್ ಕಂಪನಿಯು ಇವಿ ವಾಹನಗಳೊಂದಿಗೆ ಬ್ಯಾಟರಿ ವಿನಿಯಮ ಕೇಂದ್ರಗಳ ಸ್ಥಾಪನೆಯ ಮೇಲೂ ಹೆಚ್ಚಿನ ಗಮನಹರಿಸಿದೆ.

Most Read Articles

Kannada
English summary
Ignitron motocorp launched cyborg yoda gt 120 and bob e electric bikes in india
Story first published: Saturday, March 5, 2022, 13:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X