ಡಕಾರ್ ರ‍್ಯಾಲಿ 2022: ಹನ್ನೊಂದನೇ ಹಂತದ ಕಾರುಗಳ ವಿಭಾಗದಲ್ಲಿ ಅಬ್ಬರಿಸಿದ ಆಡಿ ಇ-ಟ್ರಾನ್

ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ 44ನೇ ಡಕಾರ್ ‌ರ‍್ಯಾಲಿಯು ಅಂತಿಮ ಘಟ್ಟಕ್ಕೆ ಬಂದು ತಲುಪಿದ್ದು, ಪ್ರಸಕ್ತ ವರ್ಷದ ಡಕಾರ್ ‌ರ‍್ಯಾಲಿಯ ಪ್ರತಿ ಹಂತದಲ್ಲೂ ವಿವಿಧ ತಂಡಗಳು ಹಲವು ಹೊಸ ದಾಖಲೆಗಳಿಗೆ ಸಾಕ್ಷಿಯಾಗುತ್ತಿವೆ.

ಡಕಾರ್ ರ‍್ಯಾಲಿ 2022: ಹನ್ನೊಂದನೇ ಹಂತದ ಕಾರುಗಳ ವಿಭಾಗದಲ್ಲಿ ಅಬ್ಬರಿಸಿದ ಆಡಿ ಇ-ಟ್ರಾನ್

2022ರ ಡಕಾರ್ ‌ರ‍್ಯಾಲಿಯು ಸೌದಿ ಅರೇಬಿಯಾದ ಜೆದ್ದಾದಿಂದ ಆರಂಭವಾಗಿ ಸದ್ಯ ಬಿಷಾ ನಗರಕ್ಕೆ ಬಂದು ತಲುಪಿದ್ದು, ಬರೋಬ್ಬರಿ 4 ಸಾವಿರ ಕಿ.ಮೀ ಅಂತರವನ್ನು ಒಳಗೊಂಡಿರುವ ಪ್ರಸಕ್ತ ವರ್ಷದ ರ‍್ಯಾಲಿಯಲ್ಲಿ 11ನೇ ಹಂತವು ಪೂರ್ಣಗೊಂಡಿದೆ. 11ನೇ ಹಂತದ ಒಟ್ಟು 346 ಕಿ.ಮೀ ಮಾರ್ಗದಲ್ಲಿ 155 ಕಿ.ಮೀ ಸಾಮಾನ್ಯ ಮಾರ್ಗವಾಗಿದ್ದರೆ ಇನ್ನುಳಿದ 191 ಕಿ.ಮೀ ಕಠಿಣ ಮಾರ್ಗವಾಗಿತ್ತು.

ಡಕಾರ್ ರ‍್ಯಾಲಿ 2022: ಹನ್ನೊಂದನೇ ಹಂತದ ಕಾರುಗಳ ವಿಭಾಗದಲ್ಲಿ ಅಬ್ಬರಿಸಿದ ಆಡಿ ಇ-ಟ್ರಾನ್

ಬಿಷಾ ನಗರದಿಂದ ಆರಂಭಗೊಂಡಿದ್ದ 11ನೇ ಹಂತವು ಪ್ರಮುಖ ಮಾರ್ಗಗಳೊಂದಿಗೆ ಪುನಃ ಬಿಷಾ ನಗರವನ್ನು ತಲುಪಿದ್ದು, 11ನೇ ಹಂತದ 346 ಕಿ.ಮೀ ಮಾರ್ಗವನ್ನು 3 ಗಂಟೆ 30 ನಿಮಿಷ 56 ಸೆಕೆಂಡುಗಳಲ್ಲಿ ಗುರಿತಲುಪಿದ ರೆಡ್‌ಬುಲ್ ಕೆಟಿಎಂ ತಂಡದ ರೈಡರ್ ಕೆವಿನ್ ಬೆನವಿಡೆಸ್ ಮೊದಲ ಸ್ಥಾನ ಗಳಿಸಿದರು.

ಡಕಾರ್ ರ‍್ಯಾಲಿ 2022: ಹನ್ನೊಂದನೇ ಹಂತದ ಕಾರುಗಳ ವಿಭಾಗದಲ್ಲಿ ಅಬ್ಬರಿಸಿದ ಆಡಿ ಇ-ಟ್ರಾನ್

ಬೈಕ್ ವಿಭಾಗದಲ್ಲಿ ರೆಡ್‌ಬುಲ್ ಕೆಟಿಎಂ ತಂಡದ ರೈಡರ್ ಕೆವಿನ್ ಬೆನವಿಡೆಸ್ ಮೊದಲ ಸ್ಥಾನ ಪಡೆದರೆ ಮೊದಲ ವಿಜೇತ ಸ್ಪರ್ಧಿಗಿಂತ ಕೇವಲ 4 ಸೆಕೆಂಡ್‌ ತಡವಾಗಿ ಗುರಿತಲುಪಿದ ಗ್ಯಾಸ್‌ಗ್ಯಾಸ್ ಫ್ಯಾಕ್ಟರಿ ರೇಸಿಂಗ್ ತಂಡದ ಸ್ಯಾಮ್ ಸದರ್‌ಲ್ಯಾಂಡ್‌ ಎರಡನೇ ಸ್ಥಾನವನ್ನು ಮತ್ತು 2 ನಿಮಿಷ 26 ಸೆಕೆಂಡ್ ತಡವಾಗಿ ಗುರಿತಲುಪಿದ ಹೀರೋ ಮೋಟೊಸ್ಪೋರ್ಟ್ಸ್ ರೈಡರ್ ಜೋಕ್ವಿಮ್ ರೊಡ್ರಿಗಸ್ ಮೂರನೇ ಸ್ಥಾನ ಪಡೆದುಕೊಂಡರು.

ಡಕಾರ್ ರ‍್ಯಾಲಿ 2022: ಹನ್ನೊಂದನೇ ಹಂತದ ಕಾರುಗಳ ವಿಭಾಗದಲ್ಲಿ ಅಬ್ಬರಿಸಿದ ಆಡಿ ಇ-ಟ್ರಾನ್

ನಿನ್ನೆ ನಡೆದಿದ್ದ ಹತ್ತನೇ ಹಂತದ ಆರಂಭದಲ್ಲಿಯೇ ಮುಗ್ಗರಿಸಿ ಸ್ಪರ್ಧೆಯಿಂದ ಹೊರನಡೆದಿದ್ದ ರೆಡ್‌ಬುಲ್ ಕೆಟಿಎಂ ತಂಡದ ರೈಡರ್ ಕೆವಿನ್ ಬೆನವಿಡೆಸ್ 11ನೇ ಹಂತದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದು, ಪ್ರಸಕ್ತ ವರ್ಷದ ರ‍್ಯಾಲಿಯಲ್ಲಿ ಕೆಟಿಎಂ, ಹೋಂಡಾ ಮತ್ತು ಗ್ಯಾಸ್‌ಗ್ಯಾಸ್ ಫ್ಯಾಕ್ಟರಿ ರೇಸಿಂಗ್ ತಂಡದ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ.

ಡಕಾರ್ ರ‍್ಯಾಲಿ 2022: ಹನ್ನೊಂದನೇ ಹಂತದ ಕಾರುಗಳ ವಿಭಾಗದಲ್ಲಿ ಅಬ್ಬರಿಸಿದ ಆಡಿ ಇ-ಟ್ರಾನ್

ಭಾರತೀಯ ಮೋಟೊಸ್ಪೋರ್ಟ್ಸ್ ತಂಡಗಳಾದ ಹೀರೋ ಮೋಟೊಸ್ಪೋರ್ಟ್ಸ್ ಮತ್ತು ಟಿವಿಎಸ್ ಶೆರ್ಕೊ ತಂಡಗಳು 11ನೇ ಹಂತದಲ್ಲೂ ಉತ್ತಮ ಮುನ್ನಡೆ ಕಾಯ್ದುಕೊಂಡಿದ್ದು, ಹೀರೋ ತಂಡವನ್ನು ಪ್ರತಿನಿಧಿಸುತ್ತಿರುವ ಪೋರ್ಚುಗೀಸ್ ರೈಡರ್ ಜೋಕ್ವಿಮ್ ರೊಡ್ರಿಗಸ್ ಮತ್ತು ಟಿವಿಎಸ್ ತಂಡದ ಲೊರೆಂಜೊ ಸ್ಯಾಂಟೊಲಿನೊ 44ನೇ ಆವೃತ್ತಿಯ ಡಕಾರ್ ರ‍್ಯಾಲಿಯಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದ್ದಾರೆ.

ಡಕಾರ್ ರ‍್ಯಾಲಿ 2022: ಹನ್ನೊಂದನೇ ಹಂತದ ಕಾರುಗಳ ವಿಭಾಗದಲ್ಲಿ ಅಬ್ಬರಿಸಿದ ಆಡಿ ಇ-ಟ್ರಾನ್

ಮೂರನೇ ಹಂತದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದ ಜೋಕ್ವಿಮ್ ರೊಡ್ರಿಗಸ್ 11ನೇ ಹಂತವನ್ನು 3ನೇ ಸ್ಥಾನದೊಂದಿಗೆ ಗುರಿತಲುಪಿದ್ದು, ಹೀರೋ ಮೋಟೊಸ್ಪೋರ್ಟ್ಸ್ ತಂಡದ ಮತ್ತೊಬ್ಬ ಸ್ಪರ್ಧಿ ಆರೋನ್ ಮೇರ್ ಕೂಡಾ ಉತ್ತಮ ಪ್ರದರ್ಶನ ತೋರುವ ಮೂಲಕ ಆರನೇ ಹಂತದಲ್ಲಿ 25 ನೇ ಸ್ಥಾನಪಡೆದುಕೊಂಡಿದ್ದಾರೆ.

ಡಕಾರ್ ರ‍್ಯಾಲಿ 2022: ಹನ್ನೊಂದನೇ ಹಂತದ ಕಾರುಗಳ ವಿಭಾಗದಲ್ಲಿ ಅಬ್ಬರಿಸಿದ ಆಡಿ ಇ-ಟ್ರಾನ್

ಟಿವಿಎಸ್ ಶೆರ್ಕೊ ತಂಡವು ಕೂಡಾ 11ನೇ ಹಂತದಲ್ಲಿ ಉತ್ತಮ ಮುನ್ನಡೆ ಕಾಯ್ದುಕೊಂಡಿದ್ದು, ಟಾಪ್ 30 ಒಳಗೆ ಸ್ಥಾನ ಪಡೆದಿರುವ ಟಿವಿಎಸ್ ತಂಡದ ರೈಡರ್‌ಗಳಲ್ಲಿ ಲೊರೆಂಜೊ ಸ್ಯಾಂಟೊಲಿನೊ ಒಟ್ಟಾರೆ ರ‍್ಯಾಂಕಿಂಗ್‌‌ನಲ್ಲಿ 18ನೇ ಸ್ಥಾನವನ್ನು ಮತ್ತು ಹರಿತ್ ನೋಹ್ 29 ಸ್ಥಾನದಲ್ಲಿದ್ದಾರೆ.

ಡಕಾರ್ ರ‍್ಯಾಲಿ 2022: ಹನ್ನೊಂದನೇ ಹಂತದ ಕಾರುಗಳ ವಿಭಾಗದಲ್ಲಿ ಅಬ್ಬರಿಸಿದ ಆಡಿ ಇ-ಟ್ರಾನ್

ಪ್ರಸಕ್ತ ವರ್ಷದ ಡಕಾರ್ ರ‍್ಯಾಲಿಯ ಬೈಕ್ ವಿಭಾಗದ ಹನ್ನೊಂದು ಹಂತಗಳಲ್ಲೂ ಉತ್ತಮ ಮುನ್ನಡೆ ಕಾಯ್ದುಕೊಂಡು ಬಂದಿರುವ ಗ್ಯಾಸ್‌ಗ್ಯಾಸ್ ಫ್ಯಾಕ್ಟರಿ ರೇಸಿಂಗ್ ತಂಡದ ಸ್ಯಾಮ್ ಸದರ್‌ಲ್ಯಾಂಡ್‌ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದು, ಹೋಂಡಾ ತಂಡದ ಪಾಬ್ಲೊ ಕ್ವಿಂಟಾನಿಲ್ಲಾ ಎರಡನೇ ಸ್ಥಾನವನ್ನು ಮತ್ತು ಮೂರನೇ ಸ್ಥಾನವನ್ನು ಕೆಟಿಎಂ ರೈಡರ್ ಮಥಿಯಾಸ್ ವಾಕ್ನರ್ ಪಡೆದುಕೊಂಡಿದ್ದಾರೆ.

ಡಕಾರ್ ರ‍್ಯಾಲಿ 2022: ಹನ್ನೊಂದನೇ ಹಂತದ ಕಾರುಗಳ ವಿಭಾಗದಲ್ಲಿ ಅಬ್ಬರಿಸಿದ ಆಡಿ ಇ-ಟ್ರಾನ್

ಇನ್ನು 11ನೇ ಹಂತದ ಕಾರುಗಳ ವಿಭಾಗವೂ ಕೂಡಾ ರೋಚಕತೆಯಿಂದ ಮುಂದುವರೆದಿದ್ದು, ಗಾಜೊ ರೇಸಿಂಗ್ ಟೊಯೊಟಾ, ಹಂಟರ್ ಟಿ1 ಬಿಆರ್‌ಎಕ್ಸ್ ಮತ್ತು ಆಡಿ ಇ-ಟ್ರಾನ್ ನಡುವಿನ ಸ್ಪರ್ಧೆಯು ಭಾರೀ ಪೈಪೋಟಿ ಶುರುವಾಗಿದೆ.

ಡಕಾರ್ ರ‍್ಯಾಲಿ 2022: ಹನ್ನೊಂದನೇ ಹಂತದ ಕಾರುಗಳ ವಿಭಾಗದಲ್ಲಿ ಅಬ್ಬರಿಸಿದ ಆಡಿ ಇ-ಟ್ರಾನ್

ಗಾಜೊ ರೇಸಿಂಗ್ ಟೊಯೊಟಾ, ಹಂಟರ್ ಟಿ1 ಬಿಆರ್‌ಎಕ್ಸ್ ತಂಡಗಳಿಗೆ ಉತ್ತಮ ಪೈಪೋಟಿ ನೀಡಿದ ಆಡಿ ಇ-ಟ್ರಾನ್ ತಂಡದ ಕಾರ್ಲೋಸ್ ಶೆಂಜ್ ಮೊದಲ ಸ್ಥಾನವನ್ನು ಟೊಯೊಟಾದ ಲೂಸಿಯೊ ಅಲ್ವಾರೆಜ್ ಎರಡನೇ ಸ್ಥಾನವನ್ನು ಮತ್ತು ಮೂರನೇ ಸ್ಥಾನವನ್ನು ಆಡಿ ತಂಡದ ಮತ್ತೊಬ್ಬ ಸ್ಪರ್ಧಿ ಮ್ಯಾಟಿಯಾಸ್ ಎಕ್ಸ್‌ಸ್ಟ್ರಾಮ್‌ ಪಡೆದುಕೊಂಡರು.

ಡಕಾರ್ ರ‍್ಯಾಲಿ 2022: ಹನ್ನೊಂದನೇ ಹಂತದ ಕಾರುಗಳ ವಿಭಾಗದಲ್ಲಿ ಅಬ್ಬರಿಸಿದ ಆಡಿ ಇ-ಟ್ರಾನ್

ಕಾರುಗಳ ಒಟ್ಟಾರೆ ರ‍್ಯಾಂಕಿಂಗ್‌ನಲ್ಲಿ ಸದ್ಯ ಟೊಯೊಟಾದ ಮುಖ್ಯ ಸ್ಪರ್ಧಿ ನಾಸರ್ ಅಲ್-ಅತ್ತಿಯಾ ಮೊದಲ ಸ್ಥಾನದಲ್ಲಿದ್ದು, ಹಂಟರ್ ಟಿ1 ಬಿಆರ್‌ಎಕ್ಸ್ ತಂಡದ ಸೆಬಾಸ್ಟಿಯನ್ ಲೋಯೆಬ್ ಮತ್ತು ಟೊಯೊಟಾ ತಂಡದ ಮತ್ತೊಬ್ಬ ಸ್ಪರ್ಧಿ ಯಜೀದ್ ಅಲ್ ರಾಜಿ ಮೂರನೇ ಸ್ಥಾನದಲ್ಲಿದ್ದಾರೆ.

ಡಕಾರ್ ರ‍್ಯಾಲಿ 2022: ಹನ್ನೊಂದನೇ ಹಂತದ ಕಾರುಗಳ ವಿಭಾಗದಲ್ಲಿ ಅಬ್ಬರಿಸಿದ ಆಡಿ ಇ-ಟ್ರಾನ್

ಟ್ರಕ್ ವಿಭಾಗದ ಸ್ಪರ್ಧೆಯಲ್ಲಿ ಕಮಾಜ್ ಮಾಸ್ಟರ್ ತಂಡವು ಪ್ರತಿ ಹಂತದಲ್ಲೂ ಅತ್ಯುತ್ತಮ ಚಾಲನಾ ಕೌಶಲ್ಯತೆಯೊಂದಿಗೆ ಅಗ್ರಸ್ಥಾನದೊಂದಿಗೆ ಮುಂದುವರೆದಿದ್ದು, ಮೊದಲ ಮೂರು ಸ್ಥಾನದಲ್ಲೂ ಭರ್ಜರಿ ಪ್ರದರ್ಶನದೊಂದಿಗೆ ಕಮಾಜ್ ಮಾಸ್ಟರ್ ತಂಡದ ಎಡ್ವರ್ಡ್ ನಿಕೋಲೇವ್, ಆಂಡ್ರೆ ಕಾರ್ಗಿನೋವ್ ಡಿಮಿಟ್ರಿ ಸೊಟಿಕ್ನೊವ್ ಮೊದಲ ಮೂರು ಸ್ಥಾನದಲ್ಲಿದ್ದಾರೆ.

ಡಕಾರ್ ರ‍್ಯಾಲಿ 2022: ಹನ್ನೊಂದನೇ ಹಂತದ ಕಾರುಗಳ ವಿಭಾಗದಲ್ಲಿ ಅಬ್ಬರಿಸಿದ ಆಡಿ ಇ-ಟ್ರಾನ್

44ನೇ ಆವೃತ್ತಿಯಲ್ಲಿ ಕಳೆದ ಆವೃತ್ತಿಯಲ್ಲಿನ 14 ಹಂತಗಳನ್ನು ಇದೀಗ 12ಕ್ಕೆ ಇಳಿಕೆ ಮಾಡಲಾಗಿದ್ದು, ಒಟ್ಟು ಅಂತರವನ್ನು ಕಳೆದ ಬಾರಿಯ 7 ಸಾವಿರ ಕಿ.ಮೀ ಮಾರ್ಗವನ್ನು 4 ಸಾವಿರ ಕಿ.ಮೀ ಗಳಿಗೆ ಇಳಿಕೆ ಮಾಡಲಾಗಿದೆ. 2022ರ ಆವೃತ್ತಿಯಲ್ಲಿ ಶೇ. 80 ರಷ್ಟು ಮಾರ್ಗವು ಮರಳುಗಾಡು ಮತ್ತು ಕಲ್ಲುಮಿಶ್ರಿತ ಮಣ್ಣು ಒಳಗೊಂಡಿರಲಿದ್ದು, 12ನೇ ಹಂತ ಪೂರ್ಣಗೊಂಡ ನಂತರ ಒಟ್ಟಾರೆ ರ‍್ಯಾಂಕಿಂಗ್ ಆಧರಿಸಿ ವಿಜೇತ ಸ್ಪರ್ಧಿಗಳನ್ನು ಘೋಷಣೆ ಮಾಡಲಾಗುತ್ತದೆ.

More from DriveSpark

Article Published On: Friday, January 14, 2022, 11:03 [IST]
English summary
Dakar rally 2022 stage 11 results kevin benavides carlos sainz claim victory
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+